Search
  • Follow NativePlanet
Share
» »ಶಿವಲಿಂಗಕ್ಕೆ ಮೊಳೆಯಿಂದ ಹೊಡೆದ ರಕ್ತದ ಕಲೆ ಇಂದಿಗೂ ಮಾಸಿಲ್ಲ...ಏಕೆ?

ಶಿವಲಿಂಗಕ್ಕೆ ಮೊಳೆಯಿಂದ ಹೊಡೆದ ರಕ್ತದ ಕಲೆ ಇಂದಿಗೂ ಮಾಸಿಲ್ಲ...ಏಕೆ?

ನಮ್ಮ ಶಿವನ ಲೀಲೆ ಅಪಾರವೆಂದೇ ಹೇಳಬಹುದು. ಆತ ಸರ್ವಾಂತರ್‍ಯಾಮಿ. ಸಾವಿರಾರು ವರ್ಷಗಳಿಂದಲೂ ಆ ಪರಮೇಶ್ವರನ ಮಹಿಮೆಯನ್ನು ನಾವು ಕೇಳುತ್ತಲೇ, ಕಾಣುತ್ತಲೇ ಬಂದಿದ್ದೇವೆ. ಶಿವನಿಗೆ ಸರ್ಮಪಿತವಾದ ದೇವಾಲಯಗಳು ಆನೇಕವಿದೆ. ವಿಶೇಷವೆನೆಂದರೆ ಒಂದೊಂದು ಶಿವಾಲಯಕ್ಕೂ ಅದರದೇ ಆದ ಮಹತ್ವ ಹಾಗು ಮಹಿಮೆಗಳಿರುತ್ತವೆ. ಶಿವನ ಮಹಿಮೆಗಳನ್ನು ಹೇಳುತ್ತಾ ಹೊರಟರೆ ಪದಗಳೇ ಸಾಲದು.

ನಮ್ಮ ನೇಟಿವ್ ಪ್ಲಾನೆಟ್‍ನಲ್ಲಿ ನಿಮಗೆ ಶಿವನ ಕುರಿತು ಹಲವಾರು ಕುತೂಹಲಕಾರಿಯಾದ ಮಾಹಿತಿಯನ್ನು ಈಗಾಗಲೇ ಪಡೆದ್ದಿದೀರಾ. ಪ್ರಸ್ತುತ ಲೇಖನದಲ್ಲಿರುವ ಒಂದು ಮಹಿಮಾನ್ವಿತ ದೇವಾಲಯದಲ್ಲಿ ಒಂದು ಶಿವಲಿಂಗಕ್ಕೆ ಮೊಳೆಯನ್ನು ಹೊಡೆದ್ದಿದ್ದಾರೆ. ಇದರಿಂದ ಆ ಶಿವಲಿಂಗದಿಂದ ಬಂದ ರಕ್ತದ ಕಲೆ ಇಂದಿಗೂ ಹಾಗೆಯೇ ಇದೆ. ಆ ವಿಚಿತ್ರವಾದ ದೇವಾಲಯ ಯಾವುದು? ಅದು ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಕಾತುರರಾಗಿದ್ದೀರಾ? ಹಾಗಾದರೆ ಓದಿ......

ಅಮರೇಶ್ವರ ದೇವಾಲಯ

ಅಮರೇಶ್ವರ ದೇವಾಲಯ

ಆ ದೇವಾಲಯವು ಒಂದು ಮಹಿಮಾನ್ವಿತವಾದ ಶಿವಾಲಯವಾಗಿದೆ. ಆ ದೇವಾಲಯದಲ್ಲಿನ ಲಿಂಗವು ಅತ್ಯಂತ ಶಕ್ತಿಯುವಾಗಿದ್ದು, ಶ್ರೀ ರಾಮಚಂದ್ರನಿಂದ ಪ್ರತಿಷ್ಟಾಪಿಸಿದ ಲಿಂಗ ಎಂದು ಪುರಾಣಗಳು ಹೇಳುತ್ತವೆ. ಈ ಶಿವಲಿಂಗವು ಒಂದು ಕಾಲದಲ್ಲಿ ಆ ಶ್ರೀರಾಮ ಚಂದ್ರನಿಂದ ಪೂಜಿಸ್ಪಟ್ಟ ಶಿವಲಿಂಗ ಎಂದೇ ಪ್ರಸಿದ್ಧಿಯನ್ನು ಪಡೆದಿದೆ.

pc:RameshSharma

ಅಮರೇಶ್ವರ ದೇವಾಲಯ

ಅಮರೇಶ್ವರ ದೇವಾಲಯ

ಈ ದೇವಾಲಯದಲ್ಲಿನ ಲಿಂಗವನ್ನು ದೇವರಾಜನಾದ ಇಂದ್ರನು ಪ್ರತಿಷ್ಟಾಪಿಸಿರುವುದು ಎನ್ನಲಾಗಿದೆ. ಇದು ಕೇವಲ ಹಿಂದೂಗಳಿಗೆ ಅಲ್ಲದೇ ಬೌದ್ಧ ಮತಸ್ಥರಿಗೂ ಪವಿತ್ರವಾದ ಸ್ಥಳವಾಗಿದೆ.ಈ ದೇವಾಲಯದಲ್ಲಿನ ಲಿಂಗವನ್ನು ದೇವರಾಜನಾದ ಇಂದ್ರನು ಪ್ರತಿಷ್ಟಾಪಿಸಿರುವುದು ಎನ್ನಲಾಗಿದೆ. ಇದು ಕೇವಲ ಹಿಂದೂಗಳಿಗೆ ಅಲ್ಲದೇ ಬೌದ್ಧ ಮತಸ್ಥರಿಗೂ ಪವಿತ್ರವಾದ ಸ್ಥಳವಾಗಿದೆ.

ಅಮರೇಶ್ವರ ದೇವಾಲಯ

ಅಮರೇಶ್ವರ ದೇವಾಲಯ

ಈ ಅಮರಾವತಿ ದೇವಾಲಯದಲ್ಲಿ ಕೋಟಾ ಮುಖ್ಯಸ್ಥರು ಮತ್ತು ವಿಜಯನಗರ ಚಕ್ರವರ್ತಿಯಾದ ಶ್ರೀ ಕೃಷ್ಣದೇವರಾಯರ ಶಾಸನಗಳನ್ನು ಇಲ್ಲಿ ಕಾಣಬಹುದಾಗಿದೆ. ಅಷ್ಟೇ ಅಲ್ಲದೇ ಕೋಟಾದ ರಾಜನಾದ ಕೇತರಾಜನ ಸಚಿವರಾಗಿದ್ದ ಪ್ರೋಲಿ ನಯುಡು ಅವರ ಒಂದು ಶಾಸನವನ್ನು ಒಂದು ಸ್ತಂಭದ ಮೇಲೆ ಕಾಣಬಹುದು.

ಅಮರೇಶ್ವರ ದೇವಾಲಯ

ಅಮರೇಶ್ವರ ದೇವಾಲಯ

ಈ ದೇವಾಲಯವು ಅತ್ಯಂತ ಭವ್ಯವಾಗಿದ್ದು, ದ್ರಾವಿಡ ಶೈಲಿಯ ವಾಸ್ತು ಶಿಲ್ಪದಿಂದ ಶ್ರೀಮಂತವಾಗಿದೆ. ವಿಶೇಷವೆನೆಂದರೆ ಈ ದೇವಾಲಯದಲ್ಲಿನ ಶಿವಲಿಂಗ. ಮುಗಿಲೆತ್ತರದಲ್ಲಿರುವ ಶಿವಲಿಂಗದ ದರ್ಶನವನ್ನು ನಾವು ಕಾಣುತ್ತಿದ್ದೇವೆ ಎಂಬ ಅನುಭೂತಿಯನ್ನು ಭಕ್ತರಿಗೆ ಉಂಟು ಮಾಡುತ್ತದೆ. ಇಲ್ಲಿ ಮುಖ್ಯವಾಗಿ ತೆಲುಗು ಭಾಷೆಯಲ್ಲಿ ಹಾಗು ಸಂಸ್ಕøತ ಭಾಷೆಯಲ್ಲಿನ ಶಾಸನಗಳನ್ನು ಕಾಣಬಹುದಾಗಿದೆ.

Adityamadhav83

ಅಮರೇಶ್ವರ ದೇವಾಲಯ

ಅಮರೇಶ್ವರ ದೇವಾಲಯ

ಇಲ್ಲಿನ ಶಿವಲಿಂಗವು ಅತ್ಯಂತ ಎತ್ತರವಾಗಿರುವುದರಿಂದ ಆರ್ಚಕರು ಒಂದು ಪೀಠದ ವೇದಿಕೆಯ ಮೇಲೆ ಹತ್ತಿ, ದೈನಂದಿನ ಆಚರಣೆಯಂತೆ ಅಭಿಷೇಕವನ್ನು ನಿರ್ವಹಿಸುತ್ತಾರೆ. ಇಲ್ಲಿನ ಆಶ್ಚರ್ಯಕರವಾದ ವಿಷಯವೆನೆಂದರೆ ಶಿವಲಿಂಗದ ಮೇಲ್ಭಾಗದಲ್ಲಿ ಕೆಂಪು ಬಣ್ಣದ ಕಲೆ ಇದೆ. ಆ ಕಲೆ ಯಾವುದೆಂದರೆ ರಕ್ತದ ಕಲೆಯೇ ಆಗಿದೆ.

ಅಮರೇಶ್ವರ ದೇವಾಲಯ

ಅಮರೇಶ್ವರ ದೇವಾಲಯ

ಶಿವಲಿಂಗವು ದಿನದಿಂದ ದಿನೇ ಎತ್ತರವಾಗಿ ಬೆಳೆಯುತ್ತಿದ್ದು, ಅದರ ಬೆಳವಣಿಗೆಯನ್ನು ನಿಲ್ಲಿಸುವ ಸಲುವಾಗಿ ಒಂದು ಮೊಳೆಯನ್ನು ಶಿವಲಿಂಗದ ತಲೆಯ ಮೇಲೆ ಹೊಡೆಯಲಾಗಿದೆ. ಹೀಗೆ ಮಾಡಿದ ಪರಿಣಾಮವಾಗಿ ಶಿವಲಿಂಗದ ಮೇಲ್ಭಾಗದಲ್ಲಿ ರಕ್ತ ಸುರಿದಿದೆ. ಆಶ್ಚರ್ಯ ಏನಪ್ಪ ಎಂದರೆ ಆ ರಕ್ತದ ಕಲೆಯು ಶಿವಲಿಂಗದ ಮೇಲೆ ಹಾಗೆ ಇರುವುದು. ಇದನ್ನು ಭಕ್ತರು ಗಮನಿಸಬಹುದಾಗಿದೆ.

ಅಮರೇಶ್ವರ ದೇವಾಲಯ

ಅಮರೇಶ್ವರ ದೇವಾಲಯ

ಈ ದೇವಾಲಯದಲ್ಲಿನ ಲಿಂಗವನ್ನು ದೇವರಾಜನಾದ ಇಂದ್ರನು ಪ್ರತಿಷ್ಟಾಪಿಸಿರುವುದು ಎನ್ನಲಾಗಿದೆ.ಇಲ್ಲಿನ ಶಿವಲಿಂಗವನ್ನು ಪೂಜೆ ಮಾಡುತ್ತಿದ್ದನು ಎಂದು ಹೇಳಲಾಗಿದೆ. ಇಲ್ಲಿನ ಸ್ವಾಮಿಗೆ ಅಮರಲಿಂಗೇಶ್ವರ ಎಂದು ಕೂಡ ಕರೆಯುತ್ತಾರೆ.

ಅಮರೇಶ್ವರ ದೇವಾಲಯ

ಅಮರೇಶ್ವರ ದೇವಾಲಯ

ರಾಜನಾದ ಚೆಂಚೂಸ್ ಭೂಮಿಯ ಹತ್ಯಾಕಾಂಡಕ್ಕೆ ಸಹಾಯ ಮಾಡಬೇಕಾಯಿತು. ತದನಂತರ ಆತನಿಗೆ ಮಾನಸಿಕ ಅಶಾಂತಿ ಉಂಟಾಗಿ ಅಮರಾವತಿಗೆ ತಲುಪಿದನು. 1796 ರಲ್ಲಿ ಒಂದು ಶಿವಾಲಯವನ್ನು ನಿರ್ಮಾಣ ಮಾಡಲು ತನ್ನ ಸಂಪೂರ್ಣ ಜೀವನವನ್ನು, ಸಮಯವನ್ನು ಮತ್ತು ಆದಾಯವನ್ನು ಮೀಸಲಿಟ್ಟನು ಎಂದು ಹೇಳಲಾಗುತ್ತಿದೆ.

ಅಮರೇಶ್ವರ ದೇವಾಲಯ

ಅಮರೇಶ್ವರ ದೇವಾಲಯ

ಮತ್ತೊಂದು ದಂತ ಕಥೆಯ ಪ್ರಕಾರ, ತಾರಕಸುರ ಎಂಬ ರಾಕ್ಷಸ ರಾಜನು ಶಿವನಿಂದ ವರವನ್ನು ಪಡೆದುಕೊಂಡ ನಂತರ ದೇವರನ್ನು ಹಿಂಸಿಸುತ್ತಿದ್ದನು. ಮಹಾ ಶಿವನು ರಾಕ್ಷಸರನ್ನು ಕೊಲ್ಲಲು ಪ್ರತಿಜ್ಞೆ ಮಾಡಿದನು. ಹೀಗಾಗಿ ದೇವರುಗಳು ಈ ಸ್ಥಳದಲ್ಲಿ ವಾಸಿಸಲು ಅಮರಾವತಿಗೆ ಬಂದರು. ತದನಂತರ ಶಿವನನ್ನು ಅಮರೇಶ್ವ ಎಂದು ಪೂಜಿಸಲಾಗುತ್ತದೆ.

ಅಮರೇಶ್ವರ ದೇವಾಲಯ

ಅಮರೇಶ್ವರ ದೇವಾಲಯ

ಅಮರಾಲಿಂಗೇಶ್ವರ ಸ್ವಾಮಿ ದೇವಾಲಯವು ಆಂಧ್ರ ಪ್ರದೇಶದ ಅಮರಾವತಿ ಪಟ್ಟಣದಲ್ಲಿರುವ ಪಂಚರಾಮ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವಾಲಯವು ಕೃಷ್ಣ ನದಿಯ ದಕ್ಷಿಣದ ದಡದಲ್ಲಿದೆ. ಇಲ್ಲಿ ಮಹಾಶಿವನು ಅಮರೇಶ್ವರ ಸ್ವಾಮಿಯಾಗಿ ತನ್ನ ಪತ್ನಿಯಾದ ಬಾಲಾ ಚಾಮುಂಡಿಕಾ ಜೊತೆ ನೆಲೆಸಿದ್ದಾನೆ.

ಅಮರೇಶ್ವರ ದೇವಾಲಯ

ಅಮರೇಶ್ವರ ದೇವಾಲಯ

ಈ ದೇವಾಲಯದ ಪ್ರಮುಖವಾದ ಉತ್ಸವಗಳು ಎಂದರೆ, ಮಹಾಶಿವರಾತ್ರಿ, ನವರಾತ್ರಿ, ಕಲ್ಯಾಣ ಉತ್ಸವಗಳು ಇನ್ನು ಹಲವಾರು. ಈ ಪವಿತ್ರವಾದ ದೇವಾಲಯವು ಕೃಷ್ಣ ನದಿಯ ಸ್ಥಳದಲ್ಲಿರುವುದರಿಂದ ಹಿಂದೂ ಧರ್ಮಕ್ಕೆ ಪ್ರಾಮುಖ್ಯತೆಯನ್ನು ನೀಡುವ ಒಂದು ಪೂಜಾ ಸ್ಥಳವಾಗಿದೆ.

pc:RameshSharma

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಈ ಮಹಿಮಾನ್ವಿತವಾದ ದೇವಾಲಯಕ್ಕೆ ತೆರಳಬೇಕಾದರೆ ಸಮೀಪದಲ್ಲಿನ ಸ್ಥಳವೆಂದರೆ ಅದು ಗುಂಟೂರು. ಇಲ್ಲಿಂದ ಈ ದೇವಾಲಯಕ್ಕೆ ತೆರಳಲು ಗುಂಟೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಗುಂಟೂರು, ವಿಜಯವಾಡ ಮತ್ತು ಮಂಗಳಗಿರಿಯ ಮೂಲಕವೂ ಕೂಡ ಈ ದೇವಾಲಯಕ್ಕೆ ತೆರಳಬಹುದಾಗಿದೆ.

ಸಮೀಪದಲ್ಲಿನ ತಾಣಗಳು

ಸಮೀಪದಲ್ಲಿನ ತಾಣಗಳು

ಈ ದೇವಾಲಯದ ಸಮೀಪದಲ್ಲಿ ಹಲವಾರು ಪ್ರವಾಸಿ ತಾಣಗಳು ಇವೆ. ಅವುಗಳಲ್ಲಿ ಸ್ವಯಂ ಭೂ ಲಿಂಗ, ಅಮರಾವತಿ ಮ್ಯೂಸಿಯಂ, ಗೀತಾ ಮಂದಿರ, ಕನಕ ದುರ್ಗಾಲಯಂ, ರಾಮಾಲಯಂ, ಓಂಕಾರೇಶ್ವರ ಮಂದಿರ, ಅಂಜನೇಯ ದೇವಾಲಯ ಇನ್ನು ಇತ್ಯಾದಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more