• Follow NativePlanet
Share
Menu
» »ಬಾದಾಮಿ ಎಂಬ ಅದ್ಭುತ ಗುಹಾ ದೇವಾಲಯಗಳು

ಬಾದಾಮಿ ಎಂಬ ಅದ್ಭುತ ಗುಹಾ ದೇವಾಲಯಗಳು

Written By:

ನಮ್ಮ ಬಾದಾಮಿ ಗುಹೆಗಳು ಅಜಂತಾ ಗುಹೆಗಳಂತೆ ಪ್ರಸಿದ್ಧಿ ಹೊಂದಿದೆ. ಈ ಸುಂದರವಾದ ಗುಹೆಗಳು ಇರುವುದು ನಮ್ಮ ಕರ್ನಾಟಕ ರಾಜ್ಯದ ಉತ್ತರಭಾಗದ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಪಟ್ಟಣದಲ್ಲಿದೆ. ಇದೊಂದು ಗುಹಾ ದೇವಾಲಯವಾಗಿದ್ದು, ಹಿಂದೂ, ಜೈನ ಮತ್ತು ಬೌದ್ಧ ಗುಹಾ ದೇವಾಲಯಗಳಿವೆ. ಈ ಎಲ್ಲಾ ಗುಹೆಗಳು ಭಾರತೀಯ ರಾಕ್ ಕಟ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಈ ಬಾದಾಮಿಯನ್ನು ಹಿಂದೆ ಚಾಲುಕ್ಯ ರಾಜವಂಶದ ರಾಜಧಾನಿ ವಾತಪೀ ಎಂದು ಬಾದಾಮಿಯನ್ನು ಕರೆಯುತ್ತಿದ್ದರು. ಇಂಥಹ ಸುಂದರವಾದ ತಾಣಕ್ಕೆ ಭೇಟಿ ನೀಡಲೇಬೇಕು ಅಲ್ಲವೇ? ಹಾಗಾದರೆ ಲೇಖನದ ಮೂಲಕ ಬಾದಾಮಿ ಗುಹಾ ದೇವಾಲಯದ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಬಾದಾಮಿ ಗುಹಾ ದೇವಾಲಯ

ಬಾದಾಮಿ ಗುಹಾ ದೇವಾಲಯ

ಬಾದಾಮಿ ಗುಹೆಗಳು ಒಟ್ಟು 5 ಅವುಗಳಲ್ಲಿ 2 ಮಾತ್ರ ಹಿಂದೂ ದೇವತೆಗಳ ಗುಹೆಗಳನ್ನು ಕಾಣಬಹುದಾಗಿದೆ. ಇಲ್ಲಿನ ಅಪ್ರತಿಮ ಶಿಲ್ಪಕಲೆಗಳನ್ನು ನೋಡಿ ಆನಂದಿಸಬಹುದಾಗಿದೆ. ಇಲ್ಲಿ ಸುಂದರವಾದ ನೃತ್ಯದ ಭಂಗಿಯಲ್ಲಿರುವ ನಟರಾಜನ ಅದ್ಭುತವಾದ ಕೆತ್ತನೆಯನ್ನು ಮನಸಾರೆ ಕಂಡು ಆನಂದಿಸಬಹುದಾಗಿದೆ.

ಬಾದಾಮಿ ಗುಹಾ ದೇವಾಲಯ

ಬಾದಾಮಿ ಗುಹಾ ದೇವಾಲಯ

ಬಾದಾಮಿ ಗುಹಾ ದೇವಾಲಯಗಳು ಕರ್ನಾಟಕ ರಾಜ್ಯದ ಉತ್ತರ ಕೇಂದ್ರ ಭಾಗದಲ್ಲಿರುವ ಬಾದಾಮಿ ಪಟ್ಟಣದಲ್ಲಿದೆ. ದೇವಾಲಯಗಳು ಹುಬ್ಬಳ್ಳಿ-ಧಾರವಾಡದಿಂದ ಸುಮಾರು 110 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು 448 ಕಿ.ಮೀ ದೂರದಲ್ಲಿದೆ ಈ ಬಾದಾಮಿ ಗುಹಾ ದೇವಾಲಯಗಳು.

ಬಾದಾಮಿ ಗುಹಾ ದೇವಾಲಯ

ಬಾದಾಮಿ ಗುಹಾ ದೇವಾಲಯ

ಈ ಬಾದಾಮಿಯನ್ನು ಒಂದು ಕಾಲದಲ್ಲಿ ಚಾಲುಕ್ಯರ ರಾಜಧಾನಿಯಾಗಿತ್ತು. ಇಲ್ಲಿ ಕನ್ನಡ ಬಾಷೆಯ ಶಾಸನಗಳನ್ನು ಕಾಣಬಹುದಾಗಿದೆ. ಈ ಬಾದಾಮಿ ಗುಹಾ ದೇವಾಲಯವು ಮಾನವ ನಿರ್ಮಿತವಾಗಿದ್ದು ನಮ್ಮ ಚಾಲುಕ್ಯರು ನಮಗೆ ನೀಡಿದ ಒಂದು ಸುಂದರವಾದ ಉಡುಗೂರೆಯಾಗಿದೆ.

ಬಾದಾಮಿ ಗುಹಾ ದೇವಾಲಯ

ಬಾದಾಮಿ ಗುಹಾ ದೇವಾಲಯ

ಇಲ್ಲಿನ ಗುಹೆಗಳು ಬೆಟ್ಟದ ಬಂಡೆಯ ಮೇಲೆ ಮೃದುವಾದ ಬಾದಾಮಿ ಮರುಳುಗಲ್ಲಿನಿಂದ ಕೆತ್ತಲಾಗಿದೆ. ಇಲ್ಲಿ ಆಕರ್ಷಕ ಪ್ರವೇಶ ದ್ವಾರಗಳು, ಸುಂದರವಾದ ಮುಖ ಮಂಟಪಗಳನ್ನು ಕಾಣಬಹುದಾಗಿದೆ. ವಿಶೇಷವೆನೆಂದರೆ ಇಲ್ಲಿ ಮುಖ್ಯ ಸಭಾಂಗಣವನ್ನು ಕೂಡ ಕಾಣಬಹುದಾಗಿದೆ.

ಬಾದಾಮಿ ಗುಹಾ ದೇವಾಲಯ

ಬಾದಾಮಿ ಗುಹಾ ದೇವಾಲಯ

ಈ ಸುಂದರವಾದ ಗುಹಾ ದೇವಾಲಯವು ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದೊಂದು ಚಾಲುಕ್ಯ ವಂಶದ ರಾಜರು ಅಳವಡಿಸಿಕೊಂಡಿದ್ದ ವಾಸ್ತು ಶಿಲ್ಪ ಶೈಲಿ ಎಂದರೆ ತಪ್ಪಾಗಲಾರದು.

ಗುಹೆ 1

ಗುಹೆ 1

ಗುಹೆ 1 ರಲ್ಲಿ ವಾಯುವ್ಯ ಭಾಗದಲ್ಲಿ ನೆಲದ ಮಟ್ಟಕ್ಕಿಂತ ಸುಮಾರು 59 ಅಡಿ ಎತ್ತರದಲ್ಲಿದೆ. ಪ್ರವೇಶ ದ್ವಾರವು ವಿಭಿನ್ನವಾದ ಭಂಗಿಯಲ್ಲಿದ್ದು ಸುಂದರವಾಗಿದೆ. ಈ ಗುಹೆಯಲ್ಲಿ ನೃತ್ಯ ಭಂಗಿಯಲ್ಲಿನ ಸುಂದರವಾದ ನಟರಾಜನ ಕಲಾಕೃತಿ ಇದೆ. ಇಲ್ಲಿ ದ್ವಾರಪಾಲಕರ ಕೆತ್ತನೆಯನ್ನು ಕೂಡ ಕಾಣಬಹುದಾಗಿದೆ.

ಗುಹೆ 1

ಗುಹೆ 1

ಈ ಗುಹೆಯು ತಾಂಡವ ನೃತ್ಯ ಮಾಡುತ್ತಿರುವ ಶಿವನನ್ನು ಕಾಣಬಹುದಾಗಿದೆ. ಈ ನಟರಾಜನ ಕೆತ್ತನೆಯು 5 ಅಡಿ ಎತ್ತರ ಹೊಂದಿದೆ. ಇಲ್ಲಿ ಸುಮಾರು 18 ರೂಪಗಳ ಶಿಲ್ಪಗಳನ್ನು ಕಾಣಬಹುದಾಗಿದೆ. ಈ 18 ಮೂರ್ತಿಗಳು ಶಸ್ತ್ರಾಸ್ತಗಳನ್ನು ತನ್ನ ಮುದ್ರೆಯಾಗಿ ಬಳಸಿಕೊಂಡಿದೆ.

ಗುಹೆ 1

ಗುಹೆ 1

ಕೆಲವು ಕೆತ್ತನೆಗಳು ಸರ್ಪಗಳ ಸುತ್ತಲೂ ಸುತ್ತುವರಿದಿರುವಂತೆ ಕಾಣುತ್ತದೆ. ಇಲ್ಲಿ ಶಿವ ಆತನ ಪುತ್ರ ಗಣೇಶ ಮತ್ತು ನಂದಿ ಇದ್ದಾರೆ. ನಟರಾಜನ ಪಕ್ಕದಲ್ಲಿಯೇ ಒಂದು ಗೋಡೆ ಇದೆ. ಅಲ್ಲಿ ದುರ್ಗಾ ದೇವಿಯನ್ನು ಚಿತ್ರಿಸಲಾಗಿದೆ. ಈ ದುರ್ಗಾ ಮಾತೆಯು ರಾಕ್ಷಸರನ್ನು ಸಂಹಾರ ಮಾಡುವ ಭಂಗಿಯಲ್ಲಿ ಕೆತ್ತನೆಯನ್ನು ಮಾಡಲಾಗಿದೆ.

ಗುಹೆ 1

ಗುಹೆ 1

ಲ್ಲಿ ಅರ್ಧ ಶಿವನನ್ನು ಮತ್ತು ಅರ್ಧ ವಿಷ್ಣುವನ್ನು ಸಂಯೋಜಿಸುವ ಚಿತ್ರವನ್ನು ಕಾಣಬಹುದಾಗಿದೆ. ಇಲ್ಲಿ ಲಕ್ಷ್ಮೀ ಮತ್ತು ಪಾರ್ವತಿ ಚಿತ್ರಗಳನ್ನು ಕೂಡ ಕಾಣಬಹುದಾಗಿದೆ. ಇಲ್ಲಿ ಅರ್ಧನಾರಿಶ್ವರನ ಶಿಲ್ಪಕಲೆ ಅತ್ಯಂತ ಅದ್ಭುತವಾಗಿ ಕೆತ್ತನೆ ಮಾಡಲಾಗಿದೆ.

ಗುಹೆ 2

ಗುಹೆ 2

ಬಾದಾಮಿಯ 2 ನೇ ಗುಹೆಯು 1 ನೇ ಗುಹೆಯಂತೆಯೇ ಇದೆ. ಆದರೆ ಇದು ಮಹಾ ವಿಷ್ಣುವಿಗೆ ಸರ್ಮಪಿತವಾದ ಗುಹಾ ದೇವಾಲಯವಾಗಿದೆ. 1 ನೇ ಗುಹೆಯಿಂದ ಸ್ವಲ್ಪ ದೂರ ಚಲಿಸಿದರೆ 2 ನೇ ಗುಹೆ ಕಾಣಿಸುತ್ತದೆ. ಗುಹೆಯ ಪ್ರವೇಶ ದ್ವಾರವು ನಾಲ್ಕು ಸ್ತಂಭಗಳನ್ನು ಹೊಂದಿದೆ.

ಗುಹೆ 2

ಗುಹೆ 2

ಇಲ್ಲಿಯೂ ಕೂಡ ಹಲವಾರು ಹಿಂದೂ ದೇವತೆಗಳ ಕೆತ್ತನೆಗಳನ್ನು ಕಾಣಬಹುದಾಗಿದೆ. ಇಲ್ಲಿ ವರಾಹ, ಭೂದೇವಿಯ ಕೆತ್ತನೆಗಳು ಇವೆ. ಬ್ರಹ್ಮ, ವಿಷ್ಣು, ಮಹೇಶ್ವರ, ಶೇಷನಾಗ, ಕೃಷ್ಣ, ಹಸುಗಳ ಅದ್ಭುತವಾದ ಕೆತ್ತನೆಗಳಿಂದ ಮನೋಹರವಾಗಿದೆ.

ಜೈನ ಗುಹೆ

ಜೈನ ಗುಹೆ

ಬಾದಾಮಿಯಲ್ಲಿ ಜೈನ ಗುಹೆಯು ಅತ್ಯಂತ ಸುಂದರವಾಗಿದೆ. ಇಲ್ಲಿ ಪ್ರಮುಖವಾಗಿ ಜೈನ ಧರ್ಮದ ಪೂಜ್ಯ ವ್ಯಕ್ತಿಗಳಿಗೆ ಸಮರ್ಪಿಸಲಾಗಿದೆ. ಈ ಗುಹೆಯು ಕೂಡ ಹಲವಾರು ಕೆತ್ತನೆಗಳಿಂದ ಕಂಗೊಳಿಸುತ್ತಿದೆ. ಇಲ್ಲಿ ಸಿಂಹಾಸನದ ಮೇಲೆ ಕುಳಿತಿರುವ ಮಹಾವೀರನ ಕೆತ್ತನೆ ಇದೆ. ಹಾಗೆಯೇ ಪಾಶ್ವನಾಥನ ಕೆತ್ತನೆಯು ಸುಮಾರು 7.5 ಅಡಿಗಳು ಉದ್ದವಿದೆ.

5 ನೇ ಗುಹೆ

5 ನೇ ಗುಹೆ

5 ನೇ ಗುಹೆಯು ನೈಸರ್ಗಿಕವಾಗಿದ್ದು, ಇಲ್ಲಿ ಬುದ್ಧನು ನೆಲೆಸಿದ್ದಾನೆ. ಬುದ್ಧನೇ ಅಲ್ಲದೇ ಮರಗಳು, ಆನೆಗಳು ಮತ್ತು ಸಿಂಹಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ. ಸಿಂಹಾಸನ ಮೇಲೆ ಬುದ್ಧನು ಕುಳಿತಿರುವ ಭಂಗಿಯು ಸೂಕ್ಷ್ಮವಾದ ಕೆತ್ತನೆಗಳಿಂದ ಕಂಗೊಳಿಸುತ್ತಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ