Search
  • Follow NativePlanet
Share
» »ಈ ದೇವಾಲಯವನ್ನು ಕಾಯುತ್ತಿರುವ ಮೊಸಳೆ....!

ಈ ದೇವಾಲಯವನ್ನು ಕಾಯುತ್ತಿರುವ ಮೊಸಳೆ....!

By Sowmyabhai

ಪ್ರಪಂಚದಲ್ಲಿರುವ ಒಂದೇ ಒಂದು ಶಾಖಾಹಾರ ಮೊಸಳೆಯ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಮೊಸಳೆಗಳು ಮಾಂಸಹಾರಿಗಳೇ ಆಗಿರುತ್ತವೆ. ಆದರೆ ಶಾಖಾಹಾರಿಯಾಗಿರುವ ಮೊಸಳೆ ಅಷ್ಟೇ ಅಲ್ಲದೇ, ಎಷ್ಟೋ ಕಥೆಗಳಿಗೆ, ರಹಸ್ಯಗಳಿಗೆ ತಾಣವಾಗಿರುವ ನಮ್ಮ ಭಾರತದೇಶದಲ್ಲಿಯೇ ಇರುವ ಶಾಖಾಹಾರ ಮೊಸಳೆ. ಈ ಮೊಸಳೆಯ ಬಗ್ಗೆ ಎಷ್ಟೋ ರಹಸ್ಯಗಳು ಇವೆ. ಇಂದಿಗೂ ನೀವು ಈ ದೇವಾಲಯಕ್ಕೆ ತೆರಳಿ ಕಾವಲು ಕಾಯುತ್ತಿರುವ ಮೊಸಳೆಯ ಬಗ್ಗೆ ಪ್ರತ್ಯಕ್ಷವಾಗಿ ಕಾಣಬಹುದು.

1.ಎಲ್ಲಿದೆ?

1.ಎಲ್ಲಿದೆ?

ಈ ವಿಚಿತ್ರ ಬೇರೆ ಎಲ್ಲೂ ಇಲ್ಲ ಇದು ಇರುವುದು ನಮ್ಮ ಭಾರತ ದೇಶದ ಕೇರಳ ರಾಜ್ಯದಲ್ಲಿಯೇ. ಈ ನದಿಯಲ್ಲಿ ಆ ಮೊಸಳೆಯು ಎಷ್ಟೋ ವರ್ಷಗಳಿಂದ ಇದೆ. ಆ ಮೊಸಳೆಯ ಹೆಸರು ಬಬಿಯಾ. ಈ ನದಿ ಕೇರಳದಲ್ಲಿನ ಕಾಸರ್ಗೋಡ್ ಅನಂತಪುರ ಎಂಬ ಒಂದು ಗ್ರಾಮದಲ್ಲಿದೆ. ಈ ದೇವಾಲಯದ ಹೆಸರು ಅನಂತಪುರ ಸರೋವರ ದೇವಾಲಯವೇ ಆಗಿದೆ.

2.ಬಬಿಯಾ ಯಾರು?

2.ಬಬಿಯಾ ಯಾರು?

ಕೇರಳದಲ್ಲಿನ ತಿರುವನಂತಪುರದಲ್ಲಿರುವ ಎಷ್ಟೋ ಪ್ರಖ್ಯಾತಿ ಹೊಂದಿರುವ ಶ್ರೀ ಅನಂತಪದ್ಮನಾಭಸ್ವಾಮಿ ಮೂಲಸ್ಥಾನವಿದೆ ಎಂದು ಕೆಲವು ಪೂರಾಣಗಳು ಹೇಳುತ್ತವೆ. ಈ ದೇವಾಲಯಕ್ಕೆ ಈ ಬಬಿಯಾ ಎಂಬ ಮೊಸಳೆ ಪ್ರತಿದಿನ ಕಾವಲು ಕಾಯುತ್ತಿರುವುದು.

3.ನದಿ

3.ನದಿ

ಈ ನದಿಯಲ್ಲಿ ಅನೇಕ ಮಂದಿ ಇಲ್ಲಿನ ದೇವರನ್ನು ದರ್ಶನ ಬರುವಾಗ ಕೆಲವು ಬಾರಿ ಸ್ನಾನಗಳು ಮಾಡುತ್ತಿರುತ್ತಾರೆ. ಹಾಗೆಯೇ ಈ ನೀರಿನಲ್ಲಿ ಇಳಿದು ಪ್ರಸಾದವನ್ನು ಸಮರ್ಪಿಸಿ, ಕಾಲು ಹಾಗು ಕೈಗಳು ಕೂಡ ತುಳೆದುಕೊಳ್ಳುತ್ತಿರುತ್ತಾರೆ. ಆದರೆ ಇಷ್ಟರವರೆಗೆ ಈ ದೇವಾಲಯದ ಚರಿತ್ರೆಯಲ್ಲಿ ಇಲ್ಲಿ ಇರುವ ಆ ಮೊಸಳೆ ಯಾರಿಗೂ ಹಾನಿ ಮಾಡುವುದಿಲ್ಲ.

4.ಶಾಖಾಹಾರಿ

4.ಶಾಖಾಹಾರಿ

ಇದರಿಂದ ಅಲ್ಲಿಗೆ ಬರುವವರಿಗೆ ಎಷ್ಟೋ ಅದೃಷ್ಟ ಹಾಗು ದೇವರ ಕಟಾಕ್ಷ ಇದ್ದವರಿಗೆ ಮಾತ್ರ ಆ ಮೊಸಳೆಯು ಕಣ್ಣಿಗೆ ಕಾಣುತ್ತದೆ ಎಂತೆ. ಆ ಮೊಸಳೆ ಎಷ್ಟೋ ಶಾಖಾಹಾರಿ ಎಂದರೆ ಆ ನದಿಯಲ್ಲಿರುವ ಮೀನನ್ನು ಕೂಡ ಅದು ಸೇವಿಸುವುದಿಲ್ಲವಂತೆ.

5.ಪ್ರಸಾದ

5.ಪ್ರಸಾದ

ಈ ದೇವಾಲಯದಲ್ಲಿರುವ ದೇವರಿಗೆ ಅಲ್ಲಿನ ಪೂಜಾರಿಗಳು ಪೂಜೆಗಳು ಮಾಡಿ ಪ್ರಸಾದ ಸಮರ್ಪಿಸಿದ ನಂತರವೇ ಆ ಪ್ರಸಾದವನ್ನು ತೆಗೆದುಕೊಂಡು ಪೂಜಾರಿಗಳು ಆ ನದಿಯ ಹತ್ತಿರ ಬಂದು ಆ ಮೊಸಳೆಯನ್ನು ಕರೆದರೆ ಅದು ಎಲ್ಲೇ ಇದ್ದರು ಕೂಡ ಅವರ ಹತ್ತಿರ ಬರುತ್ತದೆ ಎಂತೆ.

6.ಸಮಯ

6.ಸಮಯ

ಆ ನಂತರ ಈ ಪೂಜಾರಿಗಳೇ ಪ್ರಸಾದವನ್ನು ನೇರವಾಗಿ ಆ ಮೊಸಳೆಗೆ ಇಡುತ್ತಾರೆ. ಅದು ಕೂಡ ಸರಿಯಾದ ಸಮಯದಲ್ಲಿ ಮಾತ್ರ ಪೂಜಾರಿಗಳು ನೀಡುವ ಆಹಾರ (ಪ್ರಸಾದ) ವನ್ನು ನೀಡುತ್ತಾರೆ. ಆ ಪ್ರಸಾದ ಹೇಗೆ ಇರುತ್ತದೆ ಎಂದರೆ ಅನ್ನ ಹಾಗು ಬೆಲ್ಲದಿಂದ ತಯಾರು ಮಾಡಿ ಪ್ರಸಾದವನ್ನು ಮೊಸಳೆಗೆ ಆಹಾರವಾಗಿ ನೀಡುತ್ತಾರೆ.

7.150 ವರ್ಷಗಳಿಂದ

7.150 ವರ್ಷಗಳಿಂದ

ಈ ಮೊಸಳೆ ಆ ಪೂಜಾರಿಗಳು ಇಡುವ ಆ ಪ್ರಸಾದವನ್ನು ಬಿಟ್ಟು ಬೇರೆ ಯಾವ ಪದಾರ್ಥಗಳನ್ನು ಇದುವರೆವಿಗೂ ತಿಂದಿಲ್ಲವಂತೆ. ಅಲ್ಲಿರುವ ಪ್ರಜೆಗಳು, ಪೂಜಾರಿಗಳು ಹೇಳುವ ಲೆಕ್ಕದ ಪ್ರಕಾರ ಆ ಮೊಸಳೆ ಕಳೆದ 150 ವರ್ಷಗಳಿಂದ ಮೊಸಳೆ ಆ ನದಿಯಲ್ಲಿಯೇ ಇದ್ದು, ದೇವಾಲಯದ ಸುತ್ತ ಕಾವಲು ಕಾಯುತ್ತಿದೆಯಂತೆ.

8.ದೇವಾಲಯಕ್ಕೆ ಕಾವಲು

8.ದೇವಾಲಯಕ್ಕೆ ಕಾವಲು

ಅಷ್ಟು ವರ್ಷಗಳಿಂದ ಒಂದೇ ಒಂದು ಮೊಸಳೆ ಕಾವಲು ಕಾಯದೇ ಹೋದರೆ ಅಂದರೆ ಮೊಸಳೆ ಸತ್ತು ಹೋದರೆ ಮತ್ತೊಂದು ಮೊಸಳೆಯು ಆ ದೇವಾಲಯವನ್ನು ಕಾವಲು ಕಾಯುತ್ತದೆ ಎಂತೆ. ಈ ದೇವಾಲಯದ ಸಮೀಪದಲ್ಲಿ ಯಾವುದೇ ನದಿಯೇ ಆಗಲೀ, ಸರೋವರವೇ ಆಗಿಲಿ ಇಲ್ಲ. ಅಷ್ಟು ವರ್ಷಗಳಿಂದ ಒಂದು ಮೊಸಳೆ ಕಾವಲು ಕಾಯುತ್ತಿರುವುದು ಆಶ್ಚರ್ಯವೇ ಸರಿ.

9.ಟಿ.ವಿ ಚಾನೆಲ್ಸ್ ರಿಪೋರ್ಟ್

9.ಟಿ.ವಿ ಚಾನೆಲ್ಸ್ ರಿಪೋರ್ಟ್

ಇಂದಿನ ಪ್ರದೇಶದಲ್ಲಿರುವ ಬಬಿಯಾ ಎಂಬ ಈ ಮೊಸಳೆ ಮಾತ್ರ ಸಮಾರು 60 ವರ್ಷಗಳಿಂದ ದೇವಾಲಯವನ್ನು ಕಾಪಾಡುತ್ತಿದೆ. ಈ ಬಬಿಯಾ ಅಲ್ಲಿ ಎಷ್ಟೋ ಪ್ರಾಮುಖ್ಯತೆಯನ್ನು ಹೊಂದಿದೆ. ಅನೇಕ ಮಂದಿಗೆ ಈ ಮೊಸಳೆಯ ಬಗ್ಗೆ ಗೊತ್ತು. ಎಷ್ಟೋ ಟಿ.ವಿ ವಾಹಿನಿಗಳು ವರದಿಯ ಪ್ರಕಾರ ಈ ಮೊಸಳೆಯ ಬಗ್ಗೆ ಮಾಹಿತಿಯನ್ನು ವಿವರಿಸಿದ್ದಾರೆ.

10.ಮೊಸಳೆ

10.ಮೊಸಳೆ

ಈ ವಿಧವಾಗಿ ಶಾಖಾಹಾರವನ್ನು ಮಾತ್ರವೇ ತಿನ್ನುವ ಈ ಮೊಸಳೆ ನಮ್ಮ ಭಾರತ ದೇಶದಲ್ಲಿ ಮಾತ್ರವಿದೆ. ಆ ಪ್ರದೇಶದಲ್ಲಿರುವ ಅನೇಕ ವೃದ್ಧರು ಕೂಡ ತಮ್ಮ ಚಿಕ್ಕವಯಸ್ಸಿನಿಂದಲೂ ಕೂಡ ಈ ಬಾಬಿಯಾ ಎಂಬ ಮೊಸಳೆಯನ್ನು ನೋಡುತ್ತಲೇ ಬಂದಿದ್ದಾರೆ.

11.1945

11.1945

ಈ ಬಾಬಿಯಾಕ್ಕಿಂತ ಹಿಂದೆ ಈ ನದಿಯಲ್ಲಿ ಕಾವಲಾಗಿ ಇದ್ದ ಒಂದು ಮೊಸಳೆಯನ್ನು 1945 ರಲ್ಲಿ ಬ್ರಿಟೀಷ್ ಸೈನಿಕನೊಬ್ಬ ಈ ದೇವಾಲಯದ ಮೇಲೆ ನಂಬಿಕೆ ಇಲ್ಲದೇ ಕಾವಲು ಕಾಯುತ್ತಿದ್ದ ಮೊಸಳೆಯನ್ನು ಕೊಂದು ಹಾಕಿದನು. ಕೆಲವು ದಿನಗಳ ಬಳಿಕ ಆ ಬ್ರಿಟೀಷ್ ಸೈನಿಕನು ಆ ಊರಿನಲ್ಲಿಯೇ ಒಂದು ಹಾವು ಕಡಿದು ಮೃತಪಟ್ಟನು.

12.ಬ್ರಿಟೀಷ್ ಸೈನಿಕ

12.ಬ್ರಿಟೀಷ್ ಸೈನಿಕ

ಆ ವಿಧವಾಗಿ ನದಿಯಲ್ಲಿದ್ದ ಮೊಸಳೆಯನ್ನು ಕೊಂದದ್ದರಿಂದಲೇ ಬ್ರಿಟೀಷ್ ಸೈನಿಕನು ಆ ದೇವಾಲಯದಲ್ಲಿದ್ದ ನಾಗದೇವತೆಯು ಅವನನ್ನು ಬಲಿ ತೆಗೆದುಕೊಂಡಿತು ಎಂದು ಅನೇಕ ಮಂದಿ ಹೇಳುತ್ತಾರೆ.

13.ಬ್ರಿಟೀಷ್ ಸೈನಿಕಾಧಿಕಾರಿ

13.ಬ್ರಿಟೀಷ್ ಸೈನಿಕಾಧಿಕಾರಿ

ಆ ವಿಧವಾಗಿ 1945 ರಲ್ಲಿ ಬ್ರಿಟೀಷ್ ಸೈನ್ಯಾಧಿಕಾರಿಯ ಕೈಯಲ್ಲಿ ಆ ಮೊಸಳೆ ಮರಣ ಹೊಂದಿದ ನಂತರ ಅದರ ಸ್ಥಾನದಲ್ಲಿ ಈ ಬಬಿಯಾ ಎಂಬ ಮೊಸಳೆಯು ಈ ದೇವಾಲಯಕ್ಕೆ ಬಂದು ಇಂದಿಗೂ ದೇವಾಲಯವನ್ನು ಕಾವಲು ಕಾಯುತ್ತಿದೆ. ಹಾಗಾಗಿಯೇ ಈ ಬಾಬಿಯಾನನ್ನು ಅನೇಕ ವರ್ಷಗಳಿಂದ ನೋಡುತ್ತಿದ್ದಾರೆ. ಇಂತಹ ವಿಚಿತ್ರವಾದ ಶಾಖಾಹಾರ ಮೊಸಳೆಯು ನಮ್ಮ ಭಾರತ ದೇಶದಲ್ಲಿ ಮಾತ್ರವೇ ಇದೆ ಎಂದೇ ಹೇಳಬಹುದು.

14.ಕೇರಳ ಪ್ರವಾಸ-ಆನಂದ ನಿಲಯ

14.ಕೇರಳ ಪ್ರವಾಸ-ಆನಂದ ನಿಲಯ

ಕೇರಳ ರಾಜ್ಯ ಪ್ರವಾಸಿಕ್ಕೆ ಮತ್ತೊಂದು ಹೆಸರು. ಹಚ್ಚ ಹಸಿರಿನ ಪ್ರದೇಶಗಳು, ಕೊಬ್ಬರಿ ತೋಟಗಳು, ಸುಂದರವಾದ ಬೀಚ್‍ಗಳು, ಆಹ್ಲಾದಕರವಾದ ಬ್ಯಾಕ್ ವಾಟರ್ಸ್‍ಗಳ ಜೊತೆ ಪ್ರಯಾಣಗಳು, ಅನೇಕ ದೇವಾಲಯಗಳು, ಆರ್ಯುವೇದ ವೈದ್ಯ ಸುಗಂಧಗಳು, ನಿರ್ಮಲವಾದ ನದಿಗಳು, ಸಮುದ್ರ ಪ್ರದೇಶಗಳು, ದ್ವೀಪಗಳು, ಮೊದಲಾದ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದಾಗಿದೆ.

15.ಹೇಗೆ ಸಾಗಬೇಕು?

15.ಹೇಗೆ ಸಾಗಬೇಕು?

ಹೈದ್ರಾಬಾದ್‍ನಿಂದ ಕರ್ನೂಲು, ಅನಂತಪುರಂ, ತುಮಕೂರಿನ ಮೇಲೆ ಅನಂತಪುರವು ಸೇರಿಕೊಳ್ಳಬಹುದು.

ವಿಮಾನ ಮಾರ್ಗದ ಮೂಲಕ ಹೈದ್ರಾಬಾದ್ ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದ ರಾಯಚೂರು, ದಾವಣಗೆರೆ, ಶಿವಮೊಗ್ಗದ ಮೇಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಇಲ್ಲಿಗೆ ಸೇರಿಕೊಳ್ಳಬಹುದು. ಈ ಮಾರ್ಗದಲ್ಲಿ 1 ಗಂಟೆ 25 ನಿಮಿಷಗಳ ಕಾಲ ಪ್ರಯಾಣ ಮಾಡಬೇಕಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X