ಇಂದಿನಿಂದ ಅಮರನಾಥ ಯಾತ್ರೆಗೆ ಚಾಲನೆ ದೊರೆತಿದೆ. ಜಮ್ಮು ಕಾಶ್ಮೀರದ ಭಗವತಿ ನಗರದ ಆಧಾರ ಶಿಬಿರದಿಂದ ಯಾತ್ರೆ ಹೊರಡಲಿದೆ. ಅಮರನಾಥ ಯಾತ್ರೆಗೆ 2 ಲಕ್ಷ ಮಂದಿ ನೊಂದಾಣಿ ಮಾಡಿಸಿದ್ದಾರೆ. ಭಕ್ತರನ್ನು ಮೊದಲ ಬಾರಿಗೆ ಜಮ್ಮುಕಾಶ್ಮೀರದ ಪ್ರಸಿದ್ಧ ಮಂದಿರಗಳಿಗೆ ಕರೆದುಕೊಂಡು ಹೋಗುತ್ತಾರೆ .

8ಪ್ರಾಚೀನ ಗುಹೆಗಳಿವೆ
PC: Nittin sain
ಅಮರನಾಥ ಗುಹೆಯನ್ನು ಹೊರತುಪಡಿಸಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಇನ್ನೂ 8ಪ್ರಾಚೀನ ಗುಹೆಗಳಿವೆ. ಕೆಲವಯ ಗುಹೆಗಳು ಬುದ್ಧನಿಗೆ ಸಂಬಂಧಿಸಿದ್ದಾದರೆ ಇನ್ನೂ ಕೆಲವು ಶಿವನಿಗೆ ಸಂಬಂಧಿಸಿದ್ದಾಗಿದೆ. ಇಂದು ನಾವು ನಿಮಗೆ ಅಂತಹದ್ದೇ ಕೆಲವು ಪ್ರಾಚೀನ ಗುಹೆಗಳ ಬಗ್ಗೆ ತಿಳಿಸಲಿದ್ದೇವೆ.

ಶೇರ್ ಗೋಲ್ ಗುಹೆ
PC: Gktambe
ಕಾರ್ಗಿಲ್‌ನ ರಸ್ತೆಯಲ್ಲಿ ನೋಡಲು ಶೇರ್‌ಗೋಲ್ ಗುಹೆಯು ಒಂದು ಪ್ರಮುಖ ತಾಣವಾಗಿದೆ. ಇದು ಒಂದು ಬೆಟ್ಟದ ನಡುವೆ ಇದೆ. ಈ ಗುಹೆಯ ವಿಶೇಷತೆ ಏನೆಂದರೆ ಇದು ಬೆಟ್ಟದ ಹೊರಗಿನ ಕಡೆಗೆ ನೇತಾಡುತ್ತಿರುವಂತೆ ಕಾಣುತ್ತದೆ.

ಬಮಜೂ ಗುಹೆ
PC:Hardik Buddhabhatti
ಅನಂತ ನಾಗ್ ಜಿಲ್ಲೆಯಲ್ಲಿ ಲಿಡರ್ ಘಾಟಿಯ ಬಳಿ ಲಿವರ್ ನದಿಯ ಎಡ ತೀರದಲ್ಲಿ ಬಮಜೂ ಗುಹೆ ಇದೆ. ಬೆಟ್ಟದ ನಡುವೆ ಇರುವ ಈ ಗುಹೆಯು ಪ್ರಾಚೀನ ಕಾಲಕ್ಕೆ ಸೇರಿದ್ದಾಗಿದೆ.

ಮಹಾನಾಲ್ ಗುಹೆ
PC: Hardik Buddhabhatti
ಈ ಗುಹೆಯು ಕಥುವಾ ಜಿಲ್ಲೆಯ ಸಮೀಪ ರಾಜಬಾಗ್ ನಿಂದ 15 ಕಿ.ಮೀ ಉತ್ತರದಲ್ಲಿದೆ. ಈ ಪ್ರಾಕೃತಿಕ ಪವಿತ್ರ ಗುಹೆಯ ಒಳಗೆ ಶಿವನ ಲಿಂಗವಿದೆ. ಶಿವನು ಸ್ವತಃ ಪ್ರಾಕೃತಿಕ ಲಿಂಗದ ರೂಪದಲ್ಲಿ ಪ್ರಕಟಿಸಿದನು ಎನ್ನಲಾಗುತ್ತದೆ.

ಸಸ್ಪೋಲ್ ಗುಹೆ
PC: Hardik Buddhabhatti
ಜಮ್ಮು ಕಾಶ್ಮೀರದಲ್ಲಿ ತಿಬ್ಬತಿ ಮಧ್ಯಯುಗದ ಸಂಸ್ಕೃತಿಯ ಅದ್ಭುತ ಸ್ಮಾರಕಗಳಿವೆ. ಅವುಗಳಲ್ಲಿ ಕೆಲವು ಸಿಸ್ಫೋಲ್ ಹಳ್ಳಿಯಲ್ಲಿ ಸುತ್ತಮುತ್ತ ಸಿಂಧೂ ಘಾಟಿಯಲ್ಲಿದೆ.

ಪೀರ್ ಕೋಹ್
PC:Gktambe
ಈ ಮಂದಿರವನ್ನು ಜಾಮವಂತ ಗುಹೆ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಇದು ಜಮ್ಮುವಿನ ಪೂರ್ವ ಭಾಗದಲ್ಲಿದೆ. ಈ ಗುಹೆಯಲ್ಲಿ ಖುಷಿ, ಮುನಿಗಳು ತಪಸ್ಸು ಮಾಡುತ್ತಿದ್ದರು ಹಾಗಾಗಿ ಈ ಗುಹೆಗೆ ಪೀರ್‌ಕೋಹ್ ಎಂಬ ಹೆಸರು ಬಂದಿದೆ.

ಶಿವ ಕೋರಿ
PC: Saisumanth532
ಈ ಗುಹೆಯು ಜಮ್ಮು ಕಾಶ್ಮೀರದ ರಾಯ್‌ಸಿ ಜಿಲ್ಲೆಯಲ್ಲಿದೆ. ಇದು 150 ಮೀಟರ್ ಎತ್ತರದಲ್ಲಿದೆ. ಈ ಗುಹೆಯೊಳಗಡೆ ಶಿವನ 4 ಫೀಟ್ ಎತ್ತರದ ಶಿವಲಿಂಗವಿದೆ. ಈ ಶಿವಲಿಂಗದ ಮೇಲೆ ನೀರಿನ ಧಾರೆ ಯಾವಾಗಲೂ ಹರಿಯುತ್ತಲೇ ಇರುತ್ತದೆ.

ಮೈಗ್ರಿ ಗುಹೆ
ಉದಯ್‌ಪುರ ಜಿಲ್ಲೆಯ ಪಂಚಾಯತ್ ಬ್ಲಾಕ್‌ನಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಕ್ಷೇತ್ರದಲ್ಲಿ ಅನೇಕ ಪ್ರಾಕೃತಿಕ ಮಂದಿರಗಳಿವೆ. ಅವುಗಳಲ್ಲಿ ಒಂದು ಮೈಗ್ರಿ ಗುಹೆ. ಇಲ್ಲಿ ಶಿವ-ಪಾರ್ವತಿ ಸಂಯುಕ್ತ ಲಿಂಗದ ರೂಪದಲ್ಲಿ ಇದ್ದಾರೆ. ಈ ಕ್ಷೇತ್ರವು ಮೊದಲು ಸೋನಾರಾ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ಅಂದರೆ ಬುಗ್ಗೆಗಳ ಭೂಮಿ ಎಂದರ್ಥ.

ಫುಗತಾಲ್ ಮಠ ಗುಹೆ
ಲಡಾಕ್‌ನ ಒಂದು ಬೌದ್ಧ ಮಠವಾಗಿದೆ. ಈ ಮಠವು ಮರದ ಒಂದು ಸುಂದರ ನಿರ್ಮಾಣವಾಗಿದೆ. ಇದು ಪ್ರಾಕೃತಿಕ ಗುಹೆಯ ಪ್ರವೇಶ ದ್ವಾರದ ಬಳಿ ಇದೆ.


Click it and Unblock the Notifications

















