Search
  • Follow NativePlanet
Share
» »ಕರುನಾಡಿನ ಕೆಲವು ಪ್ರವಾಸಿ "ದುರ್ಗಗಳು"

ಕರುನಾಡಿನ ಕೆಲವು ಪ್ರವಾಸಿ "ದುರ್ಗಗಳು"

By Vijay

ದುರ್ಗ ಎಂದರೆ ಸಾಮಾನ್ಯವಾಗಿ ಬೆಟ್ಟಗುಡ್ಡಗಳು ಅಥವಾ ಅವುಗಳ ಮೇಲೆ ನಿರ್ಮಾಣ ಮಾಡಲಾಗಿರುವ ಕೋಟೆ ಕೊತ್ತಲಗಳು. ಹಿಂದೆ ರಾಜಾಡಳಿತವಿದ್ದಾಗ ಸಾಮಾನ್ಯವಾಗಿ ಬೆಟ್ಟ ಪ್ರದೇಶಗಳು ಹಾಗೂ ಅಲ್ಲಿ ನಿರ್ಮಾಣ ಹೊಂದಿದ ಸಣ್ಣಪುಟ್ಟ ನಗರಗಳು ಹಾಗೂ ಕೋಟೆಗಳಿಗೆ ದುರ್ಗ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.

ಅದೆಷ್ಟೊ ಪ್ರದೇಶಗಳು ಕಾಲಕ್ಕೆ ತಕ್ಕಂತೆ ತಮ್ಮ ತಮ್ಮ ಹೆಸರುಗಳನ್ನು ಕಳೆದುಕೊಂಡರೂ ಇಂದಿಗೂ ಸಹ ಕೆಲವು ಪ್ರದೇಶಗಳು ತಮ್ಮ ಊರಿನ ಹೆಸರುಗಳ ಹಿಂದೆ ದುರ್ಗ ಎಂಬ ಪದವನ್ನು ಇನ್ನೂ ಉಳಿಸಿಕೊಂಡು ಬಂದಿವೆ. ಸಾಮಾನ್ಯವಾಗಿ ದೇಶದೆಲ್ಲೆಡೆ ಕಂಡುಬರುವಂತೆ ಕರ್ನಾಟಕದಲ್ಲೂ ಸಹ ಕೆಲವು ಆಕರ್ಷಕ ದುರ್ಗಗಳಿವೆ. ಇವು ತಮ್ಮಲ್ಲಿರುವ ಬೆಟ್ಟ,ಗುಡ್ಡ ಹಾಗೂ ಕೋಟೆಗಳಿಗಾಗಿ ಪ್ರಸಿದ್ಧಿ ಪಡೆದಿವೆ.

ವಿಶೇಷ ಲೇಖನ : ಕರ್ನಾಟಕದ ಬೆರುಗುಗೊಳಿಸುವ ಕೋಟೆಗಳು

ಕೆಲವು ದುರ್ಗಗಳು ಆಕರ್ಷಕ ಹಾಗೂ ರೋಮಾಂಚನಗೊಳಿಸುವ ಚಾರಣ ಮಾರ್ಗಗಳಿಗಾಗಿ ಹೆಸರುವಾಸಿಯಾಗಿದ್ದರೆ ಇನ್ನೂ ಕೆಲವು ದುರ್ಗಗಳು ದೇವಾಲಯಗಳಿಂದಾಗಿ ಪ್ರಸಿದ್ಧಿ ಪಡೆದಿವೆ. ಪ್ರಸ್ತುತ ಲೇಖನದ ಮೂಲಕ ಕರ್ನಾಟಕದಲ್ಲಿರುವ ಕೆಲವು ಆಯ್ದ ದುರ್ಗಗಳ ಕುರಿತು ತಿಳಿಯಿರಿ ಹಾಗೂ ಒಮ್ಮೆ ಭೇಟಿ ನೀಡಿ.

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಕವಲೇದುರ್ಗ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಹಚ್ಚ ಹಸಿರಿನಿಂದ ಕೂಡಿದ ತಾಣ ಇದಾಗಿದೆ. ಶಿವಮೊಗ್ಗ ನಗರ ಕೇಂದ್ರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಕವಲೇದುರ್ಗವನ್ನು ತೀರ್ಥಹಳ್ಳಿ - ಸಾಲೂರು ಮಾರ್ಗವಾಗಿ, ದಟ್ಟ ಕಾಡುಗಳಿಂದ ಕೂಡಿದ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ ಸಾಗಿದಾಗ ತಲುಪುತ್ತೇವೆ. ಇದೊಂದು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ಸುಂದರ ತಾಣ.

ಚಿತ್ರಕೃಪೆ: Subramanya shastri

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಇದೊಂದು ಅತ್ಯಂತ ಶಾಂತ ವಾತಾವಾರಣದಿಂದ ಕೂಡಿದ ಪ್ರಶಾಂತ ಸ್ಥಳವಾಗಿದೆ. ಇಲ್ಲಿ ಪ್ರಶಾಂತತೆಯು ಎಷ್ಟು ಆವರಿಸಿದೆ ಎಂದರೆ ಹೆಜ್ಜೆ ಮೇಲೆ ಹೆಜ್ಜೆಯಿಟ್ಟರೂ ಸಹ ಅದರ ಸದ್ದು ಪ್ರತಿಧ್ವನಿಸುವಷ್ಟಿದೆ. ಹಸಿರನ್ನು ಕಣ್ತುಂಬಿಕೊಳ್ಳುವುದು ಮಾತ್ರವಲ್ಲ- ಇತಿಹಾಸದ ಅರಿವನ್ನು ಮನ ದುಂಬಿಕೊಳ್ಳಲು ಇಲ್ಲಿ ಸಾಕಷ್ಟು ಅವಕಾಶಗಳಿವೆ ಎಂದರೆ ತಪ್ಪಾಗಲಾರದು. ಇತಿಹಾಸದ ಕುರುಹುಗಳ ಹಿಂದೆ ನಡೆದರೆ, ಈ ದುರ್ಗವನ್ನು ಹಿಂದೊಮ್ಮೆ ಭುವನಗಿರಿ ದುರ್ಗ, ಕೌಲೇದುರ್ಗ ಎಂದು ಕರೆಯುತ್ತಿದ್ದರೆಂದು ತಿಳಿದು ಬರುತ್ತದೆ.

ಚಿತ್ರಕೃಪೆ: Manjeshpv

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಕವಲೇದುರ್ಗವೇ ನೋಡಲು ಬಲು ಆಕರ್ಷಕವಾಗಿದೆ. ಅದರಲ್ಲೂ ಇಲ್ಲಿ ಕೆಲವು ವಿಶೇಷ ಆಕರ್ಷಣೆಗಳನ್ನು ಕಾಣಬಹುದು. ಅವುಗಳಲ್ಲಿ ತಿಮ್ಮಣ್ಣನಾಯಕನ ಕೆರೆಯೂ ಒಂದು. ಹದಿನೆಂಟು ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ಈ ಕೆರೆ ಮನಮೋಹಕ ಹಿನ್ನಿಲೆಯಿಂದ ಕೂಡಿದೆ. ಹಕ್ಕಿಗಳ ಚಿಲಿಪಿಲಿ ಕಲರವದಿಂದ, ಮೀನುಗಳ ಸ್ವಚ್ಛಂದದಾಟದಿಂದ, ಬೆಳ್ಳಕ್ಕಿಯ ಹಿಂಡಿನಿಂದ ಗಮನ ಸೆಳೆಯುತ್ತದೆ. ಕೆರೆಯ ಮೇಲಿನಿಂದ ತೇಲಿ ಬರುವ ತಂಗಾಳಿಗೆ ಮೈಯೊಡ್ಡಿ ಜಲಚರಗಳ ದನಿ ಕೇಳಿಸಿಕೊಳ್ಳುವುದು ಹಿತವಾದ ಅನುಭವ.

ಚಿತ್ರಕೃಪೆ: Manjeshpv

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಇಲ್ಲಿ ನೋಡಬಹುದಾದ ಒಂದು ಆಕರ್ಷಣೆಯೆಂದರೆ ಕೆಳದಿ ಅರಸರಿಂದ ನಿರ್ಮಿಸಲ್ಪಟ್ಟ ವೀರಶೈವ ಮಠ. ಈ ಅರಸರಿಗೆ ಏಳರ ಮೇಲೆ ಅದೇನು ವ್ಯಾಮೋಹ ಅಥವಾ ಮಮಕಾರ ಇದ್ದಿತ್ತೊ ಗೊತ್ತಿಲ್ಲ, ಏಕೆಂದರೆ ಅವರು ಏಳು ಸುತ್ತಿನ ಕೋಟೆ, ಏಳು ಕೆರೆಗಳ ನಿರ್ಮಿಸಿದ್ದಾರೆ. ಅಷ್ಟೆ ಅಲ್ಲ, ಅರಸರು ಆರಾಧಿಸುತ್ತಿದ್ದ ನಾಗದೇವರಿಗೆ ಕೂಡ ಏಳು ಹೆಡೆ!

ಚಿತ್ರಕೃಪೆ: Manjeshpv

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಮಠದಿಂದ ಸುಮಾರು ಒಂದು ಕಿ.ಮೀ. ಮುಂದೆ ಸಾಗಿದರೆ ಕೋಟೆಯ ಮುಖ್ಯದ್ವಾರ ಎದುರಾಗುತ್ತದೆ. ಮಹಾದ್ವಾರ ಪ್ರವೇಶಿಸಿದಂತೆ ಸುಮಾರು 50 ರಿಂದ 60 ಅಡಿ ಎತ್ತರದ ಗೋಡೆ ನೋಡಬಹುದು. ಗೋಡೆಯ ಮೇಲೆ ಅಂದಿನ ಕಾಲದ ಚಿತ್ರಕಲೆಯನ್ನು ನೋಡಬಹುದು. ಕಾವಲುಗಾರರು ಉಳಿದುಕೊಳ್ಳಲು ಮಾಡಿದ್ದ ಚೌಕಾಕಾರದ ಕಾವಲುಗಾರ ಕೊಠಡಿ ಹಾಗೂ ಒಳಭಾಗದಲ್ಲಿ ಮುಖ ಮಂಟಪವನ್ನು ಎರಡನೇ ಮಹಾದ್ವಾರ ಹಾಯುವಾಗ ನೋಡಬಹುದು.

ಚಿತ್ರಕೃಪೆ: Subramanya shastri

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಮಂಟಪದ ಎಡಭಾಗದಲ್ಲಿ `ನಾಗತೀರ್ಥ~ವೆಂಬ ಕೊಳ ಹಾಗೂ ಸುಮಾರು ಆರು ಅಡಿ ಎತ್ತರದ ಏಳು ಹೆಡೆಯ ಏಕಶಿಲಾ ನಾಗರ ಶಿಲ್ಪವನ್ನು ನೋಡಬಹುದು. ಮೂರನೆ ಮಹಾದ್ವಾರ ದ ಬಲಭಾಗದಲ್ಲಿ ನಗಾರಿ ಕಟ್ಟೆಯಿದೆ. ಈ ಪರಿಸರದಲ್ಲಿ ಒಂದು ಸುರಂಗ ಮಾರ್ಗವನ್ನೂ ಕಾಣಬಹುದು. ನಾಲ್ಕನೆಯ ಮಹಾದ್ವಾರ ತಲುಪಲು ಇಳಿಜಾರಿನ ಹಾಸುಗಲ್ಲನ್ನು ದಾಟಬೇ ಕು. ಅಲ್ಲಿಯೂ ಒಂದು ಮುಖ ಮಂಟಪವನ್ನು ನೋಡಬಹುದು.

ಚಿತ್ರಕೃಪೆ: Manjeshpv

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಕವಲೇದುರ್ಗದಲ್ಲಿ ವಿಶ್ವನಾಥೇಶ್ವರ ದೇವಾಲಯವಿದೆ. ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದು. ಕಾಶಿಯಿಂದ ತಂದ ಅಮೃತಶಿಲೆಯ ವಿಶ್ವನಾಥೇ ಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆಯಂತೆ. ಅರಸರ ಕಾಲದಲ್ಲಿ ತುಪ್ಪ ಹಾಗೂ ಎಣ್ಣೆಯನ್ನು ಶೇಖರಿಸಲು ಉಪಯೋಗಿಸುತ್ತಿದ್ದ ಬಾವಿಯನ್ನು ದುರ್ಗದಲ್ಲಿ ನೋಡಬಹುದು. ಇದಕ್ಕೆ ಎಣ್ಣೆ ಹಾಗೂ ತುಪ್ಪದ ಬಾವಿಯೆಂದೇ ಈಗಲೂ ಕರೆಯುತ್ತಾರೆ.

ಚಿತ್ರಕೃಪೆ: Manjeshpv

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಶಿಸ್ತಿನ ಶಿವಪ್ಪನಾಯಕನ ಕಾಲದ ಏತನೀರಾವರಿ ಪದ್ಧತಿ ಬಳಕೆಯ ಕುರುಹುಗಳು ಕವಲೇದುರ್ಗದಲ್ಲಿ ಈಗಲೂ ಕಾಣಬಹುದು. ದಟ್ಟ ಅರಣ್ಯದ ನಡುವೆ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ಅರಮನೆ ಕಲ್ಲು ಕಂಬಗಳ ಆಸರೆ ಹೊಂದಿದೆ. ಅರಮನೆಗೀಗ ಆಕಾಶವೇ ಛಾವಣಿ. ಕಂಬಗಳು ಮತ್ತು ಮಣ್ಣಿನ ಗೋಡೆಗಳು ಮಾತ್ರ ಉಳಿದಿವೆ.

ಚಿತ್ರಕೃಪೆ: Manjeshpv

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಪ್ರಶಾಂತವಾದ ಪರಿಸರದಲ್ಲಿ ಶಾಂತವಾಗಿ ನೆಲೆನಿಂತಿರುವ ಕವಲೇದುರ್ಗ ಕೋಟೆಯ ನೆನಪು ಎಂದಿಗೂ ಮರೆಯಲಾಗದು.

ಚಿತ್ರಕೃಪೆ: Manjeshpv

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಹುತ್ರಿದುರ್ಗ : ಹುತ್ರಿದುರ್ಗವು ಬೆಂಗಳೂರಿನಿಂದ ಸುಮಾರು 65 ಕಿ.ಮಿ. ದೂರದಲ್ಲಿರುವ ತುಮಕೂರು ಜಿಲ್ಲೆಯಲ್ಲಿರುವ ಸುಂದರ ತಾಣವಾಗಿದೆ. ಕುಣಿಗಲ್‍ನಿಂದ ಆಗ್ನೇಯ ದಿಕ್ಕಿಗೆ 16 ಕಿ.ಮೀ. ದೂರವಿರುವ ಹುತ್ರಿದುರ್ಗವು ಮಾಗಡಿಯ ವಾಯುವ್ಯ ದಿಕ್ಕಿಗೆ ಸರಿಸುಮಾರು ಅಷ್ಟೇ ದೂರದಲ್ಲಿದೆ. ಮಾಗಡಿ-ಕುಣಿಗಲ್ ರಾಜ್ಯ ಹೆದ್ದಾರಿ-94 ರಿಂದ ಸುಮಾರು 7 ಕಿ.ಮಿ. ದೂರದಲ್ಲಿದೆ. ಹುತ್ರಿದುರ್ಗ ಹಳ್ಳಿಯನ್ನು ಸುತ್ತುವರೆದ ಎರಡು ಬೆಟ್ಟದತುದಿಗಳ ಮೇಲೆ ಈ ಕೋಟೆಯನ್ನು ಕಾಣಬಹುದು. ಇದು ಒಂದು ಏಳು ಸುತ್ತಿನ ಕೋಟೆಯಾಗಿತ್ತು. ಈಗ ಕೋಟೆ ಶಿಥಿಲಾವಸ್ಥೆಯಲ್ಲಿದೆ. ಬೆಟ್ಟದ ಮೇಲುಗಡೆ ಶಿವ ಮತ್ತು ನಂದಿ ಗುಡಿಯಿದೆ. ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ಪೂಜೆ ಸಲ್ಲಿಸಲಾಗುತ್ತದೆ.

ಚಿತ್ರಕೃಪೆ: Srinivasa S

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಚಿತ್ರದುರ್ಗ : ಭೊಗೋಳಿಕವಾಗಿ ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿರುವ ಚಿತ್ರದುರ್ಗ, ದುರ್ಗ ಎಂಬ ಪದವನ್ನು ಹೊಂದಿದ ಪ್ರವಾಸಿ ತಾಣ. ಚಿತ್ರದುರ್ಗವು ಪ್ರಸಿದ್ಧವಾಗಿರುವುದು ತನ್ನಲ್ಲಿರುವ ಅದ್ಭುತವಾದ ಏಳು ಸುತ್ತಿನ ಕೋಟೆಯಿಂದ. ಈ ಕಲ್ಲಿನ ಕೋಟೆಯು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಚಿತ್ರದುರ್ಗ ಕೋಟೆ ಎಂತಲೆ ಕರೆಯಲ್ಪಡುವ ಈ ಪ್ರಖ್ಯಾತ ಕೋಟೆಯು ಇಂದಿಗೂ ಸಹ ಇತಿಹಾಸ ಪ್ರಿಯ ಪ್ರವಾಸಿಗರ ಅತಿ ನೆಚ್ಚಿನ ಸ್ಥಳವಾಗಿ ಕಂಗೊಳಿಸುತ್ತದೆ.

ಚಿತ್ರಕೃಪೆ: V.v

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಇದರ ಇತಿಹಾಸವನ್ನು ಸಂಕ್ಷೀಪ್ತವಾಗಿ ಕೆದಕಿದಾಗ ನಮಗೆ ತಿಳಿಯುವುದೇನೆಂದರೆ ಅಗಾಧವಾದ ಈ ಏಳು ಸುತ್ತಿನ ಕಲ್ಲಿನ ಕೋಟೆಯು ಒಂದೆ ಸಮಯದಲ್ಲಿ ನಿರ್ಮಾಣವಾಗದೆ ಕಾಲದ ಹಲವು ಸ್ತರಗಳಲ್ಲಿ ವಿವಿಧ ಆಡಳಿತಗಾರರ ಸುಪರ್ದಿಯಲ್ಲಿ ಹಂತ ಹಂತವಾಗಿ ನಿರ್ಮಾಣಗೊಂಡಿದೆ.

ಚಿತ್ರಕೃಪೆ: ZeHawk

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಇದರ ನಿರ್ಮಾಣದಲ್ಲಿ ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಮೈಸೂರು ರಾಜರ ಅಧೀನದಲ್ಲಿದ್ದ ನಾಯಕರು ಅಥವಾ ಪಾಳೇಗಾರರು ಹೆಚ್ಚಾಗಿ ತಮ್ಮ ಕೊಡುಗೆಯನ್ನು ಈ ಕೋಟೆಯ ನಿರ್ಮಾಣದಲ್ಲಿ ಧಾರೆ ಎರೆದಿದ್ದಾರೆ.

ಚಿತ್ರಕೃಪೆ: Nagarjun Kandukuru

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

15 ರಿಂದ 18 ನೇಯ ಶತಮಾನದ ಮಧ್ಯದಲ್ಲಿ ನಿರ್ಮಾಣಗೊಂಡ ಈ ಕೋಟೆಯು ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿದ್ದು ಇತಿಹಾಸ ಪ್ರಿಯರನ್ನು ಆಕರ್ಷಿಸುತ್ತದೆ. ಶತ್ರುಗಳನ್ನು ತನ್ನ ಒನಕೆಯಿಂದ ಸೆದೆ ಬಡಿದೆ ಒಬವ್ವ ಎಂಬ ವೀರ ಮಹಿಳೆಯ ಕಥೆಯು ಈ ಕೋಟೆಯ ಜೊತೆ ನಂಟು ಹಾಕಿಕೊಂಡಿದೆ. ಇಂದಿಗೂ ಒಬವ್ವನ ಖಿಂಡಿ ಎಂಬ ರಂಧ್ರವನ್ನು ಕೋಟೆಯ ಗೋಡೆಯಲ್ಲಿ ಕಾಣಬಹುದು.

ಚಿತ್ರಕೃಪೆ: Vedamurthy.j

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಚಿತ್ರದುರ್ಗ ಬೆಂಗಳೂರಿನಿಂದ ಸುಮಾರು 205 ಕಿ.ಮೀ ಗಳಷ್ಟು ಅಂತರದಲ್ಲಿದ್ದು ಬಸ್ಸು ಹಾಗೂ ರೈಲಿನ ಮೂಲಕ ಸುಲಭವಾಗಿ ತೆರಳಬಹುದು. ಪುಣೆ ನಗರವನ್ನು ಬೆಂಗಳೂರಿನಿಂದಿಗೆ ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ರ ಮೂಲಕ ನೇರವಾಗಿ ಚಿತ್ರದುರ್ಗವನ್ನು ತಲುಪಬಹುದು.

ಚಿತ್ರಕೃಪೆ: veeresh.dandur

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ನಂದಿದುರ್ಗ : ಬೆಂಗಳೂರು ಬಳಿಯಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟವನ್ನು ನಂದಿದುರ್ಗ ಎಂತಲೂ ಕರೆಯಲಾಗುತ್ತದೆ. ರಾಜಧಾನಿ ಬೆಂಗಳೂರು ನಗರದಿಂದ 60 ಕಿ.ಮೀ ಅಂತರದಲ್ಲಿ ನೆಲೆಸಿರುವ ನಂದಿದುರ್ಗವು ಬೆಂಗಳೂರಿಗರ ಪಾಲಿಗೆ ಅತಿ ಪ್ರಸಿದ್ಧವಾದ ವಾರಾಂತ್ಯ ರಜಾದಿನಗಳ ತಾಣ. ಪಕ್ಕದ ನಂದಿ, ಮುದ್ದೇನಹಳ್ಳಿ, ಕಣಿವೆನಾರಾಯಣಪುರ ಪಟ್ಟಣಗಳಿಂದ ಸುತ್ತುವರೆದಿರುವ ಈ ಪ್ರಸಿದ್ಧ ದುರ್ಗ ಸಾಂಸ್ಕೃತಿಕವಾಗಿ ಅರ್ಕಾವತಿ ನದಿಯ ಮೂಲ ಎನ್ನಲಾಗಿದೆ.

ಚಿತ್ರಕೃಪೆ: Harsha K R

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ನಂದಿದುರ್ಗದ ಹಿನ್ನಿಲೆಯು ಹಲವಾರು ಸ್ವಾರಸ್ಯಕರ ಕಥೆಗಳನ್ನು ಒಳಗೊಂಡಿದೆ. ಚೋಳರು ಆಳುತ್ತಿದ್ದ ಕಾಲದಲ್ಲಿ ಇದಕ್ಕೆ ಆನಂದ ಗಿರಿ ಎಂದು ಕರೆಯಲಾಗುತ್ತಿತ್ತು. ಇನ್ನೊಂದು ದಂತ ಕಥೆಯ ಪ್ರಕಾರ, ಯೋಗ ನಂದೀಶ್ವರರು ಇಲ್ಲಿ ತಪಸ್ಸನ್ನಾಚರಿಸಿದ್ದರಿಂದ ಇದಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿತು ಎನ್ನಲಾಗಿದೆ. ಇಲ್ಲಿರುವ 1300 ವರ್ಷಗಳಷ್ಟು ಪುರಾತನವಾದ ದ್ರಾವಿಡ ಶೈಲಿಯ ನಂದಿ ದೇವಸ್ಥಾನದಿಂದ ಇದಕ್ಕೆ ಈ ಹೆಸರು ಬಂದಿದೆ ಎನ್ನುತ್ತದೆ ಇಲ್ಲಿನ ಮತ್ತೊಂದು ಕಥೆ.

ಚಿತ್ರಕೃಪೆ: Samuel Jacob

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಹಿಂದೆ ಮೈಸೂರಿನ ರಾಜನಾಗಿದ್ದ ಟಿಪ್ಪು ಸುಲ್ತಾನನು ಇಲ್ಲಿ ಒಂದು ಕೋಟೆಯನ್ನು ಕಟ್ಟಿದ್ದಾನೆ. ಆ ಕಾರಣ ಇದಕ್ಕೆ ನಂದಿದುರ್ಗ ಎಂಬ ಹೆಸರು ಬಂದಿತು. ಅಲ್ಲದೆ ಈ ಬೆಟ್ಟವನ್ನು ದೂರದಿಂದ ಗಮನಿಸಿದಾಗ ಮಲಗಿರುವ ನಂದಿಯ ಹಾಗೆ ಕಾಣುವುದರಿಂದ ಇದಕ್ಕೆ ನಂದಿ ಬೆಟ್ಟವೆಂದು ಕರೆಯಲಾಗುತ್ತದೆ ಎಂದೂ ಸಹ ಹೇಳಲಾಗುತ್ತದೆ. ಇವುಗಳ ಹಿಂದಿರುವ ಸತ್ಯ ಏನೆ ಇರಲಿ, ಆದರೆ ಪ್ರವಾಸಿ ದೃಷ್ಟಿಯಿಂದ ಇದೊಂದು ಅದ್ಭುತ ತಾಣವಾಗಿರುವುದಂತೂ ನಿಜ.

ಚಿತ್ರಕೃಪೆ: pulikken

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಇಲ್ಲಿನ ಸೂರ್ಯೊದಯವನ್ನು ನೋಡುವುದೆ ಒಂದು ಚೆಂದದ ಅನುಭವ. ಅಲ್ಲದೆ 9 ನೇಯ ಶತಮಾನದ ಭೋಗ ನಂದೀಶ್ವರ ದೇವಸ್ಥಾನವಂತೂ ಪ್ರವಾಸಿಗರನ್ನು ತನ್ನ ವೈಭವದಿಂದ ಆನಂದಭರಿತರನ್ನಾಗಿ ಮಾಡುತ್ತದೆ.

ಚಿತ್ರಕೃಪೆ: Ashwin Kumar

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ನಂದಿದುರ್ಗ ತಲುಪಲು ಬೆಂಗಳೂರು ಪಟ್ಟಣವು ಸುಗಮವಾದ ಕೊಂಡಿಯಾಗಿದ್ದು ಸಂಚಾರದ ಪ್ರಮುಖ ಮೂರು ಅಂಗಗಳಾದ ವಾಯು, ರೈಲು ಹಾಗೂ ರಸ್ತೆ ಮಾರ್ಗಗಳು ಬೆಂಗಳೂರಿಗೆ ಅತಿ ಉತ್ತಮವಾಗಿದೆ. ಅಲ್ಲದೆ ಬಹುತೇಕ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಲಭ್ಯವಿದೆ.

ಚಿತ್ರಕೃಪೆ: Sean Ellis

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಮಾಕಳಿದುರ್ಗ : ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ ಮಾಕಳಿದುರ್ಗ. ಬೆಟ್ಟ ಕೋಟೆಯೊಂದನ್ನು ಹೊಂದಿರುವ ಈ ದುರ್ಗವು ಚಾರಣಕ್ಕೆ ಹೆಸರುವಾಸಿಯಾದ ದುರ್ಗವಾಗಿದ್ದು ದೊಡ್ಡಬಳ್ಳಾಪುರದಿಂದ ಗೌರಿಬಿದನೂರು ತೆರಳುವ ಮಾರ್ಗದಲ್ಲಿ ಹತ್ತು ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Indiaswr

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಗ್ರಾನೈಟ್ ಕಲ್ಲಿನ ಬೃಹತ್ ಬೆಟ್ಟವೊಂದರ ಮೇಲಿರುವ ಇಲ್ಲಿನ ಕೋಟೆಯಲ್ಲಿ ಶಿವ ಹಾಗೂ ನಂದಿಯ ಎರಡು ಪುರಾತನ ದೇಗುಲಗಳನ್ನು ಕಾಣಬಹುದು. ಅಲ್ಲದೆ ದಂತಕಥೆಯ ಪ್ರಕಾರ, ಮಾರ್ಖಂಡೇಯ ಋಷಿಗಳು ಇಲ್ಲಿ ತಪಸ್ಸನ್ನಾಚರಿಸಿದ್ದರು ಎನ್ನಲಾಗಿದೆ.

ಚಿತ್ರಕೃಪೆ: Karthik Prabhu

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಹುಲಿಯೂರದುರ್ಗ : ಹುಲಿಯೂರದುರ್ಗವು ಬೆಂಗಳೂರು ಬಳಿಯಿರುವ ನವದುರ್ಗಗಳ ಪೈಕಿ ಒಂದಾಗಿದೆ. ಕುಣಿಗಲ್ ತಾಲೂಕಿನಲ್ಲಿರುವ ಹುಲಿಯೂರದುರ್ಗವು ಬೆಂಗಳೂರಿನಿಂದ ಸುಮಾರು 80 ಕಿ. ಮೀ. ದೂರದಲ್ಲಿದೆ. ಹಿಂದೆ ಕೆಂಪೇಗೌಡರ ಅಧೀನದಲ್ಲಿದ್ದ ತೆಲಕೆಳಗಾದ ಬಟ್ಟಲಿನ ಆಕಾರದಂತಿರುವ ಈ ದುರ್ಗದಲ್ಲಿ ಅವರ ಕಾಲದ ಅನೇಕ ಅವಶೇಷಗಳನ್ನು ಕಾಣಬಹುದು.

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಚೆನ್ನರಾಯನದುರ್ಗ : ಬೆಂಗಳೂರಿನಿಂದ ಸುಮಾರು 100 ಕಿ. ಮೀ. ದೂರವಿರುವ ತುಮಕೂರು ಜಿಲ್ಲೆಯ ಮಧುಗಿರಿಯ ಬಳಿಯಿರುವ ಚೆನ್ನರಾಯನ ದುರ್ಗವು ನವದುರ್ಗಗಗಳ ಪೈಕಿ ಒಂದಾದ ತಾಣವಾಗಿದೆ. ಇದರ ಇತಿಹಾಸವನ್ನು ಗಮನಿಸಿದಾಗ ಇದನ್ನು ಮರಾಠರು, ಮೈಸೂರು ರಾಜರು ಹಾಗೂ ಕೊನೆಯದಾಗಿ ಬ್ರಿಟೀಷರು ಆಳಿದ್ದರು ಎಂಬುದು ತಿಳಿದುಬರುತ್ತದೆ. ಚೀನ್ನರಾಯನ ದುರ್ಗವು ಚಾರಣಿಗರ ನೆಚ್ಚಿನ ತಾಣವಾದರೂ ಇಲ್ಲಿರುವ ಕಡಿದಾದ ಬಂಡೆಗಳು ಹತ್ತಲು ಬಹಳ ಕಷ್ಟಕರವಾಹಿದೆ.

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಭೈರವದುರ್ಗ : ಬೆಂಗಳೂರಿನಿಂದ 60 ಕಿ. ಮೀ. ದೂರದಲ್ಲಿ, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುಡೂರು ಎಂಬಲ್ಲಿದೆ ಭೈರವೇಶ್ವರ ನೆಲೆಸಿರುವ ಈ ಭೈರವದುರ್ಗ. ಇದೂ ಸಹ ನವದುರ್ಗಗಳ ಪೈಕಿ ಒಂದಾಗಿದ್ದು ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟಿದೆ. ಇಲ್ಲಿ ಈಶ್ವರನ ಅವತಾರವಾದ ಭೈರವೇಶ್ವರನಿಗೆ ಮುಡಿಪಾದ ಪುರಾತನ ದೇಗುಲವಿರುವುದನ್ನು ಕಾಣಬಹುದು. ಈ ದುರ್ಗವು ಇನ್ನೂ ಅಷ್ಟೊಂದಾಗಿ ಅನ್ವೇಷಿಸಲ್ಪಟ್ಟಿಲ್ಲ. ಇತಿಹಾಸ, ಭುಗೋಳ ಪ್ರಿಯ ಪ್ರವಾಸಿಗರಿಗೆ ಕುತೂಹಲ ಕೆರಳಿಸುವ ದುರ್ಗ ಇದಾಗಿದೆ ಎಂದರೆ ತಪ್ಪಾಗಲಾರದು.

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ದೇವರಾಯನದುರ್ಗ : ನವದುರ್ಗಗಳ ಪೈಕಿ ಒಂದಾದ ಮತ್ತೊಂದು ದುರ್ಗ ದೇವರಾಯನದುರ್ಗ. ದೇವರಾಯನದುರ್ಗವು ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸಮೀಪದ ರೈಲು ನಿಲ್ದಾಣವು ತುಮಕೂರಿನಲ್ಲಿದೆ. ಈ ಸ್ಥಳಕ್ಕೆ ಬಸ್ಸುಗಳ ಸೌಕರ್ಯವು ಉತ್ತಮವಾಗಿದೆ.

ಚಿತ್ರಕೃಪೆ: Hari Prasad Nadig

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಈ ಬೆಟ್ಟದ ಮೂರು ವಿಭಿನ್ನ ಎತ್ತರಗಳಲ್ಲಿ ಭೋಗ ನರಸಿಂಹ, ಯೋಗ ನರಸಿಂಹ ಮತ್ತು ಲಕ್ಷ್ಮಿ ನರಸಿಂಹ ಎಂಬ ಮೂರು ದೇವಾಲಯಗಳಿವೆ. ಭೋಗ ನರಸಿಂಹ ದೇವಾಲಯವು ಬೆಟ್ಟದ ಬುಡದಲ್ಲಿದೆ. ಯೋಗನರಸಿಂಹ ದೇವಾಲಯವು ಬೆಟ್ಟದ ತುದಿಯಲ್ಲಿ ಇದೆ. ಲಕ್ಷ್ಮಿ ನರಸಿಂಹ ದೇವಾಲಯವು ಬೆಟ್ಟದ ಮೊದಲ ಭಾಗದಲ್ಲಿ ಕಂಡು ಬರುತ್ತದೆ. ಯೋಗನರಸಿಂಹ ದೇವಾಲಯ.

ಚಿತ್ರಕೃಪೆ: Srinivasa83

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಇಲ್ಲಿನ ಮತ್ತೊಂದು ಆಕರ್ಷಣೆ ನಾಮದ ಚಿಲುಮೆ. ಸ್ಥಳೀಯ ದಂತಕತೆಗಳ ಪ್ರಕಾರ ಶ್ರೀ ರಾಮನು ತನ್ನ ಬಿಲ್ಲಿನಿಂದ ಬಿಟ್ಟ ಬಾಣದಿಂದ ಚಿಮ್ಮಿದ ಚಿಲುಮೆಯೆ ಇದಂತೆ. ಭಕ್ತಾಧಿಗಳ ಪ್ರಕಾರ ಚಿಲುಮೆಯ ಬಳಿಯಲ್ಲಿ ಶ್ರೀ ರಾಮನ ಹೆಜ್ಜೆಗುರುತು ಇದೆಯಂತೆ. ಇಲ್ಲಿನ ಕಾಡಿನಲ್ಲಿನ ನರ್ಸರಿಯಲ್ಲಿ ಅಪರೂಪದ ಅಯುರ್ವೇದಿಕ ಗಿಡ ಮೂಲಿಕೆಗಳನ್ನು ಬೆಳೆಯಲಾಗಿದೆ. ಇಲ್ಲಿ ಶ್ರೀ ನರಸಿಂಹ ಜಯಂತಿ ಮತ್ತು ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುತ್ತಾರೆ.

ಚಿತ್ರಕೃಪೆ: Siddarth P Raj

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಸಾವನದುರ್ಗ : ನವದುರ್ಗಗಳ ಪೈಕಿ ಇನ್ನೊಂದು ದುರ್ಗ ಸಾವನದುರ್ಗ. ಸಾವನದುರ್ಗ ಬೆಂಗಳೂರಿನಿಂದ ಸುಮಾರು 60 ಕಿ.ಮೀ ಗಳಷ್ಟು ದೂರವಿದೆ. ಹೋಗಲು ಎರಡು ಆಯ್ಕೆಗಳಿವೆ. ಒಂದು ಮಾಗಡಿ ಮೂಲಕವಾಗಿದ್ದರೆ ಇನ್ನೊಂದು ಮೈಸೂರು ರಸ್ತೆಯ ಮೂಲಕವಾಗಿದೆ. ಆದರೆ ನೀವು ಯಾವ ಸ್ಥಳ ಮೊದಲು ಭೇಟಿ ಮಾಡಲು ಇಷ್ಟ ಪಡುವಿರೊ ಆಯ್ಕೆ ಅದರ ಮೇಲೆ ಅವಲಂಬಿತವಾಗಿದೆ. ಏಕೆಂದರೆ ಬೆಟ್ಟ ಹತ್ತಲು ಬೆಳಗಿನ ಸಮಯ ಪ್ರಶಸ್ತವಾಗಿರುವುದರಿಂದ ಮೊದಲು ಸಾವನದುರ್ಗಕ್ಕೆ ಭೇಟಿ ನೀಡುವುದು ಉತ್ತಮ.

ಚಿತ್ರಕೃಪೆ: Sudarshana

ಕರ್ನಾಟಕದ ಭವ್ಯ ದುರ್ಗಗಳು:

ಕರ್ನಾಟಕದ ಭವ್ಯ ದುರ್ಗಗಳು:

ಕಬ್ಬಾಲದುರ್ಗ : ಕಬ್ಬಾಲು ಎನ್ನುವುದು ಒಂದು ಗ್ರಾಮವಾಗಿದ್ದು ಇಲ್ಲಿರುವ ಕಬ್ಬಾಲು ಬೆಟ್ಟದಿಂದ ಇದಕ್ಕೆ ಈ ಹೆಸರು ಬಂದಿದೆ. ಕಬ್ಬಾಲುಬೆಟ್ಟದ ಮೇಲೆ ಕಬ್ಬಾಲಮ್ಮ ದೇವಿಗೆ ಮುಡಿಪಾದ ದೇವಾಲಯವಿರುವುದನ್ನು ಗಮನಿಸಬಹುದು. ಇನ್ನೊಂದು ವಿಷಯ ಕಬ್ಬಾಲ ದುರ್ಗದ ಬೆಟ್ಟ ರಾತ್ರಿ ಚಾರಣಕ್ಕೂ ಸಹ ಹೆಸರುವಾಸಿಯಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+