Search
  • Follow NativePlanet
Share
» »ಅಪ್ಸರೆಯರು ಈ ಕೊಳದಲ್ಲಿ ಸ್ನಾನ ಮಾಡ್ತಿದ್ದರಂತೆ…

ಅಪ್ಸರೆಯರು ಈ ಕೊಳದಲ್ಲಿ ಸ್ನಾನ ಮಾಡ್ತಿದ್ದರಂತೆ…

ದೇವಲೋಕದ ಅಪ್ಸರೆಯರು ಭೂ ಲೋಕದಲ್ಲಿ ಬಂದು ಸ್ನಾನ ಮಾಡುತ್ತಿದ್ದ ಕಥೆಯನ್ನು ನೀವು ಕೇಳಿರಬಹುದು. ಅಥವಾ ಸಿನಿಮಾದಲ್ಲಿ ನೋಡಿರಬಹುದು. ಆದರೆ ಅಂತಹ ಒಂದು ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆ ಎನ್ನುವುದು ನಿಮಗೆ ಗೊತ್ತಾ? ಹೌದು ಅಪ್ಸರೆಯರು ಭೂ ಲೋಕಕ್ಕೆ ಬಂದು ಅಪ್ಸರೆ ಕೊಂಡದಲ್ಲಿ ಜಲಕ್ರೀಡೆಯಾಡುತ್ತಿದ್ದರಂತೆ.

ಇಲ್ಲಿ ಕೃಷ್ಣ ಅರ್ಜುನಿಗೆ ಉಪದೇಶ ಮಾಡಿದ್ರೆ, ದುರ್ಯೋಧನ ಸಾವಿಗೆ ಹೆದರಿ ಅಡಗಿ ಕೂತಿದ್ದನಂತೆ ಅಲ್ಲಿಇಲ್ಲಿ ಕೃಷ್ಣ ಅರ್ಜುನಿಗೆ ಉಪದೇಶ ಮಾಡಿದ್ರೆ, ದುರ್ಯೋಧನ ಸಾವಿಗೆ ಹೆದರಿ ಅಡಗಿ ಕೂತಿದ್ದನಂತೆ ಅಲ್ಲಿ

ಎಲ್ಲಿದೆ ಈ ಅಪ್ಸರೆಕೊಂಡ?

ಎಲ್ಲಿದೆ ಈ ಅಪ್ಸರೆಕೊಂಡ?

PC: Tiruka.yatrika

ಪ್ರಕೃತಿ ಸೌಂದರ್ಯದ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಈ ಜಲಪಾತ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಿಂದ 8 ಕಿ.ಮಿ ಕ್ರಮಿಸಿದರೆ ಈ ಸುಂದರ ಜಲಪಾತದ ದರ್ಶನವಾಗುತ್ತದೆ.

ಅಪ್ಸರೆಯರು ಜಲಕ್ರೀಡೆ ಆಡಿದ್ದರಂತೆ

ಅಪ್ಸರೆಯರು ಜಲಕ್ರೀಡೆ ಆಡಿದ್ದರಂತೆ

PC: Isroman.san

ಈ ಸ್ಥಳಕ್ಕೆ ಅಪ್ಸರ ಕೊಂಡ ಎಂದು ಹೆಸರು ಬರಲು ಕಾರಣ ಇಲ್ಲಿರುವ ಕೆರೆ. 8-10 ಮೀ ಎತ್ತರದಿಂದ ಧುಮುಕುವ ನೀರಿನಿಂದಾಗಿ ಇಲ್ಲಿ ಒಂದು ಕೆರೆ ನಿರ್ಮಾಣವಾಗಿದೆ. ಈ ಕರೆಯಲ್ಲಿ ದೇವಲೋಕದ ಅಪ್ಸರೆಯರು ಜಲಕ್ರೀಡೆಯಾಡುತ್ತಿದ್ದರು ಎನ್ನಲಾಗುತ್ತಿದೆ. ಅಪ್ಸರೆಯರು ಮಿಂದ ಹೊಂಡ ಇದಾಗಿದ್ದು ಇದನ್ನು ಅಪ್ಸರ ಕೊಂಡ ಎನ್ನುತ್ತಾರೆ.

ಪಾಂಡವರು ನೆಲೆಸಿದ್ದರಂತೆ

ಪಾಂಡವರು ನೆಲೆಸಿದ್ದರಂತೆ

PC: Isroman.san

ಈ ಜಲಪಾತದ ಬದಿಯಲ್ಲಿ ಕರೆಯ ಬದಿಯಲ್ಲಿ ಒಂದು ನೈಸರ್ಗಿಕ ಗುಹೆ ಇದೆ. ಇಲ್ಲಿ ಮಹಾಭಾರತದ ಕಾಲದಲ್ಲಿ ಪಾಂಡವರು ವನವಾಸಕ್ಕೆ ತೆರಳಿದಾಗ ಈ ಗುಹೆಯಲ್ಲಿ ವಾಸವಾಗಿದ್ದರು ಎನ್ನಲಾಗುತ್ತದೆ. ಅಕ್ಟೋಬರ್ ನಿಂದ ಮಾರ್ಚ್‌ವರೆಗೆ ಜಲಪಾತದಲ್ಲಿ ನೀರಿರುತ್ತದೆ. ಉದ್ಯಾನವನಕ್ಕೆ ಭೇಟಿಕೊಡಲು ಬೆಳಿಗ್ಗೆ 8 ರಿಂದ ಸಂಜೆ4ರ ವರೆಗೆ ಅವಕಾಶವಿದೆ. ವಾರದ ಎಲ್ಲಾ ದಿನವೂ ತೆರೆದಿರುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಹೊನ್ನಾವರ ಬಸ್ ನಿಲ್ದಾಣದಿಂದ ೮ಕಿ.ಮೀ ಹೆದ್ದಾರಿಯಲ್ಲಿ ಚಲಿಸಿ, ಮುಂದೆ 50ಮೀ ಮಣ್ಣು ಹಾದಿಯಲ್ಲಿ ಸಾಗಿದರೆ ಉಗ್ರನರಸಿಂಹ ದೇವಸ್ತಾನವು ಎದುರಾಗುತ್ತದೆ. ದೇವಸ್ತಾನದ ಹಿಂಬದಿಯಿಂದ ಸಾಗಿದರೆ ಅಪ್ಸರ ಕೊಂಡ ಕಾಣ ಸಿಗುತ್ತದೆ.

ಇತರ ಆಕರ್ಷಣೀಯ ಸ್ಥಳಗಳು

ಇತರ ಆಕರ್ಷಣೀಯ ಸ್ಥಳಗಳು

PC: Isroman.san

ಇಲ್ಲಿ ಒಂದು ಉದ್ಯಾನವನವಿದೆ.ಜಲಪಾತ, ಉಗ್ರ ನರಸಿಂಹ ದೇವಸ್ಥಾನ, ರಾಮಚಂದ್ರ ಮಠ, ಉದ್ಯಾನವನ, ದೇವಿ ದೇಗುಲವಿದ, ಬೀಚ್ ಕೂಡಾ ಇದೆ. ಇಲ್ಲಿನ ಬೀಚ್‌ನಲ್ಲಿ ಸೂರ್ಯಾಸ್ತವನ್ನು ನೋಡೋದೇ ಒಂದು ರೀತಿಯ ಮಜಾ.

Read more about: india karnataka waterfalls travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X