Search
  • Follow NativePlanet
Share
» »ನಡೆದಾಡುವ ದೇವರಿದ್ದ ಸಿದ್ಧಗಂಗಾ ಮಠದ ಬಗ್ಗೆ ನಿಮಗೆಷ್ಟು ಗೊತ್ತು?

ನಡೆದಾಡುವ ದೇವರಿದ್ದ ಸಿದ್ಧಗಂಗಾ ಮಠದ ಬಗ್ಗೆ ನಿಮಗೆಷ್ಟು ಗೊತ್ತು?

ತುಮಕೂರಿನಲ್ಲಿರುವ ಪ್ರೇಕ್ಷಣೀಯ ಹಾಗೂ ಧಾರ್ಮಿಕ ತಾಣಗಳಲ್ಲಿ ಸಿದ್ಧಗಂಗಾ ಮಠ ಕೂಡಾ ಒಂದು. ಶಿವಕುಮಾರ ಸ್ವಾಮಿಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. 111 ವರ್ಷಗಳ ಕಾಲ ಬದುಕಿದ ಶತಾಯಷಿ ಶಿವಕುಮಾರ ಸ್ವಾಮಿಯವರು ಇಂದು ದೈವಾಧೀನರಾಗಿದ್ದಾರೆ. ಮಹಾನುಭಾವರಿದ್ದ ಸಿದ್ಧಗಂಗಾ ಮಠಕ್ಕೆ ಬಹಳಷ್ಟು ಮಂದಿ ಭೇಟಿ ನೀಡಿ ಸ್ವಾಮೀಯವರ ದರ್ಶನ ಪಡೆದಿದ್ದಾರೆ. ತುಮಕೂರಿನಲ್ಲಿ ಪ್ರತಿಯೊಬ್ಬರೂ ನೋಡಲೇ ಬೇಕಾದಂತಹ ಸ್ಥಳಗಳಲ್ಲಿ ಇದೂ ಒಂದು. ಅಂತಹ ಸಿದ್ಧಗಂಗಾ ಮಠದ ಬಗ್ಗೆ ಒಂದಿಷ್ಟು ಇಲ್ಲಿ ನೀಡಲಾಗಿದೆ.

ಸಿದ್ಧಗಂಗಾ ಹೆಸರು ಬಂದಿದ್ದು ಹೇಗೆ?

ಸಿದ್ಧಗಂಗಾ ಹೆಸರು ಬಂದಿದ್ದು ಹೇಗೆ?

ಪೀಟಾಚಾರ್ಯರಲ್ಲಿ 15ನೇ ಯವರಾದ ಶ್ರೀ ಹರದಾನಹಳ್ಳಿ ಗೊಸಲಾ ಸಿದ್ದೇಶ್ವರರು ತನ್ನ ಜವಬ್ದಾಯಿಯನ್ನೆಲ್ಲಾ ಮುಂದಿನ ಪೀಟಾಚಾರ್ಯರಿಗೆ ಹಸ್ತಾಂತರಿಸಿ ಧಾರ್ಮಿಕ ಕೆಲಸಕ್ಕಾಗಿ ತಮ್ಮ ಸ್ವತಂತ್ರ ಸ್ಥಳವನ್ನು ರಚಿಸಲು 101 ಅನುಯಾಯಿಗಳೊಂದಿಗೆ ಶಿವಗಂಗಾಕ್ಕೆ ತೆರಳಿದರು. ನಂತರ ಅವರು ಶಿವಗಂಗಾದಿಂದ ಕಾಯತಸಂದ್ರ ಬಳಿಯ ಬೆಟ್ಟಕ್ಕೆ ತೆರಳಿದರು. ಅವರು ಅನುಯಾಯಿಗಳಿಗೆ ಅಧ್ಯಯನ ಮತ್ತು ಧ್ಯಾನಕ್ಕಾಗಿ 101 ಗುಹೆಗಳನ್ನು ರಚಿಸಿದರು ಅಲ್ಲೇ ಸಿದ್ದಗಂಗಾದಲ್ಲಿ ಮಠವನ್ನು ಸ್ಥಾಪಿಸಿದರು. ತನ್ನ ಶಿಷ್ಯರ ಬಾಯಾರಿಕೆಯನ್ನು ತಣಿಸಲು ಶ್ರೀ ಗೋಸಲ ಸಿದ್ದೇಶ್ವರ ಸ್ವಾಮೀಜಿಯವರು ಅಲ್ಲಿಯೇ ಇದ್ದ ಬಂಡೆಯನ್ನು ಹೊಡೆದರು. ಆಗಲೇ ಬಂಡೆಯಿಂದ ನೀರು ಹೊರಹೊಮ್ಮಿತು. ಈ ಪವಿತ್ರ ನೀರನ್ನು "ಸಿದ್ದಗಂಗಾ" ಎಂದು ಹೆಸರಿಸಲಾಯಿತು. ಮತ್ತು ಈ ಹೆಸರನ್ನು ಈ ಸ್ಥಳಕ್ಕೆ ಇಡಲಾಗಿದೆ ಎನ್ನಲಾಗುತ್ತದೆ.

ಕಾಳಿಯನ್ನು ಸಮಾಧಾನಿಸಲು ಶಿವ ಭರತನಾಟ್ಯ ಮಾಡಿದ ಸ್ಥಳವಿದುಕಾಳಿಯನ್ನು ಸಮಾಧಾನಿಸಲು ಶಿವ ಭರತನಾಟ್ಯ ಮಾಡಿದ ಸ್ಥಳವಿದು

ಪವಿತ್ರ ನೀರಿಗಿದೆ ಔಷಧೀಯ ಶಕ್ತಿ

ಪವಿತ್ರ ನೀರಿಗಿದೆ ಔಷಧೀಯ ಶಕ್ತಿ

PC:Rangakuvara

ಮಾನಸಿಕ ಮತ್ತು ದೈಹಿಕ ಕಾಯಿಲೆಗಳನ್ನು ಸರಿಪಡಿಸುವ ಶಕ್ತಿಯನ್ನು ಈ ಪವಿತ್ರ ನೀರು ಹೊಂದಿದೆ ಎನ್ನಲಾಗುತ್ತದೆ. ಈ ನೀರನ್ನು ಎಲ್ಲಾ ಸಮುದಾಯಗಳಿಗೂ ಬಳಸಲು ಅವಕಾಶವಿದೆ. ಶ್ರೀ ಗೋಸಾಲಸಿದ್ದೇಶ್ವರ ಶಿಷ್ಯ ಶ್ರೀ ಶಂಕರಾಚಾರ್ಯ ಸ್ವಾಮೀಜಿ ಅವರು ಹದಿನಾಲ್ಕನೆಯ ಶತಮಾನದ ಕೊನೆಯವರೆಗೂ ತಮ್ಮ ಕೆಲಸವನ್ನು ಮುಂದುವರೆಸಿದರು. ಅವರ ಗುರುವನ್ನು ಅನುಸರಿಸಿ ಸಿದ್ದಗಂಗಕ್ಕೆ ಬಂದರು. ಸ್ವಲ್ಪ ಸಮಯದವರೆಗೆ ಅವರು ಸಿದ್ದಗಂಗಾ ಬೆಟ್ಟಗಳ ಗುಹೆಗಳಲ್ಲಿ ವಾಸಿಸುತ್ತಿದ್ದರು ಮತ್ತು ನಂತರ ಅವರು ಗುಬ್ಬಿಗೆ ಸ್ಥಳಾಂತರಗೊಂಡರು. ಸಿದ್ದಗಂಗಾ ಮಠದ ಅಭಿವೃದ್ಧಿಗೆ ಶ್ರೀ ಟೊಂಟಾದ ಸಿದ್ದಲಿಂಗೇಶ್ವರ ಸ್ವಾಮೀಜಿ ಅವರ ಕೊಡುಗೆ ಅಪಾರ. ನಂತರ ಅವರು ಯಡಿಯೂರಿಗೆ ಸ್ಥಳಾಂತರಗೊಂಡರು ಮತ್ತು ಅವರ ಜೀವನದ ಕೊನೆಯವರೆಗೆ ಅಲ್ಲಿಯೇ ಕಳೆದರು ಎನ್ನಲಾಗುತ್ತದೆ.

ಮಠಾಧಿಪತಿ ಶಿವಕುಮಾರ ಸ್ವಾಮಿಗಳು

ಮಠಾಧಿಪತಿ ಶಿವಕುಮಾರ ಸ್ವಾಮಿಗಳು

PC: Rangakuvara

ಕಳೆದ ಎರಡು ಶತಮಾನಗಳಲ್ಲಿ ಶ್ರೀ ಸಿದ್ದಗಂಗಾ ಮಠದ ಇತಿಹಾಸವು ಅದರ ಅತ್ಯಂತ ಗೌರವಾನ್ವಿತ ಸ್ಥಾನವನ್ನು ಪಡೆದಿದೆ. ಇಬ್ಬರು ಶ್ರೇಷ್ಠ ಧಾರ್ಮಿಕ ಮುಖಂಡರ ಜ್ಞಾನ ಮತ್ತು ಅಧಿಕಾರದಿಂದಾಗಿ ಮಠದಲ್ಲಿ ಹೆಚ್ಚು ಪ್ರಗತಿ ಕಾಣಿಸಿಕೊಂಡಿದೆ. ಮೊದಲನೆಯದು ಶ್ರೀ ಶ್ರೀ ಉದಯ ಶಿವಾಯೋಗಿಗಳು ಮತ್ತು ಎರಡನೆಯದಾಗಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು. ಶಿವಕುಮಾರ ಸ್ವಾಮಿಗಳು ಪ್ರಸ್ತುತ ಮಠದ ಮಠಾಧಿಪತಿಗಳಾಗಿದ್ದಾರೆ. 111 ವರ್ಷದ ಇವರನ್ನು ನಡೆದಾಡುವ ದೇವರು ಎನ್ನುತ್ತಾರೆ.

ನಮ್ಮ ರಾಜ್ಯದಲ್ಲಿರುವ ಏಷ್ಯಾದಲ್ಲೇ 2 ನೇ ದೊಡ್ಡ ಏಕಶಿಲಾ ಬೆಟ್ಟ ನೋಡಿದ್ದೀರಾ? ನಮ್ಮ ರಾಜ್ಯದಲ್ಲಿರುವ ಏಷ್ಯಾದಲ್ಲೇ 2 ನೇ ದೊಡ್ಡ ಏಕಶಿಲಾ ಬೆಟ್ಟ ನೋಡಿದ್ದೀರಾ?

8000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

8000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

8000 ವಿದ್ಯಾರ್ಥಿಗಳಿಗೆ ಬೋರ್ಡಿಂಗ್, ಶಿಕ್ಷಣ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿರುವುದು ತುಮಕೂರಿನ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ. ಆಧ್ಯಾತ್ಮಿಕತೆಯ ನಂಬಿಕೆ ಇರುವ ಜನರಿಗೆ ಈ ಸ್ಥಳವು ಭೇಟಿ ನೀಡಲೇಬೆಕಾದಂತಹ ಒಂದು ತಾಣವಾಗಿದೆ. ಮಠವು ಅಂಧ ಮಕ್ಕಳ ಶಾಲೆಯನ್ನು ಸಹ ನಡೆಸುತ್ತಿದೆ. ಅಲ್ಲಿ ಸುಮಾರು 100 ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಸಿದ್ಧಗಂಗಾ ತಾಂತ್ರಿಕ ವಿಶ್ವವಿದ್ಯಾನಿಲಯವೂ ಇದೆ. ಇಂಜಿನಿಯರಿಂಗ್ ಕಾಲೇಜು, ಸಿದ್ಧಗಂಗಾ ವುಮೆನ್ಸ್ ಕಾಲೇಜ್, ಲಾ ಕಾಲೇಜು ಕೂಡಾ ಇದೆ.

20 ರೂ. ನೀಡಿದ್ರೆ ಸಂದರ್ಶಕರಿಗೂ ಆಶ್ರಯ

20 ರೂ. ನೀಡಿದ್ರೆ ಸಂದರ್ಶಕರಿಗೂ ಆಶ್ರಯ

ದಿನನಿತ್ಯದ ಸಂದರ್ಶಕರಿಗೆ ಆಶ್ರಮವು ಪ್ರತಿ ರಾತ್ರಿಗೆ 20 ರೂಪಾಯಿಗಳ ಬಾಡಿಗೆಗೆ ರಾತ್ರಿ ಕಳೆಯಲು ಸರಳವಾದ ಆಶ್ರಯವನ್ನು ಒದಗಿಸುತ್ತದೆ. ಬೆಟ್ಟದ ಮೇಲ್ಭಾಗದಿಂದ ಆಶ್ರಮದ ಸುಂದರ ನೋಟ ಮತ್ತು ಸೂರ್ಯಾಸ್ತವು ಯಾರ ಗಮನವನ್ನಾದರೂ ಸೆಳೆಯದೇ ಇರಲಾರದು.

 ಪ್ರತಿನಿತ್ಯ ಭಕ್ತರ ಭೇಟಿಗೆ ಅವಕಾಶ

ಪ್ರತಿನಿತ್ಯ ಭಕ್ತರ ಭೇಟಿಗೆ ಅವಕಾಶ

PC: KNM

ಪ್ರತಿನಿತ್ಯ ಶಿವಕುಮಾರ ಸ್ವಾಮೀಜಿಯವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯಲು ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಬೆಳಗ್ಗೆ ಸಂಜೆ ಎಂಬಂತೆ ಭಕ್ತರ ಭೇಟಿಗಾಗಿ ಸಯವನ್ನು ಮೀಸಲಿಡಲಾಗಿದೆ.

ಯಾವುದೇ ರೆಸ್ಟೋರೆಂಟ್ ಸಿಗೋದಿಲ್ಲ

ಯಾವುದೇ ರೆಸ್ಟೋರೆಂಟ್ ಸಿಗೋದಿಲ್ಲ

ಈ ಆಶ್ರಮದ ಸುಮಾರು 2 ಕಿ.ಮೀ ವರೆಗೆ ನಿಮಗೆ ಯಾವುದೇ ರೆಸ್ಟೋರೆಂಟ್ ಅಥವಾ ಹೋಟೆಲ್ ಸಿಗೋದಿಲ್ಲ. ಮಠದ ವತಿಯಿಂದ ಭೋಜನ ವ್ಯವಸ್ಥೆ ಇರುತ್ತದೆ . ಇಲ್ಲಿಗೆ ಬರುವ ಪ್ರತಿಯೊಬ್ಬರು ಆಶ್ರಮದಲ್ಲಿ ಭೋಜನವನ್ನು ಸ್ವೀಕರಿಸಿ ತೆರಳುತ್ತಾರೆ.

ಇಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ, ಇಂಟರ್ನೆಟ್ ಗೊತ್ತೇ ಇಲ್ಲ, 4,440 ಮೀ ಎತ್ತರದಲ್ಲಿದೆ ಒಂದು ಪೋಸ್ಟ್ ಆಫೀಸ್ಇಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ, ಇಂಟರ್ನೆಟ್ ಗೊತ್ತೇ ಇಲ್ಲ, 4,440 ಮೀ ಎತ್ತರದಲ್ಲಿದೆ ಒಂದು ಪೋಸ್ಟ್ ಆಫೀಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X