Search
  • Follow NativePlanet
Share
» »ತಂಡದೊಂದಿಗೆ ಪ್ರವಾಸ ಮಾಡಲು ಬೆಂಗಳೂರು ಸಮೀಪದಲ್ಲಿರುವ ಅತ್ಯಂತ ಉತ್ತಮವಾದ ಸ್ಥಳಗಳು

ತಂಡದೊಂದಿಗೆ ಪ್ರವಾಸ ಮಾಡಲು ಬೆಂಗಳೂರು ಸಮೀಪದಲ್ಲಿರುವ ಅತ್ಯಂತ ಉತ್ತಮವಾದ ಸ್ಥಳಗಳು

ಭಾರತದ ಐಟಿ ರಾಜಧಾನಿಯಾಗಿರುವ ಬೆಂಗಳೂರು ನಗರವು ಎಲ್ಲಾ ತರಹದ ನಾನಾ ಕಂಪೆನಿಗಳಿಂದ ಕೂಡಿದ್ದು 9-5 ಗಂಟೆಗಳ ತನಕ ಕೆಲಸದ ದಿನಚರಿಯನ್ನು ಅನುಸರಿಸುತ್ತಾ ವಾರಾಂತ್ಯದಲ್ಲಿ ರಜೆಯನ್ನು ಹೊಂದಿರುತ್ತದೆ. ಕೆಲವು ಕಂಪನಿಗಳು ತನ್ನ ಕಾರ್ಮಿಕರ ಆಯಾಸವನ್ನು ನೀಗಿಸಲು ಮತ್ತು ಉದೋಗಿಗಳಲ್ಲಿ ಪುನಶ್ಚೇತನ ತುಂಬಿಸುವ ಸಲುವಾಗಿ ಹಾಗೂ ಅವರು ಕೆಲಸವನ್ನು ಪುನ: ಉತ್ಸಾಹದಿಂದ ಪ್ರಾರಂಭಿಸುವ ಸಲುವಾಗಿ ಹೊಸ ಹೊಸ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತದೆ.

ಅದೃಷ್ಟವಶಾತ್ ಸಾಕಷ್ಟು, ಬೆಂಗಳೂರು ಪ್ರಕೃತಿ ಅಥವಾ ಸಾಹಸ ಅಥವಾ ಇನ್ನೂ ಉತ್ತಮ, ಎರಡರ ಮಿಶ್ರಣವನ್ನು ನೀಡುವ ಕೆಲವು ಸ್ಥಳಗಳಿಂದ ಸುತ್ತುವರಿದಿದೆ! ನಿಮ್ಮ ತಂಡದ ಪ್ರವಾಸವು ಎಷ್ಟು ಸಮಯದವರೆಗೆ ಇರಬೇಕು ಎಂಬುದರ ಆಧಾರದ ಮೇಲೆ ಸ್ಥಳವನ್ನು ನಿರ್ಧರಿಸಿ, ದೀರ್ಘ ವಾರಾಂತ್ಯದಲ್ಲಿ ತಂಡ ಪ್ರವಾಸಕ್ಕಾಗಿ ನೀವು ಯೋಜಿಸಬಹುದಾದ 8 ವಿಭಿನ್ನ ಸ್ಥಳಗಳ ಕುರಿತು ಓದಿ.

ಮಂಚನಬೆಲೆಯಲ್ಲಿ ಶಿಬಿರ

ಮಂಚನಬೆಲೆಯಲ್ಲಿ ಶಿಬಿರ

ಬೆಂಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿ ನೆಲೆಸಿರುವ ಮಂಚನಬೆಲೆ ಅಣೆಕಟ್ಟು ಬೆಂಗಳೂರಿಗರಿಗೆ ತ್ವರಿತವಾಗಿ ಭೇಟಿ ಕೊಡಲು ಹತ್ತಿರದಲ್ಲಿರುವ ಸ್ಥಳವಾಗಿದೆ. ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಅಣೆಕಟ್ಟಿ ಒಂದು ಸುಂದರ ದೃಯವನ್ನು ಒಳಗೊಂಡಂತಹ ಸ್ಥಳದಲ್ಲಿ ನಿರ್ಮಿತವಾಗಿದ್ದು, ಈ ಸ್ಥಳವು ವಿಸ್ತಾರವಾದ ದಟ್ಟವಾದ ಹಸಿರಿನಿಂದ ಆವೃತವಾಗಿದೆ. ನೀವು ಇಲ್ಲಿಗೆ ಮಳೆಗಾಲದ ಸಮಯದಲ್ಲಿ ಭೇಟಿ ನೀಡುವಿರಾದಲ್ಲಿ ಇಲ್ಲಿ ಮಂಜು ಮತ್ತು ಹನಿ ಮಳೆಯಿಂದ ಕೂಡಿರುತ್ತದೆ ಇಂತಹ ವಾತಾವರಣವು ನಿಜವಾಗಿಯೂ ಮಂತ್ರಮುಗ್ದರನ್ನಾಗಿಸುತ್ತದೆ.

ಈ ಸ್ಥಳವು ತಂಡದೊಂದಿಗೆ ಅಥವಾ ಗುಂಪಾಗಿ ಸ್ನೇಹಿತರೊಂದಿಗೆ ಭೇಟಿ ಕೊಡಲು ಅತ್ಯಂತ ಉತ್ತಮವಾಗಿದೆ. ನೀವು ವಿವಿಧ ಮನರಂಜನಾ ಚಟುವಟಿಕೆಗಳನ್ನು ನಡೆಸಬಹುದು, ಉದಾಹರಣೆಗೆ ಕಯಾಕಿಂಗ್, ಗುರಿ ಅಭ್ಯಾಸ, ಟ್ಯೂಬ್ ರಾಫ್ಟಿಂಗ್, ಟ್ರೆಕ್ಕಿಂಗ್ ಮತ್ತು ರಾತ್ರಿಯ ಕ್ಯಾಂಪಿಂಗ್. ಸಂಪೂರ್ಣ ಪ್ಯಾಕೇಜ್ ಅನ್ನು ಕೈಗೆಟಕುವ ಬೆಲೆಗೆ ನೀಡುವ ಅನೇಕ ಸೇವೆಗಳು ಲಭ್ಯವಿದೆ.

ರಾಮನಗರ

ರಾಮನಗರ

ಬಾಲಿವುಡ್ ಅಥವಾ ಹಿಂದಿ ಸಿನೆಮಾದ ಅತ್ಯಂತ ಪ್ರಸಿದ್ದ ಚಲನಚಿತ್ರ 'ಶೋಲೆ' ಯ ಚಿತ್ರೀಕರಣ ನಡೆದ ಸ್ಥಳ ಪ್ರಸಿದ್ದ ರಾಮನಗರವು ಬೆಂಗಳೂರಿಗರಿಗೆ ಅತ್ಯಂತ ನೆಚ್ಚಿನ ವಾರಾಂತ್ಯಗಳಲ್ಲಿ ಭೇಟಿ ಕೊಡುವ ಸ್ಥಳವೆನಿಸಿದೆ. ಬೆಂಗಳೂರು ನಗರದಿಂದ ಸುಮಾರು 55 ಕಿಮೀ ಅಂತರದಲ್ಲಿರುವ ಈ ಸ್ಥಳವು ತಂಡದೊಂದಿಗೆ ಭೇಟಿ ಕೊಡಲು ಸೂಕ್ತವಾದ ತಾಣವಾಗಿದ್ದು, ಇಲ್ಲಿಗೆ ಕಾಲೇಜ್ ಪ್ರವಾಸಗಳು ಅಥವಾ ನಗರದಿಂದ ಲಾಂಗ್ ಡ್ರೈವ್ ಹೋಗುವವರಿಗೂ ಅಚ್ಚುಮೆಚ್ಚಿನ ಸ್ಥಳವೆನಿಸಿದೆ.

ಈ ಪುರಾತನ ಗ್ರಾನೈಟ್ ಹೊರವಲಯಗಳ ಮೇಲೆ ರಾಕ್ ಕ್ಲೈಂಬಿಂಗ್ ರಾಮನಗರದ ಅತ್ಯಂತ ಬೇಡಿಕೆಯ ಚಟುವಟಿಕೆಗಳಲ್ಲಿ ಒಂದಾಗಿದೆ. ತಂಡದೊಂದಿಗೆ ವಾರಾಂತ್ಯದಲ್ಲಿ ಒಂದು ದಿನವನ್ನು ಯೋಜಿಸಿ, ರಾಕ್ ಕ್ಲೈಂಬಿಂಗ್ ಮಾಡಲು ಪ್ರಯತ್ನಿಸಿ, ಪಕ್ಷಿವೀಕ್ಷಣೆಗಾಗಿ ನಿಮ್ಮ ಬೈನಾಕ್ಯುಲರ್‌ಗಳನ್ನು ತೆಗೆದುಕೊಳ್ಳಿ ಮತ್ತು ಅಂತಿಮವಾಗಿ ಸೈಟ್‌ನಲ್ಲಿ ಕ್ಯಾಂಪಿಂಗ್ ಮಾಡುವ ಸ್ಥಳಗಳಲ್ಲಿ ಶಿಬಿರಗಳನ್ನು ಹೂಡಬಹುದಾಗಿದೆ.

ಕೂರ್ಗ್

ಕೂರ್ಗ್

ಅಧಿಕೃತವಾಗಿ ಕೊಡಗು ಎಂದು ಕರೆಯಲ್ಪಡುವ ಕೂರ್ಗ್ ಅತ್ಯದ್ಬುತವಾದ ಸ್ಥಳವಾಗಿದ್ದು ಕಾಫಿ ಮತ್ತು ಮಸಾಲೆಗಳ ತೋಟಗಳ ಸುವಾಸನೆಯೊಂದಿಗೆ, ಗಿರಿಗಳು ಮತ್ತು ಜಾರುವ ಹುಲ್ಲುಗಾವಲುಗಳೊಂದಿಗಿನ ಬೆಟ್ಟಗಳು, ಮಂಜು ಕವಿದ ವಾತಾವರಣ, ಧುಮುಕುವ ಜಲಪಾತಗಳು ಮತ್ತು ಕಾಡುಗಳ ದಟ್ಟಕಾಡುಗಳಿಂದ ತುಂಬಿದೆ. ನಿಸರ್ಗಕ್ಕೆ ಆದರ್ಶಪ್ರಾಯವಾಗಿ ಪಾರಾಗಲು, ಕೂರ್ಗ್ ಬೆಂಗಳೂರಿನಿಂದ 245 ಕಿ.ಮೀ ದೂರದಲ್ಲಿದೆ ಮತ್ತು ತಲುಪಲು 5-6 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
3-5 ದಿನಗಳ ತಂಡ ಪ್ರವಾಸವನ್ನು ಆಯೋಜಿಸಬಹುದು ಹಾಗೂ ಪ್ರಕೃತಿಯ ಮಧ್ಯದಲ್ಲಿ ಕ್ಯಾಂಪಿಂಗ್ ಮಾಡಬಹುದಾಗಿದೆ. ಅಬ್ಬೆ ಜಲಪಾತ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ತಲಕಾವೇರಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ. ಕ್ಯಾಂಪಿಂಗ್ ಜೊತೆಗೆ, ಬಿಲ್ಲುಗಾರಿಕೆ, ಎತ್ತರದ ಹಗ್ಗದ ಪ್ರಯಾಣದಂತಹ ಮೋಜಿನ ಚಟುವಟಿಕೆಗಳನ್ನು ಯೋಜಿಸಿ ಅಥವಾ ಐಷಾರಾಮಿ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯಿರಿ.

ಸಾವಣದುರ್ಗದಲ್ಲಿ ಟ್ರೆಕ್ಕಿಂಗ್

ಸಾವಣದುರ್ಗದಲ್ಲಿ ಟ್ರೆಕ್ಕಿಂಗ್

ಏಷ್ಯಾದ ಅತಿದೊಡ್ಡ ಏಕಶಿಲೆಯ ಬೆಟ್ಟಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಸಾವನದುರ್ಗವು ಬೆಂಗಳೂರಿನಿಂದ 60 ಕಿಮೀ ದೂರದಲ್ಲಿರುವ ಬೆಟ್ಟವಾಗಿದೆ. ಈ ಸ್ಥಳಗಳು ತಂಡದೊಂದಿಗೆ ಪ್ರವಾಸ ಮಾಡಲು ಪ್ರೋತ್ಸಾಹಿಸುತ್ತವೆ. ಹಾಗೂ ಇವು ಸಾವನದುರ್ಗವು ಟ್ರೆಕ್ಕಿಂಗ್ ಗೆ ಸೂಕ್ತವಾದ ತಾಣವಾಗಿದೆ. ಸಾವನದುರ್ಗ ಬೆಟ್ಟವು ಕರಿಗುಡ್ಡ (ಕಪ್ಪು ಬೆಟ್ಟ) ಮತ್ತು ಬಿಳಿಗುಡ್ಡ (ಬಿಳಿ ಬೆಟ್ಟ) ಎಂದು ಕರೆಯಲ್ಪಡುವ ಎರಡು ಬೆಟ್ಟಗಳಿಂದ ರಚಿಸಲ್ಪಟ್ಟಿದೆ ಮತ್ತು ಇದು 4220 ಅಡಿ ಎತ್ತರದಲ್ಲಿದೆ.

ಈ ಸವಾಲಿನ ಚಾರಣವನ್ನು ಸಾಮಾನ್ಯವಾಗಿ ಸಾಹಸ ಉತ್ಸಾಹಿಗಳು ರಾತ್ರಿ ಸಮಯದಲ್ಲಿ ಮಾಡುತ್ತಾರೆ. ಸಾವನದುರ್ಗದ ರಮಣೀಯ ಸೌಂದರ್ಯದ ಜೊತೆಗೆ, ಬಿಳಿಗುಡ್ಡದ ಮೇಲಿರುವ ಹೊಯ್ಸಳರ ಕಾಲಕ್ಕೆ ಸೇರಿದ ಸುಂದರವಾದ ಕೋಟೆ ಕಾರಾಗೃಹವನ್ನು ವೀಕ್ಷಿಸಿ.

ದಾಂಡೇಲಿ

ದಾಂಡೇಲಿ

ಸಾಹಸಮಯ ಪ್ರವಾಸ ಮಾಡಬೇಕೆಂದಿದ್ದಲ್ಲಿ, ದಾಂಡೇಲಿಯು ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಪ್ರಕೃತಿಯೊಳಗೆ ನೆಲೆಸಿರುವ ಹಾಗೂ ಕಾಳಿ ನದಿಯು ಹಚ್ಚ ಹಸಿರಿನ ಮತ್ತು ಕಾಡಿನ ಪೊದೆಗಳ ಮೂಲಕ ಹರಿಯುವ ಮೂಲಕ, ದಾಂಡೇಲಿಯು ಸಾಹಸಮಯವಾದ ಎಲ್ಲವನ್ನೂ ಹೊಂದಿದೆ.

ವೈಟ್ ವಾಟರ್ ರಿವರ್ ರಾಫ್ಟಿಂಗ್, ಕಯಾಕಿಂಗ್, ಕ್ಯಾನೋಯಿಂಗ್, ಪ್ರಕೃತಿ ನಡಿಗೆಗಳು, ಪ್ರಕೃತಿ ಶಿಬಿರಗಳು, ಪಕ್ಷಿವೀಕ್ಷಣೆ, ಶಿರೋಲಿ ಶಿಖರಕ್ಕೆ ಟ್ರೆಕ್ಕಿಂಗ್ ಅಥವಾ ದಾಂಡೇಲಿ ವನ್ಯಜೀವಿ ಅಭಯಾರಣ್ಯದ ವನ್ಯಜೀವಿಗಳನ್ನು ಅನ್ವೇಷಿಸುವುದು ಈ ಸಣ್ಣ ಪಟ್ಟಣದಲ್ಲಿ ಮಾಡಬಹುದಾದ ಕೆಲವು ಚಟುವಟಿಕೆಗಳಾಗಿವೆ.

ವಂಡರ್ಲಾ

ವಂಡರ್ಲಾ

ತ್ವರಿತವಾಗಿ ಮತ್ತು ಮೋಜಿನಿಂದ ಕೂಡಿದ ಒಂದು ದಿನದ ಪ್ರವಾಸಕ್ಕೆ ಗುಂಪಿನೊಂದಿಗೆ ಹೋಗಬೇಕೆಂದುಕೊಳ್ಳುವವರಿಗಾಗಿ ಬೆಂಗಳೂರಿನಲ್ಲಿರುವ ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್ ಅತ್ಯಂತ ಸೂಕ್ತವಾದ ಸ್ಥಳವಾಗಿದ್ದು ಈ ಸ್ಥಳವು ಪ್ರತಿಯೊಬ್ಬರಿಗೂ ಏನನ್ನಾದರೂ ಒದಗಿಸಿಕೊಡುವಂತದ್ದಾಗಿದೆ. ನಗರದಿಂದ ಸುಮಾರು 35 ಕಿ.ಮೀ ಅಂತರದಲ್ಲಿರುವ ಈ ಸ್ಥಳವು ಒಂದು ದಿನದಲ್ಲಿ ಭೇಟಿ ಕೊಡಬಹುದಾದಂತದ್ದಾಗಿದೆ.

ಈ ಅಮ್ಯೂಸ್‌ಮೆಂಟ್ ಪಾರ್ಕ್ ಅಸಂಖ್ಯಾತ ಹೈ-ಥ್ರಿಲ್ ರೈಡ್‌ಗಳು, ಲ್ಯಾಂಡ್ ಮತ್ತು ವಾಟರ್ ರೈಡ್‌ಗಳನ್ನು ಹೊಂದಿದೆ, ಇದನ್ನು ಎಲ್ಲಾ ವಯಸ್ಸಿನ ಜನರು ಆಡಬಹುದು. ವಾಸ್ತವವಾಗಿ, ನಿಮ್ಮ ತಂಡದೊಂದಿಗೆ ನೀವು ನಿಮ್ಮ ಕುಟುಂಬ ಮತ್ತು ಮಕ್ಕಳನ್ನು ಕರೆತರಬಹುದು ಏಕೆಂದರೆ ಇದು ಮಕ್ಕಳಿಗಾಗಿ ಪ್ರತ್ಯೇಕವಾಗಿ ಸವಾರಿಗಳನ್ನು ಹೊಂದಿದೆ.

ಚಿಕ್ಕಮಗಳೂರು

ಚಿಕ್ಕಮಗಳೂರು

ದಟ್ಟವಾದ ಹಸಿರು ಕಾಫಿ ತೋಟಗಳನ್ನು ವಿಸ್ತಾರವಾಗಿ ಹೊಂದಿರುವ ಹಲವಾರು ಶಿಖರಗಳು ಮತ್ತು ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿ ನೆಲೆಸಿರುವ ಚಿಕ್ಕಮಗಳೂರು ಪ್ರಕೃತಿ ಮತ್ತು ಸಾಹಸದ ಸುಂದರ ಮಿಶ್ರಣವನ್ನು ನೀಡುತ್ತದೆ. ಚಿಕ್ಕಮಗಳೂರಿನ ಸುತ್ತ ಮುಳ್ಳಯ್ಯನಗಿರಿ, ಕೆಮ್ಮನಗುಂಡಿ ಮತ್ತು ಕುದುರೆಮುಖ ಮುಂತಾದವುಗಳನ್ನು ಒಳಗೊಂಡಿದ್ದು ಟ್ರೆಕ್ಕಿಂಗ್‌ಗಾಗಿ ಅತ್ಯಂತ ಜನಪ್ರಿಯವಾಗಿದೆ.

ತಂಡವಾಗಿ ಚಿಕ್ಕಮಗಳೂರಿಗೆ ಪ್ರವಾಸ ಮಾಡುವಾಗ ಅದರ ಪ್ರಕೃತಿಯ ಜೊತೆಗೆ ನೀವು ಬಾನ್ ಪೈರ್, ಪ್ರಕೃತಿ ಶಿಬಿರ, ಬಾರ್ಬೆಕ್ಯೂ, ಮತ್ತು ಸಣ್ಣ ಪುಟ್ಟ ಟ್ರೆಕ್ಕಿಂಗ್ ಗಳನ್ನು ಮಾಡಬಹುದಾಗಿದೆ. ಅಥವಾ ಜಿಪ್ ಲೈನಿಂಗ್, ವಾಟರ್ ಭದ್ರಾ ನದಿಯಲ್ಲಿ ವಾಟರ್ ರಾಫ್ಟಿಂಗ್, ರಾಪೆಲ್ಲಿಂಗ್, ಕ್ವಾಡ್ ಬೈಕಿಂಗ್ ಇತ್ಯಾದಿ ಸಾಹಸಮಯ ಚಟುವಟಿಕೆಗಳನ್ನೂ ನಡೆಸಬಹುದಾಗಿದೆ.

ಭೀಮೇಶ್ವರಿಯಲ್ಲಿ ಸಾಹಸ

ಭೀಮೇಶ್ವರಿಯಲ್ಲಿ ಸಾಹಸ

ಬೆಂಗಳೂರಿನಿಂದ ಸುಮಾರು 100ಕಿ,ಮೀ ದೂರದಲ್ಲಿರುವ ಭೀಮೇಶ್ವರಿಯು ಮಂಡ್ಯಾ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಪಟ್ಟಣದಲ್ಲಿ ಕಾವೇರಿಯು ಹರಿಯುವುದರಿಂದ ಕೆಲವು ಸ್ಥಳಗಳಲ್ಲಿ ಕಾವೇರಿ ನದಿಯು ಮಹಸೀರ್ ಮೀನು ಎಂದು ಕರೆಯಲ್ಪಡುವ ವಿಶ್ವದ ಕೆಲವು ಅತ್ಯುತ್ತಮ ಆಟದ ಮೀನುಗಳನ್ನು ಹೊಂದಿರುವ ಸ್ಥಳವಾಗಿದೆ. ಅಲ್ಲದೆ ಈ ಸ್ಥಳವು ಮೀನುಗಾರಿಕೆ, ಮತ್ತು ಹಲವಾರು ಸಾಹಸಮಯ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಹೆಸರುವಾಸಿಯಾಗಿದೆ.

ಪಶ್ಚಿಮ ಘಟ್ಟಗಳ ಹಿನ್ನಲೆಯಲ್ಲಿ, ಭೀಮೇಶ್ವರಿ ಒಂದು ಅತ್ಯಂತ ಬೇಡಿಕೆಯ ಪ್ರವಾಸಿ ತಾಣವಾಗಿದ್ದು, ಯಾವುದೇ ಹಂತದ ಕಷ್ಟದ ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಇವುಗಳಲ್ಲಿ ಕೆಲವು ಮೀನುಗಾರಿಕೆ, ಟ್ರೆಕ್ಕಿಂಗ್, ಕ್ಯಾಂಪಿಂಗ್, ಪ್ರಕೃತಿ ಶಿಬಿರಗಳು, ಕೊರಾಕಲ್ ಸವಾರಿಗಳು, ಕಯಾಕಿಂಗ್, ಇತ್ಯಾದಿಗಳೂ ಸೇರಿವೆ.

Read more about: bangalore ramnagar coorg
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X