Search
  • Follow NativePlanet
Share
» »ಐಶ್ವರ್ಯ ಡ್ಯಾನ್ಸ್ ಮಾಡಿದ್ದ ಈ ಜಲಪಾತ ಯಾವುದು ಗೊತ್ತಾ?

ಐಶ್ವರ್ಯ ಡ್ಯಾನ್ಸ್ ಮಾಡಿದ್ದ ಈ ಜಲಪಾತ ಯಾವುದು ಗೊತ್ತಾ?

ಐಶ್ವರ್ಯ ರೈ ಅಭಿನಯದ ಗುರು ಸಿನಿಮಾ ನೊಡಿದವರಿಗೆ ಈ ಜಲಪಾತವನ್ನು ನೋಡಿರುವ ನೆನಪು ಇರಬಹುದು. ಈ ಜಲಪಾತವನ್ನು ಅತ್ತಿರಾಪ್ಪಲ್ಲಿ ಜಲಪಾತ ಎನ್ನುತ್ತಾರೆ. ಇದು ಕೇರಳದ ತ್ರಿಶ್ಶೂರ್ ಜಿಲ್ಲೆಯ ಚಾಲಕುಡಿ ನದಿಯ ದಡದಲ್ಲಿ ಸಮುದ್ರ ಮಟ್ಟಕ್ಕಿಂತ 1000 ಅಡಿ ಎತ್ತರದಲ್ಲಿದೆ. ಕೇರಳದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಭವ್ಯವಾದ ಜಲಪಾತಗಳು ಸಾಕ್ಷಿಯಾಗಿವೆ. ಇದು ಕೇರಳದ ದೊಡ್ಡ ಜಲಪಾತವಾಗಿದೆ.

ಅತ್ತಿರಾಪ್ಪಲ್ಲಿ ಜಲಪಾತ

ಅತ್ತಿರಾಪ್ಪಲ್ಲಿ ಜಲಪಾತ

PC:Dilshad Roshan

ಅತ್ತಿರಾಪ್ಪಲ್ಲಿ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ. ಅತ್ತಿರಪಲ್ಲಿ ಜಲಪಾತ ಕೇರಳದಲ್ಲಿ ಭೇಟಿ ನೀಡುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಅತ್ತಿರಪಲ್ಲಿಗೆ ಸುಮಾರು 15 ನಿಮಿಷಗಳ ನಡಿಗೆಯಲ್ಲಿ ತಲುಪಬಹುದು. ಶೋಲಾಯಾರ್ ಬೆಟ್ಟಗಳು ಮತ್ತು ಪಶ್ಚಿಮ ಘಟ್ಟಗಳ ಅದ್ಭುತ ದೃಶ್ಯಗಳಿಂದ ಇದು ಆಶೀರ್ವಾದ ಪಡೆದಿದೆ.

ನದಿಯಲ್ಲಿರುವ ದೋಣಿಯಂತೆ ಕಾಣುವ ಜಹಾಜ್ ಮಹಲ್‌ನ ಸೌಂದರ್ಯವನ್ನು ನೋಡಿ

ಜಲಪಾತವನ್ನು ಅನ್ವೇಷಿಸಿ

ಜಲಪಾತವನ್ನು ಅನ್ವೇಷಿಸಿ

PC: Souradeep Ghosh

ಜಲಪಾತಗಳ ತುದಿಯಲ್ಲಿವರೆಗೆ ಸುಮಾರು 10-15 ನಿಮಿಷಗಳ ಟ್ರೆಕ್ ಮಾಡಬೇಕು. ನೀವು ನೀರಿನಲ್ಲಿ ಆಡೋದನ್ನು ಇಷ್ಟಪಡುತ್ತೀರೆಂದಾರೆ ಈಜಲೂ ಬಹುದು. ಇಲ್ಲಿ ಮಳೆಬಿಲ್ಲುಗಳು ಒಂದು ಸಾಮಾನ್ಯ ದೃಶ್ಯವಾಗಿದೆ. ಜಲಪಾತಗಳನ್ನು ಅನ್ವೇಷಿಸಲು ಸಾಮಾನ್ಯವಾಗಿ 2-3 ಗಂಟೆಗಳು ಬೇಕಾಗುತ್ತದೆ.

ಜಲಪಾತದಲ್ಲಿ ಐಶ್ಚರ್ಯ ನೃತ್ಯ

ಜಲಪಾತದಲ್ಲಿ ಐಶ್ಚರ್ಯ ನೃತ್ಯ

ಮಣಿ ರತ್ನಂ ನಿರ್ದೇಶನದ ಗುರು ಸಿನಿಮಾ ಶೂಟಿಂಗ್ ಆಗಿದ್ದು ಇಲ್ಲೇ. ಇದೇ ಜಲಪಾತದಲ್ಲಿ ಬರ್‌ ಸೋರೇ ಮೇಘಾ ಮೇಘಾ ಬರ್‌ಸೋರೇ ಹಾಡಿಗೆ ಐಶ್ವರ್ಯ ರೈ ಡ್ಯಾನ್ಸ್‌ ಮಾಡುತ್ತಿರುವ ದೃಶ್ಯವನ್ನು ನೀವು ಸಿನಿಮಾದಲ್ಲಿ ಕಾಣಬಹುದು.

ಹೊಸ ವರ್ಷದ ಪಾರ್ಟಿ ಮಾಡೋಕೆ, ನೈಟ್ ಕ್ಯಾಂಪಿಂಗ್ ಮಾಡೋಕೆ ಬೆಸ್ಟ್ ಸೊಮಾಸಿಲ ದ್ವೀಪ

ಪ್ರಾಣಿಗಳ ಆವಾಸಸ್ಥಾನ

ಪ್ರಾಣಿಗಳ ಆವಾಸಸ್ಥಾನ

ಈ ಜಲಪಾತವು 80 ಫೀಟ್ ಎತ್ತರದಿಂದ ಧುಮ್ಮುಕ್ಕುತ್ತದೆ. ಇಲ್ಲಿ ಸುಮಾರು 85 ಜಾತಿಯ ಮೀನುಗಳು ಕಾಣಸಿಗುತ್ತವೆ. ಈ ಅರಣ್ಯವು ಭಾರತೀಯ ಬೂದು ಹಾರ್ನ್‌ಬಿಲ್, ಮಲಬಾರ್ ಪೇಡ್ , ಸಿಂಹ, ಬಾಲದ ಕೋತಿ, ಏಶಿಯಾಟಿಕ್ ಆನೆ, ಹುಲಿ, ಚಿರತೆ, ಕಾಡೆಮ್ಮೆ ಮುಂತಾದ ವಿವಿಧ ಜಾತಿಯ ಪ್ರಾಣಿಗಳಿಗೆ ಆವಾಸಸ್ಥಾನವಾಗಿದೆ.

ಸುಂದರ ಜಂಗಲ್ ಸಫಾರಿ

ಸುಂದರ ಜಂಗಲ್ ಸಫಾರಿ

ದೈನಂದಿನ ಜಂಗಲ್ ಸಫಾರಿ ಟ್ರಿಪ್‌ಗಳನ್ನು ತ್ರಿಸ್ಸೂರು ಜಿಲ್ಲೆಯ ಪ್ರವಾಸೋದ್ಯಮ ಪ್ರಚಾರ ಮಂಡಳಿಯು ಅತ್ತಿರಪ್ಪಲ್ಲಿ ಡೆಸ್ಟಿನೇಶನ್ ಮ್ಯಾನೇಜ್ಮೆಂಟ್ ಕೌನ್ಸಿಲ್‌ನಿಂದ ಚಾಲಕುಡಿನಿಂದ ಮಲಕ್ಕಪ್ಪವರೆಗೆ ಆಯೋಜಿಸುತ್ತದೆ. ಶೋಲಾಯರ್ ಶ್ರೇಣಿಗಳ ಮಳೆಕಾಡುಗಳಲ್ಲಿ ಸುಮಾರು 90 ಕಿ.ಮೀ. ದೂರದವರೆಗೆ ಸಾಗುವ ಈ ಸಫಾರಿಯು ಇಡೀ ಕೇರಳದ ವನ್ಯಜೀವಿಗಳ ಸಫಾರಿಯಲ್ಲೇ ಅತ್ಯಂತ ಸುಂದರವಾದದ್ದು.

ಇಲ್ಲಿ ಪ್ರತಿದಿನ ದೇವರ ಪ್ರಸಾದ ತಿನ್ನಲು ಬರುತ್ತವೆ ತೋಳಗಳು

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC:Smartsweet32632

ವಜಚಲ್ ಜಲಪಾತ, ಚಾರ್ಪಾ ಜಲಪಾತ, ಅನಕ್ಕಾಯಂ, ಶೋಲಾಯಾರ್ ಅಣೆಕಟ್ಟು, ವಾಲ್ಪಾರೈ ಮತ್ತು ಅತ್ತಿರಪಲ್ಲಿ ಬಳಿ ಮಲಯಾತೂರ್ ವನ್ಯಜೀವಿ ಅಭಯಾರಣ್ಯ, ಕೊಂಡಾನಂದ ಆನೆಗಳ ತರಬೇತಿ ಶಿಬಿರವು ಭೇಟಿ ನೀಡಲು ಯೋಗ್ಯವಾದವುಗಳಾಗಿವೆ. ಇಲ್ಲಿ ನದಿ ರಾಫ್ಟಿಂಗ್, ಟ್ರೆಕ್ಕಿಂಗ್ ಮುಂತಾದ ಸಾಹಸ ಚಟುವಟಿಕೆಗಳು ಇವೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Rameshng

ನವೆಂಬರ್ ಚಳಿಗಾಲದ ಆರಂಭವನ್ನು ಗುರುತಿಸುತ್ತದೆ ಮತ್ತು ಫೆಬ್ರವರಿ ಮಧ್ಯದವರೆಗೆ ಇರುತ್ತದೆ . ಈ ಭವ್ಯವಾದ ನಗರದ ಕನಿಷ್ಠ ಮತ್ತು ಗರಿಷ್ಠ ಉಷ್ಣತೆಯು ಕ್ರಮವಾಗಿ 22 ° C ನಿಂದ 30 ° C ವರೆಗೆ ಇರುತ್ತದೆ. ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಬಯಸುವ ಪ್ರವಾಸಿಗರಿಗೆ ಭೇಟಿ ನೀಡಲು ಇದು ಉತ್ತಮ ಸಮಯವಾಗಿದೆ.

ಮುನ್ನಾರ್‌ನಲ್ಲಿ ಇದನ್ನೆಲ್ಲಾ ಮಿಸ್ ಮಾಡಲೇ ಬಾರದು

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Rameshng

ಅತ್ತಿರಾಪ್ಪಲ್ಲಿಗೆ ಸಮೀಪದ ರೈಲು ನಿಲ್ದಾಣವೆಂದರೆ ಚಾಲುಕುಡಿ. ಇದು 32 ಕಿ.ಮೀ ದೂರದಲ್ಲಿದೆ. ಇನ್ನು ಸಮೀಪದ ವಿಮಾನ ನಿಲ್ದಾಣವೆಂದರೆ ಕೊಚ್ಚಿನ್ ವಿಮಾನ ನಿಲ್ದಾಣ ಇದು ಅತ್ತಿರಾಪ್ಪಲ್ಲಿಗೆ 40 ಕಿ.ಮೀ ದೂರದಲ್ಲಿದೆ. ಅತ್ತಿರಾಪ್ಪಲ್ಲಿಗೆ ಚಾಲಕುಡಿಯಿಂದ ಖಾಸಗಿ ವಾಹನವನ್ನು ತೆಗೆದುಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X