Search
  • Follow NativePlanet
Share
» »"ಅಕ್ಟೋಪಸ್" ಕೆರೆಯಲ್ಲಿ ವಿಹಾರ!

"ಅಕ್ಟೋಪಸ್" ಕೆರೆಯಲ್ಲಿ ವಿಹಾರ!

ಕೇರಳದ ಕೊಲ್ಲಂ ನಗರದಿಂದ ಆರಂಭವಾಗುವ ಅಷ್ಟಮುಡಿ ಕೆರೆಯು ರಾಜ್ಯದ ಎರಡನೇಯ ದೊಡ್ಡ ಕೆರೆಯಾಗಿದ್ದು ಕೇರಳದ ಹಿನ್ನೀರು ಪ್ರವಾಸಕ್ಕೆ ಪ್ರವೇಶ ದ್ವಾರವಾಗಿ ಪ್ರವಾಸಿಗರ ಗಮನಸೆಳೆಯುತ್ತದೆ

By Vijay

ಇದೊಂದು ಅಕ್ಟೋಪಸ್ ಕೆರೆ. ಅರೆರೆ, ಅಕ್ಟೋಪಸ್ ಎಂದಾಕ್ಷಣ, ಈ ಕೆರೆಯು ಅಕ್ಟೋಪಸ್ ಎಂಬ ಎಂಟು ಬಾಹುಗಳುಳ್ಳ ಜಲಜೀವಿಗಳಿಂದ ತುಂಬಿದೆಯಾ...ಎಂದುಕೊಳ್ಳಬೇಡಿ. ಪಾಮ್ ಮರದ ಹಾಗೆ, ಅಕ್ಟೋಪಸ್ ನ ಹಾಗೆ ಈ ಅದ್ಭುತ ಕೆರೆಯು ಎಂಟು ಮೂಲೆಗಳನ್ನು ಹೊಂದಿರುವ ಆಕರ್ಷಕ ಹಿನ್ನೀರಿನ ತಾಣವಾಗಿದೆ.

ಕೇರಳದಲ್ಲೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಹಿನ್ನೀರಿನ ಪ್ರವಾಸಿ ತಾಣವಾಗಿದೆ ಈ ಕೆರೆ. ಇದನ್ನೆ ಅಷ್ಟಮುಡಿ ಕೆರೆ ಎಂದು ಕರೆಯಲಾಗುತ್ತದೆ. ಆಕಾರದಲ್ಲಿ ಕೇರಳದಲ್ಲೆ ಎರಡನೇಯ ದೊಡ್ಡ ಕೆರೆಯಾಗಿ ಅಷ್ಟಮುಡಿ ಕೆರೆ ಗಮನಸೆಳೆಯುತ್ತದೆ. ಮೊದಲನೇಯ ದೊಡ್ಡ ಕೆರೆಯಾಗಿದೆ ವೆಂಬನಾಡ್.

ಚಿತ್ರಕೃಪೆ: Fotokannan

ನಿಮಗೆಲ್ಲ ಗೊತ್ತಿರುವ ಹಾಗೆ ಕೇರಳ ರಾಜ್ಯವು ಒಂದು ಸುಂದರ ಪ್ರವಾಸಿ ವಿಶೇಷತೆಯುಳ್ಳ ರಾಜ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಇಲ್ಲಿನ ಹಿನ್ನೀರು ಪ್ರವಾಸ ಎಲ್ಲೆಡೆ ಪ್ರಸಿದ್ಧಿಗಳಿಸಿದೆ. ಅಗಾಧವಾದ ಶಾಂತಿಯುತ ನೀರಿನಲ್ಲಿ, ಸುತ್ತ ಮುತ್ತಲು ದಟ್ಟವಾದ ಹಸಿರಿನಿಂದಾವರಿಸಿದ ಗಿಡ-ಮರಗಳ ಮಧ್ಯದಲ್ಲಿ ಹಾಯಾಗಿ ವಿಹರಿಸುವುದೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ!

ಇನ್ನೂ ಒತ್ತು ಕೊಟ್ಟು ಹೇಳಬೇಕೆಂದರೆ ದೋಣಿ ಮನೆಯಲ್ಲೆ ಘಂಟೆಗಟ್ಟಲೆ ಹಾಯಾಗಿ ವಿಹರಿಸುವುದೆಂದರೆ...ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆಯೆ...ಅಲ್ಲವೆ. ಅಂತಹ ಅದ್ಭುತ ಅನುಭೂತಿಯನ್ನು ಹಿನ್ನೀರು ಪ್ರವಾಸ ಒದಗಿಸುತ್ತದೆ. ಈ ರೀತಿಯ ಹಿನ್ನೀರು ಪ್ರವಾಸಕ್ಕೆ ಕೇರಳ ಹೆಸರುವಾಸಿ. ಅಷ್ಟಮುಡಿ ಕೆರೆಯು ಕೇರಳದ ಹಿನ್ನೀರಿನ ಪ್ರವಾಸಕ್ಕೆ ಪ್ರವೇಶ ದ್ವಾರವಾಗಿದೆ.

ಚಿತ್ರಕೃಪೆ: Sureshkajal

ಈ ಕೆರೆಯ ಸುತ್ತಮುತ್ತಲು ಸಾಕಷ್ಟು ಹಳ್ಳಿಗಳು ಆವರಿಸಿವೆ. ಅಲ್ಲಿನ ಜನರ ಮುಖ್ಯ ಕಸುಬು ತೆಂಗು ಬೆಳೆ, ನಾರಿನಿಂದ ಹಗ್ಗ ತಯಾರಿಕೆ ಹಾಗೂ ಪ್ರಪ್ರಥಮವಾಗಿ ಮೀನುಗಾರಿಕೆ ಆಗಿವೆ. ಈ ಅಷ್ಟಮುಡಿ ಕೆರೆಯು ತನ್ನ ಅಗಾಧತೆಯಿಂದ ಇಂದಿಗೂ ಜನಜೀವನದ ಜೀವನಾಡಿಯಾಗಿದೆ. ಎಷ್ಟೊ ಜನರ ಪಾಲಿಗೆ ಬದುಕುವ ಹಾದಿಯಾಗಿದೆ.

ಈ ಕೆರೆಯ ಮೂಲಕವೆ ಸಾಕಷ್ಟು ಹಳ್ಳಿಗಳು ಒಂದಕ್ಕೊಂದು ಬೆಸೆದುಕೊಂಡಿದ್ದು ಸಂಚಾರಿ ಮಾಧ್ಯಮವಾಗಿಯೂ ಅಷ್ಟಮುಡಿ ಕೆರೆ ಹೆಸರುವಾಸಿಯಾಗಿದೆ. ಮಿಕ್ಕಂತೆ ಹಲವಾರು ದೋಣಿಮನೆಗಳು ಪ್ರವಾಸಿಗರ ಅನುಕೂಲಕ್ಕೆಂದೆ ಕಾರ್ಯನಿರತವಾಗಿವೆ. ಇವುಗಳಲ್ಲಿ ಸುತ್ತಾಡುತ್ತ ಅದೆಷ್ಟೊ ಕವಿಗಳು, ಲೇಖಕರು ಸುತ್ತಲಿನ ಪರಿಸರದಿಂದ ಪ್ರಭಾವಿತರಾಗಿ ಸಾಕಷ್ಟು ರಚನೆಗಳನ್ನು ಬರೆದಿದ್ದಾರೆ.

ಚಿತ್ರಕೃಪೆ: Fotokannan

ಕೊಲ್ಲಂ ನಗರವು ಈ ಅಷ್ಟಮುಡಿ ಕೆರೆಗೆ ಪ್ರವೇಶ ಸ್ಥಳವಾಗಿದೆ. ಇಲ್ಲಿಂದ ಈ ಕೆರೆಯಲ್ಲಿ ಸುತ್ತಾಡಲು ಸಾಕಷ್ಟು ದೋಣಿಗಳು ಬಾಡಿಗೆಗೆಂದು ಪ್ರವಾಸಿಗರಿಗೆ ದೊರೆಯುತ್ತವೆ. ಕೊಲ್ಲಂ ಬೋಟ ಕ್ಲಬ್ ಸಾಕಷ್ಟು ಸಂಚಾರಿ ದೋಣಿಗಳ ಸೇವೆಯನ್ನೂ ಸಹ ನೀಡುತ್ತದೆ.

ಹೌಸ್‌ಬೋಟ್‌ ಯಾನ ಅಷ್ಟಮುಡಿ ಕೆರೆಯ ಪ್ರಮುಖ ಹಾಗೂ ಮುಖ್ಯ ಆಕರ್ಷಣೆ. ಇದನ್ನು ಯಾವೊಬ್ಬ ಪ್ರವಾಸಿಗನೂ ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಕೊಲ್ಲಂ ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಸಮೀತಿ ಇಲ್ಲಿ ಸಾಕಷ್ಟು ವಿಧದ ಬೋಟಿಂಗ್‌ ಸೌಲಭ್ಯವನ್ನು ನೀಡುತ್ತಿದೆ. ಹಗಲು ಟ್ರಿಪ್‌, ರಾತ್ರಿ ಯಾನ ಸೇರಿದಂತೆ ಹಲವು ವಿಧದ ಅವಕಾಶ ಪ್ರವಾಸಿಗರಿಗೆ ಸಿಗುತ್ತವೆ.

ಹಿನ್ನೀರು ಪ್ರವಾಸ ಜನಪ್ರೀಯತೆಯ ಹಿಂದಿರುವ ರಹಸ್ಯ!

ಪ್ರತ್ಯೇಕ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರವಾಸಿಗರು ತಮಗೆ ಬೇಕಾದ ಪ್ಯಾಕೇಜ್‌ ಆರಿಸಿಕೊಂಡು ಬಳಸಬಹುದು. ಸಮಯ, ಆರ್ಥಿಕ ಸ್ಥಿತಿ ಹಾಗೂ ಇತರೆ ಆಯ್ಕೆಯನ್ನು ಪರಿಗಣಿಸಿ ತಮಗೆ ಬೇಕಾದ್ದನ್ನು ಪಡೆಯಬಹುದು. ಇಲ್ಲಿರುವ ಹೌಸ್‌ಬೋಟ್‌ಗಳು ಅತ್ಯಂತ ಸುಸಜ್ಜಿತ, ಆಧುನಿಕ ಸೌಲಭ್ಯ ಹೊಂದಿವೆ. ವಿಶೇಷತೆಗಳೆಂದರೆ ಸರ್ವಸಿದ್ಧ ಬೆಡ್‌ ರೂಂಗಳು, ಕಿಚನ್‌, ಬಾಲ್ಕನಿ, ಇತರೆ ಮನರಂಜನಾ ಸಾಮಗ್ರಿಗಳನ್ನು ಹೊಂದಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X