» »ಗೋವಾದಲ್ಲಿನ 7 ಸುಂದರ ಬೀಚ್‍ಗಳು.

ಗೋವಾದಲ್ಲಿನ 7 ಸುಂದರ ಬೀಚ್‍ಗಳು.

Written By: Sowmyabhai

ಈ ಕೆಲಸದ ನಡುವೆ ವಾರಾಂತ್ಯದಲ್ಲಿ ಸುಂದರವಾದ ಬೀಚ್‍ಗೆ ಹೋಗಿ ಕಾಲ ಕಳೆಯಬೇಕು. ಹಾಡು, ಕುಣಿತ, ಪಾರ್ಟಿ, ಶಾಪಿಂಗ್ ಎಂದೆಲ್ಲಾ ಸಂತಸಮಯ ಸಮಯವನ್ನು ಕಳೆಯಬೇಕು ಎನಿಸಿದರೆ ಲೇಖನದಲ್ಲಿ ತಿಳಿಸಲಾಗಿರುವ 7 ಬೀಚ್‍ಗಳಿಗೆ ಒಮ್ಮೆ ಭೇಟಿಕೊಡಿ. ಗೋವಾ ಬೆಂಗಳೂರಿನಿಂದ 620 ಕಿ,ಮೀಗಳಷ್ಟು ದೂರದಲ್ಲಿದ್ದು ರೈಲು, ವಿಮಾನ, ಬಸ್ಸುಗಳಲ್ಲಿಯು ತೆರಳಬಹುದು. ಈ 7 ಸುಂದರವಾದ ಬೀಚ್‍ಗಳಿಗೆ ಭೇಟಿ ನೀಡಿದಾಗ ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭವವನ್ನು ಪಡೆಯುವಿರಿ.


ಗೋವಾ
ಬೀಚ್ ಎಂದ ತಕ್ಷಣ ಮೊಟ್ಟ ಮೊದಲಬಾರಿಗೆ ನೆನಪಾಗುವುದೇ ಗೋವಾ ಬೀಚ್‍ಗಳು. ಹೌದು ಗೋವಾದಲ್ಲಿ ಬೀಚ್‍ಗಳು ಅತ್ಯಂತ ಸುಪ್ರಸಿದ್ದವಾದ್ದವಾಗಿದೆ. ಕೇವಲ ಭಾರತೀಯರೆ ಅಲ್ಲದೇ ವಿದೇಶಿಯರು ಕೂಡ ಬಲು ಇಷ್ಟ ಪಟ್ಟು ಭೇಟಿ ನೀಡುವ ತಾಣ ಈ ಗೋವಾ ಬೀಚ್‍ಗಳು. ಹಲವು ಚಲನಚಿತ್ರ ನಟ ನಟಿಯರ ಅಚ್ಚು ಮೆಚ್ಚಿನ ಸ್ಥಳ ಈ ಗೋವಾ. ಇಲ್ಲಿನ ಬೀಚ್‍ಗಳು, ಆಹಾರ, ರೆಸಾರ್ಟ್‍ಗಳು, ಹೋಟೆಲ್‍ಗಳು ಜನರನ್ನು ಮತ್ತಷ್ಟು ಆಕರ್ಷಿಸುವಂತೆ ಮಾಡುತ್ತದೆ. ಗೋವಾಗೆ ಭೇಟಿ ನೀಡಿದಾಗ ಕೆಲವು ಬೀಚ್‍ಗಳಿಗೆ ಮಾತ್ರ ಭೇಟಿ ನೀಡಿರುತ್ತೀರಾ ಆದರೆ ಈ ಲೇಖನದಲ್ಲಿ 7 ಬಗೆಯ ಬೀಚ್‍ಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

ಬಾಗಾ ಬೀಚ್

ಬಾಗಾ ಬೀಚ್

ಇದನ್ನು ಅತ್ಯಂತ ಉತ್ತಮವಾದ ಬೀಚ್‍ನಲ್ಲಿ ಮೊದಲನೆಯಾದಾಗಿದೆ. ಈ ಬೀಚ್ ಗೋವಾದಲ್ಲಿ ಅತ್ಯಂತ ಹೆಸರುವಾಸಿಯಾಗಿದೆ. ಇಲ್ಲಿ ಬೀಚ್ ಪಾರ್ಟಿ, ಸಮುದ್ರದ ಜಲಚರಗಳ ಸ್ವಾದಿಷ್ಟವಾದ ಆಹಾರಗಳು, ಮದ್ಯವೆಲ್ಲವೂ ದೊರೆಯುತ್ತದೆ. ಯಾರು ಡ್ಯಾನ್ಸ್, ಮೂಸಿಕ್ ಪಾರ್ಟಿ ಎಂದೆಲ್ಲಾ ಜನರಗಳ ಮಧ್ಯೆ ಇರಲು ಬಯಸಿವಿರೂ ಅವರಿಗೆ ಈ ಬೀಚ್ ಸೂಕ್ತವಾದುದಾಗಿದೆ. ಇಲ್ಲಿ ರುಚಿಕರವಾದ ಆಹಾರ ಹಾಗೂ ಮೋಜು ಮಸ್ತಿಗಳನ್ನು ಇಷ್ಟ ಪಡುವವರಿಗೆ ಇದು ಉತ್ತಮವಾದ ಸ್ಥಳವಾಗಿದೆ. ಇಲ್ಲಿ ತಂಗಲು ಹಲವಾರು ಪ್ರಸಿದ್ದವಾದ ಹೋಟೆಲ್‍ಗಳು, ರೆಸಾರ್ಟ್‍ಗಳಿವೆ.

PC:Shilpi bhatnagar

ಕ್ಯಾನಡುಲೀಮ್ ಬೀಚ್

ಕ್ಯಾನಡುಲೀಮ್ ಬೀಚ್

ಕ್ಯಾನಡುಲೀಮ್ ಬೀಚ್ ಗೋವಾದ ಮತ್ತೊಂದು ಸುಂದರವಾದ ಬೀಚ್ ಆಗಿದೆ. ಇದರ ಸೌಂದರ್ಯದಿಂದ ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ಈ ಬೀಚ್ ಅತಿ ಹೆಚ್ಚು ಪ್ರವಾಸಿಗರನ್ನು ದಿನನಿತ್ಯ ಸ್ವಾಗತ ಮಾಡಿಕೊಳ್ಳುತ್ತದೆ.. ನ್ಯೂ ಇಯರ್ ಪಾರ್ಟಿಗೆ ಹೆಸರುವಾಸಿಯಾಗಿರುವ ಈ ಕ್ಯಾನಡುಲೀಮ್ ಬೀಚ್ ಡ್ಯಾನ್ಸ್, ಸಾಂಗ್ ಪಾರ್ಟಿ ಎಂದೆಲ್ಲಾ ಈ ಬೀಚ್‍ನಲ್ಲಿ ಏಂಜಾಯ್ ಮಾಡಲು ಭೇಟಿ ನೀಡುತ್ತಾರೆ. ಇಲ್ಲಿ ಡೀವಾ ಗೋವಾ ಎಂಬ ಚಟುವಟಿಕೆ ಕೂಡ ನಡೆಸಲಾಗುತ್ತದೆ.

PC::FaizanAhmad21

ಸಿನ್‍ಕ್ವೇರಿಮ್ ಬೀಚ್

ಸಿನ್‍ಕ್ವೇರಿಮ್ ಬೀಚ್

ಕ್ಯಾನಡುಲೀಮ್ ಬೀಚ್ ಗೋವಾದ ಮತ್ತೊಂದು ಸುಂದರವಾದ ಬೀಚ್ ಆಗಿದೆ. ಇದರ ಸೌಂದರ್ಯದಿಂದ ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ಈ ಬೀಚ್ ಅತಿ ಹೆಚ್ಚು ಪ್ರವಾಸಿಗರನ್ನು ದಿನನಿತ್ಯ ಸ್ವಾಗತ ಮಾಡಿಕೊಳ್ಳುತ್ತದೆ.. ನ್ಯೂ ಇಯರ್ ಪಾರ್ಟಿಗೆ ಹೆಸರುವಾಸಿಯಾಗಿರುವ ಈ ಕ್ಯಾನಡುಲೀಮ್ ಬೀಚ್ ಡ್ಯಾನ್ಸ್, ಸಾಂಗ್ ಪಾರ್ಟಿ ಎಂದೆಲ್ಲಾ ಈ ಬೀಚ್‍ನಲ್ಲಿ ಏಂಜಾಯ್ ಮಾಡಲು ಭೇಟಿ ನೀಡುತ್ತಾರೆ. ಇಲ್ಲಿ ಡೀವಾ ಗೋವಾ ಎಂಬ ಚಟುವಟಿಕೆ ಕೂಡ ನಡೆಸಲಾಗುತ್ತದೆ.

PC:amark

ವ್ಯಾಗಟಾರ್ ಬೀಚ್

ವ್ಯಾಗಟಾರ್ ಬೀಚ್

ಇದು ಒಂದು ಖಾಸಗಿಯಾದ ಬೀಚ್ ಆಗಿದೆ. ಈ ವ್ಯಾಗಟಾರ್ ಬೀಚ್ ತನ್ನ ಹಸಿರು ಪ್ರಕೃತಿ ಸೌಂದರ್ಯದಿಂದ ಅದ್ಭುತವಾದ ಸ್ಥಳವಾಗಿದೆ. ಇಲ್ಲಿನ ಪ್ರಕೃತಿ ಸೊಬಗನ್ನು ವಿಕ್ಷೀಸಲು ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬೀಚ್‍ಗೆ ಭೇಟಿ ನೀಡುತ್ತಾರೆ. ಈ ವ್ಯಾಗಟಾರ್ ಬೀಚ್ ಅತ್ಯಂತ ಪ್ರಶಾಂತತೆಯಿಂದ ಕೂಡಿರುತ್ತದೆ. ಪ್ರವಾಸಿಗರು ವಿಶ್ರಾಂತಿಗಾಗಿ ಈ ಬೀಚ್‍ಗೆ ಬರುತ್ತಾರೆ. ದಿಲ್ ಚಹತಾ ಹೇ ಎಂಬ ಪಾಯಿಂಟ್ ಹಾಗೂ ಚೋಪ್ರಾ ಕೋಟೆ ಈ ಬೀಚ್‍ಗೆ ಅತ್ಯಂತ ಸಮೀಪವಾದ ಪ್ರೇಕ್ಷಣೀಯ ಸ್ಥಳವಾಗಿದೆ.

PC: Free Software Foundation

ಅನ್‍ಜುನ ಬೀಚ್

ಅನ್‍ಜುನ ಬೀಚ್

ಈ ಬೀಚ್ ಬಂಡೆಕಲ್ಲುಗಳಿಂದ ರಚಿತವಾದ ಬೀಚ್ ಎಂದೇ ಖ್ಯಾತವಾಗಿದೆ. ಈ ಅನ್‍ಜುನ್ ಬೀಚ್‍ನಲ್ಲಿ ತೂಗಾಡುವ ಮರಗಳನ್ನು ಕಾಣಬಹುದಾಗಿದ್ದು, ಈ ಬೀಚ್ ಮತ್ತಷ್ಟು ಸೊಬಗಿನಿಂದ ಕಾಣುತ್ತದೆ. ಈ ಬೀಚ್‍ನಲ್ಲಿ ಕಲ್ಚರಲ್‍ಪಾರ್ಟಿ ಮತ್ತು ಮೂಸಿಕ್ ಪಾರ್ಟಿಗೆ ಪ್ರಸಿದ್ದವಾಗಿದೆ. ಇಲ್ಲಿ ಬುಧುವಾರದ ದಿನ ಪಿಯಾ ಬಜಾರ್ ನಲ್ಲಿ ಬಗೆ ಬಗೆಯ ಉಡುಪುಗಳು, ಟ್ರೆಂಡಿ ಆಭರಣಗಳು ಹಾಗೂ ಮೆಮೆಂಟೋಸ್‍ಗಳು ದೊರೆಯುತ್ತವೆ.

PC:Nikhilb239

ಅರಾಮ್‍ಬೊಲ್ ಬೀಚ್

ಅರಾಮ್‍ಬೊಲ್ ಬೀಚ್

ಈ ಅರಾಮ್‍ಬೊಲ್ ಬೀಚ್ ಕುಟುಂಬಿಕರೊಂದಿಗೆ ಬಂದು ಎನ್‍ಜಾಯ್ ಮಾಡಲು ಹೇಳಿ ಮಾಡಿಸಿದ ಪ್ರವಾಸಿ ತಾಣವಾಗಿದೆ. ಈ ಬೀಚ್ ಬಜೆಟ್ ಪ್ರವಾಸಿಗರಿಗೆ ಉತ್ತಮವಾದ ಬೀಚ್. ಇಲ್ಲಿ ಸಾಧಾರಣ ಹಟ್‍ಗಳಿದ್ದು, ಕಡಿಮೆ ದುಡ್ಡಿರುವವರು ಇಂತಹ ಬೀಚ್‍ಗೆ ಹೋಗಬಹುದು. ಇಲ್ಲಿನ ಆಹಾರವು ಅತ್ಯಂತ ರುಚಿಕರವಾಗಿರುತ್ತದೆ. ಅರಾಮ್‍ಬೊಲ್ ಮಕ್ಕಳಿಗೆ ಅತ್ಯಂತ ಸುರಕ್ಷಿತವಾದ ಬೀಚ್‍ವಾದುದು.

PC:Free Software Foundation

ಮೊರ್‍ಜಿಮ್ ಬೀಚ್

ಮೊರ್‍ಜಿಮ್ ಬೀಚ್

ವಾತಾರಣವನ್ನು ಆನಂದ ಪಡುವವರು ಈ ಮೊರ್‍ಜಿಮ್ ಬೀಚ್‍ಗೆ ಒಮ್ಮೆ ಭೇಟಿ ನೀಡಬಹುದು. ಹಚ್ಚ ಹಸಿರಾದ ಪ್ರಕೃತಿಯನ್ನು ಈ ಬೀಚ್ ಹೊಂದಿದೆ. ಆನಂದವಾಗಿ ಏಕಾಂಗಿಯಾಗಿ ಹಾಗೂ ಜನ ದಟ್ಟಣೆ ಇಲ್ಲದೆ ಖಾಸಗಿಯಾಗಿ ತಮ್ಮ ಪ್ರೀತಿ ಪಾತ್ರರಾದವರ ಜೊತೆ ಇರಲು ಅತ್ಯಂತ ಉತ್ತಮವಾದ ಬೀಚ್ ಇದಾಗಿದೆ. ಇಲ್ಲಿ ಹಲವಾರು ಬಗೆಯ ಪಕ್ಷಿ ಕೋಗಿಲೆ, ಸಾಂಡ್‍ಪೀಪರ್, ಕಿಂಗ್ ಫಿಶರ್‍ಗಳನ್ನು ಕಾಣಬಹುದಾಗಿದೆ.

PC::Anshul24Sharma

Please Wait while comments are loading...