Search
  • Follow NativePlanet
Share
» »ಹೈದರಾಬಾದ್ನಿಂದ ಪುದುಚೆರಿಗೆ ಹೊರಟ ಪ್ರವಾಸ ಕಥನ!

ಹೈದರಾಬಾದ್ನಿಂದ ಪುದುಚೆರಿಗೆ ಹೊರಟ ಪ್ರವಾಸ ಕಥನ!

By Mahesh Kumar

ಯೆನ್ ಮಾರ್ಟಲ್ ರ ಲೈಫ್ ಆಫ್ ಪೈ ಚಿತ್ರವನ್ನು ನೋಡಿದಾಗಿನಿಂದಲೇ ಪುದುಚೆರಿಯ ಸೌಂದರ್ಯದೆಡೆಗೆ ನಾನು ಆಕರ್ಷಿತನಾಗಿದ್ದೆ. ಚಿತ್ರದ ಪ್ರತಿ ದೃಶ್ಯದಲ್ಲೂ ಸೆರೆಹಿಡಿಯಲಾಗಿದ್ದ ಸುಂದರ ಸ್ಥಳೀಯ ಪ್ರದೇಶಗಳ ಚಿತ್ರಣವು ಆ ಭಾಗದಲ್ಲಿ ಹೊರಹೊಮ್ಮುತ್ತಿರುವ ಸಂಗೀತ ಸುಧೆಯ ಹಾಗೆ ಭಾಸವಾಗುತ್ತಿತ್ತು.

ಎಲ್ಲರ ಹಾಗೆ ನನಗೂ ನೋಡಬೇಕಾದ ಸುಂದರ ಸ್ಥಳಗಳ ದೊಡ್ಡ ಪಟ್ಟಿಯೇ ಇತ್ತು. ಈ ಚಿತ್ರದ ದೆಸೆಯಿಂದ ಪುದುಚೆರಿಯು ಆ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಂತೂ ನಿಜ. ಹೈದರಾಬಾದ್ನ ಬಂಜಾರಾ ಹಿಲ್ಸ್ನಿಂದ ಶುರುವಾದ ಸರಳದಾರಿಯ, ಸುಸಜ್ಜಿತ ಬೀಳ್ಕೊಡುಗೆಯು ನನ್ನ ಜೀವನದ ಸಾಹಸಮಯ ಪ್ರಯಾಣದ ಅತಿ ರೋಚಕ ಘಳಿಗೆಗಳಿಗೆ ದಾರಿಮಾಡಿಕೊಟ್ಟವು.

ಹೈದರಾಬಾದ್ನಿಂದ ಪುದುಚೆರಿಗೆ ಹೊರಟ ಪ್ರವಾಸ ಕಥನ!

ಬಂಜಾರಾ ಹಿಲ್ಸ್ ರಸ್ತೆ, ಚಿತ್ರಕೃಪೆ: Cephas 405

ಅದೂ ನನ್ನ ಕನಸಿನ 'ಪಾಂಡಿ'ಗೆ(ಜನ ಪ್ರೀತಿಯಿಂದ ಪಾಂಡಿ ಎಂದು ಕರೆಯುತ್ತಾರೆ). ಖಂಡಿತವಾಗಿಯು ಈ ಅನುಭವವು ಯಾವುದೋ ಬಾಲಿವುಡ್ ಸಿನೆಮಾದಿಂದ ಹೊರಬಿದ್ದ ಕಾಗದದ ತುಣುಕೊಂದರ ಹಾಗೆ ಅನ್ನಿಸಿತು. ಬೇ ಆಫ್ ಬೆಂಗಾಲ್ನ ತುತ್ತತುದಿಯಲ್ಲಿರುವ ದಿ ಇಂಡಿಯನ್ ಕೋಟ್ ಡಿ'ಅಝೂರ್ ಅಥವಾ ದಿ ರಿವರ್ ಆಫ್ ದಿ ಈಸ್ಟ್ ನನ್ನ ಮೊದಲ ನಿರೀಕ್ಷಿತ ಸ್ಥಳ.

ಈ ಜಾಗವು ಅತ್ಯಾಧುನಿಕವಾಗಿದ್ದರೂ ಇಲ್ಲಿಂದ ಹೊರಹೊಮ್ಮುವ ಆರಾಮದಾಯಕ ಹಾಗು ಪ್ರಶಾಂತತೆಯ ಕಂಪನಗಳು ಎಂಥಹವನನ್ನೂ ಕೂಡ ಮೂಕವಿಸ್ಮಿತನನ್ನಾಗಿ ಮಾಡುತ್ತದೆ. ಈ ಮನಮೋಹಕ ಜಾಗವು ಫ್ರೆಂಚ್ ಹಾಗೂ ಭಾರತೀಯ ಸಂಸ್ಕೃತಿಯ ಮಿಶ್ರಣವಾಗಿದೆ.

ಹೈದರಾಬಾದ್ನಿಂದ ಪುದುಚೆರಿಗೆ ಹೊರಟ ಪ್ರವಾಸ ಕಥನ!

ಚಿತ್ರಕೃಪೆ: Raj

ಹಚ್ಚಹಸುರಿನ ತಾಣಗಳು, ಬ್ರಿಟೀಷ್ ಮಾದರಿಯ ವಿಲ್ಲಾಗಳು, ತಮಿಳುನಾಡಿನ ಸ್ಥಳೀಯ ನಗರಶೈಲಿಯೊಳಗೆ ಮಿಶ್ರಿತಗೊಂಡ ಫ್ರೆಂಚ್ ಮಾದರಿಯ ರಸ್ತೆಗಳು, ಚೈತನ್ಯದಾಯಕ ವಾತಾವರಣ, ಅಲ್ಲಿನ ಆಧ್ಯಾತ್ಮಿಕ ಸ್ಪುರತೆ, ವೈಭವೋಪೇತ ಫ್ರೆಂಚ್ ಮತ್ತು ಭಾರತೀಯ ಆಹಾರಪದ್ದತಿಯ ಸಮ್ಮಿಲನ, 'ವಿಲ್ಲೆ ಬ್ಲಾಂಚ್ ಅಥವಾ ವೈಟ್ ಟೌನ್'ಗಳ ಗಾಂಭೀರ್ಯವು ತಮಿಳುನಾಡಿನ ಸದಾ ಗುಜುಗುಟ್ಟುವ ಕಚ್ಚಾ ಸಾಂಪ್ರದಾಯಿಕ ನಗರದೊಳಗೆ (ನಾಯರ್ ವಿಲ್ಲೆ ಅಥವಾ ಕಪ್ಪು ನಗರ) ಬೆರೆತುಹೋದಂತಹ ಆ ಅನುಭವವು ಭಾರತದೊಳಗಿನ ಪುಟ್ಟ ಫ್ರಾನ್ಸ್ ನಗರವೆಂಬ ಹಣೆಪಟ್ಟಿಯೊಂದಿಗೆ, ಮಹತ್ವಾಕಾಂಕ್ಷಿ ಪ್ರವಾಸಿಗರೆಲ್ಲರೂ ಭೇಟಿ ನೀಡಲೇ ಬೇಕಾದ ಪ್ರವಾಸಿ ತಾಣವಾಗಿದೆ.

ಹಸಿವಿಗರಿಗೆ ಮಾರ್ಗ ಮಧ್ಯದಲ್ಲಿ ಸಿಗಬಹುದಾದ ತಿನಿಸು ತಾಣಗಳು:

ರಸ್ತೆಬದಿಯ ಹೋಟೆಲ್ಲುಗಳಲ್ಲಿ ಸಿಗುವ, ನಾಲಿಗೆಗೆ ರುಚಿತಟ್ಟಿಸುವಂತಹ ತಿನಿಸುಗಳನ್ನು ಸವಿಯದೇ ಯಾವುದೇ ಪ್ರವಾಸವು ಪೂರ್ಣಗೊಳ್ಳುವುದಿಲ್ಲ. ದಾರಿಯುದ್ದಕ್ಕೂ ಹಲವಾರು ರೀತಿಯ ಹೋಟೆಲ್ಗಳು ನಿಮ್ಮನ್ನು ಸ್ವಾಗತಿಸುತ್ತವೆ. ನಾನು ರುಚಿಸಿದ, ಇನ್ನೂ ನನ್ನ ನಾಲಿಗೆಯ ಮೇಲೆ ತಾಜಾ ಅನುಭವ ನೀಡುತ್ತಿರುವ ರುಚಿಯನ್ನು ನೀಡಿದ ಅಂತಹ ಜಾಗಗಳು ಇಲ್ಲಿವೆ :

ಎನ.ಹೆಚ್.65 ರಲ್ಲಿರುವ ಶ್ರೀ ಮಣಿಕಂಠ ಹಾಗೂ ಪೂಜಿತಾ ರೆಸ್ಟೋರೆಂಟ್, ರಿಲಯನ್ಸ್ ಏ1 ಪ್ಲಾಜಾ, ಬ್ಲೂ ಮೂನ್ ಫ್ಯಾಮಿಲಿ ಢಾಬಾ, ಉಳವಪಡು ಬಿರಿಯಾನಿ ಮತ್ತು ನಕ್ಷತ್ರ ಹೋಟೆಲ್ ಇವುಗಳು ಕೈಗೆಟುಕುವ ದರದಲ್ಲಿ ನನಗೆ ಸಿಕ್ಕ, ಉಲ್ಲಾಸದಾಯಕವಾಗಿ ಉಣಬಡಿಸುವ ಹಾಗೂ ಎಲ್ಲರಿಗೂ ಒಪ್ಪುವಂತಹ ಆಹಾರತಾಣಗಳು.

ಹೈದರಾಬಾದ್ನಿಂದ ಪುದುಚೆರಿಗೆ ಹೊರಟ ಪ್ರವಾಸ ಕಥನ!

ಚಿತ್ರಕೃಪೆ: Aleksandr Zykov

ಮೊದಲ ದಿನ: ನಾನು ಅಂದುಕೊಂಡಂತೆ,ಸೂರ್ಯ ಮುಳುಗುವ ಮುಂಚಿತವಾಗಿ ಪಾಂಡಿಯನ್ನು ತಲುಪುವುದರಲ್ಲಿ ಯಶಸ್ವಿಯಾದೆ. ಪಾಂಡಿಯನ್ನು ತಲುಪಿದ ಕೂಡಲೇ ಪ್ರಾಮಿನೇಡ್ ಹೋಟೇಲ್ ಅನ್ನು ತಲುಪಿದ್ದಲ್ಲದೇ, ಹೋಟೇಲ್ನಿಂದ ನಮಗೆ ಕಾಣಸಿಗುವ ಮನಮೋಹಕ ಪ್ರಾಮಿನೇಡ್ ಬೀಚ್ ಅನ್ನು ಕಂಡು ಮೂಕವಿಸ್ಮಿತನಾದೆ.

ಈ ಬೀಚ್ ಇರುವ ಜಾಗದಲ್ಲೇ ಹೋಟೆಲ್ ಕೂಡ ಇದೆ, ಅಲ್ಲದೇ ಬಾಯಲ್ಲಿ ನೀರೂರಿಸುವ ಭಕ್ಷ್ಯಗಳು, ಅಲ್ಲಿನ ವಿನಯಶೀಲ ಕೆಲಸಗಾರರು ಆ ಹೋಟೆಲ್ನ ಮತ್ತೊಂದು ಗಮನಾರ್ಹ ಅಂಶ. ಮೆಚ್ಚುಗೆಯ ವಿಷಯವೆಂದರೆ ಈ ಜಾಗವು ವೈಟ್ ಟೌನ್ನ ಮಧ್ಯಭಾಗದಲ್ಲಿರುವುದು. ದಿ ಗೊಬರ್ಟ ಅವೆನ್ಯೂ ಅಥವಾ ಪ್ರಾಮಿನೇಡ್ ಬೀಚ್ನ ಪಕ್ಕದಲ್ಲಿ ನಿಧಾನವಾಗಿ ನಡೆಯುತ್ತಾ ಅದರ ಆನಂದವನ್ನು ಅನುಭವಿಸುದೇ ಒಂದು ಅತೀವವಾದ ಅನುಭವ.

ಹೈದರಾಬಾದ್ನಿಂದ ಪುದುಚೆರಿಗೆ ಹೊರಟ ಪ್ರವಾಸ ಕಥನ!

ಚಿತ್ರಕೃಪೆ: V.v

ಅಲ್ಲಿರುವ ಮಹಾತ್ಮಾಗಾಂಧಿಯ ಪುತ್ಥಳಿಯು, ನಾವು ಭಾರತದಲ್ಲೇ ಇದ್ದೇವೆ ಎಂಬುದನ್ನು ನೆನಪಿಸುವುದರಲ್ಲಿ ಮುಖ್ಯಪಾತ್ರವನ್ನು ವಹಿಸಿತ್ತಲ್ಲದೇ, ನನ್ನಲ್ಲಿರುವ ದೇಶಭಕ್ತಿಯ ಭಾವನೆಯನ್ನೂ ಸಹ ಜಾಗೃತಗೊಳಿಸಿದ್ದೂ ಹೌದು. ಬಿಸಿಬಿಸಿ ಕಾಫಿ ಹೀರುತ್ತಾ ಸಮುದ್ರದ ಅಲೆಗಳು ಅಲ್ಲಿನ ಕಲ್ಲುಗಳಿಗೆ ಅಪ್ಪಳಿಸುವುದನ್ನು ಗಂಟೆಗಟ್ಟಲೇ ನೋಡುತ್ತಾ ಕೂರುವುದೇ ಒಂದು ಆನಂದ. ಅಂದು ರಾತ್ರಿ ಮಂದವಾಗಿ ಸ್ಪರ್ಶಿಸುತ್ತಾ ಸಮುದ್ರದ ಗಾಳಿಯು ನನ್ನನ್ನು ನಿದ್ರೆಗೆ ಜಾರುವಂತೆ ಮಾಡಿತು, ಒಂದು ಶುಭರಾತ್ರಿಯ ಶುಭನಿದ್ರೆ.

ಎರಡನೆಯ ದಿನ: ಎರಡನೆಯ ದಿನ ನಾನಿರುವ ಹೋಟೆಲ್ನಿಂದ 12 ಕಿ.ಮೀ. ದೂರವಿರುವ ಆರೋವಿಲ್ಲೆಗೆ ಹೋಗಲು ಸಜ್ಜಾಗಿದ್ದೆ. ನಾನು ಆರೋವಿಲ್ಲೆಗೆ ಹೋಗಲು ನಿಶ್ಚಯಿಸಿದ ಕ್ಷಣವೇ ನನ್ನ ಜೀವನದ ಉದ್ದೇಶವೇ ಸಾರ್ಥಕವಾದಂತಹ ಅನುಭವವಾಯಿತು. ಆ ಕ್ಷಣ ನನ್ನೊಳಗಡೆ ಆಗುತ್ತಿದ್ದಂತಹ ಆ ಅನುಭವವನ್ನು ವರ್ಣಿಸಲು ಅಸಾಧ್ಯ.

ಹೈದರಾಬಾದ್ನಿಂದ ಪುದುಚೆರಿಗೆ ಹೊರಟ ಪ್ರವಾಸ ಕಥನ!

ಚಿತ್ರಕೃಪೆ: Aleksandr Zykov

ಆರೋವಿಲೇ ಶ್ರೀ ಅರವಿಂದರ ಅನುಯಾಯಿಯಾದ ಶ್ರೀಮಾತಾ(the mother)ರವರು ಮನುಕುಲದ ಏಕತೆಯನ್ನು ಸಾರುವ ಉದ್ದೇಶದಿಂದ ಸ್ಥಾಪಿಸಿದ ಒಂದು ಪ್ರಾಯೋಗಿಕ ಸಣ್ಣ ಪಟ್ಟಣ ಎಂದು ಹೇಳಬಹುದು. ಇಲ್ಲಿ ಹಲವು ರೀತಿಯ ಜೀವನಾನುಭವವನ್ನು ಅನುಭವಿಸಿದ ಜನರು, ಪ್ರಾಪಂಚಿಕ ಬಂಧನಗಳನ್ನು ಮೀರಿ ಹೊರಬಂದು, ಒಂದೇ ಸೂರಿನಡಿಯಲ್ಲಿ ಮುಕ್ತವಾಗಿ ಜೀವನ ನಡೆಸುತ್ತಾ, ಸಾಮರಸ್ಯ, ಸಹಬಾಳ್ವೆಯಿಂದ ಜೀವಿಸುತ್ತಾರೆ. ಇದನ್ನು ಸಿಟಿ ಆಫ್ ಡಾನ್(city of dawn-ಉದಯ ನಗರಿ) ಎಂದೂ ಕರೆಯುತ್ತಾರೆ.

ಆರೋವಿಲೆಯ ಭೇಟಿಯ ನಂತರ ನಾನು ಹೆಸರಾಂತ ಪ್ಯಾರಡೈಸ್ ಬೀಚ್ನ ಕಡೆಗೆ ಹೊರಟೆ.ಹೆಸರೇ ಸೂಚಿಸುವಂತೆ ಇದೊಂದು ಭೂಮಿಯ ಮೇಲಿನ ಸ್ವರ್ಗ.ಇದು ಬೋಟ್ನಲ್ಲಿ ಸರಾಗವಾಗಿ ಹೋಗಬಹುದಾದಂತಹ ಒಂದು ಜಾಗ. ಶುದ್ದ ಹಾಗೂ ಪ್ರಶಾಂತವಾದ ಅಗಾಧ ಸಮುದ್ರವನ್ನು ನೋಡುತ್ತಾ ಹಿಮ್ಮುಖವಾಗಿ ಚಲಿಸುವುದೇ ಒಂದು ಅದ್ಭುತ ಅನುಭವ. ಚುನ್ನಾಂಬರ್ ಬೋಟ್ನಲ್ಲಿ ಸುಮಾರು 30 ನಿಮಿಷಗಳ ಪ್ರಯಾಣಕ್ಕೆ ನಾನು ಕೊಟ್ಟದ್ದು ಕೇವಲ 200 ರೂಪಾಯಿಗಳು.

ಹೈದರಾಬಾದ್ನಿಂದ ಪುದುಚೆರಿಗೆ ಹೊರಟ ಪ್ರವಾಸ ಕಥನ!

ಚಿತ್ರಕೃಪೆ: Silver Blue

ಇಲ್ಲಿಗೆ ಹೋಗುವಾಗ ತಮ್ಮ ತಿನಿಸುಗಳನ್ನು ತಾವೇ ತೆಗೆದುಕೊಂಡು ಹೋಗುವುದು ಒಳ್ಳೆಯದು, ಯಾಕೆಂದರೆ ಆ ಬೀಚ್ನಲ್ಲಿ ತಿಂಡಿತಿನಿಸುಗಳು ಸಿಗುವುದು ಕಷ್ಟ, ಅಲ್ಲಿ ಇರುವುದೇ ಒಂದು ಸಣ್ಣ ರೆಸ್ಟೋರೆಂಟ್ ಅದೂ ಸಹ ದುಬಾರಿ ಹಾಗೂ ಜನನಿಬಿಡ ಜಾಗ. ಇಲ್ಲಿ ಬಟ್ಟೆ ಬದಲಿಸಲು ಹಾಗೂ ಸ್ನಾನಕ್ಕಾಗಿ ಪ್ರತ್ಯೇಕ ವ್ಯವಸ್ತೆ ಇರುವುದು ಬೀಚ್ ಪ್ರಿಯರಿಗೆ ವರದಾನವಿದ್ದಂತೆ. ಇದಾದ ಮೇಲೆ ನಾನು ನನ್ನ ಹೋಟೆಲ್ಗೆ ಮರಳಿದೆ.

ಬೆಳಗ್ಗೆ ಏಳಲು ನಿಜವಾಗಲೂ ನನಗೆ ಸ್ವಲ್ಪ ಕಷ್ಟವಾಯಿತೆಂದೇ ಹೇಳಬೇಕು, ಯಾಕೆಂದರೆ ಈ ಜಾಗವನ್ನು ಬಿಟ್ಟು ಹೊರಡಲು ನನಗೆ ಮನಸ್ಸಿರಲಿಲ್ಲ. ಆದರೂ ಕಷ್ಟದಿಂದಲೇ ಪಾಂಡಿಗೆ ವಿದಾಯ ಹೇಳಿ ನನ್ನ ಪ್ರಯಾಣವನ್ನು ಮನೆಯ ಕಡೆ ಬೆಳೆಸಬೇಕಾಯಿತು.

ಬನ್ನಿರಿ, ನೋಡಿರಿ, ಆನಂದಿಸಿರಿ..ಪಾಂಡಿಚೆರಿ!

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more