Search
  • Follow NativePlanet
Share
» »ಭಾರತದ ಅದ್ಬುತವಾದ ಕ್ಯಾಂಪ್ ತಾಣಗಳು

ಭಾರತದ ಅದ್ಬುತವಾದ ಕ್ಯಾಂಪ್ ತಾಣಗಳು

ಭಾರತದಲ್ಲಿ ಸಾಹಸ ಕ್ಯಾಂಪಿಂಗ್ ಬಗ್ಗೆ ಓದಿ. ಭಾರತದಲ್ಲಿ ಹೊರಾಂಗಣ ಕ್ಯಾಂಪಿಂಗ್, ಸ್ಪಿತಿ ಕಣಿವೆ ಕ್ಯಾಂಪಿಂಗ್, ರಾತ್ರಿಯಲ್ಲಿ ಚಂದ್ರತಾಲ್ ಸರೋವರ ಮತ್ತು ಈ ಲೇಖನದಲ್ಲಿ ಇನ್ನಷ್ಟು ತಿಳಿದುಕೊಳ್ಳಿ.

By Manjula Balaraj Tantry

ಭಾರತದ ಭೂಭಾಗವು ಸಾಹಸಪ್ರಿಯರಿಗೆ ಒಂದು ಸ್ವರ್ಗವೆನಿಸಿದೆ. ಹಿಮಾಲಯದ ಪರ್ವತಗಳಿಂದ ಗೋವಾದ ಪ್ರಶಾಂತವಾದ ಕಡಲ ತೀರಗಳು ಇವೆಲ್ಲವನ್ನೂ, ಭಾರತವು ಹೊಂದಿದೆ.

ಕ್ಯಾಂಪಿಂಗ್ ಎಂಬ ಬೆರಗುಗೊಳಿಸುವ ನೈಸರ್ಗಿಕ ಸೌಂದರ್ಯದೊಂದಿಗೆ ಹರಡಿರುವ ಯಾವುದೇ ಸ್ಥಳಗಳಲ್ಲಿ ನೀವು ಮಾಡುವಂತಹ ಒಂದು ಚಟುವಟಿಕೆಯಾಗಿದೆ. ಈ ಲೇಖನವು ನಿಮಗೆ ಕ್ಯಾಂಪಿಂಗ್ ತಾಣಗಳ ಬಗ್ಗೆ ಈ ಲೇಖನವು ಮಾಹಿತಿ ನೀಡುತ್ತದೆ ಓದಿ ತಿಳಿದುಕೊಳ್ಳಿ.

ಭಾರತವು ಪ್ರಕೃತಿದತ್ತವಾದ ಭೂಭಾಗವನ್ನು ಹೊಂದಿರುವ ದೇಶವಾಗಿದೆ ಎಂಬುದು ಒಂದು ಸಾಮ್ಯಾನ್ಯ ಜ್ಞಾನ.ಭಾರತವು ಉತ್ತರದಲ್ಲಿ ಕಠಿಣವಾದ ಪರ್ವತಗಳು, ದಕ್ಷಿಣಕ್ಕೆ ಹರಡಿಕೊಂಡಿರುವ ಕಡಲತೀರಗಳು ಎಲ್ಲ ರೀತಿಯ ಭೂಪ್ರದೇಶಗಳಿಂದ ತುಂಬಿದೆ. ರಜಾದಿನಗಳನ್ನು ಭಾರತದಲ್ಲಿ ಕಳೆಯಲು ಒಂದೋ ಸುಂದರ ದೃಶ್ಯವಳಿಗಳ ನೋಟ ಇಲ್ಲವಾದರೆ ಸಾಹಸಮಯ ಕ್ರೀಡೆಯ ಅನುಭವ ಪಡೆಯಬಹುದಾಗಿದೆ.

ಲಡಾಖ್ ರಿಶಿಕೇಶದಂತಹ ಕೆಲವು ಜಾಗಗಳು ಸಾಹಸ ಪ್ರಿಯರಿಗೆ ತುಂಬಾ ಸಂತೋಷವನ್ನುಂಟು ಮಾಡುತ್ತದೆ. ಇವು ಕೆಲವು ಸಾಹಸಮಯ ಚಟುವಟಿಕೆಗಳಾದ ಟ್ರೆಕ್ಕಿಂಗ್, ಕ್ಯಾಂಪಿಂಗ್, ನದಿಯಲ್ಲಿ ರಾಫ್ಟಿಂಗ್, ಮುಂತಾದುವುಗಳನ್ನು ಒದಗಿಸುತ್ತದೆ. ಈ ಲೇಖನವು ದೇಶದ ವಿವಿಧ ಜಾಗಗಳಲ್ಲಿ ಹರಡಿರುವ ಉತ್ತಮವಾದ ಕ್ಯಾಂಪಿಂಗ್ ತಾಣಗಳ ಬಗ್ಗೆ ಮಾಹಿತಿ ನೀಡುತ್ತದೆ.

ಜೈಸಲ್ಮೇರ್

ಜೈಸಲ್ಮೇರ್

ಜೈಸಲ್ಮೇರಿನ ಅನೇಕ ಕೋಟೆಗಳು ಮತ್ತು ಈ ಕೋಟೆಗಳು ಹಳದಿ ಮರಳುಗಲ್ಲಿನಲ್ಲಿ ಕಟ್ಟಲ್ಪಟ್ಟ ಕಾರಣ, ನಗರವು ಗೋಲ್ಡನ್ ಸಿಟಿ ಎಂಬ ಉಪನಾಮವನ್ನು ಪಡೆಯಿತು. ನಗರಕ್ಕೆ ಕಿರೀಟದಂತಿರುವ ಈ ಸುಂದರವಾದ ಜೈಸಲ್ಮೇರ್‍ ಕೋಟೆಯು ಥಾರ್ ಮರುಭೂಮಿಯ ಹೃದಯ ಭಾಗದಲ್ಲಿದೆ.

ಒಂದು ಸುಂದರವಾದ ಮರುಭೂಮಿಯ ಕ್ಯಾಂಪಿಂಗ್ ಅನುಭವ ಪಡೆಯಬೇಕಾದಲ್ಲಿ ಜೈಸಲ್ಮೇರ್ ಒಂದು ಸೂಕ್ತವಾದುದಾಗಿದೆ. ಈ ನಗರದಲ್ಲಿ ಪ್ರತೀವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳುಗಳಲ್ಲಿ ಮರುಭೂಮಿ ಉತ್ಸವವು ನಡೆಯುತ್ತದೆ. ಈ ಸಮಯದಲ್ಲಿ ಇಲ್ಲಿ ನೀವು ಕ್ಯಾಂಪಿಂಗ್ ಮಾಡಲು ಯೋಜಿಸಿದರೆ ನೀವು ಇಲ್ಲಿಯ ಸಾಂಸ್ಕೃತಿಕ ಹಬ್ಬವಾದ ಮರುಭೂಮಿ ಉತ್ಸವದಲ್ಲೂ ಪಾಲ್ಗೊಳ್ಳಬಹುದು.

PC: Rishabh Mathur

ಸಾರ್ಚು

ಸಾರ್ಚು

ಲೆಹ್-ಮನಾಲಿ ಹೆದ್ದಾರಿಯ ಮಧ್ಯದಲ್ಲಿ ಸಾರ್ಚು, ಪ್ರಮುಖ ನಿಲುಗಡೆಯ ಸ್ಥಳವಾಗಿದೆ, ಅಲ್ಲಿ ಜನರು ನಿಲುಗಡೆ ಮಾಡಲು ಮುಖ್ಯ ಕಾರಣವೆಂದರೆ ಅಲ್ಲಿಯ ಕ್ಯಾಂಪಿಂಗ್ ಸೌಕರ್ಯಗಳು.ಇದು ಹಿಮಾಚಲ ಪ್ರದೇಶ ಮತ್ತು ಲಡಾಖ್ ನಡುವೆ ನೆಲೆಸಿದ್ದು, ಇದು 14,070 ಅಡಿ ಎತ್ತರದಲ್ಲಿದೆ

ಬೈಕು ಸವಾರರಿಗೆ ಸಾರ್ಚು ಒಂದು ಸೂಕ್ತವಾದ ರಾತ್ರಿ ನಿಲುಗಡೆಯ ಸ್ಥಳವಾಗಿದೆ. ಮತ್ತು ಅದರ ಜೊತೆಗೆ ರಸ್ತೆ ಪ್ರಯಾಣ ಮನಾಲಿಯಿಂದ ಲೇಹ್ ಗೆ ಮಾಡಬಹುದು ಅಥವಾ ಲೇಹ್ ನಿಂದ ಮನಾಲಿಗೆ ಮಾಡಬಹುದು. ಮನಾಲಿ ಮತ್ತು ಲೇಹ್ ಗೆ ಹೋಗುವಾಗ ಸೋಲಾಂಗ್ ಕಣಿವೆ ರೊತಾಂಗ್ ಪಾಸ್ ಮುಂತಾದುವುಗಳಿಗೆ ಭೇಟಿ ಕೊಡಿ ಶಾಂತಿ ಸ್ತೂಪ ಮತ್ತು ಇನ್ನಿತರ ಜಾಗಗಳನ್ನು ಲೇಹ್ ನಲ್ಲಿರುವಾಗ ಭೇಟಿಕೊಡಿ.


PC: Elroy Sarrao

ಧೂದ್ ಪತ್ರಿ

ಧೂದ್ ಪತ್ರಿ

ಇದು ಹಾಲಿನ ಕಣಿವೆ ಎಂದು ಅಕ್ಷರಶಃ ಅರ್ಥೈಸುತ್ತದೆ. ಇದು ಸುಂದರ ದೃಶ್ಯಗಳನ್ನು ತನ್ನ ಸುತ್ತ ಮುತ್ತ ಹೊಂದಿದ್ದು ಏಕಾಂತವಾದ ಗಿರಿಧಾಮವನ್ನು ಹೊಂದಿದೆ. ಇತ್ತೀಚೆಗಷ್ಟೆ ಸಂಭಾವ್ಯ ಪ್ರವಾಸೀ ತಾಣವೆಂದು ಗುರುತಿಸಲ್ಪಟ್ಟಿದೆ. ಈ ಒಂದು ತಟ್ಟೆ (ಬೌಲ್) ಆಕಾರದ ಕಣಿವೆಯು ವಿಶಾಲವಾದ ಹುಲ್ಲುಗಾವಲು ಪ್ರದೇಶಗಳನ್ನು ಹೊಂದಿದ್ದು ಅದು ಅಂತ್ಯವಿಲ್ಲದ ವಿಸ್ತಾರದಲ್ಲಿ ಹರಡಿಕೊಂಡಿದೆ. ಜಾನುವಾರುಗಳನ್ನು ಮೇಯಿಸಲು ಉತ್ತಮವಾದ ಜಾಗವಾಗಿದ್ದು ಕುರುಬರ ಒಂದು ಮೆಚ್ಚಿನ ಸ್ಥಳವಾಗಿದೆ.

ಈ ಸುಂದರವಾದ ಕಣಿವೆಯು ಜಮ್ಮು ಮತ್ತು ಕಾಶ್ಮೀರದಲ್ಲಿದ್ದು ಕ್ಯಾಂಪ್ ಮಾಡಲು ಒಂದು ಸೂಕ್ತವಾದ ತಾಣವಾಗಿದೆ. ನೀವು ದೂರದಲ್ಲಿಯ ಒಂದು ಗದ್ದಲವಿಲ್ಲದ ನೈಸರ್ಗಿಕ ಸೌಂದರ್ಯತೆಯನ್ನು ಹೊಂದಿರುವ ಪ್ರದೇಶದಲ್ಲಿ ಕ್ಯಾಂಪ್ ಮಾಡಲು ಬಯಸಿದಲ್ಲಿ ಧೂದ್ ಪತ್ರಿ ನೀವು ಬಯಸಿದಂತಹ ಸ್ಥಳ ಎನ್ನುವುದರಲ್ಲಿ ಸಂಶಯವಿಲ್ಲ.


PC: Ankur P

ಭೀಮೇಶ್ವರಿ

ಭೀಮೇಶ್ವರಿ

ಬೆಂಗಳೂರಿನಿಂದ 105 ಕಿ.ಮೀ ದೂರದಲ್ಲಿರುವ ಭೀಮೇಶ್ವರಿ ಕರ್ನಾಟಕದ ಪ್ರಸಿದ್ಧ ಮೀನುಗಾರಿಕೆ ಕ್ಯಾಂಪಿಂಗ್ ಸ್ಥಳವಾಗಿದೆ. ಇದು ಕಾವೇರಿ ನದಿ ತೀರದಲ್ಲಿದ್ದು ಇದರ ಸುತ್ತಲೂ ಸುಂದರವಾದ ಮತ್ತು ದಟ್ಟವಾದ ಅರಣ್ಯಪ್ರದೇಶಗಳಿಂದ ಸುತ್ತುವರಿಯಲ್ಪಟ್ಟಿದೆ. ವನ್ಯಪ್ರದೇಶದಲ್ಲಿಯ ಸುಂದರವಾದ ಪ್ರದೇಶದಲ್ಲಿ ಕ್ಯಾಂಪಿಂಗ್ ಮಾಡಲು ಸಿದ್ದರಾಗಿ.

ಇಲ್ಲಿ, ಮಹಾಸೀರ್ ಮೀನುಗಳು ಸಮೃದ್ಧವಾಗಿ ಕಂಡುಬರುತ್ತವೆ, ಇದರಿಂದಾಗಿ ಮೀನುಗಾರಿಕೆ ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ. ನೀವು ಪ್ರಕೃತಿ ಸೌಂದರ್ಯತೆಯನ್ನು ಸವಿಯುತ್ತಾ ಇಲ್ಲಿ ವನ್ಯಜೀವಿಗಳನ್ನು ಅನ್ವೇಷಿಸುತ್ತಾ ಹೆಜ್ಜೆ ಹಾಕಬಹುದು. ಇಲ್ಲಿ ಜಿಂಕೆ, ಕಾಡು ಹಂದಿ, ಮುಂತಾದ ಪ್ರಾಣಿಗಳಿಗೆ ನೆಲೆಯಾಗಿದೆ, ಮತ್ತು ಹಕ್ಕಿಗಳು, ಹಸಿರು-ಮರದ ಮಾಲ್ಕೊಹಾ, ಸಿರ್ಕರ್ ಕೋಗಿ ಇತ್ಯಾದಿಗಳೂ ಕಂಡುಬರುತ್ತವೆ.

PC: Rishabh Mathur

ಚಂದ್ರತಲ್ ಕೊಳ

ಚಂದ್ರತಲ್ ಕೊಳ

ಸುಂದರವಾದ ಹಿಮಾಚಲ ಪ್ರದೇಶದ 14,100 ಅಡಿ ಎತ್ತರದಲ್ಲಿರುವ ಚಂದ್ರತಾಲ್ ಸರೋವರ ಒಂದು ಎತ್ತರದ ಸರೋವರವಾಗಿದೆ. ಸ್ಪಿತಿ ಯಲ್ಲಿರುವ ಚಂದ್ರತಲ್ ಸರೋವರವು ಒಂದು ನಯನ ಮನೋಹರವಾಗಿದ ಸ್ಥಳವಾಗಿದ್ದು ಇದರ ಸುತ್ತಲೂ ಅದ್ಭುತವಾದ ಹಿಮಾಲಯ ಪರ್ವತಗಳು ಸುತ್ತುವರಿಯಲ್ಪಟ್ಟು ಸುಂದರವಾದ ದೃಶ್ಯವನ್ನು ಒದಗಿಸುತ್ತದೆ.

ಇಲ್ಲಿಯ ನೈಸರ್ಗಿಕ ಸೌಂದರ್ಯತೆಯ ಕಾರಣದಿಂದಾಗಿ ಪ್ರತೀ ಚಾರುಣಿಗರು ಮತ್ತು ಶಿಬಿರಾರ್ಥಿಗಳ ಒಂದು ಕನಸಿನ ಸ್ಥಳವಾಗಿದೆ. ಇದು ನಿಜಕ್ಕೂ ಒಂದು ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗ್ ತಾಣವಾಗಿದೆ, ಅದರಲ್ಲೂ ವಿಶೇಷವಾಗಿ ರಾತ್ರಿಯಲ್ಲಿ ನಕ್ಷತ್ರ ಭರಿತ ಆಕಾಶದ ನೋಟವು ವಿವರಿಸಲಾಗದ ಸೌಂದರ್ಯವಾಗಿದೆ.

PC: Mahendra Pal Singh


ಅಂಜುನಾ

ಅಂಜುನಾ

ಬೀಚ್ ಬಳಿಯಲ್ಲಿ ಕ್ಯಾಂಪಿಂಗ್ ಮಾಡುವ ಯೋಚನೆಯು ನಿಮ್ಮಲ್ಲಿದ್ದರೆ ಖಂಡಿತವಾಗಿಯೂ ಗೋವಾದಲ್ಲಿಯ ಅಂಜುನಾ ಬೀಚ್ ನ ಭೇಟಿ ನಿಮ್ಮ ಮುಂದಿನ ಭೇಟಿ ಕೊಡುವ ಪಟ್ಟಿಯಲ್ಲಿ ಸೇರಿಸಿಕೊಳ್ಳಿ ಇಲ್ಲಿಯ್ ಕಡಲ ತೀರಗಳಲ್ಲಿ ಕ್ಯಾಂಪ್ ಮಾಡಿ ಮತ್ತು ಇಲ್ಲಿಯ ಪಾರ್ಟಿಗಳಲ್ಲಿ ಪಾಲ್ಗೊಳ್ಳಿ. ಇದು ಇಲ್ಲಿಯ ಮುಖ್ಯವಾದ ಆಕರ್ಷಣೆಯಾಗಿದೆ.

ಪ್ಯಾರಾಸೈಲಿಂಗ್, ಕಯಾಕಿಂಗ್, ಬಾಳೆ ಬೋಟಿಂಗ್ ಮುಂತಾದ ಜಲ ಕ್ರೀಡೆಗಳನ್ನು ಪ್ರಯತ್ನಿಸಿ ಅಥವಾ ಅಂಜುನಾ ಬೀಚಿನಲ್ಲಿ ರಾತ್ರಿ ಕ್ಯಾಂಪಿಂಗ್ ಅನ್ನು ಆನಂದಿಸಿ.

PC: Sharad Yadav

ಸ್ಪಿತಿ ಕಣಿವೆ

ಸ್ಪಿತಿ ಕಣಿವೆ

ಹಿಮಾಲಯದ ಪರ್ವತಗಳ ಮಧ್ಯೆ ಇರುವ ಸ್ಪಿತಿ ಕಣಿವೆ ಹಿಮಾಚಲ ಪ್ರದೇಶದಲ್ಲಿರುವ ಅದ್ಭುತ ಶೀತಲ ಮರುಭೂಮಿ ಪರ್ವತ ಕಣಿವೆಯಾಗಿದೆ. ಟಿಬೆಟ್ ಮತ್ತು ಭಾರತ ಮಧ್ಯೆ ಇರುವ ಈ ಕಣಿವೆಯು ಸ್ಪಿತಿ ಎಂದರೆ ಅಕ್ಷರಶಃವಾಗಿ ಮಧ್ಯಮ ಭೂಮಿ ಎಂದು ಅರ್ಥೈಸುತ್ತದೆ.

ಸ್ಪಿತಿದಲ್ಲಿರುವ ಕೆಲವು ಸ್ಥಳಗಳು ಶಿಟ್ಕುಲ್, ಸಾಂಗ್ಲಾ ಮತ್ತು ಆಫ್ರಾನ್ ಪಟ್ಟಣದ ಸರಹನ್. ಮುಂತಾದುವುಗಳು ಕ್ಯಾಂಪಿಂಗ್ ಮಾಡಲು ಸೂಕ್ತವಾದ ಸ್ಥಳಗಳಾಗಿವೆ. ಅಲ್ಲದೆ ಸಾಂಗ್ಲಾ ಮತ್ತು ಸರಹನ್ ನ ಸಾಂಗ್ಲಾ ಮತ್ತು ಸರಹನ್ ನ ಇಂಟ್ಯ ಸ್ಥಳಗಳಲ್ಲಿ ಟ್ರೆಕ್ಕಿಂಗ್ ಮಾಡುವುದು ಸಹ ಒಂದು ಅದ್ಭುತ ಅನುಭವವಾಗಿದ್ದು, ನೀವು ಪ್ರಯತ್ನಿಸಬೇಕು.

PC: Unknown

ರಿಷಿಕೇಶ

ರಿಷಿಕೇಶ

ರಿಷಿಕೇಶವು ಆಧ್ಯಾತ್ಮಿಕತೆ ಮತ್ತು ಸಾಹಸ ಎರಡೂ ಸೇರುವ ಒಂದು ಅದ್ಬುತವಾದ ಸ್ಥಳವಾಗಿದೆ. ಇದು ಕ್ಯಾಂಪಿಂಗ್ ಮಾಡಲು ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ನೀವು ಪ್ರವಾಸೀ ಆಕರ್ಷಣೆಗಳನ್ನೂ ನೋಡಬಹುದು. ಅವುಗಳಲ್ಲಿ ಲಕ್ಷ್ಮಣ ಜೂಲಾ, ಸ್ವರ್ಗ್ ಆಶ್ರಮ, ನೀಲ್ ಕಂಠ ಮಹಾದೇವ ದೇವಾಲಯ ಇತ್ಯಾದಿ ಪ್ರಮುಖವಾದುದು. ಆದರೆ ಇಲ್ಲಿ ಸಾಹಸಮಯವಾದ ಕ್ರೀಡೆಗಳನ್ನೂ ಕೂಡಾ ಪ್ರಯತ್ನಿಸಬಹುದು.

ಸ್ಥಳ ಎರಡೂ ಪರಿಪೂರ್ಣ ಭೂದೃಶ್ಯವನ್ನು ಒದಗಿಸುವ ಕಾರಣ ರಿಷಿಕೇಶದಲ್ಲಿ ಚಾರಣ ಅಥವಾ ಪ್ಯಾರಾಗ್ಲೈಡಿಂಗ್ ಎರಡನ್ನೂ ಪ್ರಯತ್ನಿಸಬಹುದು . ಇದಲ್ಲದೆ ನೀವು ಜಲಕ್ರೀಡೆಗಳನ್ನು ಇಷ್ಟ ಪಡುವವರಾಗಿದ್ದಲ್ಲಿ ಇಲ್ಲಿಯ ಸುಂದರವಾದ ಗಂಗಾ ನದಿಯಲ್ಲಿ ಬಿಳಿ ನೀರಿನ ನದಿ ರಾಫ್ಟಿಂಗ್ ಮಾಡಲು ಮರೆಯದಿರಿ.

PC: Unknown


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X