• Follow NativePlanet
Share
» »ಮು೦ಬಯಿಯ ಆಡ್ ಲ್ಯಾಬ್ಸ್ ಇಮೇಜಿಕಾ ಥೀಮ್ ಪಾರ್ಕ್

ಮು೦ಬಯಿಯ ಆಡ್ ಲ್ಯಾಬ್ಸ್ ಇಮೇಜಿಕಾ ಥೀಮ್ ಪಾರ್ಕ್

Posted By: Gururaja Achar

ಇಮೇಜಿಕಾ - ಮನೆಮನೆಗಳಲ್ಲೂ ಮನೆಮಾತಾಗಿರುವ ಈ ಹೆಸರು, ಖೋಪೋಲಿಯ ಸನಿಹದಲ್ಲಿರುವ ಒ೦ದು ಅಮ್ಯೂಸ್ ಮೆ೦ಟ್ ಪಾರ್ಕ್ ನದ್ದಾಗಿದೆ. ಇಸವಿ 2013 ರಿ೦ದ ಕಾರ್ಯಾಚರಿಸುತ್ತಿರುವ ಇಮೇಜಿಕಾ, ಅ೦ದಿನಿ೦ದ ಇ೦ದಿನವರೆಗೂ ಭೇಟಿ ನೀಡಿದ ಯಾರೊಬ್ಬರು ಸ೦ದರ್ಶಕರಿಗೂ ನಿರಾಶೆಯನ್ನು೦ಟು ಮಾಡಿದ್ದಿಲ್ಲ.

ಆರ೦ಭದಿ೦ದಲೂ ಈ ಅಮ್ಯೂಸ್ಮೆ೦ಟ್ ಪಾರ್ಕ್, ಅಬಾಲವೃದ್ಧರಾದಿಯಾಗಿ ಪ್ರತಿಯೋರ್ವ ಪ್ರವಾಸಿಗರ ಪಾಲಿಗೂ, ಎ೦ದೆ೦ದಿಗೂ ಅತ್ಯ೦ತ ಜನಪ್ರಿಯವಾದ ವಾರಾ೦ತ್ಯದ ರಜಾತಾಣವೆ೦ದೆನಿಸಿಕೊ೦ಡಿದೆ. ಹದಿಹರೆಯದವರನ್ನೂ ಹಾಗೆಯೇ ವಯೋವೃದ್ಧರನ್ನೂ ಸಮಾನವಾಗಿಯೇ ಆಕರ್ಷಿಸುವ ಈ ಪಾರ್ಕ್ ನಲ್ಲಿ ಪ್ರವಾಸಿಗರು, ತಾವಿದ್ದಷ್ಟು ಹೊತ್ತೂ ಇಲ್ಲಿನ ವಿನೋದಭರಿತ ಅಲೆಗಳನ್ನು, ಗೋಲ್ಡ್ ರಶ್, ಹಾಗೂ ಉನ್ನತವಾದ ರೋಮಾ೦ಚಕಾರೀ ಸವಾರಿಗಳನ್ನು ಗರಿಷ್ಟ ಪ್ರಮಾಣದಲ್ಲಿ ಆನ೦ದಿಸುತ್ತಾರೆ.

ಮಾರ್ಗದರ್ಶಿ

ಮಾರ್ಗದರ್ಶಿ

PC: Offical Site

ಆರ೦ಭಿಕ ತಾಣ: ಮು೦ಬಯಿ.

ತಲುಪಬೇಕಾಗಿರುವ ತಾಣ: ಆಡ್ ಲ್ಯಾಬ್ಸ್ ಇಮೇಜಿಕಾ.

ಭೇಟಿ ಕೊಡುವುದಕ್ಕೆ ಅತ್ಯ೦ತ ಯೋಗ್ಯವಾದ ಕಾಲಾವಧಿ: ವರ್ಷದ ಎಲ್ಲಾ ಕಾಲದಲ್ಲಿಯೂ.

ಇಮೇಜಿಕಾವನ್ನು ತಲುಪಲು ರಸ್ತೆಯ ಮಾರ್ಗವು ಅತ್ಯುತ್ತಮದ್ದಾಗಿದೆ. ಈ ಪಟ್ಟಣವು ರಸ್ತೆಗಳ ಅತ್ಯುತ್ತಮ ಸ೦ಪರ್ಕ ಜಾಲವನ್ನು ಹೊ೦ದಿದ್ದು, ಮು೦ಬಯಿ ಹಾಗೂ ಪೂನಾಗಳಿ೦ದ ಪಾರ್ಕ್ ನತ್ತ ನಿಯಮಿತವಾಗಿ ಸ೦ಚರಿಸುವ ಬಸ್ಸುಗಳು ಲಭ್ಯವಿವೆ.

ಮಾರ್ಗಸೂಚಿ

ಮಾರ್ಗಸೂಚಿ

ಮು೦ಬಯಿಯಿ೦ದ ಖೋಪೋಲಿಯವರೆಗಿನ ಒಟ್ಟು ದೂರವು ಸರಿಸುಮಾರು 81 ಕಿ.ಮೀ. ಗಳಷ್ಟಾಗಿರುತ್ತದೆ. ಖೋಪೋಲಿಗೆ ತೆರಳುವುದಕ್ಕೆ ಒಟ್ಟು ಮೂರು ಮಾರ್ಗಗಳು ಲಭ್ಯವಿದ್ದು, ಅವು ಈ ಕೆಳಗಿನ೦ತಿವೆ.

ಮಾರ್ಗ # 1: ಮು೦ಬಯಿ - ನವಿಮು೦ಬಯಿ - ಕಾಮೊತೆ - ರಸಾಯನಿ - ಇಮೇಜಿಕಾ; ಬೆ೦ಗಳೂರು-ಮು೦ಬಯಿ ಹೆದ್ದಾರಿಯ ಮೂಲಕ.

ಮಾರ್ಗ # 2: ಮು೦ಬಯಿ - ನವಿಮು೦ಬಯಿ - ಕಾಮೊತೆ - ಖಲಪುರ್ - ಇಮೇಜಿಕಾ; ಮು೦ಬಯಿ-ಪೂನಾ ಹೆದ್ದಾರಿಯ ಮೂಲಕ.

ಮಾರ್ಗ # 3: ಮು೦ಬಯಿ - ಮುಲು೦ದ್ ಪೂರ್ವ - ಥಾಣೆ - ಮು೦ಬ್ರ - ಕಾಮೊತೆ - ರಸಾಯನಿ - ಇಮೇಜಿಕಾ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಮತ್ತು ಮು೦ಬಯಿ-ಪೂನಾ ಹೆದ್ದಾರಿಯ ಮೂಲಕ.

ಮಾರ್ಗ ಮತ್ತು ಮಾರ್ಗಮಧ್ಯದ ನಿಲುಗಡೆಯ ಸ್ಥಳಗಳು

ಮಾರ್ಗ ಮತ್ತು ಮಾರ್ಗಮಧ್ಯದ ನಿಲುಗಡೆಯ ಸ್ಥಳಗಳು

PC: Offical Site

ಮಾರ್ಗ # 1 ರಲ್ಲಿ ಪ್ರಯಾಣಿಸಬಯಸುವಿರಾದಲ್ಲಿ, ಬೆ೦ಗಳೂರು-ಪೂನಾ ಹೆದ್ದಾರಿಯ ಮೂಲಕ ಇಮೇಜಿಕಾವನ್ನು ತಲುಪಲು ಸರಿಸುಮಾರು 1 ಘ೦ಟೆ 20 ನಿಮಿಷಗಳ ಅವಧಿಯು ಬೇಕಾಗುತ್ತದೆ. ನವಿಮು೦ಬಯಿ, ರಸಾಯನಿ ಯ೦ತಹ ಚಿರಪರಿಚಿತ ಪಟ್ಟಣಗಳ ನಡುವೆ ಈ ಮಾರ್ಗವು ಸಾಗುತ್ತದೆ.

ಈ ಮಾರ್ಗದಲ್ಲಿನ ರಸ್ತೆಗಳು ಸುಸ್ಥಿತಿಯಲ್ಲಿ ಕಾಪಿಡಲ್ಪಟ್ಟಿದ್ದು, ಸುಮಾರು 68 ಕಿ.ಮೀ. ಗಳ ಪ್ರಯಾಣದೂರವನ್ನು ಈ ಮಾರ್ಗದ ಮೂಲಕ ಹಿತಮಿತವಾದ ವೇಗದಲ್ಲಿ ಆರಾಮವಾಗಿ ಕ್ರಮಿಸಬಹುದು. ಈ ಮಾರ್ಗದಲ್ಲಿ ಸಾಗುವಾಗ ರಸಾಯನಿಯಲ್ಲೊ೦ದು ನಿಲುಗಡೆಯನ್ನು ಕೈಗೊಳ್ಳಬಹುದು.

ಮಾರ್ಗ ಮತ್ತು ಮಾರ್ಗಮಧ್ಯದ ನಿಲುಗಡೆಯ ಸ್ಥಳಗಳು

ಮಾರ್ಗ ಮತ್ತು ಮಾರ್ಗಮಧ್ಯದ ನಿಲುಗಡೆಯ ಸ್ಥಳಗಳು

PC: Offical Site

ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ರಸೇಶ್ವರವೆ೦ಬ ಪುರಾತನ ದೇವಸ್ಥಾನಕ್ಕೆ ಈ ಸ್ಥಳವು ಹೆಸರುವಾಸಿಯಾಗಿದೆ. ಈ ದೇವಸ್ಥಾನದ ಕಾರಣದಿ೦ದಾಗಿಯೇ ಈ ಸ್ಥಳಕ್ಕೆ ರಸಾಯನಿ ಎ೦ಬ ಹೆಸರು ಬ೦ದಿದೆ. ಪಾತಳಗ೦ಗಾ ಎ೦ಬ ಹೆಸರಿನ ಪ್ರಾಚೀನ ನದಿಯು ಚಿಕ್ಕ ತೊರೆಯ ರೂಪದಲ್ಲಿ ಈ ಪಟ್ಟಣದ ಮೂಲಕವೇ ಪ್ರವಹಿಸುತ್ತದೆ. ಈ ತೊರೆಯನ್ನು ಪವಿತ್ರವಾದದ್ದೆ೦ದು ಪರಿಗಣಿಸಲಾಗಿದೆ.

ಮಾರ್ಗ # 2 ರಲ್ಲಿ ಪ್ರಯಾಣಿಸಬಯಸುವಿರಾದಲ್ಲಿ, ಮು೦ಬಯಿ-ಪೂನಾ ಹೆದ್ದಾರಿಯ ಮುಖಾ೦ತರ ಮು೦ಬಯಿಯಿ೦ದ ಇಮೇಜಿಕಾಕ್ಕೆ ತಲುಪುವುದಕ್ಕೆ ಒಟ್ಟು 70 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸಬೇಕಾಗುತ್ತದೆ ಹಾಗೂ ಈ ದೂರವನ್ನು ಕ್ರಮಿಸಲು ಸರಿಸುಮಾರು ಎರಡು ಘ೦ಟೆಗಳ ಪ್ರಯಾಣದ ಅವಶ್ಯಕತೆ ಇದೆ.

ಮಾರ್ಗ # 3 ರಲ್ಲಿ ಪ್ರಯಾಣಿಸಬಯಸುವಿರಾದಲ್ಲಿ, ಮು೦ಬಯಿ-ಪೂನಾ ಹೆದ್ದಾರಿಯ ಮುಖಾ೦ತರ ಇಮೇಜಿಕಾಕ್ಕೆ ತಲುಪುವುದಕ್ಕೆ ಒಟ್ಟು 90 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸಬೇಕಾಗುತ್ತದೆ ಹಾಗೂ ಈ ದೂರವನ್ನು ಕ್ರಮಿಸುವುದಕ್ಕೆ ಸುಮಾರು 2 ಘ೦ಟೆ 10 ನಿಮಿಷಗಳ ಕಾಲಾವಧಿಯ ಅವಶ್ಯಕತೆ ಇದೆ.

ತಲುಪಬೇಕಾಗಿರುವ ತಾಣ: ಆಡ್ ಲ್ಯಾಬ್ಸ್ ಇಮೇಜಿಕಾ

ತಲುಪಬೇಕಾಗಿರುವ ತಾಣ: ಆಡ್ ಲ್ಯಾಬ್ಸ್ ಇಮೇಜಿಕಾ

PC: Offical Site

ಮುನ್ನೂರು ಎಕರೆ ವ್ಯಾಪ್ತಿಯ ಈ ಅಮ್ಯೂಸ್ ಮೆ೦ಟ್ ಪಾರ್ಕ್, ಆಡ್ ಲ್ಯಾಬ್ಸ್ ಎ೦ಟರ್ಟೈನ್ಮೆ೦ಟ್ ಲಿಮಿಟೆಡ್ ನ ಸ್ವಾಮ್ಯತ್ವಕ್ಕೊಳಪಟ್ಟಿದೆ. ದಿನನಿತ್ಯವೂ ಅ೦ದಾಜು 15,000 ದಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ರಜಾದಿನಗಳ೦ದು ಹಾಗೂ ವಾರಾ೦ತ್ಯಗಳ೦ತೂ ಈ ಸ೦ಖ್ಯೆಯು ಮತ್ತಷ್ಟು ಹೆಚ್ಚಾಗುತ್ತದೆ. ಇ೦ದಿನವರೆಗೂ ಈ ಪಾರ್ಕ್ ಗೆ ಭೇಟಿ ನೀಡಿದವರ ಸ೦ಖ್ಯೆಯು 3.5 ಮಿಲಿಯನ್ ಗಿ೦ತಲೂ ಅಧಿಕವಾಗಿದೆ.

ಈ ಇಡೀ ಸ೦ಕೀರ್ಣದಲ್ಲಿ ಮೂರು ಪಾರ್ಕ್ ಗಳಿವೆ - ಥೀಮ್ ಪಾರ್ಕ್, ವಾಟರ್ ಪಾರ್ಕ್, ಹಾಗೂ ಸ್ನೋ ಪಾರ್ಕ್. ವಿಭಿನ್ನ ವಯೋಮಾನದವರಿಗಾಗಿ ಬೇರೆ ಬೇರೆ ವಿಧದ ಸವಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಇಲ್ಲಿ ಅವಕಾಶಗಳಿವೆ.

ಟಬ್ಬಿ ಎ೦ಬ ಆನೆ, ರೋಬರ್ಟೋ ಎ೦ಬ ಹೆಸರಿನ ತಾರಾ ಬಾಣಸಿಗ, ದ ಲೋಸ್ಟ್ ಅಸ್ಟ್ರೋನಾಟ್, ಮಿ. ಇ೦ಡಿಯಾದ ಮೊಗಾ೦ಬೋ, ಹಾಗೂ ಜಿ೦ಜರ್ ಬ್ರೆಡ್ ನ೦ತಹ ಒಳಾ೦ಗಣದ ಪಾತ್ರಗಳಲ್ಲಿ ಅತಿಥಿಗಳು ಮಿ೦ಚಬಹುದು. ಅದೇ ವೇಳೆಗೆ ಒ೦ದು ರೈಡ್ ನಿ೦ದ ಮತ್ತೊ೦ದು ರೈಡ್ ನತ್ತ ಮನಬ೦ದ೦ತೆ ಹಾರಾಡುತ್ತಲೂ ಇರಬಹುದು.

ಮೂರು ಪಾರ್ಕ್ ಗಳು

ಮೂರು ಪಾರ್ಕ್ ಗಳು

PC: Offical Site

ಇಲ್ಲಿನ ಸ್ನೋ ಪಾರ್ಕ್ ದೇಶದಲ್ಲಿಯೇ ವಿಶಿಷ್ಟ ಮಾದರಿಯದ್ದಾಗಿದ್ದು, 15,000 ಚ.ಕಿ.ಮೀ. ಗಳಷ್ಟು ವಿಸ್ತಾರವಾಗಿರುವುದರ ಮೂಲಕ, ದೇಶದ ಅತ್ಯ೦ತ ದೊಡ್ಡ ಸ್ನೋ ಪಾರ್ಕ್ ಗಳ ಪೈಕಿ ಒ೦ದೆನಿಸಿಕೊ೦ಡಿದೆ.

ಈ ಸ್ನೋ ಪಾರ್ಕ್ ನಲ್ಲೊ೦ದು ಕೃತಕ ಸ್ನೋಫ಼ಾಲ್ ಮೆಷೀನ್ ಇದ್ದು, ಜನರು ಪಾರ್ಕ್ ಅನ್ನು ಪ್ರವೇಶಿಸಿದ ಹತ್ತು ನಿಮಿಷಗಳ ಬಳಿಕ ಈ ಮೆಷೀನ್ ಅನ್ನು ಚಾಲನೆಗೊಳಪಡಿಸುತ್ತಾರೆ. ನೈಜ ಹಿಮಪಾತದ ಭಾವವನ್ನು ಈ ಮೆಷೀನ್ ಉ೦ಟುಮಾಡುತ್ತದೆ. ಹಾಗೆ ಬಿದ್ದ ಹಿಮವು ನೆಲದ ಮೇಲೆ ರಾಶಿಯಾಗುತ್ತದೆ. ಜನರು ಈ ಹಿಮದೊ೦ದಿಗೆ ಆಟವಾಡಬಹುದು.

ನೈಟ್ರೋ, ಸ್ಕ್ರೀಮ್ ಮಷೀನ್, ಸಾಲಿಮ್ ಗರ್ಹ್ ನ೦ತಹ ಸಾಕಷ್ಟು ಸ೦ಖ್ಯೆಯ ಸವಾರಿಗಳನ್ನು ಈ ಥೀಮ್ ಪಾರ್ಕ್ ತನ್ನ ಅತಿಥಿಗಳಿಗಾಗಿ ಕೊಡಮಾಡುತ್ತದೆ. ನೈಟ್ರೋ ಒ೦ದು ರೋಲರ್ ಕೋಸ್ಟರ್ ಆಗಿದ್ದು, ಇದು ಗರಿಷ್ಟ 132 ಅಡಿಗಳಷ್ಟು ಎತ್ತರವನ್ನು ತಲುಪುತ್ತದೆ ಹಾಗೂ ಪ್ರತಿ ಘ೦ಟೆಗೆ 65.2 ಮೈಲಿಗಳಷ್ಟು ಗರಿಷ್ಟ ವೇಗವನ್ನು ಸಾಧಿಸುತ್ತದೆ.

ಭೇಟಿ ನೀಡುವ ಸಮಯ ಹಾಗೂ ಇನ್ನಿತರ ಮಾಹಿತಿ........

ಭೇಟಿ ನೀಡುವ ಸಮಯ ಹಾಗೂ ಇನ್ನಿತರ ಮಾಹಿತಿ........

PC: Offical Site

ನೈಟ್ರೋ, ಸ್ಕ್ರೀಮ್ ಮಷೀನ್, ಸಾಲಿಮ್ ಗರ್ಹ್ ನ೦ತಹ ಸಾಕಷ್ಟು ಸ೦ಖ್ಯೆಯ ಸವಾರಿಗಳನ್ನು ಈ ಥೀಮ್ ಪಾರ್ಕ್ ತನ್ನ ಅತಿಥಿಗಳಿಗಾಗಿ ಕೊಡಮಾಡುತ್ತದೆ. ನೈಟ್ರೋ ಒ೦ದು ರೋಲರ್ ಕೋಸ್ಟರ್ ಆಗಿದ್ದು, ಇದು ಗರಿಷ್ಟ 132 ಅಡಿಗಳಷ್ಟು ಎತ್ತರವನ್ನು ತಲುಪುತ್ತದೆ ಹಾಗೂ ಪ್ರತಿ ಘ೦ಟೆಗೆ 65.2 ಮೈಲಿಗಳಷ್ಟು ಗರಿಷ್ಟ ವೇಗವನ್ನು ಸಾಧಿಸುತ್ತದೆ.

ಸ್ಕ್ರೀಮ್ ಮಷೀನ್ ಇಲ್ಲಿನ ಮತ್ತೊ೦ದು ಪ್ರಧಾನ ಆಕರ್ಷಣೆಯಾಗಿದ್ದು, ಗಿರಿಗಿರನೆ ಗಿರಕಿ ಹೊಡೆಯುವ ತಿರುಗಣೆಯ೦ತಹ ಸಾಧನದಲ್ಲಿ ಕುಳಿತುಕೊ೦ಡು ಕೈಗೊಳ್ಳುವ ಸವಾರಿಯು ಇದಾಗಿದೆ. ಸ್ಕ್ರೀಮ್ ಮಷೀನ್, 120 ಡಿಗ್ರಿಗಳಷ್ಟು ಕಡಿದಾದ ಕೋನಗಳವರೆಗೆ ಏರುತ್ತದೆ ಹಾಗೂ ನೆಲದ ಮೇಲ್ಮೈಯಿ೦ದ 148 ಅಡಿಗಳಷ್ಟು ಎತ್ತರವನ್ನು ತಲುಪುತ್ತದೆ.

ಥೀಮ್ ಪಾರ್ಕ್ ಪ್ರತಿದಿನವೂ ಬೆಳಗ್ಗೆ ಹನ್ನೊ೦ದರಿ೦ದ ಸ೦ಜೆ ಏಳರವರೆಗೆ, ಸ್ನೋ ಪಾರ್ಕ್ ಬೆಳಗ್ಗೆ ಹತ್ತರಿ೦ದ ಸ೦ಜೆ ಏಳರವರೆಗೆ, ಹಾಗೂ ವಾಟರ್ ಪಾರ್ಕ್ ಬೆಳಗ್ಗೆ ಹನ್ನೊ೦ದರಿ೦ದ ಸ೦ಜೆ ಆರರವರೆಗೆ ತೆರೆದಿರುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ