Search
  • Follow NativePlanet
Share
» »ರಾಜಸ್ಥಾನದಲ್ಲಿ ಭೇಟಿ ನೀಡಲೇ ಬೇಕಾದ 8 ಜನಪ್ರಿಯ ಶಿವ ದೇವಾಲಯಗಳು

ರಾಜಸ್ಥಾನದಲ್ಲಿ ಭೇಟಿ ನೀಡಲೇ ಬೇಕಾದ 8 ಜನಪ್ರಿಯ ಶಿವ ದೇವಾಲಯಗಳು

By Manjula Balaraj Tantry

ಹೆಚ್ಚಾಗಿ ಹಿಂದೂ ದೇವರುಗಳಿಗೆ ಅರ್ಪಿತವಾದ ಅನೇಕ ದೇವಾಲಯಗಳನ್ನು ನಾವು ರಾಜಸ್ಥಾನದಲ್ಲಿ ಕಾಣಬಹುದಾಗಿದ್ದು ಇವುಗಳನ್ನು ಧಾರ್ಮಿಕವಾಗಿ ರಜಪೂತರುಗಳಿಂದ ಪೂಜಿಸಲ್ಪಡುತ್ತದೆ. ಪ್ರತೀ ಕುಟುಂಬವೂ ತನ್ನದೇ ಆದ ದೇವರನ್ನು ಹೊಂದಿದೆ. ಅವುಗಳಲ್ಲಿ ಬ್ರಹ್ಮ ದೇವರು, ವಿಷ್ಣು ದೇವರು ಮತ್ತು ಶಿವ ದೇವರು ಮತ್ತು ಅವರ ನಾನಾ ಅವತಾರಗಳನ್ನು ಇಲ್ಲಿ ಪೂಜಿಸಲಾಗುತ್ತದೆ.

ಹಿಂದೂ ಪುರಾಣದ ಪ್ರಕಾರ ಇಲ್ಲಿ 33 ಕೋಟಿ ದೇವ ದೇವಿಯರನ್ನು ಪೂಜಿಸಲಾಗುತ್ತದೆ ಇದರಲ್ಲಿ ಶಿವ, ವಿಷ್ಣು ಮತ್ತು ಬ್ರಹ್ಮ ದೇವರುಗಳನ್ನು ಅತ್ಯಂತ ಪ್ರಮುಖರು ಎಂದು ಪರಿಗಣಿಸಲಾಗುತ್ತದೆ. ರಾಜಸ್ಥಾನದಲ್ಲಿ ಶಿವ ದೇವರ ಅನುಯಾಯಿಗಳು ತುಂಬಾ ಪ್ರಮಾಣದಲ್ಲಿದ್ದಾರೆ. ಆದುದರಿಂದ ಇಲ್ಲಿ ಶಿವ ದೇವರಿಗೆ ಅರ್ಪಿತವಾದ ಅನೇಕ ದೇವಾಲಯಗಳಿವೆ. ರಾಜಸ್ಥಾನದಲ್ಲಿರುವ 8 ಅತ್ಯಂತ ಪ್ರಮುಖವಾದ ಶಿವ ದೇವಾಲಯಗಳ ಬಗ್ಗೆ ಪರಿಶೀಲಿಸಿ.

1. ಭಂಡ್ ದೇವಾ ದೇವಾಲಯ ರಾಮ್ ಘಡ್

1. ಭಂಡ್ ದೇವಾ ದೇವಾಲಯ ರಾಮ್ ಘಡ್

PC: Harshal Sharma

ಮಾಳ್ವರ ನಾಗಾ ಸಾಮ್ರಾಜ್ಯದ ರಾಜಾ ಮಾಲಯ ವರ್ಮಾ ಅವರಿಂದ ನಿರ್ಮಿಸಲಾದ ಭಂಡ್ ದೇವಾ ದೇವಾಲಯವು ರಾಜಸ್ಥಾನದ ಅತ್ಯಂತ ಪ್ರಮುಖ ಶಿವ ದೇವಾಲಯಗಳಲ್ಲೊಂದಾಗಿದೆ. ಶೈವ ಧರ್ಮದ ತಾಂತ್ರಿಕ ಸಂಪ್ರದಾಯವನ್ನು ಅನುಸರಿಸುವ ಕಾರಣದಿಂದಾಗಿ 10 ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಆದರೂ ಮೇಧ ಸಾಮ್ರ್ಯಾಜ್ಯದ ರಾಜಾ ತ್ರಿಷಾ ವರ್ಮ ಅವರು ಕ್ರಿ.ಶ 1162 ರಲ್ಲಿ ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದರು. ಭಂಡ್ ದೇವಾಲಯದ ವಾಸ್ತು ಶಿಲ್ಪವು ಪುರಾತನ ನಾಗರ್ ಶೈಲಿಯದ್ದಾಗಿದೆ ಮತ್ತು ವರ್ಷದುದ್ದಕ್ಕೂ ಅನೇಕ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.

2. ಚೋಮುಖ್ಯ ಭೈರವಾಜಿ ದೇವಾಲಯ

2. ಚೋಮುಖ್ಯ ಭೈರವಾಜಿ ದೇವಾಲಯ

PC: Ashishsultania2k7

ಚೋಮುಖ್ಯ ಭೈರವಾಜಿ ದೇವಾಲಯವು ರಾಜಸ್ಥಾನದ ಸಣ್ಣ ಪಟ್ಟಣವಾದ ಜುಂಜುಹುನು ನಲ್ಲಿ ನೆಲೆಸಿದ್ದು, ಈ ದೇವಾಲಯವು ಶಿವ ದೇವರಿಗೆ ಸಮರ್ಪಿತವಾದುದಾಗಿದೆ. ಈ ದೇವಾಲಯವು ರಾಜ್ಯದ ಒಂದು ಅತ್ಯಂತ ಪ್ರಮುಖವಾದ ಶಿವ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಶಿವನ ಭಯಂಕರ ರೂಪವನ್ನು ಕಾಣಬಹುದಾಗಿದ್ದು ಈ ರೂಪವನ್ನು ಭೈರವ ಎಂದು ಕರೆಯಲಾಗುತ್ತದೆ. ಪ್ರವಾಸಿಗರು ಅಥವಾ ಭಕ್ತರು ಬಹಳಷ್ಟು ಸಂಖ್ಯೆಯಲ್ಲಿ ಈ ದೇವಾಲಯವನ್ನು ಭೇಟಿ ಕೊಡುತ್ತಾರೆ ಫೆಬ್ರವರಿಯಲ್ಲಿ ಜಾಗರಣೆಯ ತಿಥಿಯು ಬರುವುದರಿಂದ ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಜನ ಭೇಟಿ ಕೊಡುತ್ತಾರೆ.

3.ಗುಶುಮೇಶ್ವರ್ ಜೋತಿರ್ಲಿಂಗ ಶಿವಾಲಯ ದೇವಾಲಯ

3.ಗುಶುಮೇಶ್ವರ್ ಜೋತಿರ್ಲಿಂಗ ಶಿವಾಲಯ ದೇವಾಲಯ

PC: Ghushmeshwar jyotirlinga

ಗುಶುಮೇಶ್ವರ ಜ್ಯೋತಿರ್ಲಿಂಗವು 12 ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಗುಶ್ ಮೇಶ್ವರ ಜ್ಯೋತಿರ್ಲಿಂಗ ಶಿವಾಲಯ ದೇವಾಲಯವು ದೇಶದ ಒಂದು ಪವಿತ್ರವಾದ ಶಿವ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಶಿವ ಪುರಾಣದ ಪ್ರಕಾರ, ಈ ದೇವಾಲಯವನ್ನು ಕೊನೆಯ ಶಿವ ದೇವರ ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ನಂಬಲಾಗುತ್ತದೆ. ಭಕ್ತರು ಈ ದೇವಾಲಯಗಳಿಗೆ ವರ್ಷಪೂರ್ತಿ ಈ ಅತ್ಯಂತ ಶಕ್ತಿಶಾಲಿ ದೇವರ ಆಶೀರ್ವಾದ ಪಡೆಯಲು ಮತ್ತು ಪೂಜೆಗಳನ್ನು ಅರ್ಪಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿಗೆ ದೇಶದ ಎಲ್ಲಾ ಕಡೆಯಿಂದ ಹಿಂದುಗಳು ಪೂಜೆಯನ್ನು ಸಲ್ಲಿಸಲು ಇಲ್ಲಿಗೆ ಶಿವರಾತ್ರಿ ಹಬ್ಬದ ಸಮಯದಲ್ಲಿ ಬರುವುದರಿಂದ ಈ ದೇವಾಲಯವು ಸುಂದರವಾಗಿ ಅಲಂಕರಿಸಲ್ಪಡುತ್ತದೆ.

4.ಪರಶುರಾಮ ಮಹಾದೇವ್ ದೇವಾಲಯ, ಪಾಳಿ

4.ಪರಶುರಾಮ ಮಹಾದೇವ್ ದೇವಾಲಯ, ಪಾಳಿ

PC: Harshitsanaala

ಪರಶುರಾಮ ಮಹಾದೇವ ದೇವಾಲಯವು ರಾಜಸ್ಥಾನದ ಅರಾವಳಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಒಂದು ಗುಹೆಯಲ್ಲಿದೆ. ಪರಶುರಾಮ ದೇವರು ವಿಷ್ಣು ದೇವರ ಅವತಾರವೆಂದು ಹೇಳಲಾಗುತ್ತದೆ. ಕೊಡಲಿಯ ಸಹಾಯದಿಂದ ಈ ದೇವಾಲಯವನ್ನು ಗುಹೆಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಜನಪ್ರಿಯ ಶಿವನ ದೇವಾಲಯವು ಪ್ರಮುಖವಾಗಿ ಶ್ರಾವಣ ಶುಕ್ಲ ಸಪ್ತಮಿಯ ಸಮಯದಲ್ಲಿ ಪ್ರತೀ ವರ್ಷ ದೊಡ್ಡ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ. ಶಿವ ದೇವರ ಹೊರತಾಗಿ, ಈ ದೇವಾಲಯದ ಒಳಗೆ ಗಣೇಶನ ವಿಗ್ರಹವನ್ನೂ ಪ್ರವಾಸಿಗರು ಕಾಣಬಹುದಾಗಿದೆ.

5.ನಾಲ್ದೇಶ್ವರ ಗೋಪುರ ಮತ್ತು ದೇವಾಲಯ, ಅಲ್ವಾರ್

5.ನಾಲ್ದೇಶ್ವರ ಗೋಪುರ ಮತ್ತು ದೇವಾಲಯ, ಅಲ್ವಾರ್

PC: Akash.nakka

ಹದಿನೆಂಟನೇ ಶತಮಾನದಲ್ಲಿ ನಿರ್ಮಿಸಲಾದ ಈ ಶಿವನ ದೇವಾಲಯವನ್ನು ಅಲ್ವಾರ್ ಗುಹೆಯಲ್ಲಿ ಸ್ವಾಭಾವಿಕವಾಗಿ ಉದ್ಬವ ವಾಗಿರುವ ಶಿವಲಿಂಗವನ್ನು ಆವರಿಸಲು ಕಟ್ಟಿಸಲಾಗಿದೆ. ಈ ದೇವಾಲಯವು ನಂತರ ನಾಲ್ದೇಶ್ವರ ಗುಡಿ ಎಂದು ಹೆಸರುವಾಸಿಯಾಯಿತು. ಇದನ್ನು ಭಾರತದ ಒಂದು ಪವಿತ್ರವಾದ ಧಾರ್ಮಿಕ ದೇವಾಲಯವೆಂದು ಪರಿಗಣಿಸಲಾಗುತ್ತದೆ. ನೀವು ಈ ದೇವಾಲಯಕ್ಕೆ ಭೇಟಿ ಕೊಡುವುದರ ಬಗ್ಗೆ ಯೋಚಿಸುತ್ತಿದ್ದಲ್ಲಿ, ಮಳೆಗಾಲದಲ್ಲಿ ಭೇಟಿ ಕೊಡುವುದು ಸೂಕ್ತ ಏಕೆಂದರೆ ಈ ಸಮಯದಲ್ಲಿ ಮಳೆಯಿಂದಾಗಿ ಈ ಗುಹೆಯ ಸೌಂದರ್ಯತೆಯು ಇನ್ನೂ ಹೆಚ್ಚಿರುತ್ತದೆ.

6. ಬಿಸಾಲ್ಡೋ ದೇವಾಲಯ, ಟೋಂಕ್

6. ಬಿಸಾಲ್ಡೋ ದೇವಾಲಯ, ಟೋಂಕ್

PC: Dilipsinghshekhawat

ಬಿಸಾಲ್ಪುರ ಅಣೆಕಟ್ಟಿನಲ್ಲಿ ನಿರ್ಮಿಸಲಾದ ಬಿಸಾಲ್ಡೋ ದೇವಾಲಯವು ರಾಜಸ್ಥಾನದ ಒಂದು ಜನಪ್ರಿಯ ರಚನೆಯಾಗಿರುವುದರ ಜೊತೆಗೆ ಹಿಂದೂ ಪೌರಾಣಿಕ ಮಹತ್ವವುಳ್ಳದ್ದಾಗಿದೆ. ಈ ದೇವಾಲಯದಲ್ಲಿ ಶಿವ ದೇವರನ್ನು ಗೋಕರ್ಣೇಶ್ವರ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.ಭಾರತದ ಪ್ರಾಚ್ಯ ವಸ್ತು ಸಮೀಕ್ಷೆಯ ಪ್ರಕಾರ ಈ ಸ್ಮಾರಕವನ್ನು ರಾಷ್ಟ್ರೀಯ ಪ್ರಾಮುಖ್ಯತೆ ಉಳ್ಳದ್ದೆಂದು ಘೋಷಿಸಲಾಗಿದೆ ಈ ದೇವಾಲಯವು ಸುಮಾರು 12ನೇ ಶತಮಾನದ್ದಾಗಿದೆ. ಈ ದೇವಾಲಯದ ಹೆಸರನ್ನು ಚಹಮಾನ ಆಡಳಿತಗಾರ ವಿಗ್ರಹರಾಜ IV ರ ಹೆಸರಿಡಲಾಗಿದೆ ಎಂದು ಹೇಳಲಾಗುತ್ತದೆ. ಅವರು ಬಿಸಾಲ್ ಡಿಯೋರಂತೆ ಜನಪ್ರಿಯರಾಗಿದ್ದರು . ಬಿಸಾಲ್ಪುರ್ ಅಣೆಕಟ್ಟನ್ನು ಕಟ್ಟಿದಂದಿನಿಂದ, ದೇವಾಲಯದ ಹೊರಾಂಗಣ ಪ್ರದೇಶವು ಜಲಾಶಯದ ನೀರಿನಲ್ಲಿ ಭಾಗಶಃ ಇದೆ.

7.ಎಕ್ಲಿಂಗ್ಜಿ ದೇವಸ್ಥಾನ, ಉದಯ್ ಪುರ್

7.ಎಕ್ಲಿಂಗ್ಜಿ ದೇವಸ್ಥಾನ, ಉದಯ್ ಪುರ್

PC: Tejaspatel1

ಉದಯಪುರದಲ್ಲಿರುವ ಎಕ್ಲೆಂಜಿ ದೇವಾಲಯವು ರಾಜಸ್ಥಾನದಲ್ಲಿರುವ ಇನ್ನೊಂದು ಅತ್ಯಂತ ಜನಪ್ರೀಯ ದೇವಾಲಯವಾಗಿದ್ದು ಅತ್ಯಂತ ಹೆಚ್ಚಿನ ಪ್ರಮಾಣದ ಭಕ್ತರನ್ನು ಆಕರ್ಷಿಸುತ್ತದೆ. ಧಾರ್ಮಿಕ ಮಹತ್ವದ ಹೊರತಾಗಿ ಈ ಸುಂದರ ಶಿಲ್ಪಗಳು ಮತ್ತು ಸಂಕೀರ್ಣ ಕೆತ್ತನೆಗಳನ್ನು ಒಳಗೊಂಡ ದೇವಾಲಯವು ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮೇವಾರದ ಗುಹಿಲಾ ರಾಜವಂಶದ ಆಳ್ವಿಕೆಯ ಕಾಲದಲ್ಲಿಎಕ್ಲೆಂಜಿಯನ್ನು ಪೂಜೆ ಮಾಡುವುದಕ್ಕಾಗಿ ಈ ದೇವಾಲಯವನ್ನು ಕಟ್ಟಲಾಗಿದ್ದು ಇದು ರಾಜ ಕುಟುಂಬದ ಪವಿತ್ರ ದೈವವಾಗಿತ್ತು.ಮುಖ್ಯ ದೇವಸ್ಥಾನದ ಹೊರತಾಗಿ, ಮುಖ್ಯ ದೇವಾಲಯದ ಒಳಗೆ ಒಟ್ಟು 108 ದೇವಾಲಯಗಳಿವೆ.

8.ಅಚಲೇಶ್ವರ ಮಹಾದೇವ್ ದೇವಾಲಯ, ಮೌಂಟ್ ಅಬು

8.ಅಚಲೇಶ್ವರ ಮಹಾದೇವ್ ದೇವಾಲಯ, ಮೌಂಟ್ ಅಬು

PC: Gyanendrasinghchauha...

ಅಚಲ್ ಘಡ್ ಕೋಟೆಯ ಹೊರಗಡೆ ಇರುವ ಈ ದೇವಾಲಯವು ರಾಜಸ್ಥಾನದಲ್ಲಿರುವ ಮೌಂಟಾಬುನಲ್ಲಿ ಹೆಚ್ಚಾಗಿ ಭೇಟಿ ಕೊಡಲ್ಪಡುವ ದೇವಾಲಯವಾಗಿದೆ. ಪರ್ಮಾರ್ ರಾಜವಂಶವು 9 ನೇ ಶತಮಾನದಲ್ಲಿ ಅಚಲೇಶ್ವರ ಮಹಾದೇವ ದೇವಸ್ಥಾನವನ್ನು ನಿರ್ಮಿಸಿತು ಆದರೂ ಈ ದೇವಾಲಯವು ಅನೇಕ ಬಾರಿ ಪುನರ್ ನಿರ್ಮಾಣಗೊಂಡಿತು. ಈ ದೇವಸ್ಥಾನದ ಶಿವಲಿಂಗಂನ ರೂಪದಲ್ಲಿ ಭಗವಾನ್ ಶಿವನನ್ನು ಪೂಜಿಸಲಾಗುತ್ತದೆ, ಪವಿತ್ರ ಕೈಲಾಶ ಪರ್ವತದ ಗಡಿ ಕಾಯುವ ದೇವತೆಯೆಂದು ಪರಿಗಣಿಸಲ್ಪಟ್ಟಿದೆ.ಇಲ್ಲಿಯ ನಂದಿಯ ರಚನೆಯನ್ನು ಪಂಚ ಧಾತು ಎಂದು ಕರೆಯಲಾಗಿದ್ದು ಇದನ್ನು ಐದು ಲೋಹಗಳಿಂದ ಮಾಡಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X