Search
  • Follow NativePlanet
Share
» »ಇದನ್ನು ಮಹಿಳೆಯರ ಶಬರಿಮಲೆ ಎಂದೆ ಕರೆಯುತ್ತಾರೆ

ಇದನ್ನು ಮಹಿಳೆಯರ ಶಬರಿಮಲೆ ಎಂದೆ ಕರೆಯುತ್ತಾರೆ

By Vijay

ನಿಮಗೆಲ್ಲ ಗೊತ್ತಿರುವಂತೆ ಶಬರಿಮಲೆ ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದ್ದು ಭಾರತದಲ್ಲೆ ಅತಿ ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ಅತಿ ಪ್ರಮುಖ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ ಹಾಗೂ ಇಲ್ಲಿರುವ ಅಯ್ಯಪ್ಪನ ಸನ್ನಿಧಿಯೊಳಗೆ ಮಹಿಳೆಯರು ಪ್ರವೇಶಿಸಲು ಅನುಮತಿಯಿಲ್ಲ.

ಎಟ್ಟುಮಾನೂರಿನ ಅದ್ಭುತ ಶಿವ ದೇವಾಲಯ

ಆದರೆ ನಿಮಗೆ ಗೊತ್ತೆ ಕೇರಳದ ಒಂದು ಸ್ಥಳದಲ್ಲಿ ಚಿಕ್ಕ ಗುಡ್ಡವೊಂದರ ಮೇಲೆ ಅಯ್ಯಪ್ಪನ ದೇವಾಲಯವಿದ್ದು ಇಲ್ಲಿ ಮಹಿಳೆಯರು ಯಾವುದೆ ಅಡೆ ತಡೆಗಳಿಲ್ಲದೆ ಪ್ರವೇಶಿಸಬಹುದು ಹಾಗೂ ಸ್ವಾಮಿಯ ದರ್ಶನ ಪಡೆಯಬಹುದು. ಹೀಗಾಗಿ ಇದನ್ನು ಮಹಿಳೆಯರ ಶಬರಿ ಮಲೆ ಅಥವಾ ಶಬರಿಮಲೈ ಎಂದೆ ಕರೆಯುತ್ತಾರೆ.

ಇದನ್ನು ಮಹಿಳೆಯರ ಶಬರಿಮಲೆ ಎಂದೆ ಕರೆಯುತ್ತಾರೆ

ಚಿತ್ರಕೃಪೆ: Aruna

ಅಲ್ಲದೆ ಈ ದೇವಾಲಯವು ಚಿಕ್ಕ ಗುಡ್ಡವೊಂದರ ಮೇಲೆ ನೆಲೆಸಿದ್ದು ಸುತ್ತಲೂ ದಟ್ಟವಾದ ಹಸಿರಿನಿಂದ ಕೂಡಿದೆ. ಹಾಗಾಗಿ ದೇವಾಲಯ ಕ್ಷೇತ್ರವು ನಿಸರ್ಗ ಪ್ರಿಯ ಪ್ರವಾಸಿಗರಿಗೂ ಸಹ ನೆಚ್ಚಿನ ತಾಣವಾಗಿರುವುದರಲ್ಲಿ ಸಂಶಯವಿಲ್ಲ.

ಮೂಲತಃ ಇದೊಂದು ಶಾಸ್ತ ದೇವಾಲಯ ಹಾಗೂ ಮುಖ್ಯವಾಗಿ ಇಲ್ಲಿ ಅಯ್ಯಪ್ಪ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಅಯ್ಯಪ್ಪನಲ್ಲದೆ ಇಲ್ಲಿ ಇತರೆ ಐದು ದೇವತೆಯರ ಸನ್ನಿಧಿಗಳೂ ಸಹ ಇದ್ದು ಅವುಗಳೂ ಸಹ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿವೆ.

ಇದನ್ನು ಮಹಿಳೆಯರ ಶಬರಿಮಲೆ ಎಂದೆ ಕರೆಯುತ್ತಾರೆ

ಚಿತ್ರಕೃಪೆ: Aruna

ಇಲ್ಲಿರುವ ಇತರೆ ದೇವತೆಗಳೆಂದರೆ ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ವಿಷ್ಣು. ಇನ್ನೂ ಅಯ್ಯಪ್ಪಸ್ವಾಮಿಯನ್ನು ಹಿಡಿದು ಒಟ್ಟು ಆರು ಮಹಾ ದೇವರುಗಳು ಈ ದೇವಸ್ಥಾನದಲ್ಲಿ ನೆಲೆಸಿದ್ದಾರೆ. ಹಾಗಾಗಿ ಈ ದೇವಾಲಯವನ್ನು ಆರೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಮಹಿಳೆಯರೂ ಸಹ ಇಲ್ಲಿನ ಅಯ್ಯಪ್ಪನ ದರ್ಶನ ಪಡೆಯಬಹುದಾಗಿದ್ದರಿಂದ ಮಹಿಳೆಯರ ಶಬರ ಮಲೈ ಎಂದೂ ಸಹ ಕರೆಯುತ್ತಾರೆ.

ಸ್ಥಳವು ಸಾಕಷ್ಟು ದೈವಿಕ ಭಾವನೆಯನ್ನು ಹೊಮ್ಮಿಸುವ ಸ್ಥಳವಾಗಿದ್ದು ಸಾಕಷ್ಟು ಪ್ರಶಾಂತವಾಗಿದೆ. ಅಲ್ಲದೆ ದೇವಾಲಯದ ಪಕ್ಕದಲ್ಲಿ ಕಲ್ಲುಬಂಡೆಗಳಲಿ ಒಡಮೂಡಿದ ಗುಹೆಗಳನ್ನೂ ಸಹ ಕಾಣಬಹುದು. ಅವುಗಳನ್ನು ಪುನರ್ಜನಿ ಗುಹೆಗಳೆಂದು ಕರೆಯುತ್ತಾರೆ.

ಇದನ್ನು ಮಹಿಳೆಯರ ಶಬರಿಮಲೆ ಎಂದೆ ಕರೆಯುತ್ತಾರೆ

ಚಿತ್ರಕೃಪೆ: Aruna

ಈ ಆರೇಶ್ವರ ದೇವಾಲಯವು ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ವಾಸುಪುರ ಎಂಬಲ್ಲಿದೆ. ಈ ವಾಸುಪುರವು ಕೊಡಗರಾ-ವೆಳ್ಳಿಕುಲಂಗಾರಾ ರಸ್ತೆಯಲ್ಲಿ ಬರುತ್ತದೆ. ವಾಸುಪುರದಲ್ಲಿ ಕಾಣಬಹುದಾದ ಕೊಡಶೇರಿಮಲ ಎಂಬ ಸುಂದರವಾದ ಗುಡ್ಡವೊಂದರ ಮೇಲೆ ಈ ದೇವಾಲಯವು ಸ್ಥಿತವಿದೆ.

ಈ ದೇವಾಲಯವು ಇನ್ನೊಂದು ವಿಷಯಕ್ಕೆ ಬಲು ಹೆಸರುವಾಸಿಯಾಗಿದೆ. ಅದೆಂದರೆ ಶನಿ ದೋಷ ಪರಿಹಾರ. ಹೌದು, ಬಹುತೇಕರು ನಂಬುವಂತೆ ಶನಿ ದೋಷವು ಜೀವನದಲ್ಲಿ ಏಳಿಗೆಗಳನ್ನು ಕುಂಠಿತಗೊಳಿಸುತ್ತದೆ. ಹಾಗಾಗಿ ಈ ದೋಷವಿರುವವರು ಇದರ ಪರಿಹಾರಕ್ಕೆ ಸಾಕಷ್ಟು ಶ್ರಮ ಪಡುವುದನ್ನು ಕಾಣಬಹುದು.

ಈ ಅಪರೂಪದ ಧನ್ವಂತರಿ ದೇವಾಲಯ ಗೊತ್ತೆ?

ಆದರೆ, ಈ ದೋಷದಿಂದ ಮುಕ್ತಿ ಪಡೆದವರು, ಒಳಿತನ್ನು ಕಂಡವರು ಹಾಗೂ ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಪ್ರಕಾರ, ಈ ದೇವಾಲಯವು ಶನಿ ದೋಷ ಪರಿಹಾರಕ್ಕೆ ಸಾಕಷ್ಟು ಪರಿಣಾಮಕಾರಿಯಾಗಿದೆಯಂತೆ. ಅದಕ್ಕೆಂದೆ ಸಾಕಷ್ಟು ಜನರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X