Search
  • Follow NativePlanet
Share
» »ನೀವು ಪ್ರವಾಸಿ ಫೋಟೋಗ್ರಾಫರ್ ಆಗಬೇಕೆ? ಹಾಗಿದ್ದಲ್ಲಿ ಇಲ್ಲಿದೆ ಕೆಲವು ಟಿಪ್ಸ್‌

ನೀವು ಪ್ರವಾಸಿ ಫೋಟೋಗ್ರಾಫರ್ ಆಗಬೇಕೆ? ಹಾಗಿದ್ದಲ್ಲಿ ಇಲ್ಲಿದೆ ಕೆಲವು ಟಿಪ್ಸ್‌

ಛಾಯಾಗ್ರಹಣ ಮಾಡಲು ಯಾವುದೇ ಕಟ್ಟುಪಾಡುಗಳಿಲ್ಲವಾದರೂ ನಾವು ಸೆರೆಹಿಡಿಯುವ ಚಿತ್ರಕ್ಕೆ ಒಂದು ವಿಭಿನ್ನ ಹಾಗೂ ನಮ್ಮ ಊಹೆಗೂ ಮೀರಿದ ಸುಂದರವಾದ ಚೌಕಟ್ಟಿನಲ್ಲಿಡಬೇಕಾದಲ್ಲಿ ಕೆಲವು ಸಲಹೆಗಳನ್ನು ನಾವು ಅನುಸರಿಸಬೇಕಾಗುತ್ತದೆ.

ಈ ಸಲಹೆಗಳು ಛಾಯಾಗ್ರಹಣ ಮಾಡುವ ಕೌಶಲ್ಯತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಊಹೆಗೂ ನಿಲುಕದ ಒಂದು ವಿಭಿನ್ನ ಚೌಕಟ್ಟಿನಲ್ಲಿರಿಸಲು ಸಹಾಯವಾಗುತ್ತದೆ. ಅದು ಸೆರೆಹಿಡಿಯುವ ಚಿತ್ರದ ಪ್ರತಿಯೊಂದು ಕೋನದಿಂದ ಸುತ್ತ ಮುತ್ತಲಿನ ಬೆಳಕಿನವರೆಗೆ ಪ್ರತಿಯೊಂದೂ ಕೂಡಾ ಛಾಯಾಗ್ರಹಣ ಮಾಡುವಾಗ ನೋಡಬೇಕಾದಂತಹ ವಿಷಯವಾಗಿರುತ್ತವೆ.

ನೀವು ಪ್ರವಾಸಿ ಛಾಯಾಗ್ರಾಹಕರಾಗಿದ್ದು ಮತ್ತು ಅತ್ಯುತ್ತಮ ಚಿತ್ರಗಳನ್ನು ಚಿತ್ರಿಸಲು ಸಹಾಯವಾಗುವಂತಹ ಕೆಲವು ಉತ್ತಮ ಸಲಹೆಗಳಿಗಾಗಿ ನೋಡುತ್ತಿದ್ದಲ್ಲಿ ಈ ಕೆಳಗಿನ ಕೆಲವು ಅಂಶಗಳು ನಿಮಗೆ ಸಹಾಯವಾಗಬಹುದು ಮತ್ತು ಈ ಸಲಹೆಗಳು ನಿಮ್ಮನ್ನು ವ್ಯಾಪಕವಾಗಿ ಛಾಯಾಗ್ರಹಣ ಜಗತ್ತಿಗೆ ಕೊಂಡೊಯ್ಯುವಲ್ಲಿ ಸಹಾಯವಾಗುತ್ತದೆ, ಆದ್ದರಿಂದ ಓದಿ ತಿಳಿಯಿರಿ!

ಮುಂಜಾನೆಯ ಭವ್ಯ ನೋಟವನ್ನು ಸೆರೆಹಿಡಿಯಿರಿ

ಮುಂಜಾನೆಯ ಭವ್ಯ ನೋಟವನ್ನು ಸೆರೆಹಿಡಿಯಿರಿ

ನಾವು ಪ್ರಯಾಣ ಮಾಡುವಾಗ ಈ ಮೇಲೆ ಹೇಳಿದ ಅಂಶವನ್ನು ಮರೆಯಲೇ ಬಾರದು ಅಂದರೆ ಸೂರ್ಯೋದಯದ ನಯನ ಮನೋಹರ ದೃಶ್ಯವನ್ನು ಸೆರೆಹಿಡಿಯಲೇ ಬೇಕು. ಹೆಚ್ಚಾಗಿ ನಾವು ಪ್ರವಾಸದಲ್ಲಿರುವಾಗ ಬೆಳಿಗ್ಗೆ ಬೇಗ ಏಳದೆ ತಡವಾಗಿ ಏಳುವುದರಿಂದ ನಾವಿರುವ ಸ್ಥಳದಲ್ಲಿಯ ಸೂರ್ಯೋದಯದ ಸೌಂದರ್ಯತೆಯನ್ನು ಸೆರೆಹಿಡಿಯಲು ವಿಫಲರಾಗುತ್ತೇವೆ.

ಯಾವುದೇ ಸ್ಥಳವಾಗಲಿ ಸೂರ್ಯೋದಯದ ಸಮಯದಲ್ಲಿ ಅದರ ಸೌಂದರ್ಯತೆಯು ತುತ್ತ ತುದಿಯಲ್ಲಿರುತ್ತದೆ ಎಂಬುದು ನಿಮಗೆ ಗೊತ್ತಿದೆಯೇ? ಸುಂದರವಾದ ಸೂರ್ಯನ ಕಿರಣಗಳು ಎಲ್ಲಾ ಸ್ಥಳದ ಮೇಲೆ ಬಿದ್ದು ಇಡೀ ಪ್ರದೇಶವನ್ನು ಹೊಳೆಯುವಂತೆ ಮಾಡುತ್ತಾ ಸುತ್ತಮುತ್ತಲಿನ ಪರಿಸರವನ್ನು ತನ್ನ ಕಿರಣಗಳ ಸ್ಪರ್ಶದಿಂದ ಎಚ್ಚೆತ್ತುಕೊಳ್ಳುವಂತೆ ಮಾಡುವ ದೃಶ್ಯವು ನಯನ ಮನೋಹರವಾಗಿದ್ದು ಖಂಡಿತವಾಗಿಯೂ ಇದು ಫ್ರೇಮ್ ನಲ್ಲಿ ಇಡುವಂತದ್ದು. ಹಾಗಾಗಿ, ಮುಂದೆ ನೀವು ಪ್ರವಾಸದ ಸಮಯದಲ್ಲಿರುವಾಗ ಸೂರ್ಯೋದಯದ ಸೌಂದರ್ಯತೆಯನ್ನು ಸೆರೆಹಿಡಿಯಲು ಮರೆಯದಿರಿ.

ಆಫ್ಬೀಟ್ (ಅಪರೂಪವಾದುದನ್ನು) ಕ್ಲಿಕ್ ಮಾಡಿ

ಆಫ್ಬೀಟ್ (ಅಪರೂಪವಾದುದನ್ನು) ಕ್ಲಿಕ್ ಮಾಡಿ

ನೀವು ಪ್ರವಾಸಿ ಛಾಯಾಗ್ರಾಹಕರಾಗಬೇಕೆಂದಿದ್ದಲ್ಲಿ, ನೀವು ಖಂಡಿತವಾಗಿಯೂ ಈ ಸಲಹೆಯ ಕಡೆಗೆ ಗಮನ ಹರಿಸುವುದು ಉತ್ತಮ. ನಾವು ಪ್ರಯಾಣ ಮಾಡುವಾಗ ಯಾವಾಗಲೂ ಕೆಲವು ಪ್ರಸಿದ್ದವಾದ ಸ್ಥಳಗಳಿಗೆ ಭೇಟಿ ಕೊಡುವುದು ಸಾಮಾನ್ಯವಾದುದು ಮತ್ತು ಅಲ್ಲಿಯ ಸೌಂದರ್ಯತೆಯನ್ನು ಸೆರೆಹಿಡಿಯುವುದು ಕೂಡಾ ಸಾಮಾನ್ಯ ಇದು ನೀವು ಪ್ರವಾಸಿ ಛಾಯಾಗ್ರಾಹಕರಾಗುವ ಕನಸುಳ್ಳವರಾದಲ್ಲಿ ಇಂತಹ ಛಾಯಾಗ್ರಹಣ ಮಾಡಲು ಆದ್ಯತೆ ನೀಡಬೇಡಿ.

ಖಂಡಿತವಾಗಿಯೂ ಜನಪ್ರಿಯ ಸ್ಥಳಗಳನ್ನು ಫೋಟೋ ಫ್ರೇಂ ನಲ್ಲಿ ಸೆರೆಹಿಡಿಯುವುದು ಸಹಜ ಆದರೆ ನಿವು ಆಫ್ಬೀಟ್ ಸ್ಥಳಕ್ಕೆ ಹೋದಲ್ಲಿ ನೀವು ಹೊಸತಾದುದನ್ನು ಶೋಧಿಸಿ ಅವುಗಳನ್ನು ಸೆರೆಹಿಡಿಯಬೇಕು. ಹೊಸ ವಾಲ್ ಪೇಪರ್ ಗಳನ್ನು ಶೋಧಿಸಲು ನೀವು ಇಷ್ಟಪಡುವುದಿಲ್ಲವೇ ? ಪ್ರತೀ ಜನಪ್ರಿಯ ಹಾಗೂ ಪ್ರಸಿದ್ದ ಸ್ಥಳಗಳು ಆಫ್ಬೀಟ್ ತಾಣಗಳನ್ನು ಖಚಿತವಾಗಿಯೂ ಹೊಂದಿರುತ್ತದೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶವಾಗಿರುತ್ತದೆ.

ಸ್ಥಳೀಯರೊಂದಿಗೆ ಬೆರೆಯಿರಿ

ಸ್ಥಳೀಯರೊಂದಿಗೆ ಬೆರೆಯಿರಿ

ಈ ಒಂದು ಸಲಹೆ ನಿಮಗೆ ಪರಿಚಯವಿಲ್ಲದ ಸ್ಥಳಕ್ಕೆ ಹೋಗುವಾಗ ಸಹಾಯಕ್ಕೆ ಬರುವಂತಹುದು. ನೀವು ಸ್ಥಳೀಯರೊಂದಿಗೆ ಬೆರೆತರೆ ಆಯಾ ಸ್ಥಳದ ಬಗ್ಗೆ ಮಾತ್ರವಲ್ಲದೆ ಅಲ್ಲಿಯ ಜನರ ಸಂಸ್ಕೃತಿಯಿಂದ ಹಿಡಿದು ಅವರ ವಿವಿಧ ಜೀವನ ಶೈಲಿಯವರೆಗೆ ನೀವು ಬಹಳಷ್ಟು ಕಲಿಯಬಹುದು . ಇದರಿಂದ ಕೆಲವು ಅಪರೂಪದ ಸಂಗತಿಗಳು ನಿಮ್ಮ ಕ್ಯಾಮರಾದ ಕಣ್ಣಿಗೆ ಸೆರೆ ಹಿಡಿಯಲು ಸಿಗಬಹದು . ಯಾರಿಗೆ ಗೊತ್ತು? ನಿಮ್ಮ ಈ ಶೋಧನೆಯಿಂದಾಗಿ ಜಗತ್ತಿಗೆ ಇನ್ನೂ ಪರಿಚಯವೇ ಇಲ್ಲದ ಕೆಲವು ಸ್ಥಳಗಳನ್ನು ನಿಮ್ಮಿಂದಾಗಿ ಪರಿಚಯಿಸಿದಂತಾಗಬಹುದು.

ಕೆಳಗಿನ (ಲೋ ಆಂಗಲ್) ಕೋನ ಮತ್ತು ಮತ್ತು ಎತ್ತರದ ಕೋನಗಳ(ಹೈ ಆಂಗಲ್ ) ಬಗ್ಗೆ ತಿಳಿದುಕೊಳ್ಳಿ

ಕೆಳಗಿನ (ಲೋ ಆಂಗಲ್) ಕೋನ ಮತ್ತು ಮತ್ತು ಎತ್ತರದ ಕೋನಗಳ(ಹೈ ಆಂಗಲ್ ) ಬಗ್ಗೆ ತಿಳಿದುಕೊಳ್ಳಿ

ಹೌದು ಈ ಒಂದು ವಿಷಯ ಯಾವಾಗಲೂ ನಿಮ್ಮ ಛಾಯಾಗ್ರಹಣವನ್ನು ಪರಿಣಾಮಕಾರಿಯಾಗಿ ತಿರುಗಿಸಬಲ್ಲದು. ನೀವು ನಿಮ್ಮ ಪ್ರಯಾಣವನ್ನು ಮುಂದುವರೆಸುವ ಮೊದಲು ಮತ್ತು ನಿಮ್ಮ ಕ್ಯಾಮೆರಾವನ್ನು ತೆಗೆದು ಏನನ್ನಾದರೂ ಸೆರೆಹಿಡಿಯುವ ಮುನ್ನ ಲೋ ಆಂಗಲ್ ಮತ್ತು ಹೈ ಆಂಗಲ್ ಚಿತ್ರಣದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.

ಕೆಲವೊಮ್ಮೆ ನಾವು ಪರ್ವತಗಳು ಮತ್ತು ಬೆಟ್ಟಗಳನ್ನು ಹೈ ಆಂಗಲ್ ಚೌಕಟ್ಟಿನಲ್ಲಿ ಸೆರೆಹಿಡಿಯುತ್ತೇವೆ ಆದರೆ ನಿಜವಾಗಿ ಇಂತಹುದನ್ನು ಯಾವಾಗಲೂ ಲೋ ಆಂಗಲ್ ನಿಂದ ಸೆರೆಹಿಡಿದರೆ ಆಯಾ ಸ್ಥಳದ ಸೌಂದರ್ಯತೆಯು ನೀವು ಸೆರೆ ಹಿಡಿದ ಚಿತ್ರದಲ್ಲಿ ಸರಿಯಾಗಿ ಮೂಡಿ ಬರಲು ಸಾಧ್ಯವಾಗುತ್ತದೆ.

ಒಂದೇ ಸ್ಥಳಕ್ಕೆ ಎರಡುಬಾರಿ ಭೇಟಿ ನೀಡಿ

ಒಂದೇ ಸ್ಥಳಕ್ಕೆ ಎರಡುಬಾರಿ ಭೇಟಿ ನೀಡಿ

ಒಂದೇ ಸ್ಥಳಕ್ಕೆ ಎರಡು ಅಥವಾ ಹೆಚ್ಚಿನ ಸಲ ಭೇಟಿ ನೀಡಬೇಕೆನ್ನುವುದರ ಉದ್ದೇಶವೇನೆಂದರೆ ಒಂದೇ ಸ್ಥಳವು ಸಮಯ ಬದಲಾದಂತೆ ಅಲ್ಲಿನ ಪರಿಸರವೂ ಅದಕ್ಕೆ ಸರಿಯಾಗಿ ಬದಲಾಗುತ್ತಿರುತ್ತದೆ . ನೀವು ಎಂದಾದರೂ ಪರ್ವತ ಪ್ರದೇಶಗಳಿಗೆ ಹೋಗಿದ್ದಲ್ಲಿ ನೀವು ಅಲ್ಲಿ ಹಿಮಚ್ಚಾದಿತ ಪ್ರದೇಶಗಳನ್ನು ನೋಡಿರಬಹುದು ಇವು ಮುಂಜಾನೆಯ ಹೊತ್ತಿನಲ್ಲಿ ಹೊಂಬಣ್ಣದ ಹೊಳಪನ್ನು ಹೊಂದಿರುತ್ತದೆ ಸಂಜೆಯಾಗುತ್ತಿದ್ದಂತೆ ಈ ಬಣ್ಣವು ಕತ್ತಲಲ್ಲಿ ಕರಗಿದಂತೆ ಕಾಣುತ್ತದೆ.

ಆದುದರಿಂದ ನೀವು ಇಂತಹ ಹಿಮಚ್ಚಾದ ಪರ್ವತಗಳ ಕಡೆಗೆ ಬೆಳಗ್ಗಿನ ಸಮಯದಲ್ಲಿ ಎಂದೂ ಹೋಗಿಲ್ಲದಿದ್ದಲ್ಲಿ, ಅವು ಬಂಗಾರದಂತೆ ಹೊಳೆಯುತ್ತಿರುವುದನ್ನು ನೋಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಒಂದೇ ಸ್ಥಳಕ್ಕೆ ಎರಡು ಅಥವಾ ಹೆಚ್ಚಿನ ಸಲ ಭೇಟಿ ಕೊಡಲು ಪ್ರಯತ್ನಿಸಿ

ಹತ್ತಿರದಿಂದ ಛಾಯಾಗ್ರಹಣ ಮಾಡಲು ಪ್ರಯತ್ನಿಸಿ

ಹತ್ತಿರದಿಂದ ಛಾಯಾಗ್ರಹಣ ಮಾಡಲು ಪ್ರಯತ್ನಿಸಿ

ಎಲ್ಲರೂ ಕ್ಲೋಸ್ -ಅಪ್ ಫೋಟೋಗ್ರಾಫಿಯಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ ಆದರೆ ನೀವು ಪ್ರಯಾಣಿಕ ಛಾಯಗ್ರಾಹಕರಾಗಬೇಕೆಂದಿದ್ದಲ್ಲಿ, ನೀವು ಇದರ ಬಗ್ಗೆ ಕಲಿಯುವ ಅವಶ್ಯಕತೆ ಇರುತ್ತದೆ. ಕ್ಲೋಸ್ - ಅಪ್ ಛಾಯಾಗ್ರಹಣವು ಬೀದಿಯಲ್ಲಿಯ ಛಾಯಾಗ್ರಹಣದ ಒಂದು ಭಾಗವಾಗಿದೆ ಮತ್ತು ಇದು ಆಯಾ ಸ್ಥಳದ ತಿಳಿಯದೇ ಇರುವ ವಿಷಯಗಳ ಬಗ್ಗೆ ಹೆಚ್ಚಿನದನ್ನು ತಿಳಿಯಲು ಸಹಾಯಮಾಡುತ್ತದೆ.

ಯಾವುದೇ ಒಂದು ಸ್ಥಳದ ಕಟ್ಟಕಡೆಯ ಜೀವನ ಶೈಲಿಯ ಬಗ್ಗೆ ಹತ್ತಿರದಿಂದ ತಿಳಿದು ನಿಮ್ಮ ಚೌಕಟ್ಟಿನಲ್ಲಿ ಸೆರೆಹಿಡಿಯ ಬಯಸಿದಲ್ಲಿ ಕ್ಲೋಸ್ ಅಪ್ ಫೋಟೋಗ್ರಾಫಿಯು ನಿಮಗೆ ಸಹಾಯವಾಗುವುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X