Search
  • Follow NativePlanet
Share
» »ರಾಜಸ್ಥಾನದಲ್ಲಿದೆ ಬಣ್ಣ ಬದಲಾಗುವ ಮಾಹಿಮಾನ್ವಿತವಾದ ಶಿವಲಿಂಗ

ರಾಜಸ್ಥಾನದಲ್ಲಿದೆ ಬಣ್ಣ ಬದಲಾಗುವ ಮಾಹಿಮಾನ್ವಿತವಾದ ಶಿವಲಿಂಗ

ಈ ಪ್ರಪಂಚವನ್ನು ನಿಯಂತ್ರಿಸುವ ಏಕೈಕ ಶಕ್ತಿ ಎಂದರೆ ಅದು ಶಿವ ಎಂಬುದು ನಮ್ಮ ಆಧ್ಯಾತ್ಮಿಕ ನಂಬಿಕೆಯಾಗಿದೆ.ಆತನೇ ಸೃಷ್ಟಿಕರ್ತ, ಆತನೇ ನಾಶ ಮಾಡುವ ಶಕ್ತಿ ಒಳ್ಳವನು, ಆತನೇ ಪ್ರಪಂಚವೆಲ್ಲಾ ಮುಷ್ಟಿಯಲ್ಲಿ ಇಟ್ಟುಕೊಂಡಿರುವವನು. ಶೈವರೇ ಅಲ್ಲದೇ ವೈಷ

ಈ ಪ್ರಪಂಚವನ್ನು ನಿಯಂತ್ರಿಸುವ ಏಕೈಕ ಶಕ್ತಿ ಎಂದರೆ ಅದು ಶಿವ ಎಂಬುದು ನಮ್ಮ ಆಧ್ಯಾತ್ಮಿಕ ನಂಬಿಕೆಯಾಗಿದೆ.

ಆತನೇ ಸೃಷ್ಟಿಕರ್ತ, ಆತನೇ ನಾಶ ಮಾಡುವ ಶಕ್ತಿ ಒಳ್ಳವನು, ಆತನೇ ಪ್ರಪಂಚವೆಲ್ಲಾ ಮುಷ್ಟಿಯಲ್ಲಿ ಇಟ್ಟುಕೊಂಡಿರುವವನು.

ಶೈವರೇ ಅಲ್ಲದೇ ವೈಷ್ಣವರು ಕೂಡ ಭಕ್ತಿಯಿಂದ ಪೂಜಿಸುವ ದೈವವೆಂದರೆ ಅದು ಪರಮಶಿವನೇ..

ಪರಮಶಿವನು ಶಿವಲಿಂಗ ರೂಪಿಯಾಗಿ ಭಕ್ತರಿಗೆ ದರ್ಶನ ಭಾಗ್ಯವನ್ನು ನೀಡುತ್ತಾನೆ.

ಹೀಗಿರುವಾಗ ಶಿವಲಿಂಗವು ಕಲಿಯುಗದಲ್ಲಿಯೂ ಕೂಡ ತನ್ನ ಹಲವಾರು ಮಹಿಮೆಗಳನ್ನು ನೀಡುತ್ತಿದ್ದಾನೆ.

ಇದರಿಂದಾಗಿ ದೈವದ ಇರುವಿಕೆಯನ್ನು ನಾವು ನಂಬಬಹುದಾಗಿದೆ. ಅದೆಲ್ಲಾ ಸರಿ ಶಿವಲಿಂಗ ದಿನೇ ದಿನೇ ಬೆಳೆಯುತ್ತಿರುವುದು, ಶಿವಲಿಂಗ ಅಲ್ಲಾಡುವುದು ಇನ್ನೂ ಹಲವಾರು ವಿಸ್ಮಯಗಳನ್ನು ನಾವು ಕೇಳುತ್ತಾಲೇ ಬಂದಿದೇವೆ.

ಹಾಗಾದರೆ ಕೇಳಿ ರಾಜಸ್ಥಾನದಲ್ಲಿನ ಒಂದು ಮಾಹಿಮಾನ್ವಿತವಾದ ದೇವಾಲಯದಲ್ಲಿ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣ ಬದಲಾಗುತ್ತಾ ಇರುತ್ತದೆ ಎಂತೆ.

ಎಲ್ಲಿದೆ?

ಎಲ್ಲಿದೆ?

ಈ ಬಣ್ಣ ಬದಲಾಗುವ ಮಾಹಿಮಾನ್ವಿತವಾದ ದೇವಾಲಯವು ರಾಜಸ್ಥಾನದಲ್ಲಿನ ಸಿರೋಹಿ ಎಂಬ ಜಿಲ್ಲೆಯ ಡಾಲ್ಫೂರ್‍ನಲ್ಲಿ ಪ್ರಪಂಚ ಪ್ರಸಿದ್ಧವಾದ ಅಚಲೇಶ್ವರ ದೇವಾಲಯವಿದೆ. ಈ ದೇವಾಲಯವನ್ನು ಕ್ರಿ.ಪೂ 9 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಪ್ರಾಚೀನ ದೇವಾಲಯ ಎಂದು ನಂಬಲಾಗಿದೆ.

ಶಿವನಿಗೆ ಅರ್ಪಿತವಾದ

ಶಿವನಿಗೆ ಅರ್ಪಿತವಾದ

ಈ ಮಾಹಿಮಾನ್ವಿತ ದೇವಾಲಯವು ಮಹಾ ಶಿವನಿಗೆ ಅರ್ಪಿತವಾದ ದೇವಾಲಯವಾಗಿದೆ. ಇಲ್ಲಿ ಸ್ವಾಮಿಯು ಲಿಂಗ ಸ್ವರೂಪಿಯಾಗಿ ನೆಲೆಸಿದ್ದು, ಅಚಲೇಶ್ವರ ಎಂಬ ಹೆಸರಿನಿಂದ ಪ್ರಖ್ಯಾತತೆ ಪಡೆದಿದ್ದಾನೆ. ಅಚಲೇಶ್ವರ ಎಂಬ ಪದವು ಸಂಸ್ಕøತ ಪದವಾಗಿದ್ದು "ಅಚಲ್" ಎಂದರೆ ಸ್ಥಿರವಾದುದು ಮತ್ತು "ಈಶ್ವರ" ಎಂಬುದು ದೇವರು ಎಂಬ ಅರ್ಥವನ್ನು ನೀಡುತ್ತದೆ.

ಬಣ್ಣ ಬದಲಾಗುವಿಕೆ

ಬಣ್ಣ ಬದಲಾಗುವಿಕೆ

ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣ ಬದಲಾಗುತ್ತದೆ ಎಂತೆ. ಎಂಥಹ ಆಶ್ಚರ್ಯವಲ್ಲವೇ? ವಿಜ್ಞಾನದ ಪ್ರಕಾರ ಸೂರ್ಯನ ಕಾಂತಿ ಈ ಶಿವಲಿಂಗದ ಮೇಲೆ ಬೀಳುವುದರಿಂದಲೇ ಶಿವಲಿಂಗವು ಮೂರು ಬಣ್ಣಗಳಾಗಿ ಪರಿರ್ವತನೆಯಾಗುತ್ತದೆ ಎಂದು ವಾದಿಸುತ್ತಾರೆ. ಆದರೂ ಕೂಡ ಇದಕ್ಕೆ ಖಚಿತವಾದ ಆಧಾರಗಳು ಯಾವುದು ಇಲ್ಲ.

ದಂತಕಥೆಯ ಪ್ರಕಾರ

ದಂತಕಥೆಯ ಪ್ರಕಾರ

ಸ್ಥಳೀಯ ದಂತಕತೆಯ ಪ್ರಕಾರ, ಈ ದೇವಾಲಯವನ್ನು ಶಿವನ ಕಾಲಿನ ಬೆರಳ ಮುದ್ರಣದ ಸ್ಥಳ ಈ ಅಚಲೇಶ್ವರ ದೇವಾಲಯವಾಗಿದೆ. ಇಲ್ಲಿನ ಮತ್ತೊಂದು ವಿಷೇಶವೆನೆಂದರೆ ಯಾರು ಕೂಡ ಈ ಶಿವಲಿಂಗವನ್ನು ಪ್ರತಿಷ್ಟಾಪಿಸಿಲ್ಲವಂತೆ, ಬದಲಾಗಿ ಸ್ವಾಭಾವಿಕವಾಗಿಯೇ ಏರ್ಪಟ್ಟಿರುವ ಶಿವಲಿಂಗವಾಗಿದೆ ಎಂತೆ.

ಸಣ್ಣ ದೇವಾಲಯಗಳು

ಸಣ್ಣ ದೇವಾಲಯಗಳು

ಈ ಅಚಲೇಶ್ವರ ದೇವಾಲಯದ ಪ್ರಾಂಗಣದ ಅಗ್ನಿಕುಂಡದ ದಕ್ಷಿಣ ಭಾಗದಲ್ಲಿ ಒಂದು ಆವರಣವಿದೆ. ಇಲ್ಲಿ ಶಿವ ಪಾರ್ವತಿ, ನಂದಿಗೆ ಮೀಸಲಾಗಿರುವ ಸಣ್ಣ ದೇವಾಲಯಗಳು ಇವೆ.

ಮುಸ್ಲಿಂ ದಾಳಿಕೋರರು

ಮುಸ್ಲಿಂ ದಾಳಿಕೋರರು

ಜನಪ್ರಿಯ ದಂತಕಥೆಗಳ ಪ್ರಕಾರ, ಮುಸ್ಲಿಂ ದಾಳಿಕೋರರ ಆಕ್ರಮಣದಿಂದ ದೇವಾಲಯವನ್ನು ರಕ್ಷಿಸುವ ಸಲುವಾಗಿ ನಂದಿ ಪ್ರತಿಮೆಯು ತನ್ನ ಶಕ್ತಿಯಿಂದ ಅಸಂಖ್ಯಾತ ಜೇನು ನೊಣಗಳನ್ನು ಮುಸ್ಲಿಂ ದಾಳಿಕೋರರ ಮೇಲೆ ಬಿಡುಗಡೆ ಮಾಡುವುರ ಮೂಲಕ ಈ ಮಾಹಿಮಾನ್ವಿತ ದೇವಾಲಯ ರಕ್ಷಣೆ ಮಾಡಿತಂತೆ.

ದೇವಾಲಯದಲ್ಲಿ ಒಂದು ದ್ವಾರ

ದೇವಾಲಯದಲ್ಲಿ ಒಂದು ದ್ವಾರ

ಈ ದೇವಾಲಯದಲ್ಲಿ ಒಂದು ದ್ವಾರವಿದೆ. ಆ ದ್ವಾರವು ನರಕಕ್ಕೆ ತೆರಳುವ ದ್ವಾರ ಎಂದು ಭಕ್ತರು ನಂಬುತ್ತಾರೆ. ಹಾಗೆಯೇ ದೇವಾಲಯದ ಸಮೀಪದಲ್ಲಿ 3 ಬೃಹತ್ ಕಲ್ಲಿನ ಎಮ್ಮೆಯ ಪ್ರತಿಮೆಗಳು ಇವೆ. ಈ ಎಮ್ಮೆಗಳು ದುಷ್ಟ ಶಕ್ತಿ ಎಂದು ನಂಬಲಾಗುತ್ತದೆ.

ವಿಶೇಷ ಪೂಜೆಗಳು

ವಿಶೇಷ ಪೂಜೆಗಳು

ಈ ಅಚಲೇಶ್ವರ ಮಹಾದೇವ ದೇವಾಲಯದಲ್ಲಿ ಮಹಾ ಶಿವರಾತ್ರಿಯಂದು, ನವರಾತ್ರಿ ಮತ್ತು ದೀಪಾವಳಿ ಹಬ್ಬದಂದು ವೈಭವದಿಂದ ವಿಶೇಷ ಪೂಜೆಗಳನ್ನು ನಡೆಸುತ್ತಾರೆ.

ತಲುಪುವ ಬಗೆ ಹೇಗೆ?

ತಲುಪುವ ಬಗೆ ಹೇಗೆ?

ಸಮೀಪದ ರೈಲ್ವೆ ನಿಲ್ದಾಣ: ಈ ಅಚಲೇಶ್ವರ ದೇವಾಲಯಕ್ಕೆ ತಲುಪಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ರಾಜಸ್ಥಾನದ ಮೌಂಟ್ ಅಬು.

ಸಮೀಪದ ವಿಮಾನ ನಿಲ್ದಾಣವೆಂದರೆ: ಮಹಾರಾಣಾ ಪ್ರತಾಪ ಏರ್ ಪೋರ್ಟ್. ಇದು ರಾಜಸ್ಥಾನದ ಉದಯಪುರದಲ್ಲಿದೆ. ಇಲ್ಲಿಂದ ಅಚಲೇಶ್ವರ ದೇವಾಲಯಕ್ಕೆ ಸುಮಾರು 207 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X