Search
  • Follow NativePlanet
Share
» »ಇಲ್ಲಿ ಸುದರ್ಶನ ಚಕ್ರವೆ ಮುಖ್ಯ ದೇವರು!

ಇಲ್ಲಿ ಸುದರ್ಶನ ಚಕ್ರವೆ ಮುಖ್ಯ ದೇವರು!

ಸುದರ್ಶನ ಚಕ್ರಕ್ಕೆಂದೆ ಮುಡಿಪಾದ ಅಂಜುಮೂರ್ತಿ ಮಂಗಲಂ ಎಂಬ ವಿಶೇಷ ದೇವಾಲಯವೊಂದಿದ್ದು ಅದು ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೇರಿ ಮಂಗಲಂ ಎಂಬಲ್ಲಿ ನೆಲೆಸಿದೆ

By vijay

ಹಿಂದು ಧಾರ್ಮಿಕತೆಯಲ್ಲಿ ಹಲವಾರು ಅದ್ಭುತ ಆಯುಧಗಳ ಕುರಿತು ಉಲ್ಲೇಖವಿರುವುದನ್ನು ಕಾಣಬಹುದು. ಅವುಗಳಲ್ಲಿ ಪ್ರಮುಖವಾಗಿ ಹೆಸರಿಸಬೇಕೆಂದರೆ ಇಂದ್ರನ ವಜ್ರಾಯುಧ, ಶಿವನ ತ್ರಿಶೂಲ ಹಾಗೂ ವಿಷ್ಣುವಿನ ಸುದರ್ಶನ ಚಕ್ರಗಳು. ಅದರಲ್ಲೂ ವಿಶೇಷವಾಗಿ ಸುದರ್ಶನ ಚಕ್ರಕ್ಕೆ ವಿಶೇಷ ಸ್ಥಾನಮಾನವಿದೆ ಹಾಗೂ ಅದನ್ನು ಅತ್ಯಂತ ಭಯಂಕರ ಆಯುಧವೆಂದೂ ಸಹ ಪರಿಗಣಿಸಲಾಗಿದೆ.

ಶಕ್ತಿ ದೇವಿಗೆ ಸಂಬಂಧಿಸಿದಂತೆ ರೂಪಗೊಂಡ 51 ಮಹಾಶಕ್ತಿಪೀಠಗಳೂ ಸಹ ಸುದರ್ಶನ ಚಕ್ರದೊಂದಿಗೆ ನಂಟನ್ನು ಹೊಂದಿವೆ. ಮೂಲತಃ ಸತಿ ದೇವಿಯ ಮೃತ ದೇಹವನ್ನು ತುಂಡರಿಸಲು ಬಳಸಲಾದ ಆಯುಧವೆ ಶ್ರೀ ವಿಷ್ಣುವಿನ ಸುದರ್ಶನ ಚಕ್ರ. ಅಲ್ಲದೆ ಸುದರ್ಶನ ಚಕ್ರದ ಕುರಿತು ಹಿರಿಮೆ, ಮಹತ್ವವಿರುವ ಅನೇಕ ಉದಾಹರಣೆಗಳು ಹಿಂದು ಪುರಾಣ, ಪುಣ್ಯಕಥೆಗಳಲ್ಲಿ ಕೇಳಿ ಬರುತ್ತವೆ.

ಇಲ್ಲಿ ಸುದರ್ಶನ ಚಕ್ರವೆ ಮುಖ್ಯ ದೇವರು!

ಚಿತ್ರಕೃಪೆ: wikipedia

ಅಷ್ಟಕ್ಕೂ ಸುದರ್ಶನ ಚಕ್ರ ಜನ್ಮ ತಳೆದಿದ್ದಾದರೂ ಹೇಗೆ, ಎಂಬುದು ನಿಮಗೆ ಗೊತ್ತೆ? ದೇವಶಿಲ್ಪಿ ವಿಶ್ವಕರ್ಮನು ತನ್ನ ಮಗಳಾದ ಸಂಜನಾಳನ್ನು ಸೂರ್ಯ ದೇವರಿಗೆ ಕೊಟ್ಟು ಮದುವೆ ಮಾಡಿದ್ದನು. ಆದರೆ ಸೂರ್ಯನ ಪ್ರಖರವಾದ ತೇಜಸ್ಸಿನ ಪ್ರಭಾವದಿಂದಾಗಿ ಸಂಜನಾ ಸೂರ್ಯನ ಹತ್ತಿರವಿರಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಇದರ ಕುರಿತು ತನ್ನ ತಂದೆಯೊಡನೆ ವೇದನೆ ಹೇಳಿಕೊಂಡಳು.

ಆಗ ವಿಶ್ವಕರ್ಮನು ಸೂರ್ಯನಿಂದ ಒಂದಿಷ್ಟು ತೇಜಸ್ಸನ್ನು ತೆಗೆದು ಅದರಿಂದ ಮೂರು ದಿವ್ಯ ಹಾಗೂ ಅಪಾಯಕಾರಿ ಆಯುಧಗಳನ್ನು ಮಾಡಿದನು. ಅವುಗಳೆಂದರೆ ಪುಷ್ಪಕ ವಿಮಾನ, ತ್ರಿಶೂಲ ಹಾಗೂ ಸುದರ್ಶನ ಚಕ್ರ. ಈ ರೀತಿಯಾಗಿ ಸುದರ್ಶನ ಚಕ್ರವು ನಿರ್ಮಾಣ ಹೊಂದಿ ಶಾಶ್ವತವಾಗಿ ವಿಷ್ಣುವಿನ ಅಧೀನದಲ್ಲಿ ಸೇರಿಕೊಂಡಿತು.

ಇಲ್ಲಿ ಸುದರ್ಶನ ಚಕ್ರವೆ ಮುಖ್ಯ ದೇವರು!

ಚಿತ್ರಕೃಪೆ: Effulgence108

ಈ ವಿಶೇಷ ಸುದರ್ಶನ ಚಕ್ರಕ್ಕೆಂದೆ ಮುಡಿಪಾದ ದೇವಾಲಯವೊಂದಿದೆ. ಅದೆ ಅಂಜುಮೂರ್ತಿ ಮಂಗಲಂ ದೇವಾಲಯ. ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೇರಿ ಪಟ್ಟಣದಿಂದ ಎಂಟು ಕಿ.ಮೀ ದೂರದಲ್ಲಿರುವ ಮಂಗಲಂ ಎಂಬಲ್ಲಿ ಈ ದೇವಾಲಯವಿದೆ.

ಅಂಜುಮೂರ್ತಿ ಎಂದರೆ ಮೂಲತಃ ಐದು ಮೂರ್ತಿಗಳು ಎಂದರ್ಥ. ಅಂದರೆ ಇಲ್ಲಿ ಸುದರ್ಶನ ಚಕ್ರದೊಂದಿಗೆ ಇತರೆ ನಾಲ್ಕು ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಅವುಗಳೆಂದರೆ ವೈಷ್ಣವ ದುರ್ಗಾ, ಶಿವ, ವಿಷ್ಣು ಹಾಗೂ ಗಣಪತಿಯ ವಿಗ್ರಹಗಳು. ಆದರೂ ಮುಖ್ಯವಾಗಿ ಇಲ್ಲಿ ಸುದರ್ಶನ ಚಕ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಇಲ್ಲಿ ಸುದರ್ಶನ ಚಕ್ರವೆ ಮುಖ್ಯ ದೇವರು!

ಚಿತ್ರಕೃಪೆ: Effulgence108

ದಂತಕಥೆಯಂತೆ ಒಮ್ಮೆ ಕಶ್ಯಪ ಮುನಿಗಳು ಈ ದೇವಾಲಯವಿರುವ ಸ್ಥಳದ ಹತ್ತಿರದಲ್ಲೆ ವಿಷ್ಣುವಿನ ವಿಗ್ರಹ ಪ್ರತಿಷ್ಠಾಪಿಸಲೆಂದು ತೆರಳುತ್ತಿದ್ದರು. ಪ್ರಸ್ತುತ ದೇವಾಲಯವಿರುವ ಸ್ಥಳದ ಹತ್ತಿರ ಬಂದಾಗ ಅಲ್ಲಿ ಅವರಿಗೆ ಒಂದು ಪವಿತ್ರ ಕೊಳ ಕಂಡು ಅಲ್ಲಿ ದೇವಿಯ ಉಪಸ್ಥಿತಿ ಇರುವುದು ಅರಿವಿಗೆ ಬಂತು. ಅದಕ್ಕೆ ಪೂರಕವೆಂಬಂತೆ ನರ್ತಿಸುತ್ತಿರುವ ವೈಷ್ಣವ ದುರ್ಗೆಯ ವಿಗ್ರಹ ದೊರೆಯಿತು.

ಅದನ್ನು ದೇವರ ಪ್ರಸಾದವೆಂದು ಬಗೆದ ಅವರು ಅಲ್ಲಿ ವಿಗ್ರಹ ಪ್ರತಿಷ್ಠಾಪಿಸಿದರು. ಅದಾಗಲೆ ಬಹಳ ಸಮಯ ಕಳೆದಿದ್ದರಿಂದ ವಿಷ್ಣು ಕೋಪಗೊಂಡು ತನ್ನ ಸುದರ್ಶನ ಚಕ್ರವನ್ನು ಹಾರಿ ಬಿಟ್ಟನು. ಅದು ನೇರವಾಗಿ ಕಶ್ಯಪ ಮುನಿ ಹಾಗೂ ದುರ್ಗೆಯ ಎದುರುಬಂದು ನಿಂತಿತು. ಆಗ ಮುನಿಗಳು ಬಲು ಭಕ್ತಿಯಿಂದ ಚಕ್ರವನ್ನು ಪ್ರಾರ್ಥಿಸಿದರು. ಅಲ್ಲೆ ಅದು ಸ್ವಯಂವ್ಯಕ್ತವಾಗಿ ನೆಲೆಗೊಂಡಿತು.

ಅಂಬಲಪುಳ ದೇವಾಲಯದ ಕುತೂಹಲಕಾರಿ ಸತ್ಯಗಳು!

ಹಾಗಾಗಿ ಮಂಗಲಂನ ಅಂಜುಮೂರ್ತಿ ದೇವಾಲಯದಲ್ಲಿರುವ ಸುದರ್ಶನ ಚಕ್ರವು ಸ್ವಯಂಭೂ ಚಕ್ರವೆಂದು ಪರಿಗಣಿಸಲಾಗುತ್ತದೆ ಹಾಗೂ ಇಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸುವವರ ಕಷ್ಟಗಳನ್ನು ಸುದರ್ಶನ ಚಕ್ರವು ತುಂಡು ತುಂಡಾಗಿ ಮಾಡಿ ನಿರ್ನಾಮ ಮಾಡುತ್ತದೆ ಎಂಬ ನಂಬಿಕೆಯಿದೆ.

ದಕ್ಷಿಣ ಮೂಕಾಂಬಿಕೆಯ 1000 ವರ್ಷಗಳ ದೇವಾಲಯ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X