Search
  • Follow NativePlanet
Share
» »ಇಲ್ಲಿನ ದೇವಿಗೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು!

ಇಲ್ಲಿನ ದೇವಿಗೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು!

ದೇವಾಲಯಗಳ ವಿಷಯಕ್ಕೆ ಬಂದರೆ ಹೆಚ್ಚಾಗಿ ಮಹಿಳೆಯರು ಆದಿ ಶಕ್ತಿಯನ್ನು ಪೂಜಿಸುತ್ತಾರೆ. ಆ ತಾಯಿಯು ಯಾವುದೇ ಒಂದು ಹಬ್ಬ ಹರಿದಿನಗಳಲ್ಲಿ ಮತ್ತಷ್ಟು ಸೌಂದರ್ಯವತಿಯಾಗಿ ಕಾಣುತ್ತಾಳೆ. ಸಲಕ ಸೃಷ್ಟಿಗೆ ಮೂಲವಾದ ಆ ಜಗದಾಂಬೆಯನ್ನು ಆರಾಧಿಸಲು ಪ್ರತಿ ಶುಕ್

ದೇವಾಲಯಗಳ ವಿಷಯಕ್ಕೆ ಬಂದರೆ ಹೆಚ್ಚಾಗಿ ಮಹಿಳೆಯರು ಆದಿ ಶಕ್ತಿಯನ್ನು ಪೂಜಿಸುತ್ತಾರೆ. ಆ ತಾಯಿಯು ಯಾವುದೇ ಒಂದು ಹಬ್ಬ ಹರಿದಿನಗಳಲ್ಲಿ ಮತ್ತಷ್ಟು ಸೌಂದರ್ಯವತಿಯಾಗಿ ಕಾಣುತ್ತಾಳೆ. ಸಲಕ ಸೃಷ್ಟಿಗೆ ಮೂಲವಾದ ಆ ಜಗದಾಂಬೆಯನ್ನು ಆರಾಧಿಸಲು ಪ್ರತಿ ಶುಕ್ರವಾರ ಹಾಗು ದಸಾರಾಗಳಲ್ಲಿ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ.

ಹಾಗಾಗಿಯೇ ದೇಶದ ಮೂಲೆ ಮೂಲೆಗಳಲ್ಲಿಯೂ ಆಕೆಯನ್ನು ಪೂಜಿಸಲು ಅದ್ಭುತವಾದ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಅವುಗಳಲ್ಲಿ ಪ್ರತಿಯೊಂದು ದೇವಾಲಯಗಳಲ್ಲೂ ಒಂದೊಂದು ವಿಶೇಷತೆ ಇರುವುದನ್ನು ಕಾಣಬಹುದಾಗಿದೆ. ಹಾಗೆಯೇ ಗುಜರಾತ್‍ನ ಅಂಬಾಜಿಮಾತ ದೇವಾಲಯವು ಕೂಡ ಹಲವಾರು ವಿಶೇಷತೆಗಳನ್ನು ಹೊಂದಿದೆ.

ಹಾಗಾದರೆ ಆ ವಿಶೇಷತೆ ಏನು? ಆ ತಾಯಿಯ ಮಹಿಮೆ ಏನು? ಆಕೆಯನ್ನು ಹೇಗೆ ಪೂಜಿಸಬೇಕು? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಉತ್ತರ ಗುಜರಾತಿನಲ್ಲಿ ಹಾಗು ರಾಜಸ್ಥಾನಗೆ ಸಮೀಪದಲ್ಲಿ ಮಾಹಿಮಾನ್ವಿತವಾದ ಅಂಬಾಜಿ ದೇವಾಲವಿದೆ. ಸುತ್ತಲೂ ಎತ್ತರವಾದ ಕರಾವಳಿ ಪರ್ವತಗಳೊಂದಿಗೆ ಅವೃತ್ತವಾಗಿದ್ದು, ಹಚ್ಚ ಹಸಿರಿನಿಂದ ಕೂಡಿದ ವೃಕ್ಷಗಳ ಮಧ್ಯ ಭಾಗದಲ್ಲಿ ದೇವಾಲಯವಿದೆ. ಸುಂದರವಾದ ಪ್ರಕೃತಿಯ ಮಡಿಲಿನಲ್ಲಿ ಈ ದೇವಾಲಯವು ಅದ್ಭುತವಾಗಿ ಕಾಣುತ್ತದೆ.

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಸಾಮಾನ್ಯವಾಗಿ ನಿಮಗೆ ತಿಳಿದಿರುವಂತೆ 108 ಶಕ್ತಿ ಪೀಠಗಳು ಹೇಗೆ ನಿರ್ಮಾಣವಾಯಿತು ಎಂದರೆ ದಕ್ಷ ಪ್ರಜಾಪತಿಯು ತನ್ನ ಮಗಳಾದ ಪಾರ್ವತಿಗೆ ಮಾತ್ರ ಯಜ್ಞಕ್ಕೆ ಅಮಂತ್ರಣಮಾಡಿ ಶಿವನನ್ನು ಅಂತ್ರಣ ಮಾಡುವುದಿಲ್ಲ. ಇದರಿಂದ ನೊಂದ ಪಾರ್ವತಿ ದೇವಿಯು ತನ್ನ ತಂದೆಯೊಂದಿಗೆ ಈ ಬಗ್ಗೆ ಕೇಳುತ್ತಾಳೆ. ಮಗಳು ಎಂಬ ಕನಿಕರವೂ ಇಲ್ಲದೇ ಎಲ್ಲರ ಮುಂದೆ ಪ್ರಜಾಪತಿಯು ಶಿವನನ್ನು ಹಾಗು ಪಾರ್ವತಿಯನ್ನು ನಿಂದಿಸುತ್ತಾನೆ.

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ತನ್ನ ತಂದೆ ಮಾಡಿದ ಅವಮಾನವನ್ನು ಸಹಿಸಲಾರದ ಪಾರ್ವತಿ ದೇವಿಯು ಯಜ್ಷದಲ್ಲಿ ಬಿದ್ದು ಪ್ರಾಣ ತ್ಯಾಗ ಮಾಡುತ್ತಾಳೆ. ಪಾರ್ವತಿಯ ವಿಷಯ ತಿಳಿದ ಮಹಾಶಿವನು ಕೋಪ ತಡೆಯಲಾದರೆ ತನ್ನ ಪತ್ನಿಯನ್ನು ಹೆಗಲ ಮೇಲೆ ಹಾಕಿಕೊಂಡು ಸಾಮಾನ್ಯ ಮಾನವನಾಗಿ ಪರಿರ್ವತನೆಯಾಗಿ 3 ಲೋಕ ಸಂಚಾರ ಮಾಡುತ್ತಾ ಇರುತ್ತಾನೆ. ಇದನ್ನು ಕಂಡ ವಿಷ್ಣುವು ಪಾರ್ವತಿಯ ದೇಹವನ್ನು 108 ಭಾಗವಾಗಿ ಕತ್ತರಿಸುತ್ತಾನೆ.

Unknown

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಆ ಭಾಗಗಳೇ 108 ಭೂಮಿಯಲ್ಲಿನ 108 ಶಕ್ತಿ ಪೀಠಗಳಾಗಿವೆ. ಆ ಭಾಗಗಳಲ್ಲಿ ಪಾರ್ವತಿ ದೇವಿಯ ಹೃದಯ ಭಾಗವೇ ಇಲ್ಲಿ ಶಕ್ತಿ ಪೀಠವಾಗಿದೆ. ಹೃದಯ ಎಂಬುದು ನಮ್ಮ ಭಾವನೆಗಳನ್ನು ಹಾಗು ಅನುಭವಗಳಿಗೆ ಸಂಬಧಿಸಿರುವುದೇ ಆಗಿದೆ. ಅದಕ್ಕೆ ಯಾವುದೇ ರೂಪ ಎನ್ನುವುದು ಇಲ್ಲ. ಹಾಗಾಗಿಯೇ ಈ ದೇವಾಲಯದ ದೇವಿಯು ವಿಗ್ರಹದಲ್ಲಿ ಇರುವುದಿಲ್ಲ.

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಅದರ ಬದಲಿಗೆ ಬೀಜಾಕ್ಷರವಾಗಿ ಲಿಖಿಸಿರುವ ಒಂದು ಶ್ರೀಯಂತ್ರವನ್ನು ಮಾತ್ರವೇ ದರ್ಶನ ಪಡೆಯಬಹುದು. ಆ ಶ್ರೀ ಯಂತ್ರವನ್ನು ಭಕ್ತರು ನೋಡಬಾರದು ಎಂದು ಹೇಳುತ್ತಾರೆ. ಹಾಗಾಗಿಯೇ ಶ್ರೀಯಂತ್ರವನ್ನು ಪೂಜಿಸಬೇಕಾದರೆ ಭಕ್ತರು ಬಿಳಿ ಬಟ್ಟೆಯನ್ನು ತಮ್ಮ ಕಣ್ಣಿಗೆ ಕಟ್ಟಿಕೊಂಡು ಪೂಜಿಸಬೇಕು ಎಂಬುದು ದೇವಾಲಯದ ನಿಯಮವಾಗಿದೆ.

Viral A dave

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಪ್ರಸ್ತುತ ಈ ದೇವಾಲಯವನ್ನು 1500 ವರ್ಷಗಳಿಗಿಂತ ಹಳೆಯದಾದುದು ಎಂದು ಗುರುತಿಸಲಾಗಿದೆ. ಆದರೆ ಒಂದು ಕಾಲದಲ್ಲಿ ಈ ದೇವಾಲಯದ ಸಮೀಪ "ಗಬ್ಬರ್" ಎಂಬ ಬೆಟ್ಟದ ಮೇಲೆ ಇತ್ತು ಎಂದು ಹೇಳಲಾಗುತ್ತಿದೆ. ಪೂರ್ವದಲ್ಲಿದ್ದ ಒಂದು ರಾಜನು ಹೇಗಾದರು ಮಾಡಿ ಬೆಟ್ಟದ ಮೇಲೆ ಇರುವ ದೇವಿಯನ್ನು ರಾಜ್ಯದ ಒಳಗೆ ಇರುವಂತೆ ಮಾಡಬೇಕು ಎಂದು ಅಂದುಕೊಂಡಿದ್ದನಂತೆ. ಹಾಗಾಗಿ ರಾತ್ರಿ- ಹಗಲು ಎನ್ನದೇ ದೇವಾಲಯದಲ್ಲಿ ದೇವಿಯನ್ನು ಆರಾಧನೆ ಮಾಡಿ ತನ್ನ ಜೊತೆ ಬಾ ತಾಯಿ ಎಂದು ಕೇಳಿಕೊಂಡನಂತೆ.

KartikMistry

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ರಾಜನ ಮಾತಿಗೆ ಪ್ರಸನ್ನಳಾದ ದೇವಿಯು ರಾಜನಿಗೆ ಒಂದು ಷರತ್ತನ್ನು ವಿಧಿಸಿದಳಂತೆ. ಅದೆನೆಂದರೆ "ನಾನು ನಿನ್ನ ಹಿಂದೆಯೇ ಬರುತ್ತೇನೆ ಆದರೆ ಯಾವುದೇ ಕಾರಣಕ್ಕೂ ಕೂಡ ಹಿಂದಿರುಗಿ ನೋಡಬಾರದು ಎಂದು ಹೇಳಿದಳಂತೆ". ಏನಾದರೂ ಆ ಷರತ್ತನ್ನು ನೀನು ಉಲ್ಲಂಘನೆ ಮಾಡಿದರೆ ಯಾವುದೇ ಕಾರಣಕ್ಕೂ ಆ ಸ್ಥಳದಿಂದ ಅಲುಗಾಡದೇ ಅಲ್ಲಿಯೇ ಶಾಶ್ವತವಾಗಿ ನೆಲೆಸುತ್ತೇನೆ ಎಂದು ತಿಳಿಸಿದಳಂತೆ. ಇದಕ್ಕೆ ಒಪ್ಪಿದ ರಾಜನು ತಾಯಿಯ ಮುಂದೆ ತೆರಳಿದನಂತೆ, ಹಾಗೆಯೇ ತಾಯಿಯು ರಾಜನ ಹಿಂದೆ ತೆರಳುತ್ತಿದ್ದಳಂತೆ.

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ತಾಯಿ ನಿಜವಾಗಿಯೂ ತನ್ನ ಹಿಂದೆಯೇ ಬರುತ್ತಿದ್ದಾಳೆಯೇ ಎಂದುಕೊಂಡ ರಾಜನಿಗೆ ಕುತೂಹಲ ಹೆಚ್ಚಾಗುತ್ತಲೇ ಹೋಯಿತು. ತದನಂತರ ತನ್ನ ಕುತೂಹಲ ತಡೆಯಲಾರದೇ ಹಿಂದಿರುಗಿ ನೋಡಿಯೇ ಬಿಟ್ಟ. ಇದರಿಂದಾಗಿ ಆ ತಾಯಿ ನೀಡಿದ್ದ ಷರತ್ತು ಅಲ್ಲಿಗೆ ಮುರಿಯಿತು. ಹಾಗಾಗಿ ಆ ತಾಯಿಯು ಆ ಸ್ಥಳದಲ್ಲಿಯೇ ನೆಲೆಸಿದಳು. ಹೀಗೆ ನೆಲೆನಿಂತ ತಾಯಿಯನ್ನು ರಾಜನು ಅಲ್ಲಿಯೇ ಒಂದು ಅದ್ಭುತವಾದ ದೇವಾಲಯವನ್ನು ನಿರ್ಮಾಣ ಮಾಡಿದನು.

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಹೀಗೆ ತಾಯಿಯು ಒಂದು ಕಾಲದಲ್ಲಿ ಗಬ್ಬರ್ ಎಂಬ ಬೆಟ್ಟದ ಮೇಲೆ ಇದ್ದವಳು ಪ್ರಸ್ತುತ ಪ್ರಕೃತಿಯ ಮಡಿಲಿನಲ್ಲಿ ನೆಲೆಸಿದ್ದಾಳೆ. ಪ್ರಸ್ತುತ ಗಬ್ಬರ್ ಬೆಟ್ಟದ ಮೇಲೆ ಇದ್ದ ದೇವಾಲಯವು ಕ್ರಮೇಣವಾಗಿ ಶಿಥಿಲವಾಗುತ್ತಾ ಬಂದಿತ್ತು. ಆದರೂ ಕೂಡ ಇಂದಿಗೂ ಆ ದೇವಾಲಯದಲ್ಲಿ ತಾಯಿಯ ನಾಮ ಸ್ಮರಣೆ ಮಾಡಿ ಜ್ಯೋತಿಯನ್ನು ಬೆಳಗುತ್ತಾರೆ.

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಇಲ್ಲಿನ ತಾಯಿಯನ್ನು ಆರಾಧಿಸಬೇಕಾದರೆ ಕಣ್ಣು ಮುಚ್ಚಿಕೊಂಡೇ ಪೂಜಿಸಬೇಕು

ಶ್ರೀ ಶೈಲಕ್ಕೆ ಸೇರಿಕೊಂಡರೆ ಕೇವಲ ದೇವಿಯ ದರ್ಶನವೇ ಅಲ್ಲದೇ.. ಅಲ್ಲಿನ ಪ್ರತಿಯೊಂದು ವಸ್ತುವಿನಲ್ಲಿಯೂ ಏನೋ ಒಂದು ಮಹತ್ವವನ್ನು ಕಾಣಬಹುದಾಗಿದೆ. ಅಂಬಾಜಿ ದೇವಾಲಯವೇ ಅಲ್ಲದೇ ಅಲ್ಲಿನ ಸಮೀಪದ ಗಬ್ಬರ್ ಬೆಟ್ಟ, ಕೋಟೇಶ್ವರ ದೇವಾಲಯ, ಸರಸ್ವತಿ ನದಿ ಹುಟ್ಟಿದ ಸ್ಥಳ, ವಾಲ್ಮೀಕಿ ಆಶ್ರಮ, ಅಜಯ್ ದೇವಿ ದೇವಾಲಯ. ಹೀಗೆ ಲೆಕ್ಕವಿಲ್ಲದೇ ದಿವ್ಯವಾದ ಕ್ಷೇತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

anurag agnihotri

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲ್ವೆ ಮಾರ್ಗದ ಮೂಲಕ
ಈ ಅದ್ಭುತವಾದ ದೇವಾಲಯಕ್ಕೆ ತೆರಳಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಗುಜಾರತಿನ ಅಬು. ಇದು ಅಜ್ಮೀರ, ಚೆನ್ನೈ, ಮೈಸೂರು, ಬೆಂಗಳೂರು, ಪುಣೆ, ಮುಂಬೈ, ಜೈಪುರ್, ದೆಹಲಿ, ಡೆಹ್ರಾಡೂನ್ ಇನ್ನು ಹಲವಾರು ನಗರಗಳಿಂದ ಈ ಸ್ಥಳಕ್ಕೆ ರೈಲ್ವೆ ಮಾರ್ಗಗಳು ಇರುವುದನ್ನು ಕಾಣಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಲಕ
ಈ ಮಾಹಿಮಾನ್ವಿತವಾದ ದೇವಾಲಯಕ್ಕೆ ತೆರಳಲು ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ಗುಜಾರತ್‍ನ ಡಿಸಾ ಆಗಿದೆ. ಮತ್ತೊಂದು ವಿಮಾನ ನಿಲ್ದಾಣವೆಂದರೆ ಪಾಲನ್ಪುರ ಇದು ನಗರದಿಂದ ಸುಮಾರು 82 ಕಿ.ಮೀ ದೂರದಲ್ಲಿದೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ದೇವಾಲಯಕ್ಕೆ ಸುಮಾರು 179 ಕಿ.ಮೀ ದೂರದಲ್ಲಿದೆ.

ಪ್ರೀತಿಸದವರನ್ನೇ ಸಿಗುವಂತೆ ಮಾಡುವ ದೇವಾಲಯವಿದು!ಪ್ರೀತಿಸದವರನ್ನೇ ಸಿಗುವಂತೆ ಮಾಡುವ ದೇವಾಲಯವಿದು!

ವೈದ್ಯರಿಗೆ ಸವಾಲಾಗಿರುವ ಮಿರಾಕಲ್ ಖಾಯಿಲೆ ಇಲ್ಲಿ ಗುಣವಾಗುತ್ತದೆ...ವೈದ್ಯರಿಗೆ ಸವಾಲಾಗಿರುವ ಮಿರಾಕಲ್ ಖಾಯಿಲೆ ಇಲ್ಲಿ ಗುಣವಾಗುತ್ತದೆ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X