Search
  • Follow NativePlanet
Share
» »ಸೂರ್ಯಕಿರಣವು ಈ ಪ್ರದೇಶವನ್ನು ಮುಟ್ಟುವ ಸಮಯದಲ್ಲಿ ವೈಕುಂಠವಾಗಿ ಮಾರ್ಪಟಾಗುತ್ತದೆಯಂತೆ....

ಸೂರ್ಯಕಿರಣವು ಈ ಪ್ರದೇಶವನ್ನು ಮುಟ್ಟುವ ಸಮಯದಲ್ಲಿ ವೈಕುಂಠವಾಗಿ ಮಾರ್ಪಟಾಗುತ್ತದೆಯಂತೆ....

ಆ ಸಮಯದಲ್ಲಿ ಆ ವಿಗ್ರಹವನ್ನು ದರ್ಶಿಸುವುದರಿಂದ ಶತ್ರುಗಳನ್ನು ಜಯಿಸುವ ಶಕ್ತಿ ಲಭ್ಯವಾಗುತ್ತದೆ ಎಂದು ಸ್ಥಳೀಯರು ನಂಬುತ್ತಾರೆ. ಇದರಿಂದಾಗಿ ಬಹಳಷ್ಟು ಮಂದಿ ಲಾಯರುಗಳು, ರಾಜಕೀಯ ನಾಯಕರು ಇಲ್ಲಿಗೆ ಆಗಮಿಸುತ್ತಾರೆ. ಈ ವಿಗ್ರಹವನ್ನು ಒಂದೇ ಬಾರಿ

ಯಾಗವನ್ನು ಸಮಯದಲ್ಲಿ ಬ್ರಹ್ಮ ಮಾಡಿದ ತಪ್ಪಿನಿಂದಾಗಿ ಇಬ್ಬರು ರಾಕ್ಷಸರನ್ನು ಜಯಯಿಸಿದ ಶ್ರೀ ಮಹಾವಿಷ್ಣುವು ಇಲ್ಲಿ ಆದಿಕೇಶವನಾಗಿ ನೆಲೆಸಿದ್ದಾನೆ. ಉಳಿದ ವಿಗ್ರಹಗಳನ್ನು ಹೊರತುಪಡಿಸಿ ಈ ಆದಿಕೇಶವ ಪೆರುಮಾಲ್ ವಿಗ್ರಹವು ವಿಭಿನ್ನವಾಗಿದೆ. ಒಟ್ಟು 16,008 ಸಲಾಗ್ರಾಮಗಳೊಂದಿಗೆ ಮಾಡಲಾದ ಈ ವಿಗ್ರಹಕ್ಕೆ ನಿತ್ಯವು ಅಭಿಷೇಕಗಳು ಮಾಡುವುದಿಲ್ಲ. ಮುಂದೆ ಗರ್ಭಗುಡಿಯಲ್ಲಿ ಯಾವುದೇ ಬೆಳಕಿನ ವ್ಯವಸ್ಥೆಯು ಇಲ್ಲ. ಕೇವಲ ದೀಪದೊಂದಿಗೆ ಮಾತ್ರ ವಿಗ್ರಹವನ್ನು ನೋಡಬೇಕು. ಸೂರ್ಯ ಕಿರಣಗಳು ಈ ವಿಗ್ರಹವನ್ನು ತಾಕುವ ಸಮಯದಲ್ಲಿ ಆ ಪ್ರದೇಶವು ವೈಕಂಠವಾಗಿ ಬದಲಾಗುತ್ತದೆ ಎಂದು ಪುರಾಣ ಕಥೆಯನ್ನು ವಿವರಿಸುತ್ತದೆ.

ಆ ಸಮಯದಲ್ಲಿ ಆ ವಿಗ್ರಹವನ್ನು ದರ್ಶಿಸುವುದರಿಂದ ಶತ್ರುಗಳನ್ನು ಜಯಿಸುವ ಶಕ್ತಿ ಲಭ್ಯವಾಗುತ್ತದೆ ಎಂದು ಸ್ಥಳೀಯರು ನಂಬುತ್ತಾರೆ. ಇದರಿಂದಾಗಿ ಬಹಳಷ್ಟು ಮಂದಿ ಲಾಯರುಗಳು, ರಾಜಕೀಯ ನಾಯಕರು ಇಲ್ಲಿಗೆ ಆಗಮಿಸುತ್ತಾರೆ. ಈ ವಿಗ್ರಹವನ್ನು ಒಂದೇ ಬಾರಿಗೆ ಒಟ್ಟು ನೋಡುವುದಕ್ಕೆ ಆಗುವುದಿಲ್ಲ ಬದಲಾಗಿ, ಮೂರು ದ್ವಾರಗಳ ಸುತ್ತಲೂ ಹೋಗಿ ಮೂರು ಭಾಗಗಳಾಗಿ ವಿಗ್ರಹವನ್ನು ನೋಡಬೇಕು.

1.ಕನ್ಯಾಕುಮಾರಿ

1.ಕನ್ಯಾಕುಮಾರಿ

PC:YOUTUBE

ತಮಿಳುನಾನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ತಿರುವಾತರ್ ಅಣ್ಣ ಚಿಕ್ಕ ಪಟ್ಟಣದಲ್ಲಿ ಈ ದೇವಸ್ಥಾನವಿದೆ. ಈ ದೇವಸ್ಥಾನವು ಪ್ರಸಿದ್ಧ ಪುಣ್ಯಕ್ಷೇತ್ರವು ನಾಗರ್ ಕೋಯಿಲ್ ಪಟ್ಟಣದಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿದೆ.

2.108 ಪುರಾತನ ವೈಷ್ಣವ ದೇವಸ್ಥಾನ

2.108 ಪುರಾತನ ವೈಷ್ಣವ ದೇವಸ್ಥಾನ

PC:YOUTUBE

ಪುರಾತನ ವೈಷ್ಣವ ದೇವಸ್ಥಾನಗಳಲ್ಲಿ ಈ ಆದಿಕೇಶವ ಪೆರುಮಾಲ್ ದೇವಸ್ಥಾನ ಕೂಡ ಒಂದಾಗಿದೆ. ಈ ದೇವಾಲಯವು ಸುತ್ತಲೂ ಅದ್ಭುತವಾದ ವೃಕ್ಷಗಳು, ಹಸಿರುವನ, ಜಲಪಾತಗಳಿಂದ ಕೂಡಿದೆ.

3. ಮೂರು ನದಿ ಸಂಗಮಿಸುವ

3. ಮೂರು ನದಿ ಸಂಗಮಿಸುವ

PC:YOUTUBE

ಮುಖ್ಯವಾಗಿ ಮೂರು ನದಿಗಳು ಸಂಗಮಿಸುವ ಪ್ರದೇಶದಲ್ಲಿರುವ ಈ ದೇವಾಲಯಕ್ಕೆ ಸಂಬಂಧಿಸಿದ ಪುರಾಣ ಕಥೆಗಳು ಕೂಡ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಪೂರ್ವದಲ್ಲಿ ಬ್ರಹ್ಮ ದೇವನು ಈ ತಿರುವತ್ತರ್ ಪ್ರದೇಶದಲ್ಲಿ ದೊಡ್ಡ ಯಾಗವನ್ನು ಮಾಡಬೇಕು ಎಂದು ಭಾವಿಸುತ್ತಾನೆ.

4.ಬ್ರಹ್ಮ ದೇವ ತಿಳಿಯದೇ ಮಾಡಿದ ತಪ್ಪಿಗೆ

4.ಬ್ರಹ್ಮ ದೇವ ತಿಳಿಯದೇ ಮಾಡಿದ ತಪ್ಪಿಗೆ

PC:YOUTUBE

ಯಾಗ ನಡೆಯುತ್ತಿರುವ ಸಮಯದಲ್ಲಿ ಬ್ರಹ್ಮ ದೇವ ತಿಳಿಯದೇ ಮಾಡಿದ ತಪ್ಪಿಗೆ ಕೇಶ, ಕೇಶಿ ಎಂಬ ಇಬ್ಬರು ರಾಕ್ಷಸರು ಆ ಯಾಗ ಕುಂಡನಿಂದ ಜನಿಸುತ್ತಾರೆ. ದಿನದಿಂದ ದಿನಕ್ಕೆ ತಮ್ಮ ಬಲವನ್ನು ಹೆಚ್ಚು ಮಾಡಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲ ಸ್ಥಳೀಯ ಜನರಿಗೆ ಹಾಗು ಋಷಿಗಳಿಗೂ ಕೂಡ ಅತ್ಯಂತ ಹಿಂಸೆಯನ್ನು ನೀಡುತ್ತಿರುತ್ತಾರೆ.

5.ವಿಷ್ಣುವಿಗೆ ಪ್ರಾರ್ಥನೆ

5.ವಿಷ್ಣುವಿಗೆ ಪ್ರಾರ್ಥನೆ

PC:YOUTUBE

ಇವರ ಚಟುವಟಿಕೆಗಳಿಂದ ತೀವ್ರವಾಗಿ ನೊಂದುಕೊಳ್ಳುತ್ತಿದ್ದ ಋಷಿಗಳು, ದೇವತೆಗಳು ಕೊನೆಗೆ ಶ್ರೀ ಮಹಾವಿಷ್ಣುವಿನ ಸಮೀಪಕ್ಕೆ ತೆರಳಿ ತಮ್ಮನ್ನು ರಕ್ಷಿಸಬೇಕು ಎಂದು ಬೇಡಿಕೊಳ್ಳುತ್ತಾರೆ. ಅವರಿಗೆ ಅಭಯವನ್ನು ನೀಡಿದ ಶ್ರೀ ಮಹಾವಿಷ್ಣುವು ಕೇಶ ರಕ್ಷಾಸನ ಜೊತೆ ಹೋರಾಡಿ ಆತನನ್ನು ಸಂಹಾರ ಮಾಡುತ್ತಾನೆ.

6.ಕೇಶಿ

6.ಕೇಶಿ

PC:YOUTUBE

ಇನ್ನು ಆತನ ಜೊತೆಗೆ ಜನಿಸಿದ ಕೇಶಿ ಎಂಬ ರಾಕ್ಷಸಿ ಮಹಿಳೆ ಎಂಬ ಕಾರಣದಿಂದ ಆಕೆಯನ್ನು ಸಂಹಾರ ಮಾಡದೇ ಬಿಡುತ್ತಾನೆ. ಆದರೆ ಆಕೆ ಪ್ರಜೆಗಳನ್ನು ಮತ್ತೆ ಹಿಂಸಿಸಲು ಪ್ರಾರಂಭ ಮಾಡುತ್ತಾಳೆ. ಇದರಿಂದ ಸ್ವಾಮಿಯು ಆಕೆಯನ್ನು ಕಲ್ಲಾಗಿ ಹೋಗು ಎಂದು ಶಪಿಸಿ ಆದರ ಮೇಲೆ ಆದಿಶೇಷನ ಮೇಲೆ ಶ್ರೀ ಮಹಾವಿಷ್ಣುವು ಮಲಗುತ್ತಾನೆ.

7.ಶ್ರೀ ಮಹಾವಿಷ್ಣುವು ಮುಳುಗಬೇಕು ಎಂದು

7.ಶ್ರೀ ಮಹಾವಿಷ್ಣುವು ಮುಳುಗಬೇಕು ಎಂದು

PC:YOUTUBE

ಇದರಿಂದಾಗಿ ಕೋಪಗೊಂಡ ಕೇಶಿಯು ತನ್ನ ಶಕ್ತಿಯಿಂದಾಗಿ ಕೊದೈ, ಪರಲಿ, ತಾಮಿರಬರಣಿ ಎಂಬ ಮೂರು ನದಿಗಳನ್ನು ಸೃಷ್ಟಿಸುತ್ತಾಳೆ. ಆ ನದಿ ಪ್ರವಾಹಗಳನ್ನು ಒಂದು ಸ್ಥಳಕ್ಕೆ ಬಂದು ಆ ನೀರಲ್ಲಿ ಶ್ರೀ ಮಹಾವಿಷ್ಣುವು ಮುಳುಗಿ ಹೋಗಬೇಕು ಎಂಬುದು ಕೇಶಿಯ ಗುರಿಯಾಗಿರುತ್ತದೆ.

8.ಭೂದೇವಿ

8.ಭೂದೇವಿ

PC:YOUTUBE

ಆದರೆ ಈ ವಿಷಯವನ್ನು ತಿಳಿದುಕೊಂಡ ಭೂ ದೇವಿಯು ಆ ವಿಷ್ಣುವಿರುವ ಪ್ರದೇಶವನ್ನು ಮತ್ತಷ್ಟು ಎತ್ತರವಾಗಿ ಮಾಡುತ್ತಾಳೆ. ಇದರಿಂದಾಗಿ ವಿಷ್ಣುವು ಮುಳುಗದಂತೆ ಇರುತ್ತಾನೆ. ಹೀಗೆ ಆ ಮೂರು ನದಿಗಳು ಸಮುದ್ರದಲ್ಲಿ ಸೇರಿಕೊಳ್ಳುತ್ತದೆ.

9.ರುದ್ರಾಕ್ಷಿ

9.ರುದ್ರಾಕ್ಷಿ

PC:YOUTUBE

ಅಂದಿನಿಂದ ಶಾಂತಿಸಿದ ಕೇಶಿಯು ತನಗೆ ಇರುವ 12 ಕೈಗಳಿಂದ ವಿಷ್ಣುವಿನ ತಲೆಯ ಕೆಳಗಿನಿಂದ ತಪ್ಪಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುತ್ತಾಳೆ. ಆ ಸಮಯದಲ್ಲಿ ಶ್ರೀ ಮಹಾವಿಷ್ಣುವು ಮಂತ್ರಿಸಿದ ರುದ್ರಾಕ್ಷಿಯನ್ನು ಒಂದೊಂದೇ ತೆಗೆದುಕೊಂಡು 12 ರುದ್ರಾಕ್ಷಿಗಳನ್ನು ಮಾಡಿ ಕೇಶಿಯ ಕೈಯಲ್ಲಿ ಇಟ್ಟು ಅಲ್ಲಾಡದಂತೆ ನಿಯಂತ್ರಿಸುತ್ತಾನೆ.

10.ಪೂರ್ತಿಯಾಗಿ ವಿಭಿನ್ನ

10.ಪೂರ್ತಿಯಾಗಿ ವಿಭಿನ್ನ

PC:YOUTUBE

ಎಂದರೆ ನಮಗೆ ಬಲಭಾಗದಲ್ಲಿ ಸ್ವಾಮಿಯ ಮುಖವಿರುತ್ತದೆ. ಅಷ್ಟೇ ಅಲ್ಲ, ಇಲ್ಲಿರುವ ವಿಷ್ಣುವಿನ ವಿಗ್ರಹವು ಬೃಹದಾಕಾರದಲ್ಲಿರುತ್ತದೆ. ಮುಖ್ಯವಾಗಿ 16,008 ಸಾಲಿಗ್ರಾಮಗಳಿಂದ ಈ ವಿಗ್ರಹವನ್ನು ತಯಾರು ಮಾಡಿದ್ದಾರೆ. ಅದ್ದರಿಂದಲೇ ಈ ವಿಗ್ರಹಕ್ಕೆ ನಿತ್ಯವು ಅಭಿಷೇಕವನ್ನು ಮಾಡುವುದಿಲ್ಲ,

11.ಮೂರು ದ್ವಾರಗಳ ಮೂಲಕ

11.ಮೂರು ದ್ವಾರಗಳ ಮೂಲಕ

PC:YOUTUBE

ಒಂದೇ ದ್ವಾರದ ಮೂಲಕ ಈ ಬೃಹದಾಕಾರದ ಮೂಲ ವಿಗ್ರಹವನ್ನು ನೋಡುವುದಕ್ಕೆ ಸಾಧ್ಯವಿಲ್ಲ. ಒಟ್ಟು ಮೂರು ದ್ವಾರಗಳ ಮೂಲಕ ಮೂರು ಭಾಗಗಳಾಗಿ ಈ ಸ್ವಾಮಿಯನ್ನು ದರ್ಶಿಸಿಕೊಳ್ಳಬೇಕು. ಇಲ್ಲಿನ ವಿಷ್ಣುವಿನ ನಾಭಿಯಲ್ಲಿ ಬ್ರಹ್ಮದೇವನು ಇರುತ್ತಾನೆ. ಶ್ರೀದೇವಿ, ಭೂ ದೇವಿ ಕೂಡ ಇರುತ್ತಾರೆ. ಅಷ್ಟೇ ಅಲ್ಲ, ಈ ವಿಗ್ರಹದ ಜೊತೆ-ಜೊತೆಗೆ ಶಿವಲಿಂಗ ಕೂಡ ಇರುತ್ತದೆ.

12.ದೀಪ

12.ದೀಪ

PC:YOUTUBE

ಗರ್ಭಗುಡಿಯಲ್ಲಿ ಯಾವುದೇ ರೀತಿಯ ಬೆಳಕು ಇರುವುದಿಲ್ಲ. ಅಂದರೆ ಲೈಟಿಂಗ್‍ಗಳ ವ್ಯವಸ್ಥೆ ಇರುವುದಿಲ್ಲ. ಕೇವಲ ಸ್ವಚ್ಛವಾದ ದೀಪದ ಮೂಲಕವೇ ಸ್ವಾಮಿಯನ್ನು ದರ್ಶಿಸಿಕೊಳ್ಳಬೇಕು. ದೀಪಗಳಿಂದ ಗರ್ಭಗುಡಿಯಲ್ಲಿ ಕಂಗೊಳಿಸುವ ಸ್ವಾಮಿಯನ್ನು ಕಣ್ಣಾರೆ ಕಂಡು ದರ್ಶಿಸಿಕೊಳ್ಳಬಹುದು. ದೀಪಗಳಿಂದ ಸ್ವಾಮಿಯನ್ನು ಕಾಣುವುದು ಒಂದು ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ.

13.ಸೂರ್ಯ ಭಗವಾನನ ಕಿರಣಗಳು

13.ಸೂರ್ಯ ಭಗವಾನನ ಕಿರಣಗಳು

PC:YOUTUBE

ಇದು ಹೀಗೆ ಇದ್ದರೆ, ಕೆಲವು ವಿಶಿಷ್ಟವಾದ ದಿನಗಳಲ್ಲಿ ಸೂರ್ಯಭಗವಾನನ ಕಾಂತಿಯು ಗರ್ಭಗುಡಿಯಲ್ಲಿರುವ ಸ್ವಾಮಿಯ ವಿಗ್ರಹವನ್ನು ತಾಕುತ್ತದೆ ಎಂತೆ. ಆ ಸಮಯದಲ್ಲಿ ಸ್ವಾಮಿಯು ಮತ್ತಷ್ಟು ಸುಂದರವಾಗಿ ಕಾಣುತ್ತಾನಂತೆ. ಆಗ ಈ ದೇವಾಲಯದ ಅವರಣವೆಲ್ಲಾ ವೈಕುಂಟವಾಗಿ ಮಾರ್ಪಟಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಆ ಸಮಯದಲ್ಲಿ ಸ್ವಾಮಿಯನ್ನು ದರ್ಶನ ಮಾಡಿಕೊಂಡರೆ ಮೋಕ್ಷ ಲಭಿಸುತ್ತದೆ ಎಂದು ಭಕ್ತರು ನಂಬುತ್ತಾರೆ.

14.ಹೇಗೆ ತಲುಪಬೇಕು?

14.ಹೇಗೆ ತಲುಪಬೇಕು?

PC:YOUTUBE

ತಿರುವನಂತಪುರ ಕನ್ಯಾಕುಮಾರಿ ರೈಲ್ವೆ ಮಾರ್ಗದಲ್ಲಿ ತಿರುವತ್ತೂರು ಎಂಬ ಪಟ್ಟಣ ಬರುತ್ತದೆ. ಅಷ್ಟೇ ಅಲ್ಲ, ತಿರುವನಂತಪುರದಿಂದ ನಾಗರ ಕೋಯಿಲ್‍ಗೆ ತೆರಳುವ ಬಸ್ಸಿನಲ್ಲಿ ಮಾರ್ತಾಂಡ ಎಂಬ ಸ್ಥಳಕ್ಕೆ ಇಳಿದು 9 ಕಿ.ಮೀ ದೂರ ಪ್ರಯಾಣ ಮಾಡಿದರೆ ಈ ತಿರುವತ್ತೂರು ಸೇರಬಹುದು. ಈ ಮಾರ್ಗದಲ್ಲಿ ಸರ್ಕಾರಿ ಹಾಗು ಖಾಸಗಿ ಬಸ್ಸುಗಳು ಸೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X