Search
  • Follow NativePlanet
Share
» »ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!

ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!

By Vijay

ಕರ್ನಾಟಕದ ಪೊಲಲಿ ಎಂಬ ಗ್ರಾಮದಲ್ಲಿರುವ ಈ ಈ ಪುರಾತನ ರಾಜರಾಜೇಶ್ವರಿಯ ದೇವಾಲಯವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಮಹತ್ವ ಪಡೆದಿದೆ. ಎಂಟನೇಯ ಶತಮಾನದಲ್ಲಿ ಈ ಪ್ರಾಂತವನ್ನಾಳುತ್ತಿದ್ದ ಸುರಾತ ಎಂಬ ರಾಜನಿಂದ ಈ ದೇವಾಲಯ ನಿರಿಸಲ್ಪಟ್ಟಿದೆ ಎಂದು ಹೆಳಲಾಗಿದೆ. ನಂತರ ಕ್ರಮೇಣ ಈ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂರ ಅರಸರಿಂದ ಈ ದೇವಾಲಯವು ಸಾಕಷ್ಟು ಅಭಿವೃದ್ಧಿ ಕಂಡಿತು.

ಚಿಂತಪೂರ್ಣಿಯ ಚಿನ್ನಮಸ್ತಾ ದೇವಿ ಶಕ್ತಿಪೀಠ

ಹಿಂದು ವಾಸ್ತುಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯದ ಮುಖ್ಯ ಅಥವಾ ಪ್ರಧಾನ ದೇವತೆ ಶಕ್ತಿಯ ರೂಪವಾದ ಶ್ರೀ ರಾಜರಾಜೇಶ್ವರಿ ದೇವಿ. ಈ ದೇವಾಲಯದಲ್ಲಿರುವ ರಾಜರಾಜೇಶ್ವರಿಯ ವಿಗ್ರಹವು ಸಾಕಷ್ಟು ಆಕರ್ಷಕವಾಗಿದ್ದು ಜೇಡಿ ಮಣ್ಣಿನಿಂದ ಮಾಡಲ್ಪಟ್ಟಿದೆ. ಇನ್ನೊಂದು ವಿಶೇಷವೆಂದರೆ ಈ ವಿಗ್ರಹ ನಿರ್ಮಾಣಕ್ಕೆ ಬಳಸಲಾದ ಜೇಡಿ ಮಣ್ಣಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ ಎನ್ನಲಾಗುತ್ತದೆ.

ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!

ಚಿತ್ರಕೃಪೆ: Surajt88

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹಲವು ಶಕ್ತಿಶಾಲಿ ದೇವಿಯರ ದೇವಾಲಯದಲ್ಲಿ ಇದನ್ನೂ ಸಹ ಒಂದಾಗಿ ಪರಿಗಣಿಸಲಾಗಿದ್ದು ಫಾಲ್ಗುಣಿ ನದಿಯ ತಟದ ಮೇಲೆ ನೆಲೆಸಿದೆ. ಪುರಲ್ ಎಂಬ ತುಳು ಭಾಷೆಯ ಪದದಿಂದ ಪೊಲಲಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ದೇವಾಲಯದ ಕುರಿತು ಮಾರ್ಖಂಡೇಯ ಪುರಾಣ ಹಾಗೂ ಅಶೋಕ ಶಾಸನಗಳಲ್ಲೂ ಸಹ ಉಲ್ಲೇಖಿಸಲಾಗಿದೆ.

ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!

ಚಿತ್ರಕೃಪೆ: Surajt88

ಸಂಸ್ಕೃತದಲ್ಲಿ ಪಾಲಿಯಾಪುರ ಎಂದು ಉಲ್ಲೇಖಿಸಲಾಗಿದ್ದು ನಂತರ ಕಾಲಕ್ರಮೇಣ ಕನ್ನಡದಲ್ಲಿ ಪೊಲಲಿ ಎಂಬ ಹೆಸರು ಪಡೆಯಿತು. ಪುರಲ್ ಎಂದರೆ ದಿಕ್ಕು ಬದಲಾಯಿಸುವುದು ಎಂಬರ್ಥವಿದ್ದು ಪೊಲಲಿಯ ಈ ದೇವಾಲಯ ತಾಣದ ಬಳಿ ಫಾಲ್ಗುಣಿಯು ಹಟಾತ್ತಾಗಿ ದಿಕ್ಕನ್ನೆ ಬದಲಾಯಿಸುವುದರಿಂದ ಈ ರೀತಿ ಹೆಸರು ಬಂದಿರಬಹುದೆಂದು ಅಂದಾಜಿಸಲಾಗಿದೆ.

ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!

ಚಿತ್ರಕೃಪೆ: Surajt88

ದಿನವೂ ಹಲವು ಪೂಜಾ ವಿಧಿ ವಿಧಾನಗಳು ಈ ದೇವಾಲಯದಲ್ಲಿ ಅರ್ಚಕರ ನೆರವಿನಿಂದ ಜರುಗುತ್ತದೆ. ಅಲ್ಲದೆ ವಾರ್ಷಿಕವಾಗಿ ದೇವಾಲಯದ ಉತ್ಸವವನ್ನು ಅತಿ ಆದರ ಸಡಗರದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಮದ ಜನ ಹಾಗೂ ಸುತ್ತಮುತ್ತಲಿನ ಸ್ಥಳಗಳಿಂದ ಸಾವಿರಾರು ಸಂಖ್ಯೆಯಲ್ಲಿ ದೇವಿಯ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!

ಚಿತ್ರಕೃಪೆ: Surajt88

ಮುಖ್ಯವಾಗಿ ಇಲ್ಲಿ ಆಚರಿಸಲಾಗುವ ಉತ್ಸವವೆಂದರೆ ಪೊಲಲಿ ಚೆಂಡು ಉತ್ಸವ. ಹೌದು ನೀವು ಕೇಳುತ್ತಿರುವುದು ನಿಜ. ಪ್ರತಿ ವರ್ಷ ಮಾರ್ಚ್ ಸಮಯದಲ್ಲಿ ನಡೆಯುವ ಇದೊಂದು ಚೆಂಡಾಟ ಅದರಲ್ಲೂ ವಿಶೇಷವಾಗಿ ಆಂಗ್ಲದಲ್ಲಿ ಹೇಳಲಾಗುವಂತೆ "ಫುಟ್ ಬಾಲ್" ಅಂದರೆ ಕಾಲ್ಚೆಂಡಿನ ಉತ್ಸವವಾಗಿದೆ. ದೇವಿಯ ಸನ್ನಿಧಿಯಲ್ಲಿ ಆಚರಿಸಲಾಗುವ ಈ ವಿಶೇಷ ಉತ್ಸವವು ಕೆಟ್ಟದ್ದರ ಮೇಲೆ ಒಳ್ಳೆಯತನದ ವಿಜಯವನ್ನು ಸಾರುವ ಪ್ರತೀಕವಾಗಿದೆ.

ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!

ಚಿತ್ರಕೃಪೆ: Hari Prasad Nadig

ಸುಮಾರು ಐದು ದಿನಗಳ ಕಾಲ ನಡೆಯುವ ಈ ಕಾಲ್ಚೆಂಡು ಉತ್ಸವ ನೋಡಲು ಸಾಕಷ್ಟು ವಿಶೇಷವಾಗಿರುತ್ತದೆ. ಪೊಲಲಿ ಬಳಿಯಿರುವ ಮಿಜಾರ್ ಎಂಬ ಸ್ಥಳದ ಚಮ್ಮಾರ ಕುಟುಂಬವೊಂದು ಚರ್ಮದ ಹೊದಿಕೆಯ ಈ ವಿಶೇಷವಾದ ಚೆಂಡನ್ನು ನಿರ್ಮಿಸುವ ಜವಾಬ್ದಾರಿ ಹೊಂದಿರುತ್ತಾರೆ. ಎಣ್ಣೆಯ ಉತ್ಪಾದಕ ಗಾಣಿಗ ಕುಟುಂಬದವರು ಈ ಚೆಂಡನ್ನು ತರುವ ಜವಾಬ್ದಾರಿ ಪಡೆದಿರುತ್ತಾರೆ.

ಚೆಂಡಾಟ ಇಷ್ಟಪಡುವ ರಾಜರಾಜೇಶ್ವರಿ ದೇವಿ!

ಚಿತ್ರಕೃಪೆ: Surajt88

ಈ ರೀತಿಯಾಗಿ ಚೆಂಡನ್ನು ದೇವಿಯ ಸನ್ನಿಧಿಯಲ್ಲಿಟ್ಟು ಪ್ರಾರ್ಥಿಸುತ್ತಾರೆ. ನಂತರ ಚೆಂಡನ್ನು ಮೈದಾನದೊಳಗೆ ತೆಗೆದುಕೊಂಡು ಹೋಗಿ ಆಟವನ್ನು ಪ್ರಾರಂಭಿಸಲಾಗುತ್ತದೆ. ಇಷ್ಟೆ ಸಂಖ್ಯೆ ಎಂಬ ಯಾವ ನಿಯಮವಿಲ್ಲ, ಆದಾಗ್ಯೂ 500 ಕ್ಕೂ ಹೆಚ್ಚು ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಐತಿಹಾಸಿಕವಾಗಿ ಈ ಚೆಂಡಾಟ ಕೆಟ್ಟದ್ದರ ಮೇಲೆ ಒಳ್ಳೆಯತನದ ಗೆಲುವನ್ನು ಸೂಚಿಸುತ್ತದೆ.

ಮದುರೈ ಮೀನಾಕ್ಷಿ, ಏನಿದೆ ದಂತಕಥೆ?

ಹಾಗಾದರೆ ನೀವು ಈ ಆಟ ಆಡಿ ದೇವಿಯ ಕೃಪೆಗೆ ಪಾತ್ರರಾಗಬೇಕೆ? ಹಾಗಿದ್ದಲ್ಲಿ ಮಾರ್ಚ್ ಸಮಯದಲ್ಲಿ ಪೊಲಲಿ ಗ್ರಾಮಕ್ಕೊಮ್ಮೆ ಭೇಟಿ ನೀಡಿ. ಪೊಲಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಗ್ರಾಮವಾಗಿದೆ. ಮಂಗಳೂರು ನಗರ ಕೇಂದ್ರದಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿ ಪೊಲಲಿ ಗ್ರಾಮವಿದ್ದು ತೆರಳಲು ವಾಹನಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X