Search
  • Follow NativePlanet
Share
» »ಹಂಪೆಯ ಅವಶೇಷಗಳತ್ತ ಒಂದು ಪ್ರಯಾಣ

ಹಂಪೆಯ ಅವಶೇಷಗಳತ್ತ ಒಂದು ಪ್ರಯಾಣ

ಹಂಪೆಯ ಹೆಸರು ಕೇಳಿದರೆ ಸಾಕು ಮನಸ್ಸಿಗೆ ತಕ್ಷಣ ಬರುವ ವಿಷಯವೆಂದರೆ ಸುಪ್ರಸಿದ್ದ ವಿಜಯನಗರದ ಅವಶೇಷಗಳ ಸುತ್ತ ಇರುವ ಸುಂದರವಾದ ಮತ್ತು ವಿಸ್ತಾರವಾದ ವಾಸ್ತುಶಿಲ್ಪ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಮತ್ತು ಹೊಯ್ಸಳ ವಾಸ್ತುಶಿಲ್ಪದ ಸಂಪ್ರದಾಯವನ್ನು ಅದ್ಭುತವಾಗಿ ಪ್ರದರ್ಶಿಸುವ ವಿಜಯನಗರ ಅಥವಾ ಹಂಪಿಯ ಕಲ್ಲುಗಳಲ್ಲಿ ಕಾಣಬಹುದಾಗಿದೆ.

ಹಂಪೆಯ ಕೆಲವು ಸತ್ಯಾಂಶಗಳು

ಇತಿಹಾಸಕಾರರ ಪ್ರಕಾರ ಹಂಪೆಯ ಉಲ್ಲೇಖ ಮಹಾಕಾವ್ಯ ರಾಮಾಯಣದಲ್ಲಿ ಕಿಷ್ಕಿಂದಾ ಎಂದು ಇದ್ದರೂ ಸಹ ಈ ಸ್ಥಳವು ಬೆಳಕಿಗೆ ಬಂದಿದ್ದು 13 ರಿಂದ 16ರವರೆಗಿನ ವಿಜಯನಗರ ರಾಜರುಗಳ ರಾಜಧಾನಿಯಾದ ನಂತರದಿಂದ ಎಂದು ಹೇಳಬಹುದು.

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪೆಯು ಬೆಂಗಳೂರಿನಿಂದ ಸುಮಾರು 350 ಕಿ.ಮೀ ಅಂತರದಲ್ಲಿದ್ದು ಈ ಸ್ಥಳವನ್ನು ಕೆಲವೇ ಕೆಲವು ಗಂಟೆಗಳ ಅವಧಿಯಲ್ಲಿ ಸುಲಭವಾಗಿ ತಲುಪಬಹುದಾಗಿದೆ. ಇಲ್ಲಿಯ ಅವಶೇಷಗಳ ಸೌಂದರ್ಯತೆಗಳನ್ನು ಸಂಪೂರ್ಣವಾಗಿ ಸವಿಯಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಪ್ರತೀ ವರ್ಷ ಭೇಟಿ ನೀಡುತ್ತಾರೆ. ಇಲ್ಲಿ ಹೆಚ್ಚಿನ ಪ್ರವಾಸಿಗರು ಮಾಡುವಂತೆ ದ್ವಿಚಕ್ರವಾಹನಗಳನ್ನು ಬಾಡಿಗೆಗೆ ಪಡೆದುಕೊಂಡು ಅವಶೇಷಗಳ ಸುತ್ತ ನಿಮ್ಮ ಪ್ರಯಾಣವನ್ನು ಮಾಡಬಹುದಾಗಿದೆ.

Hampi, Vijayanagara,

ಪ್ರವಾಸಿಗರು ಹಂಪಿ ಮತ್ತು ಇಲ್ಲಿಯ ಸುತ್ತ ಮುತ್ತಲಿನ ಸ್ಥಳಗಳಿಗೆ ಏಕೆ ಬರುತ್ತಾರೆ?

ಹಂಪೆಯು ಕೇವಲ ಇಲ್ಲಿಯ ಅವಶೇಷಗಳಲ್ಲಿ ಅಡಗಿರುವ ವಾಸ್ತು ಶಿಲ್ಪಗಳ ಸೌಂದರ್ಯತೆಗಳಿಗೆ ಮಾತ್ರ ಹೆಸರುವಾಸಿಯಾಗಿರದೆ ಇದು ಧಾರ್ಮಿಕತೆಯ ಇತಿಹಾಸಕ್ಕೂ ಪ್ರಸಿದ್ದಿಯಾಗಿದೆ. ಇಲ್ಲಿ ಅನೇಕ ಪ್ರಸಿದ್ದ ದೇವಾಲಯಗಳಿವೆ ಅವುಗಳಲ್ಲಿ ವಿರೂಪಾಕ್ಷ ದೇವಾಲಯ, ವಿಟ್ಟಲ ಮತ್ತು ಆಂಜನೇಯಾದ್ರಿ ದೇವಾಲಯಗಳು ಪ್ರಮುಖವಾದುದಾಗಿದೆ. ಈ ಪಟ್ಟಣದ ಪಕ್ಕದಲ್ಲಿ ಕರ್ನಾಟಕದ ದೊಡ್ಡ ನದಿಗಳಲ್ಲೊಂದಾದ ತುಂಗಭದ್ರಾ ನದಿಯು ಹರಿಯುತ್ತದೆ ಇದು ಈ ಅವಶೇಷಗಳ ಸೌಂದರ್ಯತೆಗೆ ಇನ್ನಷ್ಟು ಮೆರುಗನ್ನು ನೀಡುತ್ತದೆ.

ವಿಜಯನಗರದ ರಾಜರುಗಳಿಂದ ನಿರ್ಮಿತವಾದ ದೇವಾಲಯಗಳಲ್ಲಿಯ ಸುಂದರವಾದ ಕಲ್ಲಿನ ಕೆತ್ತನೆಯ ಕಂಬಗಳಿಗೆ ಇಲ್ಲಿಯ ಸುತ್ತಮುತ್ತಲಿನ ಬೆಟ್ಟಗಳ ನೈಸರ್ಗಿಕ ಬಂಡೆಗಳ ಕಲ್ಲುಗಳು ಮೂಲವಾಗಿದ್ದು ಇವುಗಳನ್ನು ಇಲ್ಲಿಯ ಕೆತ್ತನೆಗಳಿಗೆ ಬಳಸುತ್ತಿದ್ದರೆನ್ನಲಾಗುತ್ತದೆ.

ದೇವಾಲಯಗಳು ಮತ್ತು ನೈಸರ್ಗಿಕ ದೃಶ್ಯಾವಳಿಗಳ ಹೊರತಾಗಿ, ವಿಜಯನಗರ ರಾಜರ ಪಟ್ಟಣ-ಯೋಜನಾ ಕೌಶಲ್ಯವನ್ನು ಪ್ರತಿಬಿಂಬಿಸುವ ಹಲವಾರು ನೀರಿನ ಟ್ಯಾಂಕ್‌ಗಳು ಮತ್ತು ಇತರ ಸಾರ್ವಜನಿಕ ಕಟ್ಟಡಗಳನ್ನು ಸುಂದರವಾಗಿ ನಿರ್ಮಿಸಲಾಗಿದೆ.13 ರಿಂದ 15 ನೇ ಶತಮಾನದ ನೀರಿನ ನಿರ್ವಹಣಾ ವ್ಯವಸ್ಥೆಯ ಒಂದು ನೋಟವನ್ನು ನೀಡುವ ಜಲ ನಿರ್ವಹಣಾ ವ್ಯವಸ್ಥೆಗಳು ಮತ್ತು ಕಾಲುವೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಇಲ್ಲಿ 500 ಕ್ಕೂ ಹೆಚ್ಚಿನ ಆಸಕ್ತಿದಾಯಕ ಸ್ಥಳಗಳಿದ್ದು ಅವುಗಳಲ್ಲಿ 100 ಕ್ಕಿಂತಲೂ ಹೆಚ್ಚಿನ ಸ್ಥಳಗಳು ಪ್ರತೀ ವರ್ಷ ಸಾವಿರಾರು ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ. ಇಲ್ಲಿ ವಿಟ್ಟಲ ದೇವಾಲಯದಲ್ಲಿರುವ ಕಲ್ಲಿನ ರಥವು ಕಲ್ಲಿನ ಕೆತ್ತನೆಯ ಸೌಂದರ್ಯತೆಯು ವಿಜಯನಗರ ಸಾಮ್ರಾಜ್ಯದ ಸಂಸ್ಕೃತಿಯ ವೈಭವತೆಗೆ ಒಂದು ಉತ್ತಮ ನಿದರ್ಶನವಾಗಿದೆ ಮತ್ತು ಇದನ್ನು ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಲಾಂಛನವಾಗಿ ಅಳವಡಿಸಲಾಗಿದೆ.

ಹಂಪಿಯಲ್ಲಿ ಇಂದಿಗೂ ಉತ್ಖನನ ಮುಂದುವರೆದಿದೆ, ಪ್ರತಿದಿನವೂ ಕಲಾಕೃತಿಗಳನ್ನು ಹೊರತೆಗೆಯಲಾಗುತ್ತಿದೆ. ಇಲ್ಲಿರುವ ಪುರಾತತ್ವ ವಸ್ತುಸಂಗ್ರಹಾಲಯವು ಹಂಪಿಗೆ ಭೇಟಿ ನೀಡುವವರು ನೋಡಲೇಬೇಕಾದ ಸ್ಥಳವಾಗಿದೆ.

ವಿಜಯನಗರದ ರಾಜರು ಹಂಪಿ/ವಿಜಯನಗರವನ್ನು ತಮ್ಮ ರಾಜಧಾನಿಯಾಗಿ ಆಯ್ಕೆ ಮಾಡಿಕೊಂಡರು, ಈ ಸ್ಥಳವು ಮೂರು ಕಡೆ ಬೆಟ್ಟಗಳಿಂದ ಸುತ್ತುವರಿದಿದೆ ಮತ್ತು ತುಂಗಭದ್ರಾ ನದಿಯ ಮುಂಭಾಗದಲ್ಲಿರುವುದರಿಂದ ಶತ್ರುಗಳಿಗೆ ದಾಳಿ ನಡೆಸಲು ಕಷ್ಟಕರ ಸವಾಲನ್ನು ನೀಡಿತ್ತು. ಇಂದು, ಇಲ್ಲಿಯ ಗುಡ್ಡಗಾಡು ಮತ್ತು ನದಿ ಪ್ರವಾಸಿಗರಿಗೆ ಕೆಲವು ಮರೆಯಲಾಗದ ನೈಸರ್ಗಿಕ ಮತ್ತು ಪುರಾತತ್ತ್ವ ಶಾಸ್ತ್ರದ ವೈಭವವನ್ನು ನೀಡುತ್ತವೆ. ದಕ್ಷಿಣ ಭಾರತಕ್ಕೆ ಭೇಟಿ ನೀಡುವ ಯಾವುದೇ ಪ್ರವಾಸಿಗರು ಹೊಯ್ಸಳ ವಾಸ್ತುಶಿಲ್ಪದ ಈ ಸೌಂದರ್ಯತೆಯನ್ನು ಸವಿಯುವುದನ್ನು ಮರೆಯಬಾರದು.

ಹಂಪಿಗೆ ಭೇಟಿ ನೀಡಲು ಸೂಕ್ತವಾದ ಸಮಯ

ಚಳಿಗಾಲವು ಹಂಪೆಗೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ.

ಹಂಪಿಯನ್ನು ತಲುಪುವುದು ಹೇಗೆ?

ಮಾನ, ರೈಲು ಮತ್ತು ರಸ್ತೆಸಂಚಾರಗಳ ಮೂಲಕ ಹಂಪೆಯನ್ನು ಸುಲಭವಾಗಿ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X