» »ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

By: Divya

ಕೆಲಸದ ಒತ್ತಡಗಳನ್ನು ಬದಿಗಿಟ್ಟು, ವಾರದ ರಜೆಯಲ್ಲಿ ಜುಮ್ ಅಂತ ಬೈಕ್‍ನಲ್ಲಿ ಹೋಗುವುದು ಎಂದರೆ ಅದೇನೋ ಒಂದು ರೀತಿಯ ಖುಷಿ. ಅದರಲ್ಲೂ ಬೆಂಗಳೂರಿನ ಹತ್ತಿರ ಇರುವಂತಹ ಜಾಗಗಳಾಗಿದ್ದರೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇಂತಹ ಒಂದು ಹುಮ್ಮಸ್ಸಿಗೆ ವೇದಿಕೆ ಕಲ್ಪಿಸಿಕೊಡುವುದು ಬೆಂಗಳೂರು ಹತ್ತಿರ ಇರುವ ಹೆಸರಘಟ್ಟ ಗ್ರಾಸ್ ಲ್ಯಾಂಡ್ (ಹುಲ್ಲು ಭೂಮಿ).

ಹೆಸರುಘಟ್ಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಸರಘಟ್ಟ ಲೇಕ್‍ನ ಹತ್ತಿರ ಇರುವ ಈ ಪ್ರದೇಶ ತನ್ನದೇ ಆದ ನಿಸರ್ಗ ಸೌಂದರ್ಯವನ್ನು ಒಳಗೊಂಡಿದೆ. ವಿಶಾಲವಾದ ಜಾಗ, ಸುತ್ತಲೂ ಹಸಿರು ವನ, ತಂಪಾದ ಗಾಳಿ ಹಾಗೂ ಜನಜಂಗುಳಿ ಇರದ ಈ ಪ್ರದೇಶ ಬೈಕ್ ಸವಾರರಿಗೊಂದು ಸ್ವರ್ಗ ತಾಣ. ಕಡಿಮೆ ಸಮಯದಲ್ಲಿ ಬೆಂಗಳೂರು ಸಿಟಿಯಿಂದ ಹೊರಬಿದ್ದು, ಹಸಿರು ಹುಲ್ಲು ಭೂಮಿಯಲ್ಲಿ ಅಧಿಕ ಸಮಯ ಕಳೆಯಬಹುದು.

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಬೆಂಗಳೂರಿನಿಂದ ಬಳ್ಳಾರಿ ರಸ್ತೆಯ ಮೂಲಕ ಸಾಗಿದರೆ 35.5 ಕಿ.ಮೀ. ದೂರ ಇರುವುದರಿಂದ ಒಂದು ತಾಸಿನಲ್ಲಿ ಹೆಸರುಘಟ್ಟಕ್ಕೆ ತಲುಪಬಹುದು.

Photo Courtesy: flickr.com

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಪ್ರಶಾಂತವಾದ ಜಾಗ, ಶುದ್ಧವಾದ ಗಾಳಿ, ಮುಕ್ತವಾಗಿ ಮಾತನಾಡಲು ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಲು ಹೇಳಿ ಮಾಡಿಸಿದಂತಿದೆ. ಇಲ್ಲಿಗೆ ಒಬ್ಬಂಟಿಯಾಗಿ, ಸಂಗಾತಿಗಳ ಜೊತೆ ಹಾಗೂ ಸ್ನೇಹಿತರ ಗುಂಪಲ್ಲಿ ಬರಬಹುದು.

ಹೆಸರುಘಟ್ಟದ ಕೆರೆ ನೋಡಿದೀರಾ?

Photo Courtesy: Akshatha Vinayak

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಬೆಂಗಳೂರಿನಿಂದ ಹೊರಗೆ ಬಂದು, ಒಂದು ದಿನದ ಪ್ರವಾಸ ಅಥವಾ ವಿಹಾರಕ್ಕೆ ಬರಬಹುದಾದ ಸುಂದರ ತಾಣ ಇದು.
Photo Courtesy: Akshatha Vinayak

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಇಲ್ಲಿ ಕಾಣುವ ಸೂರ್ಯೋದಯ ಹಾಗೂ ಸೂರ್ಯಾಸ್ತದ ದೃಶ್ಯ ಪ್ರವಾಸಿಗನಿಗೊಂದು ಸುಂದರ ಅನುಭವ ನೀಡಬಲ್ಲದು. ಅಲ್ಲದೆ ಸುತ್ತಲ ಪರಿಸರದಲ್ಲಿ ನೋಡಲು ಸಿಗುವ ಹಸಿರು ಸಿರಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಬಹುದು.

ಬೆಂಗಳೂರಿನ ಇತರೆ ಜಾಗಗಳ ಬಗ್ಗೆ ಓದಲು ಇಲ್ಲಿ ಕ್ಲಿಕ್ ಮಾಡಿ

Photo Courtesy: flickr.com

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಇಲ್ಲಿಯೇ ಒಂದು ಸುಂದರ ಲೇಕ್ ಸಹ ಇದೆ. ಹಕ್ಕಿಗಳ ಕಲರವ ಹಾಗೂ ಲೇಕ್‍ನ ಸೊಬಗು ಮನಸ್ಸನ್ನು ತಿಳಿಮಾಡಬಲ್ಲದು.
Photo Courtesy: wikipedia.org

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಯುವಕರಿಗೆ ಹಾಗೂ ಪರಿಸರ ಪ್ರೇಮಿಗಳಿಗೆ ಇಷ್ಟವಾಗ ಬಲ್ಲ ಈ ತಾಣ, ಒಂದು ಸುಂದರ ಅನುಭವವನ್ನು ನೀಡುತ್ತದೆ.
Photo Courtesy: Akshatha Vinayak

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಹಸಿರಾಗಿದೆ ಹೆಸರಘಟ್ಟ... ಬೈಕ್ ಹತ್ತಿ ಹೊರಡ್ರಪ್ಪ...

ಹತ್ತಿರದಲ್ಲಿಯೇ ಇರುವ ನವಿಲು ಅಭಯಾರಣ್ಯ, ಹೆಸರುಘಟ್ಟ ಲೇಕ್ ಹಾಗೂ ನೃತ್ಯಗ್ರಾಮವನ್ನು ನೋಡಬಹುದು.
Photo Courtesy: Akshatha Vinayak

Read more about: bangalore
Please Wait while comments are loading...