
ಈ ಋತುವಿನಲ್ಲಿ ಅಷ್ಟಮುಡಿಯ ಶಾಂತಿಯುತವಾದ ಪರಿಸರದಲ್ಲಿ ನಿಮ್ಮ ಮನಸ್ಸು ದೇಹ ಮತ್ತು ಆತ್ಮವನ್ನು ಏಕೆ ವಿಶ್ರಾಂತಿಗೊಳಿಸಬಾರದು ? ಭಾರತದ ಅತ್ಯಂತ ಹೆಚ್ಚಿನ ಭೇಟಿಕೊಡುವ ಹಿನ್ನೀರಿನ ನೆಲೆಗಳಲ್ಲಿ ಒಂದಾಗಿದ್ದು, ಅಷ್ಟಮುಡಿ ಸರೋವರವು ನಿವೃತ್ತಿ ಜೀವನವನ್ನು ನಿರಾಳವಾಗಿ ಕಳೆಯಲು ಮತ್ತು ದೈನಂದಿನ ನಿರಂತರ ಜೀವನದಿಂದ ತಪ್ಪಿಸಿಕೊಂಡು ವಿಶ್ರಾಂತಿ ಬಯಸುವವರಿಗೆ ಅಷ್ಟಮುಡಿ ಸರೋವರವು ಎರಡನೇ ನಿವಾಸ ಸ್ಥಾನವೆನ್ನುವುದರಲ್ಲಿ ಸಂಶಯವಿಲ್ಲ.
ಭಾರತದ ಅತ್ಯಂತ ಸುಂದರ ರಾಜ್ಯಗಳಲ್ಲಿ ಒಂದೆನಿಸಿದ ಕೇರಳವು ಅನೇಕ ಅದ್ಬುತಗಳಿಂದ ಗುರುತಿಸಲ್ಪಟ್ಟಿದೆ. ಅಲ್ಲದೆ ಇದನ್ನು ದೇವರ ಸ್ವಂತ ನಾಡೆಂದು ಕೂಡಾ ಹೆಸರಿಸಲಾಗುತ್ತದೆ. ಇಲ್ಲಿಯ ಸುಂದರ ಪ್ರಕೃತಿಯ ಮಧ್ಯೆ ಇರುವ ಹಿನ್ನೀರಿನ ನೆಲೆಗಳಿಂದಾಗಿ ಕೇರಳವು ಇಲ್ಲಿಗೆ ಭೇಟಿ ಕೊಡುವ ಸಂದರ್ಶಕರನ್ನು ಅಚ್ಚರಿಗೊಳಿಸುವಲ್ಲಿ ಎಂದಿಗೂ ಹಿಂದೆ ಉಳಿದಿಲ್ಲ. ಅಷ್ಟಮುಡಿ ಸರೋವರವು ಕೇರಳದ ಇಂತಹ ಅದ್ಬುತ ಹಾಗೂ ನಂಬಲಸಾಧ್ಯವಾದ ಸೌಂದರ್ಯವಾಗಿದ್ದು ಹಿಂದಿನ ಕಾಲದಿಂದಲೂ ಇದು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಈ ಭವ್ಯವಾದ ಸರೋವರದ ಮುಖ್ಯ ವಿಶೇಷತೆಯೆಂದರೆ ಇದರ ಮಾತಿಲ್ಲದ ಮತ್ತು ಮನ ತಣಿಸುವ ಮೋಡಿಯಲ್ಲಿದೆ, ಇದರ ಸೌಂದರ್ಯತೆಯು ವರ್ಷವಿಡೀ ಹೆಚ್ಚುತ್ತಾ ಹೋಗುತ್ತದೆ. ದೇವರ ಸ್ವಂತ ನೆಲೆಯಲ್ಲಿರುವ ಹಿನ್ನೀರಿನ ಅಷ್ಟಮುಡಿ ಸರೋವರದ ಬಗ್ಗೆ ತಿಳಿಯುವುದು ಮತ್ತು ಇಲ್ಲಿಗೆ ಪ್ರವಾಸಕ್ಕೆ ಯೋಜಿಸಿದರೆ ಹೇಗಿರಬಹುದು?

ಅಷ್ಟಮುಡಿ ಸರೋವರದ ಬಗ್ಗೆ ಸ್ವಲ್ಪ ತಿಳಿಯೋಣ
PC- Arunvrparavur
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಶಾಂತಿಯುತವಾಗಿ ಪ್ರಚಲಿತದಲ್ಲಿರುವ ಅಷ್ಟಮುಡಿ ಸರೋವರವು ಭಾರತದ ಅತಿ ಹೆಚ್ಚು ಭೇಟಿ ನೀಡುವ ಹಿನ್ನೀರುಗಳಲ್ಲಿ ಒಂದಾಗಿದೆ. ಇದು ಕಲ್ಲಡ ನದಿಯ ಅಂತಿಮ ತಾಣವಾಗಿದೆ. ಅದರ ನೀರಿನ ಅಡಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ನೂರಾರು ಜಾತಿಯ ಸಸ್ಯಗಳು ಮತ್ತು ನೀರಿನಲ್ಲಿರುವ ಪ್ರಾಣಿಗಳನ್ನು ಗಣನೆಗೆ ತೆಗೆದುಕೊಂಡರೆ ಇದು ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಸರೋವರಗಳಲ್ಲಿ ಒಂದಾಗಿದೆ,
ಇಂದು, ಪ್ರತೀ ವರ್ಷ ಅಸಂಖ್ಯಾತ ಪ್ರವಾಸಿಗರು ನಗರದಲ್ಲಿ ಎಲ್ಲೆಲ್ಲೂ ಹರಡಿರುವ ಅದ್ಬುತ ಸೌಂದರ್ಯತೆಯನ್ನು ನೋಡಲು ಭೇಟಿ ಕೊಡುವುದರಿಂದ ಅಷ್ಟಮುಡಿ ಸರೋವರವು ಒಂದು ವಾಣಿಜ್ಯ ಕೇಂದ್ರವೆನಿಸಿದೆ . ಈ ಸರೋವರದ ಇತಿಹಾಸದ ಬಗ್ಗೆ ತಿಳಿದಿಲ್ಲವಾದರೂ ಐಬನ್ ಬಟೂಟಾನ ಬರವಣಿಗೆಯಲ್ಲಿ ಈ ಸರೋವರದ ಉಲ್ಲೇಖವಿದೆ. ಅಷ್ಟಮುಡಿ ಎಂಬ ಹೆಸರನ್ನು ಈ ಸರೋವರದಲ್ಲಿ ರಚನೆಯಾದ ಎಂಟು ವಿಭಿನ್ನ ಶಾಖೆಗಳನ್ನು ಗಮನದಲ್ಲಿಟ್ಟುಕೊಂಡು ಇಡಲಾಗಿದೆ.

ಅಷ್ಟಮುಡಿ ಸರೋವರದಲ್ಲಿ ಮಾಡಬಹುದಾದ ವಿಷಯಗಳು
PC- P.K.Niyogi
ಅಷ್ಟಮುಡಿ ಸರೋವರವನ್ನು ಸಮೀಪಿಸುತ್ತಿದ್ದಂತೆಯೇ ಒಂದು ಅದ್ಬುತವಾದ ಸೆಳೆವು ನಿಮ್ಮ ಅನುಭವಕ್ಕೆ ಬರುವುದು. ಈ ಸರೋವರದ ವ್ಯಾಪಕ ವಿಸ್ತಾರ ಮತ್ತು ಅವುಗಳ ಮೇಲೆ ತೇಲುತ್ತಿರುವಅನೇಕ ಹೌಸ್ ಬೋಟ್ ಗಳು ನಿಮ್ಮನ್ನು ಅಚ್ಚರಿಗೊಳಿಸುತ್ತವೆ ಅಲ್ಲದೆ ಪಕ್ಷಿಗಳು ತಮ್ಮ ಮಧುರವಾದ ಧ್ವನಿಯಿಂದ ಕಲರವ ನಡೆಸುವುದು ಸುತ್ತ ಮುತ್ತಲಿಂದಲೂ ಕೇಳಿ ಬರುವ ಜೊತೆಗೆ ನಿಮ್ಮನ್ನು ಪ್ರಕೃತಿಯ ಸುಂದರವಾದ ಮಡಿಲಲ್ಲಿ ನಿಮ್ಮನ್ನು ಕಳೆದುಹೋಗುವಂತೆ ಮಾಡುತ್ತದೆ. ಅಷ್ಟಮುಡಿ ಸರೋವರದಲ್ಲಿ ಮತ್ತು ಇಲ್ಲಿಯ ಸುತ್ತಮುತ್ತಲಿನಲ್ಲಿ ನೀವು ಮಾಡಬಹುದಾದ ಕೆಲವು ವಿಷಯಗಳನ್ನು ಕೊಡಲಾಗಿದೆ.

ಹೌಸ್ ಬೋಟ್ ವಿಹಾರ
PC- Raviz Hotels
ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡಿ ಅಷ್ಟಮುಡಿ ಸರೋವರದ ಹಿನ್ನೀರಿನಲ್ಲಿ ತೇಲುತ್ತಿರುವ ಹೌಸ್ ಬೋಟ್ ನಲ್ಲಿ ವಿಹಾರ ಮಾಡುವ ಅನುಭವನ್ನು ಅನುಭವಿಸದೇ ಇದ್ದರೆ ಇಲ್ಲಿಯ ಪ್ರವಾಸವೇ ಅಪೂರ್ಣವೆನ್ನಬಹುದು. ಅಷ್ಟಮುಡಿ ಸರೋವರವು ತನ್ನ ಹೌಸ್ ಬೋಟ್ ಮತ್ತು ಇಲ್ಲಿಯ ರೆಸಾರ್ಟ್ ಮೂಲಕ ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಜೀವಮಾನದ ಸುಂದರವಾದ ಅನುಭವನ್ನು ಕೊಡುವ ಅಷ್ಟಮುಡಿಯ ಶಾಂತಿಯುತವಾದ ಹಿನ್ನೀರಿನ ಮೇಲೆ ಚಲಿಸುವ ಅವಕಾಶವನ್ನು ತಪ್ಪಿಸಲು ಹೇಗೆ ಸಾಧ್ಯ.

ಮೀನುಗಾರಿಕೆ
PC- Soman
ಮೀನುಗಾರಿಕೆ ಮಾಡುವುದು ಇಲ್ಲಿಯ ಇನ್ನೊಂದು ಚಟುವಟಿಕೆಯಾಗಿದೆ ಅಷ್ಟಮುಡು ಸರೋವರದ ಶ್ರೀಮಂತ ನೀರಿನಲ್ಲಿ ಮೀನುಗಾರಿಕೆ ಮಾಡಬಹುದು. ಸರೋವರದ ಹತ್ತಿರ ಸುಮ್ಮನೆ ಕುಳಿತು ಮೀನು ಹಿಡಿಯಬೇಕೆಂದು ಬಯಸುತ್ತಿರುವಿರಾ? ಹಾಗಿದ್ದಲ್ಲಿ ಅಷ್ಟಮುಡಿ ಸರೋವರಕ್ಕೆ ಭೇಟಿ ಕೊಡಿ ಮತ್ತು ಇಲ್ಲಿಯ ಮಂತ್ರಮುಗ್ದ ಸೌಂದರ್ಯತೆಯಲ್ಲಿ ನಿಮ್ಮನ್ನು ನೀವು ಕಳೆದುಕೊಳ್ಳಿ.

ಉಸಿರು ಬಿಗಿ ಹಿಡಿಯುವಂತಹ ದೃಶ್ಯಗಳನ್ನು ಸೆರೆಹಿಡಿಯಬಹುದು
PC- jay8085
ದೇವರ ಸ್ವಂತನಾಡಿನಿಂದ ತಮ್ಮ ಮನೆಗೆ ಕೆಲವು ದೀರ್ಘಕಾಲಿಕ ನೆನಪುಗಳನ್ನು ತೆಗೆದುಕೊಂಡು ಹೋಗಲು ಯಾರು ಬಯಸುವುದಿಲ್ಲ? ಚಿತ್ರಸದೃಶ ಆಕಾಶದ ನೆರಳಿನಲ್ಲಿ ಹೊಳೆಯುವ ಹಿನ್ನೀರುಗಳು ಖಂಡಿತವಾಗಿಯೂ ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಇಂತಹ ನಯನ ಮನೋಹರ ದೃಶ್ಯಗಳನ್ನು ನಿಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯಿರಿ ಇದರಿಂದ ಈ ಅನುಭವವನ್ನು ಯಾವಾಗಲೂ ನಿಮ್ಮ ಜೊತೆ ಇರಿಸಿಕೊಳ್ಳಬಹುದಾಗಿದೆ.

ಅಷ್ಟ ಮುಡಿ ಸರೋವರಕ್ಕೆ ಭೇಟಿ ಕೊಡಲು ಸೂಕ್ತ ಸಮಯ
PC- Arunvrparavur
ಅಷ್ಟಮುಡಿ ಸರೋವರವು ಕೇರಳದ ಕೊಲ್ಲಂ ಜಿಲ್ಲೆಯಲ್ಲಿದ್ದು ಇದು ಉಷ್ಣವಲಯದ ಹವಾಗುಣವನ್ನು ಹೊಂದಿದೆ ಮತ್ತು ಮಾನ್ಸೂನ್ ಋತುವಿನಲ್ಲಿ ಇಲ್ಲಿ ಅತೀ ಹೆಚ್ಚಾಗಿ ಮಳೆ ಬೀಳುತ್ತದೆ. ಆದುದರಿಂದ ಈ ಸಮಯದಲ್ಲಿ ಅಷ್ಟಮುಡಿ ಸರೋವರಕ್ಕೆ ಭೇಟಿ ಕೊಡುವುದು ಸೂಕ್ತವಲ್ಲ.
ಅಷ್ಟಮುಡಿ ಸರೋವರದ ಹಿನ್ನೀರಿನಲ್ಲಿ ನೀವು ಆನಂದಿಸಬೇಕೆಂದು ಬಯಸುವಿರಾದಲ್ಲಿ ಮತ್ತು ಇಲ್ಲಿಯ ಅದ್ಬುತ ಸೌಂದರ್ಯತೆಯನ್ನು ಅನುಭವಿಸಬೇಕೆಂದಿರುವಿರಾದಲ್ಲಿ ಇಲ್ಲಿಗೆ ನವೆಂಬರ್ ತಿಂಗಳಿನ ಕೊನೆಯಿಂದ ಮಾರ್ಚ್ ತಿಂಗಳ ಕೊನೆಯವರೆಗೆ ಭೇಟಿ ಕೊಡಿ ಈ ಸಮಯದಲ್ಲಿ ಇಲ್ಲಿಯ ಹವಾಗುಣವು ತಂಪಾಗಿದ್ದು ಅನುಕೂಲಕರವಾಗಿರುತ್ತದೆ.

ಅಷ್ಟಮುಡಿ ಸರೋವರವನ್ನು ತಲುಪುವುದು ಹೇಗೆ
PC- Maps
ವಾಯುಮಾರ್ಗ : ನೀವು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ವಿಮಾನದ ಮೂಲಕ ಪ್ರಯಾಣಿಸಬಹುದು ನಂತರ ಅಲ್ಲಿಂದ ಬಸ್ಸು ಅಥವಾ ಕ್ಯಾಬ್ ಮೂಲಕ ಕೊಲ್ಲಮ್ ಗೆ ಹೋಗಬಹುದಾಗಿದೆ. ತಿರುವನಂತಪುರಂ ವಿಮಾನ ನಿಲ್ದಾಣವು ಕೊಲ್ಲಂ ನಿಂದ ಸುಮಾರು 60 ಕಿ.ಮೀ ಅಂತರದಲ್ಲಿದೆ.
ರೈಲು ಮಾರ್ಗ: ಹತ್ತಿರದ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗೆ ಕೊಲ್ಲಂನಿಂದ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಕೊಲ್ಲಂ ರೈಲು ನಿಲ್ದಾಣದಿಂದ ನೇರವಾಗಿ ರೈಲು ಹತ್ತಬಹುದು
ರಸ್ತೆಯ ಮೂಲಕ: ಅಷ್ಟಮುಡಿ ಸರೋವರವು ಪ್ರತಿ ನಗರ ಮತ್ತು ಪಟ್ಟಣಕ್ಕೆ ಉತ್ತಮ ಸಂಪರ್ಕವನ್ನು ಹೊಂದಿದೆ ಆದ್ದರಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.