Search
  • Follow NativePlanet
Share
» »ಮುಂಬೈನ ಪ್ರಸಿದ್ಧವಾದ ಶಾಪಿಂಗ್ ಬಜಾರ್‍ಗಳು ಇವೆ......

ಮುಂಬೈನ ಪ್ರಸಿದ್ಧವಾದ ಶಾಪಿಂಗ್ ಬಜಾರ್‍ಗಳು ಇವೆ......

ಮುಂಬೈ ಒಂದು ಸುಂದರವಾದ ನಗರ. ಇದನ್ನು ಕನಸುಗಳ ನಗರವೆಂದೇ ಕರೆಯುತ್ತಾರೆ. ಆಗಾಗ ಅನೇಕ ಮಂದಿ ಪ್ರವಾಸಿಗರು ಮುಂಬೈನ ಸೊಬಗನ್ನು ಕಾಣಲು ಭೇಟಿ ನೀಡುತ್ತಿರುತ್ತಾರೆ. ಸಾಮಾನ್ಯವಾಗಿ ನಾವು ಯಾವುದಾದರು ಒಂದು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ನೆನಪುಗಳ

ಮುಂಬೈ ಒಂದು ಸುಂದರವಾದ ನಗರ. ಇದನ್ನು ಕನಸುಗಳ ನಗರವೆಂದೇ ಕರೆಯುತ್ತಾರೆ. ಆಗಾಗ ಅನೇಕ ಮಂದಿ ಪ್ರವಾಸಿಗರು ಮುಂಬೈನ ಸೊಬಗನ್ನು ಕಾಣಲು ಭೇಟಿ ನೀಡುತ್ತಿರುತ್ತಾರೆ. ಸಾಮಾನ್ಯವಾಗಿ ನಾವು ಯಾವುದಾದರು ಒಂದು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ನೆನಪುಗಳ ಹೊತ್ತ ತರುವ ಜೊತೆ ಜೊತೆಗೆ ಕೆಲವು ವಸ್ತುಗಳನ್ನು ಕೂಡ ನಮ್ಮೊಂದಿಗೆ ತೆಗೆದುಕೊಂಡು ಬರುತ್ತೇವೆ.

ಅಂಥಹ ಸ್ಥಳದಿಂದ ತಂದ ವಸ್ತು ಎಂದು ಇತರರೊಂದಿಗೆ ಹೇಳಿಕೊಳ್ಳಲು ಏನೋ ಒಂದು ರೀತಿಯ ಸಂತಸ. ಸಾಧಾರಣವಾಗಿ ಪ್ರವಾಸಿಗರು ಬೇರೆ ಸ್ಥಳಗಳಿಗೆ ಹೋದಾಗ ಷಾಪಿಂಗ್ ಮಾಡುವುದು ಸಹಜ. ಮುಂಬೈನಲ್ಲಿ ಹಲವಾರು ಷಾಪಿಂಗ್ ಮಾಡಲು ಸ್ಥಳಗಳಿವೆ. ಆದರೆ ಲೇಖನದಲ್ಲಿ ತಿಳಿಸಲಾಗುವ ಷಾಪಿಂಗ್ ಬಜಾರ್‍ಗಳು ಮಾತ್ರ ಅತ್ಯುತ್ತಮವಾದುದು. ನೀವು ಮುಂಬೈಗೆ ಭೇಟಿ ನೀಡಿದಾಗ ತಪ್ಪದೇ ಈ ಬಜಾರ್‍ಗಳಿಗೂ ಒಮ್ಮೆ ಭೇಟಿ ನೀಡಿ ಬನ್ನಿ.

ಕೋಲಾಬಾ ಕಾಸ್ವೇ, ಮುಂಬೈ

ಕೋಲಾಬಾ ಕಾಸ್ವೇ, ಮುಂಬೈ

ಕೋಲಾಬಾ ಕಾಸ್ವೇ ಮಾರುಕಟ್ಟೆಯು ಮುಂಬೈನಲ್ಲಿನ ಹೆಸರುವಾಸಿ ಷಾಪಿಂಗ್ ಸ್ಥಳವಾಗಿದ್ದು, ಇದು ಪ್ರವಾಸಿಗರಿಗೆ ಬೇರೆಯದೇ ಅನುಭವವನ್ನು ನೀಡುತ್ತದೆ. ಇಲ್ಲಿ ಎಲ್ಲಾ ರೀತಿಯ ವಸ್ತುಗಳು ದೊರೆಯುವುದರಿಂದ ಬೇರೆ ಬೇರೆ ರಾಜ್ಯಗಳಿಂದ ಭೇಟಿ ನೀಡುವ ಪ್ರವಾಸಿಗರು ಇಲ್ಲಿ ಶಾಪಿಂಗ್ ಮಾಡುತ್ತಾರೆ. ಅಡುಗೆ ಪದಾರ್ಥಗಳಿಂದ ಹಿಡಿದು ಬಟ್ಟೆ, ಅಭರಣಗಳವರೆವಿಗೂ ಕೂಡ ಇಲ್ಲಿ ದೊರೆಯುತ್ತದೆ.

ಸ್ಥಳ : ಕೋಲಾಬಾ ಕಾಸ್ವೇ, ದಕ್ಷಿಣ ಮುಂಬೈ
ಸಮಯ : ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೆ.
ಪ್ರಮುಖ ಮಾರಾಟದ ವಸ್ತುಗಳು : ಕರಕುಶಲ ವಸ್ತುಗಳು, ಪುಸ್ತಕಗಳು, ಅಭರಣಗಳು, ಸ್ಪಟಿಕಗಳು, ಹಿತ್ತಾಳೆ ವಸ್ತುಗಳು, ಧೂಪದ್ರವ್ಯಗಳು, ಬಟ್ಟೆಗಳು ಇತ್ಯಾದಿ...

PC:Colaba Causeway

ಚೋರ್ ಬಜಾರ್, ಮುಂಬೈ

ಚೋರ್ ಬಜಾರ್, ಮುಂಬೈ

ಕಿಕ್ಕಿರಿದ ಬೀದಿಗಳು ಮತ್ತು ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಶಾಪಿಂಗ್ ಮಾಡಲು ಬಯಸುವವರಿಗೆ ಇದೊಂದು ಅತ್ಯುತ್ತಮವಾದ ಸ್ಥಳವಾಗಿದೆ. ಇದು ಮುಂಬೈನ ಮುಸ್ಲಿಂ ಜಿಲ್ಲೆಯ ಹೃದಯಭಾಗದಲ್ಲಿರುವ ಚೋರ್ ಬಜಾರ್ ಅನ್ನು ಕಾಣಬಹುದು. ನಿಮಗೆ ಗೊತ್ತ ಈ ಚೋರ್ ಬಜಾರ್ 150 ವರ್ಷಗಳಷ್ಟು ಇತಿಹಾಸವನ್ನು ಹೊಂದಿದೆ. ಚೋರ್ ಬಜಾರ್ ಎಂದರೆ "ಕಳ್ಳರ ಮಾರುಕಟ್ಟೆ" ಎಂದೇ ಆಗಿದೆ. ಇಲ್ಲಿ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಹಾಗು ಕಳ್ಳ ಮಾಲುಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ.

ಸ್ಥಳ : ದಕ್ಷಿಣ ಮುಂಬೈನ ಮೊಹಮ್ಮದ್ ಅಲಿ ರಸ್ತೆಯಲ್ಲಿರುವ ಎಸ್., ಪಟೇಲ್ ಮತ್ತು ಮೌಲಾನಾ ಶೌಕತ್ ಅಲಿ ರಸ್ತೆಗಳ ನಡುವಿನ ಮಟನ್ ಸ್ರ್ಟೀಟ್.
ಸಮಯ : ಶುಕ್ರವಾರ ಹೊರತುಪಡಿಸಿ, ಪ್ರತಿದಿನ 11 ಗಂಟೆಯಿಂದ ಸಂಜೆ 7:30ರವೆಗೆ.
ಪ್ರಮುಖ ಮಾರಾಟದ ವಸ್ತುಗಳು : ಇಲ್ಲಿ ಸಾಮಾನ್ಯವಾಗಿ ಎಲ್ಲಾ ರೀತಿಯ ವಸ್ತಗಳು ಮಾರಾಟ ಮಾಡುತ್ತಾರೆ. ಆದರೆ ಇಲ್ಲಿ ಮುಖ್ಯವಾಗಿ ಕೊಳ್ಳಬೇಕಾಗಿರುವ ವಸ್ತುಗಳೆಂದರೆ ಅವು, ಪುರಾತನ ವಸ್ತುಗಳು, ಕಂಚಿನ ವಸ್ತುಗಳು ಇನ್ನು ಹಲವಾರು.

PC:Schwik

ಕ್ರಾಫೋರ್ಡ್ ಮಾರುಕಟ್ಟೆ, ಮುಂಬೈ

ಕ್ರಾಫೋರ್ಡ್ ಮಾರುಕಟ್ಟೆ, ಮುಂಬೈ

ನೀವು ಸರಳವಾಗಿ ಹಣ್ಣುಗಳನ್ನು ಹಾಗು ಮಸಾಲೆ ಪದಾರ್ಥಗಳನ್ನು, ಆಹಾರಗಳನ್ನು ಕೊಳ್ಳಬೇಕಾದರೆ ಒಮ್ಮೆ ಈ ಅದ್ಭುತವಾದ ಕ್ರಾಫೋರ್ಡ್ ಮಾರುಕಟ್ಟೆಗೆ ಭೇಟಿ ನೀಡಿ. ಈ ಮಾರುಕಟ್ಟೆಯು ಐತಿಹಾಸಿಕವಾಗಿ ವಸಾಹತುಶಾಹಿ ಕಟ್ಟಡದಲ್ಲಿ ನೆಲೆಗೊಂಡಿದೆ. ಇಲ್ಲಿ ಹಳೆಯ ಶೈಲಿಯ ಮಾರುಕಟ್ಟೆ ಸಗಟು, ಹಣ್ಣು ಮತ್ತು ತರಕಾರಿಗಳನ್ನು ಕೊಳ್ಳಬಹುದು. ಮುಖ್ಯವಾದುದು ಏನೆಂದರೆ ಇಲ್ಲಿ ಎಲ್ಲಾ ರೀತಿಯ ತಳಿಗಳ ಸಾಕು ಪ್ರಾಣಿಗಳು ಕೂಡ ಲಭ್ಯವಿದೆ.

ಸ್ಥಳ : ಲೋಕಮಾನ್ಯ ತಿಲಕ್ ಮಾರ್ಗ, ಧೋಬಿ ತಾಲಾವ್, ಫೋರ್ಟ್‍ಏರಿಯಾ, ದಕ್ಷಿಣ ಮುಂಬೈ. ಇದು ಛತ್ರಪತಿ ಶಿವಾಜಿಯ ಟರ್ಮಿನಸ್‍ನ ರೈಲು ನಿಲ್ದಾಣದ ಸಮೀಪದಲ್ಲಿದೆ.
ಸಮಯ : ರಾತ್ರಿಯ ವೇಳೆಯಲ್ಲಿ ಮಾತ್ರ. ಭಾನುವಾರದಂದು ಮಾತ್ರ ಬೆಳಗಿನ ಸಮಯದಲ್ಲಿ.
ಪ್ರಮುಖ ಮಾರಾಟದ ವಸ್ತುಗಳು : ಹಣ್ಣು, ತರಕಾರಿಗಳು, ಮಸಾಲೆಗಳು, ಆಹಾರ, ಹೂವುಗಳು, ಪಕ್ಷಿಗಳು, ಮೀನುಗಳು ಮತ್ತು ಇತರ ಸಾಕು ಪ್ರಾಣಿಗಳು.

PC: Uwais

ಮಂಗಳದಾಸ್ ಮಾರುಕಟ್ಟೆ ಮತ್ತು ಮುಲ್ಜಿ ಜೆತಾ ಮಾರುಕಟ್ಟೆ

ಮಂಗಳದಾಸ್ ಮಾರುಕಟ್ಟೆ ಮತ್ತು ಮುಲ್ಜಿ ಜೆತಾ ಮಾರುಕಟ್ಟೆ

ನೀವು ಸುಂದರವಾದ ಉಡುಪುಗಳನ್ನು ಶಾಪಿಂಗ್ ಮಾಡುವ ಬಯಕೆಯಲ್ಲಿದ್ದರೆ ಒಮ್ಮೆ ಮುಂಬೈನಲ್ಲಿರುವ ಮಂಗಳದಾಸ್ ಮಾರುಕಟ್ಟೆ ಮತ್ತು ಮುಲ್ಜಿ ಜೆತಾ ಮಾರುಕಟ್ಟೆಗೆ ಒಮ್ಮೆ ಭೇಟಿ ನೀಡಿ ಬನ್ನಿ. ಇದು ಏಷ್ಯಾದಲ್ಲಿಯೇ ಅತಿ ದೊಡ್ಡ ಜವಳಿ ಮಾರುಕಟ್ಟೆಯ ಪಟ್ಟಿಯಲ್ಲಿ ಇದು ಕೂಡ ಸೇರಿದೆ. ವೈವಿಧ್ಯಮಯವಾದ ಬಟ್ಟೆಗಳನ್ನು ನೀವು ಇಲ್ಲಿ ಆನಂದಿಸಬಹುದು.

ಸ್ಥಳ : ಝವೇರಿ ಬಜಾರ್ ಹತ್ತಿರ, ಕಲ್ಬಾದೇವಿ, ದಕ್ಷಿಣ ಮುಂಬೈ. ಇಲ್ಲಿ ಮೂಂಬದೇವಿ ದೇವಾಲಯವಿದೆ.
ಸಮಯ : ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೆ.
ಪ್ರಮುಖ ಮಾರಾಟದ ವಸ್ತುಗಳು : ಬಟ್ಟೆಗಳು.

PC:Lai Ho Bao Minga

ಸಿ.ಪಿ ಟ್ಯಾಂಕ್, ಮುಂಬೈ

ಸಿ.ಪಿ ಟ್ಯಾಂಕ್, ಮುಂಬೈ

ಕ್ರಾಫೋರ್ಡ್ ಮಾರ್ಕೆಟ್ ಮತ್ತು ಮಂಗಲ್ಡಾಸ್ ಮಾರ್ಕೆಟ್‍ಗೆ ಸ್ವಲ್ಪ ಉತ್ತರಕ್ಕೆ ಸಿ.ಪಿ ಟ್ಯಾಂಕ್ ಅಂದರೆ (ಕವಾಸ್ಜಿ ಪಟೇಲ್ ಟ್ಯಾಂಕ್) ತನ್ನ ಸೊಗಸಾದ ಬಳೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಕೇವಲ ಬಳೆಗಳೇ ಅಲ್ಲದೇ ಆಭರಣಗಳು ಕೂಡ ದೊರೆಯುತ್ತವೆ. ಇದೊಂದು ಅತ್ಯುತ್ತಮವಾದ ಮಾರುಕಟ್ಟೆಯಾಗಿದ್ದು, ಅನೇಕ ಮಂದಿ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಸ್ಥಳ : ಭೂಲೇಶ್ವರ ರಸ್ತೆ, ಭುಲೇಶ್ವರ, ದಕ್ಷಿಣ ಮುಂಬೈ.
ಸಮಯ : ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೆ. ಭಾನುವಾರ ಹೊರತುಪಡಿಸಿ.
ಪ್ರಮುಖ ಮಾರಾಟದ ವಸ್ತುಗಳು : ಬ್ಯಾಂಗಲ್ಸ್ ಮತ್ತು ಆಭರಣಗಳು.

PC:mckaysavage

ಲಿಂಕಿಂಗ್ ರೋಡ್, ಮುಂಬೈ

ಲಿಂಕಿಂಗ್ ರೋಡ್, ಮುಂಬೈ

ಮುಂಬೈನ ಆಧುನಿಕ ಮತ್ತು ಸಾಂಪ್ರದಾಯಿಕ ಮಿಶ್ರಣದ ಶಾಂಪಿಂಗ್ ಮಾಡಲು ಅತ್ಯುತ್ತಮವಾದ ಸ್ಥಳವೇ ಈ ಲಿಂಕಿಂಗ್ ರೋಡ್. ಇಲ್ಲಿ ಮಕ್ಕಳಿಗೆ ಹಾಗು ದೊಡ್ಡವರಿಗೆ ಹಲವಾರು ವಸ್ತುಗಳು ದೊರೆಯುತ್ತವೆ. ಇಲ್ಲಿ ಕೇವಲ ವಸ್ತುಗಳಿಗೆ ಅಲ್ಲದೇ ಆಹಾರಗಳಿಗೂ ಕೂಡ ಪ್ರಸಿದ್ಧವಾದ ಸ್ಥಳವಾಗಿದೆ. ಒಟ್ಟು ಮಾರಾಟ ಮಾಡುವ ಸರಕುಗಳನ್ನು ನೀವು ಎಲ್ಲಿ ಕಾಣಬಹುದು. ಭಾನುವಾರದಂದು ಮಾತ್ರ ಇಲ್ಲಿ ಜನರ ದಂಡು ಹೆಚ್ಚಾಗಿರುತ್ತದೆ. ಇಲ್ಲಿ ಸಂಪ್ರಾದಾಯಿಕವಾದ ಬಟ್ಟೆಗಳು, ಶೂಗಳು ದೊರೆಯುತ್ತವೆ.

ಸ್ಥಳ : ಲಿಂಕ್ ರೋಡ್, ಬಾಂದ್ರಾ ವೆಸ್ಟ್.
ಸಮಯ : ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವೆರೆಗೆ.
ಪ್ರಮುಖ ಮಾರಾಟದ ವಸ್ತುಗಳು : ಭಾರತೀಯ ಸಾಂಪ್ರದಾಯಿಕ ಬಟ್ಟೆಗಳು, ಮಕ್ಕಳ ಬಟ್ಟೆಗಳು, ಚೀಲಗಳು, ಶೂಗಳು ಇತ್ಯಾದಿ..

PC: Jeo Hastings

ಮುಂಬೈನ ಕಲಾ ಘೋಡಾ ಪಾವ್ಮೆಂಟ್ ಗ್ಯಾಲರಿ: ಫೋಟೋ ಪ್ರವಾಸ

ಮುಂಬೈನ ಕಲಾ ಘೋಡಾ ಪಾವ್ಮೆಂಟ್ ಗ್ಯಾಲರಿ: ಫೋಟೋ ಪ್ರವಾಸ

ಮುಂಬೈನ ಕಲಾ ಘೋಡಾ ಕಲಾಶಾಲೆಯಲ್ಲಿ ಹಲವಾರು ಅದ್ಭುತವಾದ ಕಲಾಕೃತಿಗಳನ್ನು ಮಾರಾಟಕ್ಕೆ ಇಟ್ಟಿರುತ್ತಾರೆ. ಇಲ್ಲಿ ಕೇವಲ ಮಾರಾಟ ಮಾಡುವುದೇ ಅಲ್ಲ. ಬದಲಾಗಿ ಒಂದು ಚಿತ್ರವನ್ನು ಬರೆದ ಕಲಾವಿದನ ಬಗ್ಗೆ ಹಾಗು ಆತನ ಕೌಶಲ್ಯದ ಬಗ್ಗೆ ತಿಳಿದುಕೊಳ್ಳಲು ಕೂಡ ಇಲ್ಲಿಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ.

ಸ್ಥಳ : ಎಮ್.ಜಿ ರೋಡ್, ಫೋರ್ಟ್, ದಕ್ಷಿಣ ಮುಂಬೈ
ಸಮಯ : ಪ್ರತಿದಿನ 11 ಗಂಟೆಯಿಂದ ಸಂಜೆ 7 ಗಂಟೆಯವೆಗೆ.
ಪ್ರಮುಖ ಮಾರಾಟದ ವಸ್ತುಗಳು : ಕಲಾಕೃತಿಗಳು, ಧಾರ್ಮಿಕ ಪೇಟಿಂಗ್ಸ್ ಇತ್ಯಾದಿ...


PC:Fletcherspears

ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು....ವಿಜ್ಞಾನಿಗಳಿಗೂ ಬಗೆಹರಿಸಲಾಗದ ದೈವ ಮಹಿಮೆ ಇದು....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X