• Follow NativePlanet
Share
» »ತಮಿಳುನಾಡಿನ 10 ಪ್ರಾಚೀನವಾದ ಕೋಟೆಗಳು...

ತಮಿಳುನಾಡಿನ 10 ಪ್ರಾಚೀನವಾದ ಕೋಟೆಗಳು...

Posted By:

ತಮಿಳುನಾಡು ಒಂದು ಅದ್ಭುತವಾದ ಪ್ರವಾಸಿ ತಾಣಗಳನ್ನು ಹೊಂದಿದೆ. ಇಲ್ಲಿಗೆ ದೇವಾಲಯಗಳೇ ತುಂಬಿವೆ ಎಂದೇ ಹೇಳಬಹುದು. ಇದೊಂದು ಆಧ್ಯಾತ್ಮಿಕವಾದ ಸ್ಥಳ. ಇಲ್ಲಿ ಕೇವಲ ದೇವಾಲಯಗಳೇ ಅಲ್ಲದೇ, ಸುಂದರವಾದ ಪ್ರದೇಶಗಳು, ಕೋಟೆಗಳು, ಉದ್ಯಾನವನಗಳು, ಹನಿಮೂನ್‍ಗೆ ಸೂಕ್ತವಾದ ಸ್ಥಳಗಳನ್ನು ಕೂಡ ಆನಂದಿಸಬಹುದು. ಹಾಗಾಗಿಯೇ ಈ ತಾಣಕ್ಕೆ ಹಲವಾರು ಮಂದಿ ಪ್ರವಾಸಿಗರು ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶದಿಂದಲೂ ಕೂಡ ಭೇಟಿ ನೀಡುತ್ತಿರುತ್ತಾರೆ.

ಕೋಟೆಗಳು ಎಂದರೆ ಏನೂ ಒಂದು ಕುತೂಹಲ. ಅಲ್ಲಿ ಏನಿರಬಹುದು? ಆ ಕೋಟೆಯನ್ನು ಯಾರು ನಿರ್ಮಾಣ ಮಾಡಿದರು? ಅಲ್ಲಿ ನಡೆದ ಯುದ್ಧ, ಆಳ್ವಿಕೆ ಮಾಡಿದ ರಾಜರು ಒಂದೇ ಎರಡೇ ಅನೇಕ ಪ್ರಶ್ನೆಗಳು ನಮ್ಮ ತಲೆಯಲ್ಲಿ ಹೊಳೆಯುತ್ತವೆ. ಅಷ್ಟೇ ಅಲ್ಲ ಕೋಟೆಯ ಒಳಗೆ ಹೋದಾಗ ಆ ರಾಜ ಅಥವಾ ರಾಣಿ ಈ ಸ್ಥಳದಲ್ಲೆಲ್ಲಾ ಓಡಾಡುತ್ತಿದ್ದೇನೂ? ಎಂಬ ಅನುಭೂತಿಯೊಡನೆ ಒಳಗೆ ಪ್ರವೇಶಿಸುತ್ತೇವೆ.

ಹಾಗಾದರೆ ಬನ್ನಿ ತಮಿಳುನಾಡಿನಲ್ಲಿರುವ ಪ್ರಾಚೀನವಾದ ಕೋಟೆಗಳ ಬಗ್ಗೆ ಮಾಹಿತಿಯನ್ನು ಲೇಖನದ ಮೂಲಕ ತಿಳಿಯೋಣ.

1.ವೆಲ್ಲೂರ್ ಕೋಟೆ, ವೆಲ್ಲೂರ್

1.ವೆಲ್ಲೂರ್ ಕೋಟೆ, ವೆಲ್ಲೂರ್

PC:Fahad Faisal

ವೆಲ್ಲೂರ್ ಕೋಟೆಯು ವಿಜಯನಗರ ಸಾಮ್ರಾಜ್ಯದ ಪ್ರಧಾನವಾದ ಕಛೇರಿಯಾಗಿದ್ದು, ಪಾಲಾರ್ ನದಿ ದಡದಲ್ಲಿದೆ. ಇದನ್ನು 16 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಯಿತು. ಈ ಕೋಟೆಯು ದೇವಾಲಯ, ಮಸೀದಿ ಮತ್ತು ಚರ್ಚ್ ಇತರ ಕಟ್ಟಡಗಳ ನಡುವೆ ಇರುತ್ತದೆ. ಇದು ದಕ್ಷಿಣ ಭಾರತದ ಅತ್ಯುತ್ತಮವಾದ ಮಿಲಿಟರಿ ವಾಸ್ತುಶೈಲಿಯನ್ನು ಹಾಗು ಅದರ ಗಮನಾರ್ಹ ಕಂದಕ, ಕವಚ ಮತ್ತು ಕಲ್ಲುಗಳಿಂದ ಹೊರಹೊಮ್ಮಿಸುತ್ತದೆ. ಹಾಗಾಗಿಯೇ ಅನೇಕ ಮಂದಿ ಪ್ರವಾಸಿಗರು ಈ ಕೋಟೆಗೆ ಭೇಟಿ ನೀಡಲು ಇಷ್ಟ ಪಡುತ್ತಾರೆ.

2.ಮನೋರ ಕೋಟೆ, ತಂಜಾವೂರು

2.ಮನೋರ ಕೋಟೆ, ತಂಜಾವೂರು

PC:Sdsenthilkumar

ಈ ಸುಂದರವಾದ ಮನೋರ ಕೋಟೆಯು ತಮಿಳುನಾಡಿನ ತಂಜಾವೂರಿನಲ್ಲಿದ್ದು, ಅತ್ಯಂತ ಪ್ರಸಿದ್ಧವಾಗಿದೆ. 17 ನೇ ಶತಮಾನದಲ್ಲಿ ಮರಾಠರು ನಿರ್ಮಾಣ ಮಾಡಿದ ಈ ಕೋಟೆಯು 7 ಕಥೆಗಳು ಮತ್ತು ಷಡ್ಬುಜೀಯ ಗೋಪುರವನ್ನು ಹೊಂದಿದೆ. ಇದು ಒಂದು ಕಾಲದಲ್ಲಿ ಸುನಾಮಿಯಲ್ಲಿ ಹಾನಿಗೊಳಗಾಯಿತು. 2007 ರಲ್ಲಿ ಇದನ್ನು ಪುನಃಸ್ಥಾಪಿಸಲ್ಪಟ್ಟಿತು.

3.ವಿಜಯನಗರ ಕೋಟೆ

3.ವಿಜಯನಗರ ಕೋಟೆ

PC:Jegadeesh kumar

ನಾಯಕರು ಮತ್ತು ಮರಾಠ ಆಡಳಿತಗಾರರು ನಿರ್ಮಿಸಿದ ಈ ಭವ್ಯ ಕೋಟೆಯು ತಂಜಾವೂರಿನಲ್ಲಿದೆ. ಇದೊಂದು ಚರಿತ್ರೆಯಲ್ಲಿ ಹೆಸರುವಾಸಿಯಾಗಿರುವ ಕೋಟೆ ಎಂದೇ ಹೇಳಬಹುದು. ಇಲ್ಲಿ ಸಂಗೀತ ಮಹಲ್. ಗ್ರಂಥಾಲಯ, ಹಲವಾರು ಶಿಲ್ಪಕಲೆಗಳು ಮತ್ತು ವರ್ಣಚಿತ್ರಗಳನ್ನು ಕೂಡ ಕಾಣಬಹುದಾಗಿದೆ. ಅದರ ಸಂಕೀರ್ಣದಲ್ಲಿ ಶಿವ ಗಂಗಾ ಉದ್ಯಾನಗಳನ್ನು ಹೊಂದಿರುವ ಒಂದು ಆರ್ಟ್ ಗ್ಯಾಲರಿ ಕೂಡ ಹೊಂದಿದೆ. ಒಮ್ಮೆ ಈ ಸುಂದರವಾದ ಕೋಟೆಗೆ ಭೇಟಿ ನೀಡಿ ಬನ್ನಿ.

4.ಜಿಂಗೀ ಕೋಟೆ, ವಿಲ್ಲುಪುರಾಮ್

4.ಜಿಂಗೀ ಕೋಟೆ, ವಿಲ್ಲುಪುರಾಮ್

PC:rajaraman sundaram

ಈ ಸುಂದರವಾದ ಕೋಟೆಯನ್ನು ಚೋಳರು ನಿರ್ಮಾಣ ಮಾಡಿದರು ಸಹ, ವಿಜಯನಗರ ಕೋಟೆಯ ಸಮಯದಲ್ಲಿ ಜಿಂಗೀ ಕೋಟೆಯು ಅಭಿವೃದ್ಧಿಯಾಯಿತು. ನಂತರದ ದಿನಗಳಲ್ಲಿ ತಮಿಳುನಾಡಿನ ಪ್ರಬಲವಾಗಿದ್ದಾಗ ಜಿಂಗೀ ಕೋಟೆಯು ಪ್ರಧಾನವಾದ ಕಛೇರಿಯಾಯಿತು. ಈ ಕೋಟೆಯು ಶಿವಾಜಿಯ ಆಡಳಿತದ ಅವಧಿಯಲ್ಲಿ ಮರಾಠಿಗರಿಗೆ ಸೇವೆಯನ್ನು ಸಲ್ಲಿಸಿತು. ಈ ಕೋಟೆಯು 800 ಅಡಿ ಎತ್ತರ ಮತ್ತು 80 ಅಡಿ ಅಗಲವಾದ ಕಂದಕವನ್ನು ಹೊಂದಿದೆ. ಇಲ್ಲಿ ಕಣಜಗಳು, ಚೆಂಜಿಯಮ್ಮನ್ ದೇವಾಲಯ ಮತ್ತು ಜೈಲು ಕೋಶಗಳಿಗೂ ಕೂಡ ಭೇಟಿ ನೀಡಬಹುದಾಗಿದೆ.

5.ಉದಯಗಿರಿ ಕೋಟೆ, ಕನ್ಯಾಕುಮಾರಿ

5.ಉದಯಗಿರಿ ಕೋಟೆ, ಕನ್ಯಾಕುಮಾರಿ

PC:Sugeesh

17 ನೇ ಶತಮಾನದಲ್ಲಿ ನಿರ್ಮಾಣ ಮಾಡಿದ ಈ ಸುಂದರವಾದ ಉದಯಗಿರಿ ಕೋಟೆಯನ್ನು 18 ನೇ ಶತಮಾನದಲ್ಲಿ ಟ್ರಾವಂಕೂರು ಆಡಳಿತಗಾರರು ಮಾರ್ಪಟು ಮಾಡಿದರು. ಪ್ರಸ್ತುತ ಇದನ್ನು ಜೈವಿಕ-ವೈವಿಧ್ಯಮಯ ಉದ್ಯಾನವಾಗಿ ಮಾರ್ಪಡಿಸಲಾಗಿದೆ. ಇದರ ಪ್ರಮುಖವಾದ ಆಕರ್ಷಣೆಗಳೆಂದರೆ ಡಚ್ ಅಡ್ಮಿರಲ್ ಡಿ ಲೆನೋಯ್ ಮತ್ತು ಅವರ ನೆನೆಪಿಗಾಗಿ ನಿರ್ಮಿಸಲಾದ ಭವ್ಯವಾದ ಚಾಪೆಲ್.

6.ವಟ್ಟಕೋಟಾಯಿ ಕೋಟೆ, ಕನ್ಯಾಕುಮಾರಿ

6.ವಟ್ಟಕೋಟಾಯಿ ಕೋಟೆ, ಕನ್ಯಾಕುಮಾರಿ

PC:Rohith1729

ಕಡಲತೀರದಿಂದ ನಿರ್ಮಿಸಲ್ಪಟ್ಟ ಈ ಕೋಟೆಯು ಟ್ರಾವಂಕೂರು ಸಾಮ್ರಾಜ್ಯಕ್ಕೆ ಸೇರಿದ್ದಿದ್ದರೂ, ಡಚ್ ಅವರಿಂದ ನಿರ್ಮಿಸಲ್ಪಟ್ಟಿತು. ವೃತಾಕಾರದ ಕೋಟೆ ಎಂದರೆ ವಟ್ಟಕೋಟಾಯಿ ಕೋಟೆಯು ಒಂದು ಕಡೆ ಸಮುದ್ರದ ವೀಕ್ಷಣೆಗಳನ್ನು ಮತ್ತು ಇನ್ನೊಂದು ಪಶ್ಚಿಮ ಘಟ್ಟದ ಸುಂದರವಾದ ವೀಕ್ಷಣೆಯನ್ನು ಒದಗಿಸುತ್ತದೆ. ಇದು ಒಂದು ಜನಪ್ರಿಯವಾದ ತಾಣವಾಗಿದೆ. ಹಾಗಾಗಿಯೇ ಅನೇಕ ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

7.ದಿಂಡುಕ್ಕಲ್ ಕೋಟೆ

7.ದಿಂಡುಕ್ಕಲ್ ಕೋಟೆ

PC:SriniGS

ದಿಂಡುಕ್ಕಲ್ ಕೋಟೆ ಅಥವಾ ದಿಂಡುಕ್ಕಲ್ಮಲೈ ಕೋಟೆಯನ್ನು 17 ನೇ ಶತಮಾನದಲ್ಲಿ ಮಧುರೈ ನಾಯಕ ನಿರ್ಮಾಣ ಮಾಡಿದನು. ಇದನ್ನು ಮೈಸೂರು ಒಡೆಯರ್‍ಗಳಿಗೆ ರವಾನಿಸಲಾಯಿತು. ಇದು ಮುಖ್ಯವಾಗಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾಲದಲ್ಲಿ ಗಮನಾರ್ಹ ಪ್ರಾಮುಖ್ಯತೆಯನ್ನು ಗಳಿಸಿತು. ಇದನ್ನು ನಂತರದ ದಿನಗಳಲ್ಲಿ ಯುದ್ಧದ ಸಮಯದಲ್ಲಿ ಬ್ರಿಟೀಷರು ಬಳಸಿದರು. ಇಲ್ಲಿ ಪ್ರಸ್ತುತ ಶಿಥಿಲವಾದ ದೇವಾಲಯ ಮತ್ತು ಕೆಲವು ಫಿರಂಗಿಗಳನ್ನು ಹೊಂದಿದೆ.

8.ಡ್ಯಾನಿಷ್ ಕೋಟೆ, ತರಂಗಬಾಡಿ

8.ಡ್ಯಾನಿಷ್ ಕೋಟೆ, ತರಂಗಬಾಡಿ

PC:Manoharan Duraisamy

ಡ್ಯಾನಿಷ್ ವಸಾಹತಿಗೆ ನೆಲೆಯಾಗಿರುವ ಫೋರ್ಟ್ ಡಾನ್ಸ್ಬೋರ್ಗ್ ಅಥವಾ ಡ್ಯಾನಿಷ್ ಕೋಟೆ ಸ್ಥಳೀಯರನ್ನು ತನ್ನತ್ತ ಸೆಳೆದುಕೊಳ್ಳುವ ಆಕರ್ಷಣೆಯನ್ನು ಹೊಂದಿದೆ. ಇದನ್ನು 1845 ರಲ್ಲಿ ಬ್ರಿಟೀಷರಿಗೆ ಮಾರಾಟ ಮಾಡಲಾಯಿತು. ಪ್ರಸ್ತುತ ಈ ಕೋಟೆಯು ಡ್ಯಾನಿಶ್ ಸಾಮ್ರಾಜ್ಯದ ಕಲಾಕೃತಿಗಳನ್ನು ಪ್ರದರ್ಶಿಸುವ ವಸ್ತು ಸಂಗ್ರಾಹಾಲದೊಂದಿಗೆ ಪ್ರಮುಖ ಪ್ರವಾಸಿ ತಾಣವಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ