Search
  • Follow NativePlanet
Share
» »ಶ್ರೀರಂಗಂನ ರಂಗನಾಥಸ್ವಾಮಿ ಮೂರ್ತಿಗಿಂತಲೂ ದೊಡ್ಡದಂತೆ ಇಲ್ಲಿನ ಮೂರ್ತಿ

ಶ್ರೀರಂಗಂನ ರಂಗನಾಥಸ್ವಾಮಿ ಮೂರ್ತಿಗಿಂತಲೂ ದೊಡ್ಡದಂತೆ ಇಲ್ಲಿನ ಮೂರ್ತಿ

ತಮಿಳುನಾಡಿನ ತಿರುಚಿನಾಪಲ್ಲಿಯಲ್ಲಿರುವ ತಿರುವರಂಗಂ ಎಂದು ಕರೆಯಲಾಗುವ ಶ್ರೀರಂಗಂ ದೇವಸ್ಥಾನದಲ್ಲಿರುವ ರಂಗನಾಥಸ್ವಾಮಿ ಮೂರ್ತಿಯನ್ನು ನೀವು ನೋಡಿರಬಹುದು. ಶ್ರೀರಂಗಂ ತನ್ನ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಇದು ಹಿಂದೂಗಳಿಗೆ ಪ್ರಮುಖ ಯಾತ್ರಾ ಸ್ಥಳವಾಗಿದೆ ಮತ್ತು ಭಾರತದ ಅತಿ ದೊಡ್ಡ ದೇವಾಲಯ ಸಂಕೀರ್ಣವಾಗಿದೆ. ಆದರೆ ಇದಕ್ಕಿಂತಲೂ ದೊಡ್ಡದಾದ ವಿಷ್ಣುವಿನ ಮೂರ್ತಿ ಹೊಂದಿರುವ ದೇವಸ್ಥಾನ ತಮಿಳುನಾಡಿನಲ್ಲಿ ಇದೆಯಂತೆ.

ಆದಿರಂಗಂ ರಂಗನಾಥಸ್ವಾಮಿ ದೇವಸ್ಥಾನ

ಆದಿರಂಗಂ ರಂಗನಾಥಸ್ವಾಮಿ ದೇವಸ್ಥಾನ

PC: Ssriram mt

ಆದಿರಂಗಂ ರಂಗನಾಥಸ್ವಾಮಿ ದೇವಸ್ಥಾನ ಅಥವಾ ರಂಗನಾಥ ಪೆರುಮಲ್ ದೇವಸ್ಥಾನ ಎಂದು ಕರೆಯಲಾಗುವ ತಮಿಳುನಾಡಿನಲ್ಲಿರುವ ವಿಷ್ಣುವಿನ ದೇವಾಲಯವು ಚೋಳರಿಂದ ನಿರ್ಮಿಸಲಾಗಿದ್ದು ನಂತರ ವಿಜಯನಗರ ಸಾಮ್ರಾಜ್ಯದ ರಾಜರಿಂದ ಅಭಿವೃದ್ಧಿಪಡಿಸಲಾಯಿತು. ಈ ದೇವಸ್ಥಾನವು ಸುಮಾರು 5 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಮೂರ್ತಿಯು ಶ್ರೀರಂಗಂ ದೇವಸ್ಥಾನದ ಮೂರ್ತಿಗಿಂತಲೂ ದೊಡ್ಡದಾಗಿದೆಯಂತೆ.

ದಂತಕಥೆ

ದಂತಕಥೆ

PC: Ssriram mt

ಹಿಂದೂ ದಂತಕಥೆಯ ಪ್ರಕಾರ, ಸೋಮನ್ ಎಂಬ ಹೆಸರಿನ ರಾಕ್ಷಸನು ಎಲ್ಲಾ ವೇದಗಳನ್ನು ದೇವತೆಯರಿಂದ ವಶಪಡಿಸಿಕೊಂಡನು. ಇದರಿಂದ ಎಲ್ಲಾ ದೇವತೆಗಳು, ಋಷಿಗಳು ಆತಂಕಕ್ಕೊಳಗಾಗಿದ್ದರು. ಅವರು ಆ ವೇದಗಳನ್ನು ರಾಕ್ಷಸನಿಂದ ರಕ್ಷಿಸುವಂತೆ ವಿಷ್ಣುವಿನ ಮೊರೆ ಹೋದರು. ಆಗ ವಿಷ್ಣು ನೀರಿನಿಂದ ಹೊರಹೊಮ್ಮಿ ರಂಗನಾಥನ ರೂಪದಲ್ಲಿ ದರ್ಶನ ನೀಡಿದನು ಎನ್ನಲಾಗುತ್ತದೆ.

ಚಂದ್ರ ಪುಷ್ಕರಣಿ

ಚಂದ್ರ ಪುಷ್ಕರಣಿ

PC:Ssriram mt

ಮತ್ತೊಂದು ದಂತಕಥೆಯ ಪ್ರಕಾರ, ಮಕ್ಕಳನ್ನು ಪಡೆಯಲು ಸುರಕೀರ್ತಿ ಎನ್ನುವ ರಾಜ ಇದೇ ಸ್ಥಳದಲ್ಲಿ ವಿಷ್ಣುನನ್ನು ಪೂಜಿಸಿದನು ಎನ್ನಲಾಗುತ್ತದೆ . ಚಂದ್ರನು ಶಾಪದ ಕಾರಣದಿಂದಾಗಿ ತನ್ನ ಹೊಳಪು ಕಳೆದುಕೊಂಡಿದ್ದನು ಆಗ ಆತನಿಗೆ ಇದೇ ಸ್ಥಳದಲ್ಲಿ ವಿಷ್ಣುವ ನ್ನು ಪೂಜಿಸುವಂತೆ ಸೂಚಿಸಲಾಗಿತ್ತು. ಚಂದ್ರನು ಕೆರೆಯನ್ನು ನಿರ್ಮಿಸಿ ರಂಗನಾಥನನ್ನು ಪೂಜಿಸಿದನು. ಅಲ್ಲಿ ಶಾಪ ಮುಕ್ತನಾದನು. ಆ ಕರೆಯನ್ನು ಚಂದ್ರ ಪುಷ್ಕರಣಿ ಎನ್ನಲಾಗುತ್ತದೆ.

ಮೂಲಿಕೆಯ ವಿಗ್ರಹ

ಮೂಲಿಕೆಯ ವಿಗ್ರಹ

PC:Ssriram mt

ಪ್ರಖ್ಯಾತ ದೇವತೆ ರಂಗನಾಥ ಪೆರುಮಾಳ್ ಮೂರ್ತಿಯು ಮೂಲಿಕೆಗಳಿಂದ ಮಾಡಿದ ವಿಗ್ರಹವಾಗಿದ್ದು 29 ಅಡಿ (8.8 ಮೀ) ಎತ್ತರವಿದೆ. ಐದು ತಲೆ ಹಾವು ಆದೀಶೇಶನು ರಂಗನಾಥ ಸ್ವಾಮಿಗೆ ಛತ್ರಿಯಂತೆ ನಿಂತಿದ್ದಾನೆ. ತಲೆಗೆ ಸಮೀಪದಲ್ಲಿ ಶ್ರೀದೇವಿ ಮತ್ತು ಪಾದದ ಬಳಿ ಭೂದೇವಿ ಕೂತಿದ್ದಾರೆ.

ದೇವಸ್ಥಾನದ ಪೂಜಾ ಸಮಯ

ದೇವಸ್ಥಾನದ ಪೂಜಾ ಸಮಯ

PC:Melanie M

ತಮಿಳುನಾಡಿನ ಇತರ ವಿಷ್ಣು ದೇವಸ್ಥಾನದಂತೆ ದೇವಸ್ಥಾನದ ಪೂಜಾರಿಯು ವೈಷ್ಣವರಾಗಿರುತ್ತಾರೆ. ಪ್ರತಿದಿನ ಹಾಗೂ ಹಬ್ಬದ ಸಂದರ್ಭದಲ್ಲಿ ಪೂಜೆ ನಡೆಸುತ್ತಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 7.30ರ ವರೆಗೆ ಈ ದೇವಸ್ಥಾನವು ತೆರೆದಿರುತ್ತದೆ. ದಿನಕ್ಕೆ ಆರು ಬಾರಿ ಪೂಜೆ ನಡೆಸಲಾಗುತ್ತದೆ. ಬೆಳಗ್ಗೆ 7 ಗಂಟೆಗೆ, 8 ಗಂಟೆಗೆ , ಮದ್ಯಾಹ್ನ 12 ಗಂಟೆಗೆ, ಸಾಯಂಕಾಲ 6 ಗಂಟೆಗೆ , 7 ಗಂಟೆಗೆ ಹಾಗೂ ರಾತ್ರಿ 10 ಗಂಟೆಗೆ ಪೂಜೆ ನಡೆಯುತ್ತದೆ.

ಆಚರಿಸುವ ಹಬ್ಬಗಳು

ಆಚರಿಸುವ ಹಬ್ಬಗಳು

ಇಲ್ಲಿ ವಿಷ್ಣುವಿಗೆ ಸಂಬಂಧಿಸಿದಂತಹ ವೈಕುಂಠ ಏಕಾದಶಿ, ಕೃಷ್ಣ ಜನ್ಮಾಷ್ಟಮಿ, ರಾಮನವಮಿ ಮುಂತಾದ ಹಬ್ಬಗಳನ್ನು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿರುವ ಶ್ರೀರಂಗಂನಲ್ಲಿರುವ ರಂಗನಾಥನ ಮೂರ್ತಿಗಿಂತಲೂ ದೊಡ್ಡದಾದ ವಿಷ್ಣುವಿನ ಮೂರ್ತಿ ಇಲ್ಲಿದೆ. ಹಾಗಾಗಿ ಈ ದೇವಸ್ಥಾನವನ್ನು ಪೆರಿಯ ಪೆರುಮಳ್ ದೇವಸ್ಥಾನ ಎನ್ನುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+