Search
  • Follow NativePlanet
Share
» »ಇವು ಸಾಮನ್ಯವಲ್ಲ, ಕೇರಳದ ಗುಹಾಲಯಗಳು!

ಇವು ಸಾಮನ್ಯವಲ್ಲ, ಕೇರಳದ ಗುಹಾಲಯಗಳು!

ದಕ್ಷಿಣ ಭಾರತದ ಜನಪ್ರೀಯ ರಾಜ್ಯಗಳ ಪೈಕಿ ಒಂದಾಗಿರುವ ಕೇರಳ ರಾಜ್ಯವು ಸಾಕಷ್ಟು ಪ್ರಸಿದ್ಧಿ ಪಡೆದಿರುವ ಪ್ರವಾಸಿ ನಾಡಾಗಿದ್ದು ಕೆಲವು ಕುತೂಹಲಕಾರಿ ಗುಹೆಗಳಿಗಾಗಿಯೂ ಸಾಕಷ್ಟು ಗಮನಸೆಳೆಯುತ್ತವೆ

By Vijay

ಕೇರಳವು ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ರಾಜ್ಯಗಳ ಪೈಕಿ ಒಂದಾಗಿದೆ. ುಖ್ಯವಾಗಿ ಪಶ್ಚಿಮ ಘಟ್ಟಗಳು ಹಾಗೂ ಅರಬ್ಬಿ ಸಮುದ್ರದ ತೀರದ ಗುಂಟ ನೆಲೆಸಿರುವ ಕಾರಣ ಈ ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಯುಳ್ಳ ತಾಣಗಳಿವೆ.

ಕಡಲ ತೀರಗಳು, ಗಿರಿಧಾಮಗಳು, ಕಾಡುಗಳು ಒಂದೆಡೆ ಸಾಕಷ್ಟು ಕುತೂಹಲ ಕೇರಳಿಸಿದರೆ ಇನ್ನೊಂದೆಡೆ ರಾಜ್ಯದ ಪ್ರಮುಖ ಹೆಗ್ಗುರುತಾದ ಹಿನ್ನೀರು ಪ್ರವಾಸೋದ್ಯಮವು ವಿದೇಶಿ ಪ್ರವಾಸಿಗರನ್ನೂ ಸಹ ಹೆಚ್ಚಿನ ಸಂಖೆಯಲ್ಲಿ ಆಕರ್ಷಿಸುತ್ತದೆ.

ನಿಮಗೆ ಗೊತ್ತಿರದ ಕೇರಳದ ಗಿರಿಧಾಮಗಳಿವು!

ಇವುಗಳಿಗೆ ಹೊರತಾಗಿ ಕೇರಳದಲ್ಲಿರುವ ಕೆಲವು ಕುತೂಹಲಕರ ಗುಹೆಗಳೂ ಸಹ ಸಾಕಷ್ಟು ಗಮನಸೆಳೆಯುತ್ತವೆ. ಬಹುಜನರಿಗೆ ಇವುಗಳ ಕುರಿತು ಹೆಚ್ಚಿಗೆ ತಿಳಿದಿಲ್ಲವಾದರೂ ಈ ಗುಹಾ ರಚನೆಗಳು, ಬಂಡೆಗಳು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ರಚನೆಗಳಾಗಿವೆ.

ಚಾರಣಕ್ಕೂ ಸಹ ಯೋಗ್ಯವಾಗಿರುವ ಈ ರಚನೆಗಳು, ಬಲು ಪ್ರಾಚೀನತೆಯ ಕುರುಹುಗಳಾಗಿದ್ದು, ಪ್ರಸ್ತುತ ಲೇಖನದ ಮೂಲಕ ಅಂತಹ ಕೆಲವು ಆಯ್ದ ಕೇರಳ ರಾಜ್ಯದ ಕೆಲವು ಕುತೂಹಲಕರ ಗುಹಾ ಹಾಗೂ ಬಂಡೆ ಕೆತ್ತನೆಗಳ ರಚನೆಗಳ ಕುರಿತು ತಿಳಿಯಿರಿ.

ಕೊಲ್ಲಂ

ಕೊಲ್ಲಂ

ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟುಕ್ಕಲ್ ಎಂಬ ಗ್ರಾಮದಲ್ಲಿರುವ ಆಕರ್ಷಕ ಗುಹಾ ದೇವಾಲಯ ಇದಾಗಿದೆ. ಇಲ್ಲಿ ಎರಡು ವಿವಿಧ ಆಕಾರದ ಹೆಬ್ಬಂಡೆಗಳಿದ್ದು ಅದರಲ್ಲಿ ಗುಹೆಯನ್ನು ಕೊರೆದಿರುವುದನ್ನು ಕಾಣಬಹುದು. ಎರಡೂ ಬಂಡೆಗಳು ಪೂರ್ವಕ್ಕೆ ಮುಖ ಮಾಡಿದ್ದು ಆರರಿಂದ ಎಂಟನೇಯ ಶತಮಾನದ ಮಧ್ಯದಲ್ಲಿ ಕೊರೆಯಲಾಗಿದೆ.

ಚಿತ್ರಕೃಪೆ: Kannanshanmugam

ದೇವತೆಗಳು

ದೇವತೆಗಳು

ಇಲ್ಲಿರುವ ಎರಡು ಬಂಡೆಗಳ ಪೈಕಿ ದೊಡ್ಡದಾದ ಬಂಡೆಯಲ್ಲಿ ನಂದಿಯ ವಿಗ್ರಹವಿದ್ದರೆ, ಸಣ್ಣ ಬಂಡೆಯಲ್ಲಿ ಆಂಜನೇಯನ ವಿಗ್ರಹವಿದೆ. ಇನ್ನೊಂದು ವಿಷಯವೆಂದರೆ ಎರಡು ಬಂಡೆಗಳ ಮಧ್ಯೆ ಗಣಪತಿಯ ವಿಗ್ರಹವೂ ಇರುವುದನ್ನು ಗಮನಿಸಬಹುದು.

ಚಿತ್ರಕೃಪೆ: Kannanshanmugam

ಪಥನಾಂತಿಟ್ಟಾ

ಪಥನಾಂತಿಟ್ಟಾ

ಕವಿಯೂರು ಗ್ರಾಮವು ದೇವಾಲಯಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಅಲ್ಲಿರುವ ದೇವಾಲಯಗಳ ಪೈಕಿ ಬಂಡೆಯಲ್ಲಿ ಕಡಿಯಲಾದ ಗುಹಾ ದೇವಾಲಯವೂ ಸಹ ಸಾಕಷ್ಟು ಪ್ರವಾಸಿ ವಿಶೇಶತೆಯನ್ನು ಹೊಂದಿರುವ ದೇವಾಲಯವಾಗಿದೆ.

ಚಿತ್ರಕೃಪೆ: Sugeesh

 ಭಾರತೀಯ ಪುರಾತತ್ವ ಇಲಾಖೆ

ಭಾರತೀಯ ಪುರಾತತ್ವ ಇಲಾಖೆ

ಐತಿಹಾಸಿಕ ಮಹತ್ವ ಪಡೆದಿರುವ ಈ ದೇವಾಲಯವು ಭಾರತೀಯ ಪುರಾತತ್ವ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದ್ದು ಪಲ್ಲವ ವಾಸ್ತುಶಿಲಿಯ ಪ್ರಭಾವ ಇರುವುದರಿಂದ ಎಂಟನೇಯ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ ಎಂದು ತಿಳಿದುಬರುತ್ತದೆ.

ಚಿತ್ರಕೃಪೆ: Lalu Meledath

ಚಿರಕ್ಕಲ್

ಚಿರಕ್ಕಲ್

ತ್ರಿಶ್ಶೂರ್ ಜಿಲ್ಲೆಯ ಚಿರಕ್ಕಲ್ ಗ್ರಾಮದಲ್ಲಿ ಲ್ಯಾಟರೈಟ್ ಕಲ್ಲಿನಲ್ಲಿ ಭೂಗರ್ಭದಲ್ಲಿ ನಿರ್ಮಿಸಲಾದ ಗುಹಾ ರೀತಿಯ ರಚನೆಗಳು ಇದಾಗಿದ್ದು ಐತಿಹಾಸಿಕವಾಗಿ ಸಾಕಷ್ಟು ಪ್ರಮುಖಗಳಿಸಿವೆ.

ಚಿತ್ರಕೃಪೆ: Narayananknarayanan

ರಹಸ್ಯಮಯ!

ರಹಸ್ಯಮಯ!

ಮಹಾಭಾರತದ ನಂತನ್ನು ಹೊಂದಿರುವ ಪಾಂಡವನಪಾರಾ ಗುಹಾ ಬಂಡೆಗಳು ಕೇರಳದಲ್ಲಿ ಅದ್ಭುತವಾದ ಚಾರಣಾನುಭವ ನೀಡುವ ಪ್ರವಾಸಿ ತಾಣಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Dvellakat

ವಿಚಿತ್ರ ಅನುಭವ

ವಿಚಿತ್ರ ಅನುಭವ

ಪಾಂಡವನಪಾರಾ ಗುಹಾ ಬಂಡೆಗಳು ಒಂದು ವಿಚಿತ್ರ ಅನುಭವ ನೀಡುವ ಅದ್ಭುತ ತಾಣವಾಗಿದೆ. ದಟ್ಟವಾದ ಕಾಡಿನ ಮಧ್ಯದಲ್ಲಿ ಅವಿತಿರುವ ಈ ಗುಹಾ ಬಂಡೆಗಳು ಚುಂಬಕದಂತೆ ಆಕರ್ಷಿಸುತ್ತವೆ.

ಚಿತ್ರಕೃಪೆ: Dvellakat

ಪಾಂಡವರು

ಪಾಂಡವರು

ಮಹಾಭಾರತದಲ್ಲಿ ಪಾಂಡವರು ವನವಾಸ ಅನುಭವಿಸುತ್ತಿದ್ದಾಗ ಕೌರವರು ಅವರನ್ನು ಹುಡುಕಿಕೊಂಡು ಬಂದಾಗ ಇಲ್ಲಿನ ಗುಡ್ಡದ ಬಂಡೆಗಳಲ್ಲಿ ಕೌರವರಿಗೆ ಕಾಣದ ಹಾಗೆ ಪಾಂಡವರು ಅವೆತಿದ್ದರು ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Dvellakat

ದೇವಾಲಯ

ದೇವಾಲಯ

ಇಲ್ಲಿನ ಬೆಟ್ಟದ ಮೇಲೆ ದೇವಾಲಯವೊಂದಿದ್ದು ಅದು ಪಾಂಡವರಿಗೆ ಮುಡಿಪಾದ ದೇವಾಲಯವಾಗಿದೆ. ಆದರೂ ಅಲ್ಲಿ ಪಾಂಡವರನ್ನು ರಕ್ಷಿಸುತ್ತಿದ್ದ ಕೃಷ್ಣನ ಮುಖ್ಯ ವಿಗ್ರಹವಿರುವುದನ್ನು ಕಾಣಬಹುದು.

ಚಿತ್ರಕೃಪೆ: AswiniKP

ವಿಚಿತ್ರ

ವಿಚಿತ್ರ

ಇಲ್ಲಿ ಕಂಡುಬರುವ ಬಂಡೆ ರಚನೆಗಳು ವಿಚಿತ್ರವಾಗಿ ಹಾಗೂ ಅಷ್ಟೆ ವಿಶೇಷವಾಗಿ ರೂಪಗೊಂಡಿರುವುದನ್ನು ಕಾಣಬಹುದು. ಒಂದು ಹಂತದಲ್ಲಿ ಬಂಡೆಗಳು ಕಮಲದ ಹೂವು ಅರಳು ವಿವಿಧ ಹಂತಗಳನ್ನು ತೋರ್ಸುವ ಭಂಗಿಯಲ್ಲಿ ರೂಪಗೊಂಡಿವೆ.

ಚಿತ್ರಕೃಪೆ: Dvellakat

ಎರ್ನಾಕುಲಂ ಜಿಲ್ಲೆ

ಎರ್ನಾಕುಲಂ ಜಿಲ್ಲೆ

ಈ ಭಗವತಿ ದೇವಿಯು ಕರುಣಾಮಯಿ ದೇವಿ ಎಂದೆ ಪ್ರಸಿದ್ಧಳಾಗಿದ್ದಾಳೆ. ಕಲ್ಲೊಳಗಿರುವ ಈಕೆ ಕರುಣಾಮಯಿ ಆಗಿರುವುದಕ್ಕೂ ಕಾರಣ ಇಲ್ಲದಿಲ್ಲ. ಇಲ್ಲಿಗೆ ಭೇಟಿ ನೀಡುವ ಅಪಾರ ಸಂಖ್ಯೆಯ ಭಕ್ತರ ನಂಬಿಕೆಯಂತೆ ಈ ಭಗವತಿ ದೇವಿ ಬೇಡಿದ ಎಲ್ಲ ವರಗಳನ್ನು ಭಕ್ತರಿಗೆ ಅನುಗ್ರಹಿಸುತ್ತಾಳಂತೆ.

ಚಿತ್ರಕೃಪೆ: Ranjithsiji

ಬರಿಗೈಯಿಂದ ಮರಳಲಾರರು

ಬರಿಗೈಯಿಂದ ಮರಳಲಾರರು

ಈ ಭಗವತಿ ದೇವಿಯ ದರ್ಶನ ಪಡೆದು ಯಾರೆ ಆಗಲಿ ಬರಿಗೈಯಿಂದ ಮರಳಲು ಸಾಧ್ಯವೆ ಇಲ್ಲವೆಂದು ಹೇಳಲಾಗುತ್ತದೆ. ಹಾಗಾಗಿ ಈ ಶಕ್ತಿ ದೇವಿಯನ್ನು ಕರುಣಾಮಯಿ ಎಂದೆ ಜನರು ಕೊಂಡಾಡುತ್ತಾರೆ. ಇನ್ನೂ ಹೆಸರಿಗೆ ಸಂಬಂಧಿಸಿದಂತೆ ಈ ದೇವಿಯು ಅತಿ ಪ್ರಾಚೀನವಾದ ಬೃಹದಾಕಾರದ ಕಲ್ಲಿನಲ್ಲಿ ವಾಸವಾಗಿದ್ದಾಳೆ. ಅಂತೆಯೆ ಇವಳನ್ನು ಕಲ್ಲೀಲ ಭಗವತಿ ದೇವಿ ಎಂದು ಕರೆಯಲಾಗಿದೆ.

ಚಿತ್ರಕೃಪೆ: Ranjithsiji

ತಿರುವನಂತಪುರಂ

ತಿರುವನಂತಪುರಂ

ಕೇರಳದ ರಾಜಧಾನಿ ನಗರ ತಿರುವನಂತಪುರಂನಲ್ಲಿರುವ ವಿಳಿಂಗಂ ಪ್ರದೇಶವು ಒಂದು ಬಂದರು ಪ್ರದೇಶವಾಗಿರುವುದು ಅಲ್ಲದೆ ತನ್ನಲ್ಲಿರುವ ಐತಿಹಾಸಿಕ ಕಲ್ಲು ಬಂಡೆಯ ಗುಹಾ ರಚನೆಗೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Akhilan

ದಕ್ಷಿಣಮೂರ್ತಿ

ದಕ್ಷಿಣಮೂರ್ತಿ

ಇಲ್ಲಿ ಗ್ರಾನೈಟ್ ಕಲ್ಲಿನಲ್ಲಿ ಒಂದೆ ಭಾಗದಲ್ಲಿ ಕಡಿಯಲಾದ ಚಿಕ್ಕ ಗುಹಾ ಬಂಡೆಯೊಂದಿದ್ದು ಅದರಲ್ಲಿ ವಿನಂಧಾರಾ ದಕ್ಷಿಣಮೂರ್ತಿಯ ವಿಗ್ರಹವಿರುವುದನ್ನು ಕಾಣಬಹುದು. ಬಲು ಪುರಾತನವಾದ ಗುಹಾ ರಚನೆ ಇದಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Prasad0224

ಕೇರಳ

ಕೇರಳ

ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಕಾನನದಲ್ಲಿ ನೆಲೆಸಿರುವ ಎಡಕ್ಕಲ್ ಗುಹೆಗಳು ಶಿಲಾಯುಗದ ಮಾನವನ ಕಲೆಯನ್ನು ಪ್ರಚುರಪಡಿಸುವ ಕೆತ್ತನೆಗಳನ್ನು ಒಳಗೊಂಡಿರುವ ದಕ್ಷಿಣ ಭಾರತದ ಏಕೈಕ ತಾಣವಾಗಿದೆ. ಅಲ್ಲದೆ ಇದೊಂದು ವಿನೂತನವಾದ ಪ್ರವಾಸಿ ಕ್ಷೇತ್ರವಾಗಿಯೂ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Rahul Ramdas

ವಯನಾಡ್

ವಯನಾಡ್

ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಿಂದ 25 ಕಿ.ಮೀ ದೂರದಲ್ಲಿ ನೆಲೆಸಿರುವ ಈ ಪ್ರಾಚೀನ ಪ್ರಾಕೃತಿಕ ರಚನೆಗಳು 6000 ವರ್ಷಗಳಷ್ಟು ಪುರಾತನವಾದವುಗಳೆಂದು ನಂಬಲಾಗಿದ್ದು ಸಮುದ್ರ ಮಟ್ಟದಿಂದ 1200 ಮೀಟರುಗಳಷ್ಟು ಎತ್ತರದಲ್ಲಿ ನೆಲೆಸಿವೆ.

ಚಿತ್ರಕೃಪೆ: Drajay1976

ಸಾಕಷ್ಟು ವಿಶಾಲ

ಸಾಕಷ್ಟು ವಿಶಾಲ

ತಾಂತ್ರಿಕವಾಗಿ ಹೇಳಬೇಕೆಂದರೆ ಇವು ದೊಡ್ಡ ಬೆಟ್ಟದಿಂದ ಬೇರ್ಪಟ್ಟ ಬಂಡೆಯ ಸೀಳುಗಳಾಗಿದ್ದು ಸರಿ ಸುಮಾರು 96 ಅಡಿಗಳಷ್ಟು ಎತ್ತರ, 22 ಅಡಿಗಳಷ್ಟು ಅಗಲ, 30 ಅಡಿಗಳಷ್ಟು ಆಳವಾಗಿದೆ. ನೋಡಲು ಗುಹೆಗಳಂತೆ ಗೋಚರಿಸುವ ಈ ರಚನೆಗಳಲ್ಲಿ ಅತಿ ಪ್ರಾಚೀನವಾದ ಶಿಲಾ ಕೆತ್ತನೆಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Satheesan.vn

ಸಿಂಧು ನಾಗರೀಕತೆ!

ಸಿಂಧು ನಾಗರೀಕತೆ!

ಇವು ಸಾಕಷ್ಟು ಪುರಾತನವಾದ ರಚನೆಗಳಾಗಿವೆ. ಇವುಗಳ ಪ್ರಾಚೀನತೆ ಎಷ್ಟಿದೆ ಎಂದರೆ ಇದರ ಕಾಲಮಾನ ಸುಮಾರು 5000 BC ಯಿಂದ 1000 BC ಯವರೆಗೂ ಕರೆದುಕೊಂಡು ಹೋಗುತ್ತದೆ. ಈ ಸಮೂಹಗಳಲ್ಲಿರುವ ಕಿರಿಯ ಗುಹೆಯೊಂದರ ನಂಟು ಸಿಂಧು ನದಿ ನಾಗರೀಕತೆಗೆ ತಳುಕು ಹಾಕಿಕೊಂಡಿದೆ ಎಂತಲೂ ಹೇಳಲಾಗುತ್ತದೆ.

ಚಿತ್ರಕೃಪೆ: Shareef Taliparamba

ಆಕರ್ಷಿಸುತ್ತದೆ

ಆಕರ್ಷಿಸುತ್ತದೆ

ಇಂದು ಎಡಕ್ಕಲ್ ಗುಹೆಗಳು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದ್ದು ದೇಶದ ಮೂಲೆ ಮೂಲೆಗಳಿಂದ ಸಾಕಷ್ಟು ಜನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಗುಹೆಯ ಬಂಡೆಗಳ ಮೇಲೆ ಪುರಾತನ ಶಿಲಾಯುಗದ ವರ್ಣಚಿತ್ರಗಳನ್ನೂ ಸಹ ಕಾಣಬಹುದು.

ಚಿತ್ರಕೃಪೆ: Dr Ajay B. MD

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X