Search
  • Follow NativePlanet
Share
» »ಅಣ್ಣಿಗೇರಿ ಅಮೃತೇಶ್ವರ ದೇವಸ್ಥಾನವನ್ನು ನೋಡಲೇ ಬೇಕು

ಅಣ್ಣಿಗೇರಿ ಅಮೃತೇಶ್ವರ ದೇವಸ್ಥಾನವನ್ನು ನೋಡಲೇ ಬೇಕು

ಅಣ್ಣಿಗೇರಿ ಹೆಸರು ಕೇಳಿದ್ದೀರಾ? ಅಣ್ಣಿಗೇರಿ ಎಂಬುವುದು ಧಾರವಾಡ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. ಇದು ಆದಿಕವಿ ಪಂಪ ಅವರ ಜನ್ಮಸ್ಥಳವಾಗಿದೆ. ಇಲ್ಲಿ ಪ್ರಸಿದ್ಧ ಅಮೃತೇಶ್ವರ ದೇವಸ್ಥಾನವಿದೆ. ಪುರಾತನ ಇತಿಹಾಸವನ್ನು ಹೊಂದಿರುವ ಈ ದೇವಸ್ಥಾನವು ಅನೇಕ ರಾಜವಂಶಜರ ಆಳ್ವಿಕೆಗೆ ಸಾಕ್ಷಿಯಾಗಿದೆ. ಇದು ಗದಗದಿಂದ 25 ಕಿಮೀ ದೂರದಲ್ಲಿದೆ.

ಸುಂದರ ಕಪ್ಪು ಕಲ್ಲಿನ ದೇವಾಲಯ

ಸುಂದರ ಕಪ್ಪು ಕಲ್ಲಿನ ದೇವಾಲಯ

PC: Dineshkannambadi

ಅಮೃತೇಶ್ವರ ದೇವಸ್ಥಾನವು ಅಣ್ಣಿಗೇರಿಯ ಕಲ್ಯಾಣದ ಚಾಲುಕ್ಯರು ನಿರ್ಮಿಸಿದ ಸುಂದರ ಕಪ್ಪು ಕಲ್ಲಿನ ದೇವಾಲಯವಾಗಿದೆ. ಈ ದೇವಸ್ಥಾನದ ಮುಖ್ಯ ದೇವತೆ ಶಿವ. ಅಣ್ಣಿಗೇರಿ ಪಶ್ಚಿಮ ಚಾಲುಕ್ಯರ ಸಾಮ್ರಾಜ್ಯದ ಪ್ರಮುಖ ಭಾಗವಾದ ಐತಿಹಾಸಿಕ ಪಟ್ಟಣವಾಗಿದ್ದು, ಹೊಯ್ಸಳರು, ಯಾದವರು ಇಲ್ಲಿ ಆಳ್ವಿಕೆ ನಡೆಸಿದ್ದಾರೆ. ಕನ್ನಡ ಆದಿ ಕವಿ, ಪಂಪಾ ಅವರ ಜನ್ಮಸ್ಥಳ ಎಂದು ಅಣ್ಣಿಗೇರಿ ಬಹಳ ಪ್ರಸಿದ್ಧವಾಗಿದೆ.

ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ

ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ

PC:Manjunath Doddamani Gajendragad

1050 ರಲ್ಲಿ ಕಟ್ಟಲಾದ ಅಮೃತೇಶ್ವರ ದೇವಾಲಯ ಕಲ್ಯಾಣದ ಚಾಲುಕ್ಯ ವಾಸ್ತುಶಿಲ್ಪದ ಉತ್ತಮ ಉದಾಹರಣೆಯಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಸ್ಥಾನವು 76 ಕಂಬಗಳನ್ನು ಹೊಂದಿದೆ. ದೇವಾಲಯದ ಗೋಡೆಗಳು ಪೌರಾಣಿಕ ಚಿತ್ರಣಗಳ ಕೆತ್ತನೆಗಳನ್ನು ಒಳಗೊಂಡಿದೆ. ಈ ದೇವಾಲಯವು ಇಟಗಿಯಲ್ಲಿರುವ ಮಹಾದೇವ ದೇವಸ್ಥಾನದ ನಂತರದ ರಚನೆಗಳಿಗೆ ಮಾದರಿಯಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Manjunath Doddamani Gajendragad

ಅಣ್ಣಿಗೇರಿ ಹುಬ್ಬಳ್ಳಿಗೆ ತುಂಬಾ ಹತ್ತಿರದಲ್ಲಿದೆ. ಹುಬ್ಬಳ್ಳಿ ಕರ್ನಾಟಕದ ಪ್ರಮುಖ ನಗರವಾಗಿದ್ದು, ತನ್ನದೇ ವಿಮಾನ ನಿಲ್ದಾಣ ಮತ್ತು ರೈಲ್ವೇ ಸ್ಟೇಷನ್ ಹೊಂದಿದೆ. ಹುಬ್ಬಳ್ಳಿಯಿಂದ 35 ಕಿ.ಮೀ ದೂರದಲ್ಲಿರುವ ಅಣ್ಣಿಗೇರಿಗೆ ಹುಬ್ಬಳ್ಳಿಯಿಂದ ಬಸ್ ಮೂಲಕ ತಲುಪಬಹುದು. ಈ ದೇವಸ್ಥಾನಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಡಿಸೆಂಬರ್ ಮತ್ತು ಜನವರಿ. ಇದು ದೇವಸ್ಥಾನದ ರಥೋತ್ಸವದ ಕಾರ್ ಉತ್ಸವದ ಸಮಯವಾಗಿದ್ದು, ರಥದಲ್ಲಿ ಅಮೃತೇಶ್ವರನ ವಿಗ್ರಹವನ್ನು ಮೆರವಣಿಗೆ ತರಲಾಗುತ್ತದೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC: Manjunath Doddamani Gajendragad

ಜೈನ ಧರ್ಮದ 23 ನೇ ತೀರ್ಥಂಕರವಾದ ಪಾರ್ಶ್ವಕ್ಕೆ ಅರ್ಪಿತವಾದ ದೇವಸ್ಥಾನವನ್ನೂ ಹೊಂದಿದೆ. ಬನಶಂಕರಿ, ಬಸಪ್ಪ, ಗಜಿನಾ ಬಸಪ್ಪ ಮತ್ತು ಹನುಮಾನ್‌ಗಳಿಗೆ ಸಮರ್ಪಿತವಾಗಿರುವ ದೇವಾಲಯಗಳನ್ನು ಅಣ್ಣಿಗೇರಿ ಹೊಂದಿದೆ. ರೈಲ್ವೆ ನಿಲ್ದಾಣದ ಬಳಿ ಪುರಾತನ ಲಿಂಗಯಾತಿ ದೇವಸ್ಥಾನವಿದೆ.

ತ್ರಿಕುಟೇಶ್ವರ ದೇವಸ್ಥಾನ

ತ್ರಿಕುಟೇಶ್ವರ ದೇವಸ್ಥಾನ

PC: Manjunath nikt

ತ್ರಿಕುಟೇಶ್ವರ ದೇವಸ್ಥಾನ ಕೂಡ ಒಂದು. ಶಿವನಿಗೆ ಸಮರ್ಪಿತವಾದ ದೇವಸ್ಥಾನವು ಮೂರು ಕಲ್ಲುಗಳನ್ನು ಒಂದೇ ಕಲ್ಲಿನಲ್ಲಿ ಕಟ್ಟಲಾಗಿದೆ. ದೇವಾಲಯದ ಪೂರ್ವ ಭಾಗದಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣುಗಳ ಲಿಂಗಗಳಿವೆ. ದೇವಸ್ಥಾನದ ಒಳಗೆ, ಪ್ರವಾಸಿಗರು ಮತ್ತು ಭಕ್ತರು ಸುಂದರವಾದ ಕಲ್ಲಿನ ಪರದೆಯನ್ನು ನೋಡಬಹುದು ಮತ್ತು ಸಣ್ಣ ಚಿತ್ರಣಗಳನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಪ್ರಸಿದ್ಧ ಸರಸ್ವತಿ ದೇವಾಲಯವು ತ್ರಿಕುಟೇಶ್ವರ ದೇವಾಲಯದ ಸಂಕೀರ್ಣದಲ್ಲಿದೆ.

ಶಂಭುಲಿಂಗ ದೇವಸ್ಥಾನ

ಶಂಭುಲಿಂಗ ದೇವಸ್ಥಾನ

PC: Manjunath Doddamani Gajendragad

ಈ ಬೃಹತ್ ಶಿವನ ದೇವಾಲಯವನ್ನು ಪಾಶ್ಚಿಮಾತ್ಯ ಚಾಲುಕ್ಯರು 11 ನೇ ಶತಮಾನದಲ್ಲಿ ನಿರ್ಮಿಸಿದರು. ಹಿಂದೂಸ್ತಾನಿ ಸಂಗೀತಕ್ಕೆ ಕುಂದಗೋಳ ಬಹಳ ಪ್ರಸಿದ್ಧವಾಗಿದೆ. ಭಾರತ ರತ್ನ ಭೀಮ್ ಸೇನ್ ಜೋಷಿ ಅವರು ಗುರು ಪ್ರಖ್ಯಾತ ಪಂಡಿತ್ ಸವಾಯಿ ಗಂಧರ್ವರ ಮಾರ್ಗದರ್ಶನದಲ್ಲಿ ಈ ನಗರದಲ್ಲಿ ಸಂಗೀತವನ್ನು ಕಲಿತರು. ಇದು ಹೆಚ್ಚು ನಯಗೊಳಿಸಿದ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿರುತ್ತದೆ, ಅವುಗಳು ಪರಸ್ಪರ ಒಂದರೊಳಗೆ ಕವಲೊಡೆಯುತ್ತವೆ. ಸ್ತಂಭಗಳ ಮೇಲೆ ಕೆತ್ತನೆಗಳು ಮತ್ತು ಚಿತ್ರಗಳನ್ನು ಚೆನ್ನಾಗಿ ಕೆತ್ತಲಾಗಿದೆ.

ಯೆಲ್ಲಮ್ಮ ದೇವಿ ದೇವಸ್ಥಾನ

ಯೆಲ್ಲಮ್ಮ ದೇವಿ ದೇವಸ್ಥಾನ

PC:Manjunath Doddamani Gajendragad

ರೇಣುಕಾ ದೇವಿ ದೇವಸ್ಥಾನ, ಅಥವಾ ಯೆಲ್ಲಮ್ಮ ದೇವಿ ದೇವಸ್ಥಾನ (ಇದು ಹೆಚ್ಚು ಜನಪ್ರಿಯವಾಗಿ ತಿಳಿದಿರುವಂತೆ), ಸೌಂದತ್ತಿಯಲ್ಲಿ ಅತ್ಯಂತ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಯಲ್ಲಮ್ಮ ದೇವಿ ಜಮಧಗ್ನಿ ಪತ್ನಿ ಮತ್ತು ಪರಶುರಾಮನ ತಾಯಿ ರೇಣುಕಾ ದೇವಿಗೆ ಸಂಬಂಧಿಸಿದೆ. ಅವರ ಕಥೆಯನ್ನು ಪುರಾಣಗಳಲ್ಲಿ ಹೇಳಲಾಗಿದೆ. ಇಲ್ಲಿ ರೇಣುಕಾ ದೇವಿಯನ್ನು ಯೆಲ್ಲಮ್ಮ ದೇವಿ ಎಂದು ಪೂಜಿಸಲಾಗುತ್ತದೆ.

ಉಂಕಲ್‌ ಚಂದ್ರಮೌಳೇಶ್ವರ ದೇವಸ್ಥಾನ

ಉಂಕಲ್‌ ಚಂದ್ರಮೌಳೇಶ್ವರ ದೇವಸ್ಥಾನ

PC:Chetuln

ಉಂಕಲ್‌ನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನವನ್ನು ಬಾದಾಮಿ ಚಾಲುಕ್ಯರ ಯುಗದಲ್ಲಿ ನಿರ್ಮಿಸಲಾಗಿದೆ ಮತ್ತು ಆದ್ದರಿಂದ ಚಾಲುಕ್ಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ದೇವಾಲಯದ ಗೋಡೆಗಳ ಮೇಲೆ ಸುಂದರವಾದ ಶಿಲ್ಪಕಲೆಗಳು ಮತ್ತು ಕೆತ್ತನೆಗಳು ಹಲವು ಪ್ರವಾಸಿಗರನ್ನು ಈ ಸ್ಥಳಕ್ಕೆ ಎಳೆಯುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದು ಉತ್ತರ ಕರ್ನಾಟಕದ ಇತರ ಶಿವ ದೇವಸ್ಥಾನಗಳಿಗಿಂತ ಭಿನ್ನವಾಗಿದೆ. ಚಂದ್ರಮೌಳೇಶ್ವರ ದೇವಸ್ಥಾನವು ನಾಲ್ಕು ದಿಕ್ಕುಗಳನ್ನು ಹೊಂದಿದೆ, ಒಟ್ಟಾರೆಯಾಗಿ ದೇವಾಲಯದ ಹನ್ನೆರಡು ಬಾಗಿಲುಗಳು, ಎರಡು ಶಿವಲಿಂಗಗಳು ಮತ್ತು ಎರಡು ನಂದಿ ಪ್ರತಿಮೆಗಳು ಪ್ರವೇಶದ್ವಾರದಲ್ಲಿ ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more