Search
  • Follow NativePlanet
Share
» »ಈ ಬಾರಿಯ ಅರ್ಧಕುಂಭ ಮೇಳದಲ್ಲಿ ಭಾಗಿಯಾಗಬೇಕೆಂದಿದ್ದೀರಾ...ಇಲ್ಲಿದೆ ಡೀಟೇಲ್ಸ್

ಈ ಬಾರಿಯ ಅರ್ಧಕುಂಭ ಮೇಳದಲ್ಲಿ ಭಾಗಿಯಾಗಬೇಕೆಂದಿದ್ದೀರಾ...ಇಲ್ಲಿದೆ ಡೀಟೇಲ್ಸ್

ಹೊಸವರ್ಷ ಬರುತ್ತಿದ್ದಂತೆ ಹಬ್ಬಗಳು, ಉತ್ಸವಗಳೂ ಪ್ರಾರಂಭವಾಗುತ್ತದೆ. ಹಾಗೆಯೇ ಜನವರಿ ಮಧ್ಯಭಾಗದಲ್ಲಿ ಕುಂಭ ಮೇಳ ಪ್ರಾರಂಭವಾಗಲಿದೆ. ಹಿಂದೂಗಳಲ್ಲಿ ಕುಂಭಮೇಳಕ್ಕೆ ಬಹಳ ಮಹತ್ವವಿದೆ. ಇದರ ತಯಾರಿ ಕೂಡಾ ಹಲವು ತಿಂಗಳುಗಳಿಂದಲೇ ಆರಂಭವಾಗಿದೆ. ಕೇವಲ ಅಲ್ಲಿಯ ಊರಿನ ಜನರುಮಾತ್ರವಲ್ಲ ಸರ್ಕಾರ ಕೂಡಾ ಈ ಕುಂಭ ಮೇಳದ ತಯಾರಿಯಲ್ಲಿ ಕೈ ಜೋಡಿಸುತ್ತದೆ.

ಅರ್ಧ ಕುಂಭ ಮೇಳ

ಅರ್ಧ ಕುಂಭ ಮೇಳ

PC: Seba Della y Sole Bossio

ಇದು ಹಿಂದೂಗಳ ದೊಡ್ಡ ಮೇಳವಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇಶ, ವಿದೇಶಿಗರೂ ಈ ಮೇಳದಲ್ಲಿ ಭಾಗಿಯಾಗುತ್ತಾರೆ. ಅರ್ಧ ಕುಂಭವು ಪ್ರತಿ 6 ವರ್ಷಕ್ಕೊಮ್ಮೆ ಬರುತ್ತದೆ.

ಆನೆಯ ತಲೆಯನ್ನೇ ಹೋಲುವ ಈ ಬೆಟ್ಟವನ್ನು ನೋಡಿದ್ದೀರಾ?

ಪೂರ್ಣ ಕುಂಭ ಮೇಳ

ಪೂರ್ಣ ಕುಂಭ ಮೇಳ

PC: Lokankara

12 ವರ್ಷಕ್ಕೊಮ್ಮೆ ನಡೆಯುವ ಕುಂಭ ಮೇಳವನ್ನು ಪೂರ್ಣ ಕುಂಭ ಮೇಳ ಎನ್ನುತ್ತೇವೆ. ಹಾಗೆಯೇ 6 ವರ್ಷಕ್ಕೊಮ್ಮೆ ನಡೆಯುವ ಕುಂಬ ಮೇಳವನ್ನು ಅರ್ಧಕುಂಭ ಮೇಳ ಎನ್ನುತ್ತೇವೆ.

ಅರ್ಧ ಕುಂಭ ಮೇಳದಲ್ಲಿ ಏನೆಲ್ಲಾ ಇರುತ್ತದೆ

ಅರ್ಧ ಕುಂಭ ಮೇಳದಲ್ಲಿ ಏನೆಲ್ಲಾ ಇರುತ್ತದೆ

ಈ ಕುಂಭ ಮೇಳದಲ್ಲಿ ವಿಶ್ವದಾದ್ಯಂತ ಜನರು ಪವಿತ್ರ ಸ್ನಾನ ಮಾಡಲು ಆಗಮಿಸುತ್ತಾರೆ. ಈ ಮೇಳದಲ್ಲಿ ಸ್ನಾನ ಮಾಡುವುದರಿಂದ ಅವರ ಪಾಪವೆಲ್ಲಾ ನಿವಾರಣೆಯಾಗುತ್ತದೆ ಎನ್ನುವುದು ಜನರ ನಂಬಿಕೆ. ಕುಂಭ ಮೇಳದ ಆಯೋಜನೆಯನ್ನು ದೇಶದ ನಾಲ್ಕು ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ. ಅವುಗಳೆಂದೆ ಇಲಾಹಾಬಾದ್, ಹರಿದ್ವಾರ, ಉಜ್ಜೈನಿ ಹಾಗೂ ನಾಸಿಕ್.

ಊಟಿಯಲ್ಲಿ ನೀವು ನೋಡಬೇಕಾದ ಪ್ರಮುಖ 15 ತಾಣಗಳು

ಸಾಧುಗಳು, ಅಘೋರಿಗಳು

ಸಾಧುಗಳು, ಅಘೋರಿಗಳು

PC: ßlåçk Pærl

ಕುಂಭ ಮೇಳ ಅಥವಾ ಅರ್ಧ ಕುಂಭ ಮೇಳದ ಸಂದರ್ಭದಲ್ಲಿ ದೇಶಾದ್ಯಂತದ ಸಾಧು ಸಂತರು, ಅಘೋರಿಗಳು ಉಪಸ್ಥಿತರಿರುತ್ತಾರೆ. ಅಘೋರಿಗಳ ದಿನಚರಿಗಳು ಕಾಣಸಿಗುತ್ತದೆ.

ಕುಂಭದಲ್ಲಿ ಸ್ನಾನ ಯಾವಾಗ ಮಾಡುತ್ತಾರೆ

ಕುಂಭದಲ್ಲಿ ಸ್ನಾನ ಯಾವಾಗ ಮಾಡುತ್ತಾರೆ

ಅರ್ಧಕುಂಭ ಮೇಳವು ಮಹಾಸಂಕ್ರಾಂತಿಯಂದು ಆರಂಭವಾಗುತ್ತದೆ. ಮಕರ ಸಂಕ್ರಾಂತಿಯಂದು ಈ ಅರ್ಧ ಕುಂಭ ಮೇಳದ ಮೊದಲ ಸ್ನಾನ ಮಾಡಲಾಗುತ್ತದೆ. ಮಕರಸಂಕ್ರಾಂತಿಯಂದು ಕುಂಭದಲ್ಲಿ ಸ್ನಾನ ಮಾಡಿದ್ರೆ ಒಳ್ಳೆಯದು ಎನ್ನಲಾಗುತ್ತದೆ. ಆ ದಿನ ಸ್ನಾನ ಮಾಡಿದ್ರೆ ಆತ್ಮದ ಶುದ್ಧಿಯಾಗುತ್ತದೆ ಎನ್ನುತ್ತಾರೆ.

ಹನಿಮೂನ್‌ಗೆ ಹೊಟೇಲ್ ಬುಕ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ಪವಿತ್ರ ಸ್ನಾನ

ಪವಿತ್ರ ಸ್ನಾನ

PC:Devinasch

ಇನ್ನೊಂದು ಸ್ನಾನವನ್ನು ಪೌಷ ಹುಣ್ಣಿಮೆಯಂದು ಮಾಡಲಾಗುತ್ತದೆ. ಮೂರನೇ ಸ್ನಾನ ಅಮಾವಾಸ್ಯೆಯಂದು ನಡೆಯುತ್ತದೆ. ನಾಲ್ಕನೇ ಸ್ನಾನ ವಸಂತ ಪಂಚಮಿಯ ತಿಥಿಯಂದು ನಡೆಯುತ್ತದೆ. ಇನ್ನು ಕೊನೆಯ ಸ್ನಾನ ಶಿವರಾತ್ರಿಯಂದು ನಡೆಯುತ್ತದೆ.

12ದಿನಗಳ ಯುದ್ಧ

12ದಿನಗಳ ಯುದ್ಧ

PC: unknown

ದುರ್ವಾಸ ಮುನಿಯ ಶಾಪದಿಂದಾಗಿ ಇಂಧ್ರ ಹಾಗೂ ದೇವತೆಗಳು ಬಲಹೀನರಾಗುತ್ತಾರೆ. ಅಸುರರು ದೇವತೆಗಳನ್ನು ಯುದ್ಧದಲ್ಲಿ ಸೋಲಿಸುತ್ತಾರೆ. ದೇವತೆಗಳು ವಿಷ್ಣುವಿನ ಬಳಿಗೆ ತೆರಳುತ್ತಾರೆ. ವಿಷ್ಣುವು ತನ್ನ ದೇವತೆಗಳಿಗೆ, ದಾನವರ ಜೊತೆ ಸೇರಿ ಅಮೃತವನ್ನು ತೆಗೆಯುವಂತೆ ತಿಳಿಸುತ್ತಾನೆ. ವಿಷ್ಣುವಿನ ಮಾತಿನಂತೆ ನಡೆದುಕೊಂಡರು. ಅಮೃತಕ್ಕಾಗಿ ದೇವತೆಗಳು ಹಾಗೂ ಅಸುರರ ನಡುವೆ 12 ದಿನಗಳ ಯುದ್ಧ ನಡೆಯಿತು.

7.5 ಅಡಿ ಎತ್ತರದ ಶಿವಲಿಂಗವಿದ್ದರೂ ಇದೊಂದು ಅಪೂರ್ಣ ಮಂದಿರ

12ವರ್ಷಕ್ಕೊಮ್ಮೆ ಕುಂಭಮೇಳ

12ವರ್ಷಕ್ಕೊಮ್ಮೆ ಕುಂಭಮೇಳ

PC:Dirk Hartung

ಯುದ್ಧದ ಸಂದರ್ಭದಲ್ಲಿ ಕಲಶದಿಂದ ನಾಲ್ಕು ಹನಿ ಅಮೃತ ಭೂಮಿಯಲ್ಲಿನ ನಾಲ್ಕು ಸ್ಥಳಗಳಲ್ಲಿ ಬಿದ್ದಿದ್ದವು ಅವುಗಳೆ ಪ್ರಯಾಗ್‌ರಾಜ್, ಉಜ್ಜೈನ್, ನಾಸಿಕ್, ಹರಿದ್ವಾರ ಎನ್ನಲಾಗುತ್ತದೆ. ಹಾಗಾಗಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭ ಮೇಳವನ್ನು ಆಯೋಜಿಸಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ರಸ್ತೆ ಮೂಲಕ: ಅಲಾಹಾಬಾದ್‌ಗೆ ದೇಶದ ದೊಡ್ಡ ದೊಡ್ಡ ನಗರಗಳಿಂದ ಸಾಕಷ್ಟು ಬಸ್‌ ವ್ಯವಸ್ಥೆಗಳಿವೆ. ಇಲಾಹಾಬಾದ್ ಬಸ್‌ ನಿಲ್ದಾಣದಲ್ಲಿ ಇಳಿದುಕೊಂಡು ಅಲ್ಲಿಂದ ರಿಕ್ಷಾ ಮೂಲಕ ಕುಂಭಮೇಳವನ್ನು ತಲುಪಬಹುದು.

ವಿಮಾನ ಮೂಲಕ: ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಬಮ್‌ರೋಲಿ ವಿಮಾನ ನಿಲ್ದಾಣ. ಅಲ್ಲಿಂದ 18 ಕಿ.ಮೀ ದೂರದಲ್ಲಿ ಕುಂಭಮೇಳವನ್ನು ತಲುಪಬಹುದು.

ರೈಲು ಮೂಲಕ: ಅಲಾಹಾಬಾದ್ ಉತ್ತರ ಮಧ್ಯ ರೈಲ್ವೆಯ ಹೆಡ್‌ಕ್ವಾಟರ್‌ ಆಗಿದೆ. ಇಲ್ಲಿ 8 ರೈಲು ನಿಲ್ದಾಣಗಳಿವೆ. ದೆಹಲಿ, ಮುಂಬೈ, ಬೆಂಗಳೂರು, ಅಲಹಾಬಾದ್, ಚೆನ್ನೈ, ಹೈದರಾಬಾದ್, ಜೈಪುರ್‌ನಂತಹ ಹಲವು ನಗರಗಳಿಗೆ ಸಂಪರ್ಕ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more