• Follow NativePlanet
Share
» »ಭಾರತದಲ್ಲಿನ 7 ರಹಸ್ಯಾತ್ಮಕ ಹಾಗು ಭಯಾನಕವಾದ ತಾಣಗಳು...

ಭಾರತದಲ್ಲಿನ 7 ರಹಸ್ಯಾತ್ಮಕ ಹಾಗು ಭಯಾನಕವಾದ ತಾಣಗಳು...

Posted By: Sowmya bhai tk

ಭಾರತ ದೇಶದಲ್ಲಿ ಅದ್ಭುತವಾದ ವಾಸ್ತುಶಿಲ್ಪಶೈಲಿಯಿಂದ ಕೂಡಿರುವ ಅನೇಕ ಸುಂದರವಾದ ಕಟ್ಟಡಗಳನ್ನು ಕಾಣಬಹುದು. ದೇವಾಲಯಗಳೇ ಆಗಲಿ, ಸ್ಮಾರಕಗಳೇ ಆಗಲಿ, ನಮ್ಮ ಸಂಸ್ಕøತಿ, ವೈವಿಧ್ಯತೆ ಎಲ್ಲಾ ಪಾಶ್ಚಿಮಾತ್ಯರಿಗೆ ಇಷ್ಟವಾಗುವಂತಹದು. ಹಾಗಾಗಿಯೇ ಪ್ರಪಂಚದ ಮೂಲೆ-ಮೂಲೆಗಳಿಂದ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ನಮ್ಮ ದೇಶದಲ್ಲಿ ಅನೇಕ ನಿಗೂಢವಾದ ಪ್ರದೇಶಗಳಿವೆ. ಆ ಪ್ರದೇಶಗಳಿಗೆ ಉತ್ತರ ಇಂದಿಗೂ ಬಗೆಹರಿಸಲಾಗದಂತಹ ನಿಗೂಢವಾದ ಪ್ರದೇಶವಾಗಿಯೇ ಉಳಿದು ಬಿಟ್ಟಿದೆ. ಈ ಲೇಖನದಲ್ಲಿ ತಿಳಿಸಲಾಗುವ ಒಂದೊಂದು ಪ್ರದೇಶವು ತನ್ನದೇ ಶಕ್ತಿಯನ್ನು ಹೊಂದಿದೆ. ಹಾಗಾದರೆ ಆ ಸ್ಥಳಗಳು ಯಾವುವು? ಆ ಸ್ಥಳಗಳ ಹಿಂದೆ ಅಡಗಿರುವ ನಿಗೂಢತೆ ಏನು? ಎಂಬುದರ ಬಗ್ಗೆ ಲೇಖನದ ಮೂಲಕ ತಿಳಿದುಕೊಳ್ಳೋಣ.

1.ಕುಂಭಲ್ಗಡ್ ಕೋಟೆ, ರಾಜಸ್ಥಾನ

1.ಕುಂಭಲ್ಗಡ್ ಕೋಟೆ, ರಾಜಸ್ಥಾನ

PC:Aayushsomani

ಇದು ಮಹಾರಾಣ ಪ್ರತಾಪನ ಜನ್ಮ ಸ್ಥಳವಾಗಿದೆ. ಇದು ಭಾರತದ ಗ್ರೇಟ್ ವಾಲ್ ಎಂದೂ ಕರೆಯಲ್ಪಡುತ್ತದೆ. ಏಕೆಂದರೆ ಇದು ವಿಶ್ವದಲ್ಲಿಯೇ 2 ನೇ ದೊಡ್ಡದಾದ ಗೋಡೆಯಾಗಿದೆ. ದಂತಕಥೆಯ ಪ್ರಕಾರ, 1443 ರಲ್ಲಿ ಕುಂಭಲ್ಗಡದ ಮಹಾರಾಣ ಕುಂಭನು ಕೋಟೆಯ ಗೋಡೆಗಳನ್ನು ನಿರ್ಮಾಣ ಮಾಡಲು ವಿಫಲವಾದನು. ಒಬ್ಬ ಆಧ್ಯಾತ್ಮಿಕ ಸಲಹೆಗಾರನು ಮಾನವನ ತ್ಯಾಗಕ್ಕೆ ಸಲಹೆ ನೀಡಿದನು. ಅದರಂತೆ ಕೋಟೆಯನ್ನು ನಿರ್ಮಾಣ ಮಾಡಿದನು ಎಂದು ಹೇಳಲಾಗುತ್ತದೆ.

2.ದುಮಾಸ್ ಬೀಚ್, ಗುಜರಾತ್

2.ದುಮಾಸ್ ಬೀಚ್, ಗುಜರಾತ್

PC: Marwada

ಜನಪ್ರಿಯ ನಂಬಿಕೆಯ ಪ್ರಕಾರ, ಈ ಬೀಚ್ ಭಯಾನಕವಾದ ಸ್ಥಳದಲ್ಲಿ ಒಂದಾಗಿದೆ. ಇಲ್ಲಿ ರಾತ್ರಿ ಆಗುತ್ತಿದಂತೆ ಒಂದು ಜೀವಿ ಕೂಡ ಇರುವುದಿಲ್ಲ. ಕಾರಣ ಇಲ್ಲಿ ಅಗೋಚರ ಶಕ್ತಿಗಳ ಸಂಚಾರವಿದೆ ಎಂದೇ ನಂಬಲಾಗಿದೆ. ಈ ಪ್ರವಾಸಿತಾಣವು ಒಂದು ಕಾಲದಲ್ಲಿ ಸಮಾಧಿಯಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ರಾತ್ರಿಯ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಮತ್ತೆಂದು ಹಿಂದಿರುಗಿ ಬರುವುದಿಲ್ಲ ಎಂದು ನಂಬಲಾಗಿದೆ. ಬೆಳಗಿನ ಸಮಯದಲ್ಲಿ ಜನಜಂಗುಳಿಯಿಂದ ತುಂಬಿತುಳುಕುವ ಈ ಪ್ರವಾಸಿ ತಾಣವು ರಾತ್ರಿಯಾಗುತ್ತಿದ್ದಂತೆ ಎಲ್ಲರೂ ಜಾಗ ಖಾಲಿ ಮಾಡುತ್ತಾರೆ.

3.ರಾಜಸ್ಥಾನದ ಕುಲ್ಧಾರ

3.ರಾಜಸ್ಥಾನದ ಕುಲ್ಧಾರ

PC:Suryansh Singh (DarkUnix)

ಕೋಟೆ ನಗರದ ಇತಿಹಾಸಕ್ಕೆ ಬಂದರೆ ರಾತ್ರಿಯ ಸಮಯದಲ್ಲಿ ಇಲ್ಲಿ ಅಗೋಚರವಾದ ಶಕ್ತಿಗಳು ಸಂಚಾರ ಮಾಡುತ್ತಿರುತ್ತವೆ ಎಂದು ನಂಬಲಾಗಿದೆ. ಇದೊಂದು ಪ್ರವಾಸಿ ತಾಣವಾಗಿದ್ದು, ರಾತ್ರಿಯ ಸಮಯದಲ್ಲಿ ಮಾತ್ರ ಯಾವ ಒಂದು ಜೀವಿಯು ಕೂಡ ಇಲ್ಲಿ ಇರುವುದಿಲ್ಲ. ಇಲ್ಲಿ ಒಂದು ಕಾಲದಲ್ಲಿ 85 ಮನೆಗಳು ಇದ್ದವಂತೆ.

4.ಅಲಿಯಾ ಘೋಸ್ಟ ಲೈಟ್ಸ್, ಪಶ್ಚಿಮ ಬಂಗಾಳ

4.ಅಲಿಯಾ ಘೋಸ್ಟ ಲೈಟ್ಸ್, ಪಶ್ಚಿಮ ಬಂಗಾಳ

Hermann Hendrich

ಅಲಿಯಾ ಎನ್ನುವುದು ವಿವರಿಸಲಾಗದ ವಿಚಿತ್ರವಾದ ಬೆಳಕಿನ ವಿದ್ಯಮಾನವಾಗಿದೆ. ವಿಚಿತ್ರ ಏನಪ್ಪ ಎಂದರೆ ಪಶ್ಚಿಮ ಬಂಗಾಳದಲ್ಲಿ ಅಲಿಯಾ ಎಂಬ ಘೋಸ್ಟ್ ಬೆಳಕುಗಳು ಕಾಣಿಸಿಕೊಳ್ಳುತ್ತವೆ. ಆ ಬಣ್ಣ-ಬಣ್ಣದ ದೀಪಗಳನ್ನು ದೆವ್ವಗಳು ಎಂದೇ ಭಾವಿಸಲಾಗಿದೆ. ರಾತ್ರಿಯ ಸಮಯದಲ್ಲಿ ಯಾರು ಕೂಡ ಆ ಸ್ಥಳದಲ್ಲಿ ಭೇಟಿ ನೀಡುವುದಿಲ್ಲ. ಆ ದೀಪಗಳು ಸತ್ತ ಮೀನುಗಾರರ ದೆವ್ವಗಳೇ ಆಗಿವೆ ಎಂದು ನಂಬಲಾಗಿದೆ. ಇಂದಿಗೂ ಇದೊಂದು ರಹಸ್ಯವಾದ ತಾಣವೇ ಆಗಿದೆ. ಏಕೆಂದರೆ ಈ ವಿಚಿತ್ರವಾದ ದೀಪಗಳು ಏಕೆ ಹೀಗೆ ಕಾಣುತ್ತವೆ ಎಂಬುದಕ್ಕೆ ಇಂದಿಗೂ ನಿಗೂಢವಾಗಿರುವ ತಾಣವೇ ಸರಿ.

5.ಭಂಗ್ರಾ ಕೋಟೆ, ರಾಜಸ್ಥಾನ

5.ಭಂಗ್ರಾ ಕೋಟೆ, ರಾಜಸ್ಥಾನ

Shahnawaz Sid

ಇದನ್ನು ಘೋಸ್ಟ್ ಟೌನ್ ಎಂದೇ ಕರೆಯಲಾಗುತ್ತದೆ. ಒಂದು ದಂತಕಥೆಯ ಪ್ರಕಾರ, ಮಾಂತ್ರಿಕನು ಗ್ರಾಮದಲ್ಲಿದ್ದ ಒಬ್ಬ ಸುಂದರವಾದ ಯುವತಿಯ ಮೇಲೆ ಪ್ರೇಮದಲ್ಲಿ ಬೀಳುತ್ತಾನೆ. ಆಕೆಯನ್ನೇ ವರಿಸಬೇಕು ಎಂದು ತೀರ್ಮಾನಿಸಿ ಆಕೆಯನ್ನು ಬಲವಂತವಾಗಿ ವಿವಾಹವಾಗಲು ಮುಂದಾದಾಗ ಗ್ರಾಮಸ್ಥರು ಆಕೆಯನ್ನು ತಾವೇ ಕಳುಹಿಸುತ್ತೇವೆ ಎಂದು ಮಾಂತ್ರಿಕನಲ್ಲಿ ವಿನಂತಿಸಿಕೊಳ್ಳುತ್ತಾರೆ. ಮಾತು ಕುಟ್ಟ ಜನರು ರಾತ್ರೋ ರಾತ್ರಿ ಆ ಗ್ರಾಮವನ್ನೇ ಬಿಟ್ಟು ಹೋಗುತ್ತಾರೆ. ಇದರಿಂದ ಕೋಪಗೊಂಡ ಆ ಮಾಂತ್ರಿಕನು ಆ ಗ್ರಾಮವು ಪಿಶಾಚಿಗಳಿಂದ ತುಂಬಿರುವ ಗ್ರಾಮವಾಗಲಿ ಎಂದು ಶಪಿಸುತ್ತಾನೆ. ಈ ತಾಣದಲ್ಲಿ ಇಂದಿಗೂ ಒಂದು ಜೀವಿಯು ವಾಸಮಾಡುತ್ತಿಲ್ಲ. ಕಾರಣ ಈ ತಾಣದಲ್ಲಿ ಅನೇಕ ಆತ್ಮಗಳ ಸಂಚಾರವಿದೆ ಎಂದೇ ಭಾವಿಸಲಾಗುತ್ತಿದೆ.

6.ರೂಪ್‍ಖುಂಡ ಕೆರೆ, ಉತ್ತರಾಖಂಡ

6.ರೂಪ್‍ಖುಂಡ ಕೆರೆ, ಉತ್ತರಾಖಂಡ

PC: Schwiki

ಅನೇಕ ವರ್ಷಗಳಿಂದಲೂ ಮಾನವನ ಅಸ್ಥಿಪಂಜರವನ್ನು ಈ ಸರೋವರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇಲ್ಲಿ ಅಸ್ಥಿಪಂಜರಗಳು, ಮರದ ಕಲಾಕೃತಿಗಳು, ಕಬ್ಬಿಣ ಮುಂಚೂಣಿಗಳು, ಚರ್ಮದ ಚಪ್ಪಲಿಗಳು, ಉಂಗುರಗಳಂತಹವು ಇಲ್ಲಿ ಕಂಡುಬಂದಿದೆ. ನ್ಯಾಶನಲ್ ಜಿಯೋಗ್ರಾಫಿಕ್ ನಿಯತಕಾಲಿಕೆಯ ತಂಡವು ಸುಮಾರು 30 ಅಸ್ಥಿಪಂಜರಗಳನ್ನು ಪಡೆದಾಗ, ಮಾಂಸವನ್ನು ಇನ್ನು ಕೆಲವು ಅಸ್ಥಿ ಪಂಜರಗಳಿಗೆ ಜೋಡಿಸಲಾಗುತ್ತಿತ್ತು.

7.ಜಮಾಲಿ-ಕಾಮಾಲಿ ಮಸೀದಿ, ದೆಹಲಿ

7.ಜಮಾಲಿ-ಕಾಮಾಲಿ ಮಸೀದಿ, ದೆಹಲಿ

Faheemul

ಜಮಾಲಿ-ಕಾಮಾಲಿ ಮಸೀದಿ, ಮೆಹ್ರೌಲಿ ಆರ್ಕಿಯಲಾಜಿಕಲ್ ಪಾರ್ಕ್, ಜಮಾಲಿಯ ಒಳಗೆ ಇದೆ. ಇಲ್ಲಿ ಅಗೋಚರವಾದ ಶಕ್ತಿಗಳ ಸಂಚಾರವಿದೆ ಎಂದು ಜನರು ನಂಬುತ್ತಾರೆ. 1535 ರಲ್ಲಿ ಪ್ರಸಿದ್ಧ ಸೂಫಿ ಸಂತರರಾದ ಜಮಾಲಿ ಹಾಗು ಕಮಾಲಿಯವರ ಸಮಾಧಿ ಇದೆ. ಇಲ್ಲಿ ಅನೇಕ ಅಗೋಚರ ಶಕ್ತಿಗಳಿಗೆ ತಾಣವಾಗಿದೆ ಎಂದು ನಂಬಲಾಗಿದೆ. ಈ ಮಸೀದಿಗೆ ರಾತ್ರಿಯ ಸಮಯದಲ್ಲಿ ಭೇಟಿ ನೀಡುವುದು ಅಸುರಕ್ಷಿತ ಎಂದೇ ಭಾವಿಸಲಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ