Search
  • Follow NativePlanet
Share
» »ಕಡಲೆಕಾಯಿ ಪರಿಶೆ ಜಾತ್ರೆಗೆ ಹೋಗೋಣವೆ?

ಕಡಲೆಕಾಯಿ ಪರಿಶೆ ಜಾತ್ರೆಗೆ ಹೋಗೋಣವೆ?

ಪ್ರತಿ ವರ್ಷ ಡಿಸೆಂಬರ್ ತಿಂಗಳಿನ ಸಮಯದಲ್ಲಿ ಆಚರಿಸಲಾಗುವ ಕಡಲೆಕಾಯಿ ಪರಿಶೆ ಉತ್ಸವವು ಅಕ್ಷರಶಃವಾಗಿ ಆಧಿನಿಕ ಬೆಂಗಳೂರು ನಗರವನ್ನು ಒಂದು ಸಾಂಪ್ರದಾಯಿಕ ಮದುವಣಗಿತ್ತಿಯಂತೆ ಅಲಂಕರಿಸಿಕೊಂಡು ಕಂಗೊಳಿಸುತ್ತಿರುವಂತೆ ಮಾಡುತ್ತದೆ.

By Vijay

ಬಡವರ ಬಾದಾಮಿ ಎಂತಲೆ ಜನಪ್ರಿಯವಾಗಿರುವ, ಉತ್ತರ ಕರ್ನಾಟಕದಲ್ಲಿ ಶೇಂಗಾ ಎಂಬ ಹೆಸರಿನಿಂದ ಕರೆಯಲ್ಪಡುವ ಕಡಲೆಕಾಯಿಗೆಂದೆ ಸಮರ್ಪಿತವಾದ ಒಂದು ಉತ್ಸವವಿದೆ ಎಂದರೆ ಅಚ್ಚರಿಯಾಗದೆ ಇರಲಾರದು. ಆದರೆ ಮತ್ತಷ್ಟು ಅಚ್ಚರಿ ಎನಿಸುವ ವಿಷಯವೆಂದರೆ ಈ ಉತ್ಸವ ಆಯೋಜಿತಗೊಳ್ಳುವುದು ಹೈಟೆಕ್ ಸಿಟಿ, ಸಿಲಿಕಾನ್ ವ್ಯಾಲಿ ಎಂಬೆಲ್ಲ ಬಿರುದುಗಳನ್ನು ಹೊತ್ತ ಕರ್ನಾಟಕದ ರಾಜಧಾನಿಯಾದ ಈ ನಮ್ಮ ಮಾಡರ್ನ್ ಸಿಟಿ ಬೆಂಗಳೂರು ನಗರದಲ್ಲಿ. ಪ್ರತಿ ವರ್ಷ ಡಿಸೆಂಬರ್ ತಿಂಗಳಿನ (ಸಾಮಾನ್ಯವಾಗಿ ನವಂಬರ್ ಇಲ್ಲವೆ ಡಿಸೆಂಬರ್) ಸಮಯದಲ್ಲಿ ಆಚರಿಸಲಾಗುವ ಈ ಉತ್ಸವವು ಅಕ್ಷರಶಃವಾಗಿ ಆಧುನಿಕ ಬೆಂಗಳೂರು ನಗರವನ್ನು ಒಂದು ಸಾಂಪ್ರದಾಯಿಕ ಮದುವಣಗಿತ್ತಿಯಂತೆ ಅಲಂಕರಿಸಿಕೊಂಡು ಕಂಗೊಳಿಸುತ್ತಿರುವಂತೆ ಮಾಡುತ್ತದೆ.

ಇತರೆ ಸಣ್ಣ ಪುಟ್ಟ ಪಟ್ಟಣಗಳು ಹಾಗು ಹಳ್ಳಿಗಳಲ್ಲಿ ಜರುಗುವ ಜಾತ್ರೆ, ಮೇಳ, ಉತ್ಸವಗಳ ಕುರಿತು ಸ್ವಲ್ಪವೂ ಅನುಭವವಿಲ್ಲದ ಇಂದಿನ ಮಹಾನಗರಗಳಲ್ಲಿ ವಾಸಿಸುವ ಮಕ್ಕಳಿಗಂತೂ ಈ ರೀತಿಯ ಉತ್ಸವವು ಆ ನಿಟ್ಟಿನಲ್ಲಿ ಆಚರಣೆ, ಸಂಪ್ರದಾಯಗಳ ಕುರಿತು ಜ್ಞಾನ ವೃದ್ಧಿಸಿಕೊಳ್ಳಲು ಸುವರ್ಣಾವಕಾಶವಾಗಿದೆ. ಈ ಜಾತ್ರೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳ ಸುಮಾರು 500 ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುತ್ತಾರೆ.

ಸಂಕ್ಷಿಪ್ತ ಇತಿಹಾಸ :

ಜಾತ್ರೆ ನಡೆಯುವ ಮುಖ್ಯ ತಾಣವಾದ ಬೆಂಗಳೂರಿನ ಬಸವನಗುಡಿಯು ಒಂದೊಮ್ಮೆ, ಗುಟ್ಟಹಳ್ಳಿ, ಮಾವಳ್ಳಿ, ದಾಸರಹಳ್ಳಿ ಪ್ರದೇಶಗಳಿಂದ ಸುತ್ತುವರೆದಿತ್ತು. ಈ ಎಲ್ಲ ಪ್ರದೇಶಗಳಲ್ಲಿ ರೈತರ ಮುಖ್ಯ ಬೆಳೆ ಕಡಲೆಕಾಯಿ. ಹೀಗಿರುವಾಗ ಒಂದು ಗೂಳಿಯೊಂದು ಆ ಎಲ್ಲ ಪ್ರದೇಶಗಳ ಹೊಲಗಳಿಗೆ ಪೂರ್ಣ ಚಂದಿರ ದಿನದಂದು ಆಕ್ರಮಣ ಮಾಡಿ ಕಡಲೆ ಬೆಳೆಯನ್ನು ನಾಶ ಮಾಡಹತ್ತಿತು. ಈ ಸಮಯದಲ್ಲೆ ಒಂದು ಬಸವನ ವಿಗ್ರಹವು ದೊರಕಿತು ಎಂದು ಹೇಳಲಾಗುತ್ತದೆ. ಬೆಳೆಗಳನ್ನು ನಾಶ ಮಾಡುತ್ತಿರುವ ಆ ಗೂಳಿಯನ್ನು ಶಾಂತಗೊಳಿಸುವ ಉದ್ದೇಶದಿಂದ ಎಲ್ಲ ರೈತರು ಬಸವಣ್ಣನನ್ನು ಪ್ರಾರ್ಥಿಸಿ ತಾವು ಬೆಳೆದ ಮೊದಲ ಬೆಳೆಯನ್ನು ಕಾಣಿಕೆಯಾಗಿ ಅರ್ಪಿಸುತ್ತೇವೆಂದು ಬೇಡಿಕೊಂಡರು. ಕ್ರಮೇಣ ಇದೊಂದು ಜಾತ್ರೆಯಾಗಿ ಆಚರಣೆಗೊಳ್ಳತೊಡಗಿತು.

ಅಲ್ಲದೆ ಸಿಕ್ಕಿದ್ದ ಬಸವನ ವಿಗ್ರಹವು ಎತ್ತರಕ್ಕೆ ಬೆಳೆಯಲಾರಂಭಿಸಿತಂತೆ. ಈ ರೀತಿಯಾಗಿ ಶೀಘ್ರವಾಗಿ ಬೆಳೆಯುತ್ತಿದ್ದ ಬಸವನ ವಿಗ್ರಹವು ಮತ್ತಷ್ಟು ಎತ್ತರಕ್ಕೆ ಬೆಳೆಯದಂತೆ ತ್ರಿಶೂಲಿನಾಕಾರದ ಕಬ್ಬಿಣವನ್ನು ಅದರ ಹಣೆಗೆ ಲಗತ್ತಿಸಲಾಗಿ ಅದರ ಬೆಳವಣಿಗೆ ನಿಂತಿತೆಂದು ಹೇಳಲಾಗುತ್ತದೆ. ನಂತರ 1537 ರಲ್ಲಿ ಕೆಂಪೇಗೌಡರು ಒಂದು ಪುಟ್ಟ ಬೆಟ್ಟದ ಮೇಲಿನ ದೇವಾಲಯವೊಂದನ್ನು ದೊಡ್ಡ ಬಸವಣ್ಣನಿಗೆ ಸಮರ್ಪಿಸಿದರು.

ಸ್ವಾಗತ ಕಮಾನು:

ಸ್ವಾಗತ ಕಮಾನು:

ಭೇಟಿ ನೀಡುವವರಿಗೆ ಸ್ವಾಗತ ಕೋರುತ್ತಿರುವ ಭವ್ಯ ಸ್ವಾಗತ ಕಮಾನು. ಇಲ್ಲಿಂದ ಜನಜಂಗುಳಿಯಿಂದ ತುಂಬಿರುವ ಬೀದಿ ಯಾತ್ರೆ ಪ್ರಾರಂಭಗೊಳ್ಳುತ್ತದೆ.

ಸ್ವಾಗತ ಫಲಕ:

ಸ್ವಾಗತ ಫಲಕ:

ಕನ್ನಡ ಚಲನಚಿತ್ರರಂಗದ ಕಣ್ಮಣಿಗಳ ಭಾವಚಿತ್ರದೊಂದಿಗೆ ಸ್ವಾಗತ ಕೋರುತ್ತಿರುವ ಸಂದೇಶ ಫಲಕ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ವಿವಿಧ ತಳಿಗಳ ರುಚಿಕರ ಕಡಲೆಕಾಯಿಗಳು.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಕೊಳ್ಳುವವರನ್ನು ಕಾಯುತ್ತಿರುವ ಕಡಲೆಕಾಯಿಗಳ ರಾಶಿ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಅಲ್ಲೆ ತಿನ್ನುತ್ತಾ ರಂಗೇರಿದ ವಾತಾವರಣವನ್ನು ಸವಿಯುತ್ತಾ ಸಾಗಲು ಬೇಯಿಸಿದ ಕಡಲೆಕಾಯಿಯೂ ಲಭ್ಯ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ದಟ್ಟವಾದ ಜನ ಜಂಗುಳಿ. ಹಳ್ಳಿಗಳ ಜಾತ್ರೆಯನ್ನು ನೆನಪಿಸುವ ವಾತಾವರಣ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಅಲ್ಲಲ್ಲಿ ಕಾಣಸಿಗುವ ನೆಲ್ಲಿಕಾಯಿ, ಹುಣಸೆಕಾಯಿ ಒತ್ತು ಗಾಡಿಗಳು.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಮಣ್ಣನ್ನು ಬೇರ್ಪಡಿಸಿ ಮಾರಲು ಸಿದ್ಧಮಾಡುತ್ತಿರುವ ಮಹಿಳಾ ವ್ಯಾಪಾರಿ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಅಬ್ಬಬ್ಬಾ...ಎಲ್ಲೆಲ್ಲೂ ರಾಶಿ ರಾಶಿ ಕಡಲೆಕಾಯಿ

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಕಡಲೆಕಾಯಿಯನ್ನು ಕೊಳ್ಳುತ್ತಿರುವ ಗ್ರಾಹಕ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಯುವಜನಾಂಗಕ್ಕೂ ಇಷ್ಟವಾಗುವ ಚಾಟ್, ಮಿಠಾಯಿಗಳೂ ಲಭ್ಯ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಗ್ರಾಮೀಣ ಪರಂಪರೆಯಲ್ಲಿ ಅರಳಿದ ವಿವಿಧ ಕಲಾಕೃತಿಗಳೂ ಜಾತ್ರೆಯಲ್ಲಿ ಗಮನ ಸೆಳೆಯುತ್ತವೆ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಬಾಯಲ್ಲಿ ನೀರೂರಿಸುವ ಬಜ್ಜಿ, ಪಕೋಡಾ, ಜಿಲೇಬಿ, ಮೈಸೂರು ಪಾಕ್ ಗಳು ನಿಮ್ಮ ಜಿಹ್ವಾ ಚಪಲವನ್ನು ತಣಿಸಲು ಸಿದ್ಧವಾಗಿರುತ್ತವೆ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಉಲುವನ್ನು ತೋರಿಸುವ ವಾತಾವರಣ

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ವ್ಯಾಪಾರದಲ್ಲಿ ನಿರತ ಕಡಲೆಕಾಯಿ ವ್ಯಾಪಾರಿ ದಂಪತಿ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಭಕ್ತಾದಿಗಳಿಂದ ತುಂಬಿ ತುಳುಕಿದ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಉತ್ಸವದ ಕೇಂದ್ರ ಬಿಂದು ದೊಡ್ಡ ಬಸವನ (ಬುಲ್ ಟೆಂಪಲ್) ದೇವಾಲಯದ ಮಾರ್ಗ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಸರದಿಯಲ್ಲಿ ಸಾಗುತ್ತಾ ದೊಡ್ಡ ಬಸವನ ದರ್ಶನ ಪಡೆಯುತ್ತಿರುವ ಜನಸಾಗರ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ದೊಡ್ಡ ಬಸವನ ದೇವಸ್ಥಾನದ ಪಕ್ಕದಲ್ಲೆ ಇರುವ ದೊಡ್ಡ ಗಣೇಶನ ದೇವಸ್ಥಾನದ ಗೋಪುರ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ತಮ್ಮ ಗ್ರಾಹಕರಿಗಾಗಿ ಕಾದು ಕುಳಿತಿರುವ ಕಡಲೆಕಾಯಿಗಳ ದಟ್ಟ ರಾಶಿ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಮಹಿಳೆಯರನ್ನು ಆಕರ್ಷಿಸುವ ವಿವಿಧ ಕಲಾ ಸಾಮಗ್ರಿ ಹಾಗು ಅಲಂಕಾರಿಕ ವಸ್ತುಗಳು.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಜಾತ್ರೆಯ ಗದ್ದಲದ ಒಂದು ನೋಟ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಫಳ ಫಳ ಹೊಳೆಯುವ ಕಲಾಕೃತಿಗಳು ಈ ಜಾತ್ರೆಯಲ್ಲಿ ಕೊಳ್ಳಲು ಸಿಗುತ್ತವೆ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಮಹಿಳೆಯರನ್ನು ಚುಂಬಕದಂತೆ ಆಕರ್ಷಿಸುವ ತಾತ್ಕಾಲಿಕ ಅಂಗಡಿ ಮುಗ್ಗಟ್ಟುಗಳು.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಜನಸಾಗರದ ಮಧ್ಯೆ ತನ್ನ ಕಾಯಕದಲ್ಲಿ ನಿರತನಾಗಿರುವ ವ್ಯಾಪಾರಿ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ನಿರಾಯಾಸವಾಗಿ ನಡೆಯಲು ಅವಕಾಶ ಮಾಡಿಕೊಡದಂತಹ ದಟ್ಟ ಜನಸಾಗರ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಪಿಂಗಾಣಿಯಿಂದ ಮಾಡಲಾದ ವಿವಿಧ ವಸ್ತುಗಳು

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ತನ್ನ ಕಾಯಕದಲ್ಲಿ ನಿರತ್ನಾದ ಏಕಾಂಗಿ ವ್ಯಾಪಾರಿ

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಗೃಹೋಪಯೋಗಿ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಕೊಳ್ಳುವ ಅವಕಾಶ ಈ ಜಾತ್ರೆಯಲ್ಲಿ.

ಕಡಲೆಕಾಯಿ ಪರಿಶೆ:

ಕಡಲೆಕಾಯಿ ಪರಿಶೆ:

ಗ್ರಾಹಕರಿಗಾಗಿ ಕಾಯುತ್ತಿರುವ ವ್ಯಾಪಾರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X