Search
  • Follow NativePlanet
Share
» »ಮೈ ಜುಮ್ಮೆನಿಸುವ ರಾಜಗಡ್ ಕೋಟೆ

ಮೈ ಜುಮ್ಮೆನಿಸುವ ರಾಜಗಡ್ ಕೋಟೆ

By Vijay

ಗುಡ್ಡ ಬೆಟ್ಟಗಳ ತುದಿಗಳಲ್ಲಿ ನಿರ್ಮಿತವಾದ ಕೋಟೆ ಕೊತ್ತಲಗಳು ಭಾರತ ದೇಶದಲ್ಲಿ ಸಾಕಷ್ಟು ಕಂಡುಬರುತ್ತವೆ. ಹಿಂದೆ ಸಾಮ್ರಾಜ್ಯಗಳು ಆಳುತ್ತಿದ್ದ ಸಮಯದಲ್ಲಿ ಯುದ್ಧಗಳು, ಆಕ್ರಮಣಗಳು ಸಾಮಾನ್ಯವಾಗಿದ್ದವು. ಇದಕ್ಕೆ ರಣತಂತ್ರಾತ್ಮಕವಾಗಿ ಕೋಟೆಗಳು ಹೆಚ್ಚಾಗಿ ಬೆಟ್ಟದ ತುದಿಗಳ ಮೇಲೆಯೆ ನಿರ್ಮಿಸಲ್ಪಡುತ್ತಿದ್ದವು.

ನಿಮಗಿಷ್ಟವಾಗಬಹುದಾದ : ಮಹಾರಾಷ್ಟ್ರದ ಅತ್ಯದ್ಭುತ ಕೋಟೆಗಳು

ಮಹಾರಾಷ್ಟ್ರ ರಾಜ್ಯವು ಸಾಮಾನ್ಯವಾಗಿ ಬೆಟ್ಟದ ಮೇಲೆ ನಿರ್ಮಿತವಾದ ಕೋಟೆಗಳಿಗೆ ದೇಶದಲ್ಲೆ ಪ್ರಸಿದ್ಧಿ ಪಡೆದಿರುವ ರಾಜ್ಯ. ಈ ರಾಜ್ಯದ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಯಾಗಲಿ ಅಥವಾ ಕೊಂಕಣ ಕರಾವಳಿಯ ಪರ್ವತ ಶ್ರೇಣಿಗಳಾಗಲಿ ಪ್ರತಿಯೊಂದರಲ್ಲಿ ಐತಿಹಾಸಿಕ ಮಹತ್ವ ಪಡೆದ ಅತ್ಯದ್ಭುತ ಕೋಟೆಗಳಿವೆ.

ಇಂದು ಈ ಅದ್ಭುತ ಕೋಟೆ ತಾಣಗಳು ರೋಮಾಂಚಕ ಪ್ರವಾಸಿ ತಾಣಗಳಾಗಿ ಹೆಸರುವಾಸಿಯಾಗಿವೆ. ಅದರಲ್ಲೂ ವಿಶೇಷವಾಗಿ ಚಾರಣದಂತಹ ಚಟುವಟಿಕೆಗಳಿಗೆ ಪ್ರಸಿದ್ಧವಾಗಿವೆ. ಪ್ರಸ್ತುತ ಲೆಖನದಲ್ಲಿ ಪುಣೆಯಲ್ಲಿ ಬರುವ ಒಂದು ರೋಮಾಂಚಕ ಕೋಟೆಯ ಕುರಿತು ತಿಳಿಸಲಾಗಿದೆ. ಇದನ್ನು ರಾಜಗಡ್ ಕೋಟೆ ಎಂದು ಕರೆಯುತ್ತಾರೆ.

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಸಾಮಾನ್ಯವಾಗಿ ಹಿಂದಿ, ಮರಾಠಿ ಮುಂತಾದ ಭಾಷೆಗಳಲ್ಲಿ ಗಡ್ ಎಂಬುದನ್ನು ಬೆಟ್ಟ ಪ್ರದೇಶಕ್ಕೆ ಬಳಸಲಾಗುತ್ತದೆ. ರಾಜಮನೆತನದ ಎಂಬರ್ಥ ನೀಡುವ ರಾಜಗಡ್ ಪುಣೆ ಜಿಲ್ಲೆಯಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಅದ್ಭುತ ಕೊಟೆಯಾಗಿದೆ.

ಚಿತ್ರಕೃಪೆ: Abhishek Thakur

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಪುಣೆ ನಗರ ಕೇಂದ್ರದಿಂದ 60 ಕಿ.ಮೀ ದೂರವಿರುವ ಈ ತಾಣವು ಭೋರ್ ತಾಲುಕಿನ ನಸ್ರಾಪುರದಿಂದ ಕೇವಲ ಹದಿನೈದು ಕಿ.ಮೀ ದುರವಿದೆ.

ಚಿತ್ರಕೃಪೆ: wikimedia

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಹಿಂದೆ ಮರಾಠಿ ಸಾಮ್ರಾಜ್ಯ ಆಳ್ವಿಕೆಯ ಕಾಲದಲ್ಲಿ ಇದು ಮುರುಮದೇವ ಎಂದು ಕರೆಯಲ್ಪಡುತ್ತಿತ್ತು ಹಾಗೂ ಛತ್ರಪತಿ ಶಿವಾಜಿ ಮಹಾರಾಜನು ಆಳುತ್ತಿದ್ದ ಸಮಯದಲ್ಲಿ ಮರಾಠಾ ಸಾಮ್ರಾಜ್ಯಕ್ಕೆ ರಾಜಗಡ್ 26 ಸುದೀರ್ಘ ವರ್ಷಗಳ ಕಾಲ ರಾಜಧಾನಿಯಾಗಿ ಮೆರೆದಿತ್ತು.

ಚಿತ್ರಕೃಪೆ: SahilSahadevan

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ರಾಜಗಡ್ ಕೋಟೆಯಿರುವ ಬೆಟ್ಟವು ಬುಡದಲ್ಲಿ 40 ಕಿ.ಮೀ ವ್ಯಾಸ ಹೊಂದಿರುವುದರಿಂದ ಯಾರಿಗೆ ಆಗಲಿ ಇದನ್ನು ಆಕ್ರಮಿಸಿಕೊಳ್ಳುವುದು ಕಷ್ಟಕರವಾಗಿತ್ತು. ಹೀಗಾಗಿ ಶತ್ರುಗಳನ್ನು ಮೆಲೆಇನಿಂದಲೆ ಸದೆ ಬಡಿಯುವ ಉದ್ದೆಶದಿಂದ ಈ ಕೋಟೆಯ ನಿರ್ಮಾಣ ಮಾಡಿದ್ದನು ಶಿವಾಜಿ.

ಚಿತ್ರಕೃಪೆ: Ankur P

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ರಾಜಗಡ್ ಬೆಟ್ಟದ ಎತ್ತರದ ಪ್ರದೇಶಗಳಲ್ಲಿ ಇಂದು ಅರಮನೆಗಳ, ನೀರಿನ ಸಂಗ್ರಹಣಾ ರಚನೆಗಳ, ಗುಹೆಗಳ ಅವಶೇಷಗಳನ್ನು ಕಾಣಬಹುದಾಗಿದೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶದ ಬೆಟ್ಟಗಳು, ಭವ್ಯ ನಿಸರ್ಗವು ರಮಣೀಯವಾಗಿ ಇಲ್ಲಿಂದ ಗೋಚರಿಸುತ್ತದೆ.

ಚಿತ್ರಕೃಪೆ: Chait83

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಸ್ಥಳೀಯವಾಗಿ ಮುರುಂಬಾ ದೇವಿಯನ್ನು ಆರಾಧಿಸಲಾಗುತ್ತಿತ್ತು. ಹೀಗಾಗಿ ಆಕೆಗೆ ಮುಡಿಪಾದ ಮುರುಮದೇವಿ ಬೆಟ್ಟದ ಮೇಲೆಯೆ ಈ ಕೋಟೆಯ ನಿರ್ಮಾಣವಾಗಿದೆ. ಹೀಗಾಗಿ ಮೊದ ಮೊದಲು ಇದನ್ನು ಮುರುಮದೇವ ಎಂದು ಕರೆಯಲಾಗುತ್ತಿತ್ತು. ಕೋಟೆಯ ಮುಖ್ಯ ಪ್ರವೇಶ ದ್ವಾರವನ್ನು ಮಹಾದರ್ವಾಜಾ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Adityary

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಅಲ್ಲದೆ ಇಂದು ಇದಕ್ಕೆ ತೆರಳುವ ಇನ್ನೊಂದು ರಹದಾರಿಯಿದ್ದು ಇದನ್ನು ಚೋರ್ ದರ್ವಾಜಾ ಎಂತಲೂ ಸಹ ಕರೆಯಲಾಗುತ್ತದೆ. ಶಿವಾಜಿ ಮಹಾರಾಜನು ತನ್ನ ಜೀವಿತಾವಧಿಯಲ್ಲಿ ತಾನು ನಿರ್ಮಿಸಿದ ಯಾವುದೆ ಕೋಟೆಗಳಲ್ಲಿ ಅತಿ ಹೆಚ್ಚು ಕಾಲ ವಾಸಿಸಿದ್ದನೆಂದರೆ ಅದು ರಾಜಗಡ್ ಕೋಟೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Chait83

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಇಂದು ಹಿಂದಿನ ಗತ ವೈಭವ ಸಾರುತ್ತ ನಿಂತಿರುವ ರಾಜಗಡ್ ಕೋಟೆ ಹಿಂದಿನ ಅನೇಕ ರೋಚಕ ಐತಿಹಾಸಿಕ ಪ್ರಸಂಗಗಳಿಗೆ ಮೂಕಸಾಕ್ಷಿಯಾಗಿದೆ. ಈ ಕೋಟೆಯು ಶಿವಾಜಿಯ ಮಗನ ಜನನ, ಆಗ್ರಾದಿಂದ ಶಿವಾಜಿ ಮರಳಿ ಬಂದದ್ದು, ಅಫ್ಜಲ್ ಖಾನ್ ನ ತಲೆಯನ್ನು ಕಡಿದು ಇಲ್ಲಿನ ಮಹಾದರ್ವಾಜಾದಲ್ಲಿ ಹೂಳಿದ್ದು, ಶಿವಾಜಿಯ ಪತ್ನಿಯ ಮರಣ, ಗುರುಗಳಾದ ಸೋನೋಪಂತ್ ದಬೀರ್ ಅವರಿಂದ ಶಿವಾಜಿಗೆ ಸೂಚನೆ ಹೀಗೆ ಅನೇಕ ಘಟನೆಗಳನ್ನು ಈ ಕೋಟೆ ಕಂಡಿದೆ.

ಚಿತ್ರಕೃಪೆ: Pauk

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ರಜಪೂತ ದೊರೆ ಜಯ್ ಸಿಂಗ್ ಜೊತೆ 1665 ರಲ್ಲಿ ಏರ್ಪಟ್ಟ ಪುರಂದರ ಒಪ್ಪಂದದಲ್ಲಿ ಶಿವಾಜಿಯು ತಾನು ಉಳಿಸಿಕೊಂಡ 17 ಕೋಟೆಗಳ ಪೈಕಿ ರಾಜಗಡ್ ಕೋಟೆಯೂ ಸಹ ಒಂದು. ಈ ಒಪ್ಪಂದದಲ್ಲಿ ಮಿಕ್ಕ 23 ಕೋಟೆಗಳನ್ನು ಜಯ ಸಿಂಗನು ಮುನ್ನಡೆಸುತ್ತಿದ್ದ ಮುಘಲರಿಗೆ ಹಸ್ತಾಂತರಿಸಲಾಗಿತ್ತು.

ಚಿತ್ರಕೃಪೆ: Abhijeet Safai

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಪ್ರವಾಸೋದ್ಯಮದ ದೃಷ್ಟಿಯಿಂದ ಇಂದು ಈ ಕೋಟೆಯು ಆಕರ್ಷಕ ಪ್ರವಾಸಿ ತಾಣವಾಗಿದೆ. ಅದರಲ್ಲೂ ವಿಶೇಷವಾಗಿ ಸಾಹಸ ಇಷ್ಟಪಡುವಂತಹ ಪ್ರವಾಸಿಗರಿಗೆ ರೋಮಾಂಚಕ ಚಾರಣ ಮಾರ್ಗವಾಗಿದೆ.

ಚಿತ್ರಕೃಪೆ: Abhishek Thakur

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಮಳೆಗಾಲ ಹಾಗೂ ಅದರ ನಂತರದ ಸಮಯದಲ್ಲಿ ಈ ಪ್ರದೇಶದ ವಾಸ್ತವ ಚಿತ್ರಣವೆ ಬದಲಾಗುತ್ತದೆ. ಎಲ್ಲೆಲ್ಲೂ ಮಂಜು ಮುಸುಕಿದ ವಾತಾವರಣ, ನಿರ್ಮಲವಾದ ಪರಿಸರ, ದಟ್ಟ ಹಸಿರು ಭೇಟಿ ನೀಡಿದವರು ಮೂಕವಿಸ್ಮಿತರನ್ನಾಗುವಂತೆ ಮಾಡುತ್ತದೆ.

ಚಿತ್ರಕೃಪೆ: Gauravyawalkar.2012

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ವಿಶೇಷವಾಗಿ ಮುಂಬೈ ಹಾಗೂ ಪುಣೆ ನಗರ ಪ್ರದೇಶಗಳಿಂದ ಉತ್ಸಾಹಿ ಯುವ ಜನಾಂಗದವರು, ವೃತ್ತಿಪರ ಚಾರಣಿಗರು, ಸಾಹಸ ಇಷ್ಟಪಡುವ ಸಾಹಸಿಗರು ಈ ಕೋಟೆಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Seemarockswiki

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಮುರುಮದೇವಿ ಬೆಟ್ಟದ ಮೇಲೆ ವಿಶಾಲವಾಗಿ ಹರಡಿರುವ ಈ ಕೋಟೆಯ ಪ್ರತಿ ಭಾಗಗಳನ್ನು ಒಂದೆ ದಿನದಲ್ಲಿ ನೋಡುವುದು ಅಸಾಧ್ಯವಾಗಿರುವುದರಿಂದ ಸಾಕಷ್ಟು ಪ್ರವಾಸಿಗರು ಇಲ್ಲಿ ಒಂದು ರಾತ್ರಿ ವಸತಿ ಹೂಡಿ ಅನ್ವೇಷಿಸಬಯಸುತ್ತಾರೆ.

ಚಿತ್ರಕೃಪೆ: Abhishek Thakur

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಕೋಟೆಯ ಆವರಣದಲ್ಲಿ ತಂಗಲು ಇಲ್ಲಿರುವ ಪುರಾತನ ಪದ್ಮಾವತಿಯ ದೇವಾಲಯವು ಅನುಕೂಲಕರವಾಗಿದ್ದು 50 ಜನಗಳವರೆಗೂ ಇಲ್ಲಿ ರಾತ್ರಿ ತಂಗಬಹುದಾಗಿದೆ. ಬೆಟ್ಟದ ಬುಡದಲ್ಲಿರುವ ಹಳ್ಳಿಗಳಲ್ಲಿನ ಜನರು ಪ್ರವಾಸಿಗರಿಗೆ ಅವಶ್ಯಕವಾಗಿರುವ ಪದಾರ್ಥಗಳನ್ನು ಇಲ್ಲಿ ಮಾರುತ್ತಾರೆ. ಇಲ್ಲಿನ ಕೃತಕ ನೀರಿನ ಕೊಳಗಳಲ್ಲಿ ವರ್ಷದ ಎಲ್ಲಾ ಸಮಯದಲ್ಲೂ ಶುದ್ಧವಾದ ನಿರು ದೊರೆಯುತ್ತದೆ.

ಚಿತ್ರಕೃಪೆ: vivek Joshi

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಮುರುಮದೇವಿ ಬೆಟ್ಟದ ಬುಡದಲ್ಲಿರುವ ವಿವಿಧ ಹಳ್ಳಿಗಳಿಂದ ಈ ಬೆಟ್ಟ ಕೋಟೆಗೆ ಚಾರಣ ಮಾರ್ಗಗಳಿವೆ. ಗುಂಜಾವ್ನೆ ಹಳ್ಳಿಯಿಂದ ಸಾಗುವ ಚಾರಣ ಮಾರ್ಗವು ಕಷ್ಟಕರವಾಗಿದ್ದು ಚೋರ್ ದರ್ವಾಜಾ ಮೂಲಕ ಸಾಗುತ್ತದೆ. ಮಳೆಗಾಲದ ಸಮಯದಲ್ಲಿ ಚಾರಣ ಮಾಡುವುದು ಉತ್ತಮವಲ್ಲವಾದರೂ ಮಾಡಿದ್ದೆ ಆದಲ್ಲಿ ಸಾಕಷ್ಟು ಜಾಗರೂಕತೆಯಿಂದಿ ಮಾಡಬೇಕಾಗುತ್ತದೆ.

ಚಿತ್ರಕೃಪೆ: vivek Joshi

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಇನ್ನೂ ಐತಿಹಾಸಿಕ ಹಾಗೂ ಪ್ರಮುಖವಾಗಿ ಮಹಾದರ್ವಾಜಾ ಮೂಲಕ ಚಾರಣ ಮಾಡಬಹುದು. ಇದು ಸುಲಭವಾದ ಚಾರಣ ಮಾರ್ಗವಾಗಿದೆ. ಇದು ಪಾಲಿಯಿಂದ ಸಾಗುತ್ತದೆ. ಇನ್ನೂ ಚುರ್ಮುಡಿ, ಭುಟುಂಡೆ ಹಳ್ಳಿಗಳಿಂದಲೂ ಸಹ ಚಾರಣ ಕೈಗೊಳ್ಳಬಹುದು.

ಚಿತ್ರಕೃಪೆ: Ankur P

ರೋಮಾಂಚಕ ರಾಜಗಡ್ ಕೋಟೆ:

ರೋಮಾಂಚಕ ರಾಜಗಡ್ ಕೋಟೆ:

ಮಳೆಗಾಲದ ನಂತರ ಸಮಯವು ಇಲ್ಲಿ ಚಾರಣ ಚಟುವಟಿಕೆ ಕೈಗೊಳ್ಳಲು ಉತ್ತಮವಾದುದಾಗಿದೆ. ಅಲ್ಲದೆ ಈ ಸಮಯದಲ್ಲಿ ಈ ತಾಣಕ್ಕೆ ಬೇಡಿಕೆಯೂ ಹೆಚ್ಚಾಗಿರುತ್ತದೆ. ಗುಂಪುಗಳಲ್ಲಿ ಚಾರಣ ಮಾಡುವುದರಿಂದ ಸುರಕ್ಷಿತರಾಗಿರಬಹುದು.

ಚಿತ್ರಕೃಪೆ: Abhishek Thakur

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more