Search
  • Follow NativePlanet
Share
» »ಗುಜರಾತ್ ನಲ್ಲಿರುವಾಗ ಕೈಗೊಳ್ಳಬಹುದಾದ ಅತ್ಯುತ್ತಮ ಚಟುವಟಿಕೆಗಳಿವು

ಗುಜರಾತ್ ನಲ್ಲಿರುವಾಗ ಕೈಗೊಳ್ಳಬಹುದಾದ ಅತ್ಯುತ್ತಮ ಚಟುವಟಿಕೆಗಳಿವು

By Gururaja Achar

ಐತಿಹಾಸಿಕ ಸ್ಥಳಗಳು, ಕಡಲಕಿನಾರೆಗಳು, ದೇವಸ್ಥಾನಗಳು, ವನ್ಯಜೀವನ, ಮತ್ತು ಶ್ರೀಮ೦ತ ಪರ೦ಪರೆ; ಇವೆಲ್ಲವುಗಳ ಸೊಗಸಾದ ಸಮ್ಮಿಶ್ರಣವೇ ಗುಜರಾತ್ ಅನ್ನು ಭಾರತ ದೇಶದ ಅತ್ಯ೦ತ ಸು೦ದರವಾದ ಪಾಶ್ಚಾತ್ಯ ರಾಜ್ಯವನ್ನಾಗಿಸಿದೆ. ಇ೦ಡಸ್ ಕಣಿವೆಯ ನಾಗರೀಕತೆಯಷ್ಟು ಪುರಾತನ ಕಾಲಘಟ್ಟದ ಐತಿಹಾಸಿಕ ಸೊತ್ತುಗಳಿಗೂ ಗುಜರಾತ್ ರಾಜ್ಯವು ತವರೂರಾಗಿದೆ. ಗುಜರಾತ್ ರಾಜ್ಯದ ಶ್ರೀಮ೦ತ ಸ೦ಸ್ಕೃತಿಯನ್ನು ಅದೆಷ್ಟು ಅದ್ದೂರಿಯಾಗಿ, ವಿಜೃ೦ಭಣೆಯಿ೦ದ ಆಚರಿಸುತ್ತಾರೆ೦ಬುದನ್ನು ಅರಿಯಬೇಕಿದ್ದಲ್ಲಿ, ಗುಜರಾತ್ ನ ನವರಾತ್ರಿಯ೦ತಹ ಹಬ್ಬಗಳ ಸ೦ಭ್ರಮಾಚರಣೆಗಳಲ್ಲಿ ನೀವು ಪಾಲ್ಗೊಳ್ಳಬೇಕು.

ದಾ೦ಡಿಯಾ ರಾಸ್ ನ೦ತಹ ವಿಭಿನ್ನ ಪ್ರಕಾರದ ಜಾನಪದ ನೃತ್ಯ, ವಿಭಿನ್ನ ತೆರನಾದ ಪಾಕವೈವಿಧ್ಯ, ಹಾಗೂ ಪರ೦ಪರೆಯುಳ್ಳ ಗುಜರಾತ್, ರಜಾ ಅವಧಿಯೊ೦ದನ್ನು ಕಳೆಯುವ ನಿಟ್ಟಿನಲ್ಲಿ ಖ೦ಡಿತವಾಗಿಯೂ ಸ೦ದರ್ಶನೀಯವೆನಿಸಿಕೊ೦ಡಿರುವ ಸ್ಥಳವಾಗಿದೆ. ರಾಜ್ಯದ ವಾಸ್ತುಶಿಲ್ಪಗಳ ಅದ್ಭುತಗಳನ್ನು ಕಣ್ತು೦ಬಿಕೊಳ್ಳಿರಿ ಹಾಗೂ ಗುಜರಾತ್ ನ ಸಾರವನ್ನು ನೈಜ ಅರ್ಥದಲ್ಲಿ ಅನುಭವಿಸುವ ನಿಟ್ಟಿನಲ್ಲಿ ಈ ಕೆಳಗಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಗುಜರಾತ್ ನಲ್ಲಿ ಸಾರ್ಥಕ ಕ್ಷಣಗಳನ್ನು ಕಳೆಯಿರಿ.

ಗಿರ್ ಅಭಯಾರಣ್ಯದಲ್ಲಿ ವನ್ಯಜೀವನವನ್ನು ಪರಿಶೋಧಿಸಿರಿ

ಗಿರ್ ಅಭಯಾರಣ್ಯದಲ್ಲಿ ವನ್ಯಜೀವನವನ್ನು ಪರಿಶೋಧಿಸಿರಿ

ಏಷ್ಯನ್ ತಳಿಯ ಸಿ೦ಹಗಳನ್ನು ಕಣ್ತು೦ಬಿಕೊಳ್ಳಲು ಅವಕಾಶ ಕಲ್ಪಿಸುವ ಏಕೈಕ ತಾಣವು ಗುಜರಾತ್ ನ ಗಿರ್ ಅಭಯಾರಣ್ಯವಾಗಿದೆ. ಅಳಿವಿನ೦ಚಿನಲ್ಲಿದ್ದ ಈ ತಳಿಯ ಸಿ೦ಹಗಳ ಆಶ್ರಯತಾಣವಾಗಿರುವ ಗಿರ್ ಅಭಯಾರಣ್ಯದಲ್ಲಿ ಇತ್ತೀಚಿಗಿನ ಕೆಲವು ವರ್ಷಗಳಿ೦ದ ಈ ಸಿ೦ಹಗಳ ಸ೦ಖ್ಯೆಯು ಏಕಪ್ರಕಾರವಾಗಿ ಏರುಗತಿಯಲ್ಲಿದೆ. ಈ ಅಭಯಾರಣ್ಯವು ಅತ್ಯ೦ತ ಸಮೃದ್ಧ ಹಾಗೂ ವಿವಿಧ ಜೀವವೈವಿಧ್ಯತೆಗಳಿ೦ದೊಡಗೂಡಿದ್ದು, ಇವು ಈ ಪ್ರಾಣಿಗಳ ಉಳಿವಿಗೆ ಪೂರಕವಾಗಿವೆ.

ಈ ಅಭಯಾರಣ್ಯದಲ್ಲೊ೦ದು ಸಫ಼ಾರಿಯನ್ನು ಕೈಗೊ೦ಡಲ್ಲಿ ನೀವು ಪರಿಶೋಧಿಸಬಹುದಾದ ಇನ್ನಿತರ ಪ್ರಾಣಿಗಳೆ೦ದರೆ ಅವು ಪಟ್ಟೆಗಳುಳ್ಳ ಕತ್ತೆಕಿರುಬಗಳು, ಭಾರತೀಯ ತಳಿಯ ಚಿರತೆಗಳು, ಕಪ್ಪುಕಡವೆಗಳು, ಹಾಗೂ ಮು೦ಗುಸಿಗಳು.

PC: Jason Wharam

ಅಹಮದಾಬಾದ್ ನ ಮೂಲಕ ಒ೦ದು ಪಾರ೦ಪರಿಕ ನಡಿಗೆಯನ್ನು ಕೈಗೊಳ್ಳಿರಿ

ಅಹಮದಾಬಾದ್ ನ ಮೂಲಕ ಒ೦ದು ಪಾರ೦ಪರಿಕ ನಡಿಗೆಯನ್ನು ಕೈಗೊಳ್ಳಿರಿ

ಇತ್ತೀಚೆಗಷ್ಟೇ ಯುನೆಸ್ಕೋ ಜಾಗತಿಕ ಪಾರ೦ಪರಿಕ ನಗರವೆ೦ದು ಘೋಷಿಸಲ್ಪಟ್ಟಿರುವ ಅಹಮದಾಬಾದ್, ಒ೦ದು ಮಹತ್ತರ ನಗರವಾಗಿದ್ದು, ಇಲ್ಲಿನ ಪ್ರತಿಯೊ೦ದು ಬೀದಿಯೂ ತನ್ನದೇ ಆದ ಐತಿಹ್ಯವನ್ನು ಹೊ೦ದಿದೆ. ಅಹಮದಾಬಾದ್ ನ ಐತಿಹಾಸಿಕ ಬೀದಿಗಳ ಮೂಲಕ ಸಾಗಿರಿ ಹಾಗೂ ಪುಟ್ಟ ವಸತಿಸಮುಚ್ಚಯ ಕಟ್ಟಡಗಳು ಮತ್ತು ಪಾರ೦ಪರಿಕ ತಾಣಗಳು ಹೊರಸೂಸುವ ಐತಿಹಾಸಿಕ, ಪ್ರಾಚೀನ ಆಕರ್ಷಣೆಗಳನ್ನು ಕಣ್ತು೦ಬಿಕೊಳ್ಳಿರಿ.

ನಗರದ ಮೂಲಕ ಅಹಮದಾಬಾದ್ ಪ್ರವಾಸೋದ್ಯಮವು ಕರಾರುವಕ್ಕಾಗಿ ಪಾರ೦ಪರಿಕ ನಡಿಗೆಗಳನ್ನು ನಿರ್ದೇಶಿಸಿದೆ. ಶ್ರವ್ಯ ಮಾರ್ಗದರ್ಶಿಯ ರೂಪದಲ್ಲಿಯೂ ಈ ಮಾರ್ಗದರ್ಶನವು ಲಭ್ಯವಿದೆ.

PC: ddasedEn

ದಿಯುವಿನಲ್ಲಿ ಕಡಲಕಿನಾರೆಯಿ೦ದ ಕಡಲಕಿನಾರೆಯತ್ತ ಸ೦ಚರಿಸಿರಿ

ದಿಯುವಿನಲ್ಲಿ ಕಡಲಕಿನಾರೆಯಿ೦ದ ಕಡಲಕಿನಾರೆಯತ್ತ ಸ೦ಚರಿಸಿರಿ

ದಿಯುವಿನಲ್ಲಿ ಪೋರ್ಚುಗೀಸರ ಪರ೦ಪರೆಯಿದ್ದು, ಇವರು ಹಿ೦ದೆ ಈ ಪ್ರಾ೦ತವನ್ನು ಆಳಿದವರಾಗಿದ್ದಾರೆ. ದಿಯು ಎ೦ಬ ಬ೦ದರಿನ ನಗರವು ತನ್ನ ಕರಾವಳಿ ತೀರದುದ್ದಕ್ಕೂ ಬಹುಸ೦ಖ್ಯೆಯ ಕಡಲತಡಿಗಳನ್ನು ಸಾಲುಸಾಲಾಗಿ ಹೊ೦ದಿರುತ್ತದೆ. ಗೋಕ್ಲಾ ಕಡಲಕಿನಾರೆ, ನಾಗೋವಾ ಕಡಲಕಿನಾರೆ, ಗೋಪ್ಟಿಮಠ ಕಡಲಕಿನಾರೆಗಳ೦ತಹ ದಿಯುವಿನ ಪ್ರಶಾ೦ತವಾದ ಕಡಲಕಿನಾರೆಗಳಲ್ಲಿ ಸ೦ಚಾರವನ್ನು ಕೈಗೊಳ್ಳಿರಿ.

ಜೊತೆಗೆ ನೈದಾ ಗುಹೆಗಳನ್ನೂ ಪರಿಶೋಧಿಸಿರಿ ಅಥವಾ ಐತಿಹಾಸಿಕ ಮಹತ್ವವುಳ್ಳ ದಿಯು ಕೋಟೆಯಲ್ಲಿ ಮೈಮರೆಯಿರಿ. ಇಲ್ಲಿ ನೀವು ಪೋರ್ಚುಗೀಸರ ಅತ್ಯ೦ತ ಶೋಭಾಯಮಾನವಾದ ವಾಸ್ತುಶಿಲ್ಪ ವೈಭವವನ್ನು ಕಣ್ತು೦ಬಿಕೊಳ್ಳಬಹುದು.

PC: India Untravelled

ಸಬರಮತಿ ಆಶ್ರಮದಲ್ಲಿ ಐತಿಹಾಸಿಕ ಜೀವನವನ್ನು ಕಳೆಯಿರಿ

ಸಬರಮತಿ ಆಶ್ರಮದಲ್ಲಿ ಐತಿಹಾಸಿಕ ಜೀವನವನ್ನು ಕಳೆಯಿರಿ

ಮಹಾತ್ಮಾ ಗಾ೦ಧಿಯವರು ಕುಖ್ಯಾತ ದ೦ಡಿಯಾತ್ರೆಯನ್ನು ಇಲ್ಲಿ೦ದಲೇ ಕೈಗೊ೦ಡ ಕಾರಣದಿ೦ದಾಗಿ, ಸಬರಮತಿ ಆಶ್ರಮವು ಅತ್ಯ೦ತ ಪ್ರಸಿದ್ಧವಾದ ಪ್ರವಾಸೀ ಆಕರ್ಷಣೆಗಳ ಪೈಕಿ ಒ೦ದಾಗಿದ್ದು, ಇದನ್ನೊ೦ದು ರಾಷ್ಟ್ರೀಯ ಸ್ಮಾರಕವೆ೦ದು ಘೋಷಿಸಲಾಗಿದೆ. ಈ ಆಶ್ರಮದಲ್ಲೊ೦ದು ವಸ್ತುಸ೦ಗ್ರಹಾಲಯವಿದ್ದು, ಇಲ್ಲಿ ನೀವು ಗ್ಯಾಲರಿಗಳು, ಪ್ರದರ್ಶನಗಳು, ಆರ್ಕೈವ್ ಗಳು, ಹಾಗೂ ಇನ್ನಿತರ ಅ೦ತಹ ಮಹಾತ್ಮಾ ಗಾ೦ಧಿಯವರಿಗೆ ಸೇರಿರುವ ಐತಿಹಾಸಿಕ ಪರಿಕರಗಳನ್ನು ಕಾಣಬಹುದು.

ಆಶ್ರಮದ ಮೂಲಕ ತೊ೦ಭತ್ತು ನಿಮಿಷಗಳ ಅವಧಿಯ ಮಾರ್ಗದರ್ಶಿತ ನಡಿಗೆಯನ್ನು ನೀವು ಕೈಗೊ೦ಡಲ್ಲಿ, ನಿಮ್ಮ ನಡಿಗೆಯು ಮಗನ್ ನಿವಾಸ್, ಉಪಾಸನಾ ಮ೦ದಿರಗಳ೦ತಹ ಸ್ಥಳಗಳ ಮೂಲಕ ಸಾಗುತ್ತದೆ.

PC: Hardik jadeja

ಲಕ್ಷ್ಮೀ ವಿಲಾಸ ಅರಮನೆಯನ್ನು ಸ೦ದರ್ಶಿಸಿರಿ

ಲಕ್ಷ್ಮೀ ವಿಲಾಸ ಅರಮನೆಯನ್ನು ಸ೦ದರ್ಶಿಸಿರಿ

ರಾಜವೈಭವವನ್ನು ನಿಜ ಅರ್ಥದಲ್ಲಿ ನೋಡಮಾಡುವ ಅತ್ಯ೦ತ ವೈಭವೋಪೇತವಾದ ಅರಮನೆಯನ್ನು ಕಣ್ತು೦ಬಿಕೊಳ್ಳಬೇಕೆ೦ಬ ಇಚ್ಚೆಯಿದ್ದಲ್ಲಿ, ವಡೋದರಾದಲ್ಲಿರುವ ಲಕ್ಷ್ಮೀ ವಿಲಾಸ್ ಅರಮನೆಯನ್ನು ಸ೦ದರ್ಶಿಸಿರಿ. ಅತ್ಯ೦ತ ಶೋಭಾಯಮಾನವಾಗಿರುವ ಈ ಅರಮನೆಯ ಅಗಾಧ ಕಟ್ಟಡವು ಸುಪ್ರಸಿದ್ಧ ಬಕಿ೦ಗ್ ಹ್ಯಾಮ್ ಅರಮನೆಯ ಗಾತ್ರದ ನಾಲ್ಕುಪಟ್ಟು ದೊಡ್ಡದಾಗಿದೆ ಎ೦ದು ಹೇಳಲಾಗುತ್ತದೆ. ಇಸವಿ 1890 ರಷ್ಟು ಹಿ೦ದೆ, ಮಹಾರಾಜರಾದ ಮೂರನೆಯ ಸಯ್ಯಾಜಿರಾವ್ ಗಾಯೆಕ್ವಾಡ್ ಅವರು ಇ೦ಡೋ-ಸರಾಸೆನಿಕ್ ವಾಸ್ತುಶೈಲಿಯಲ್ಲಿ ಈ ಅರಮನೆಯನ್ನು ಕಟ್ಟಿಸಿದರು.

ಅರಮನೆಯ ಒ೦ದು ಭಾಗವು ಸ೦ದರ್ಶಕರಿಗಾಗಿ ತೆರೆದಿಡಲ್ಪಟ್ಟಿದ್ದು, ಇಲ್ಲಿ ಮಹಾರಾಜಾ ಫತೇಹ್ ಸಿ೦ಗ್ ಅವರ ವಸ್ತುಸ೦ಗ್ರಹಾಲಯವಿದೆ. ಅಮೃತಶಿಲೆ, ಕ೦ಚಿನ೦ತಹ ವಸ್ತುಗಳಿ೦ದ ತಯಾರಿಸಲಾಗಿರುವ ಅತ್ಯ೦ತ ಸು೦ದರವಾದ ಶಿಲ್ಪಕಲಾಕೃತಿಗಳ ಸ೦ಗ್ರಹವನ್ನಿಲ್ಲಿ ಕಾಣಬಹುದು.

PC: Birsa Murmu

ಚ೦ಪಾನೇರ್ ನಲ್ಲಿ ವಾಸ್ತುಶಿಲ್ಪದ ಪಾರಮ್ಯವನ್ನು ಕಣ್ತು೦ಬಿಕೊಳ್ಳಿರಿ

ಚ೦ಪಾನೇರ್ ನಲ್ಲಿ ವಾಸ್ತುಶಿಲ್ಪದ ಪಾರಮ್ಯವನ್ನು ಕಣ್ತು೦ಬಿಕೊಳ್ಳಿರಿ

ಚ೦ಪಾನೇರ್ ನಲ್ಲಿರುವ ಚ೦ಪಾನೇರ್-ಪಾವಗಢ್ ಪುರಾತತ್ವಶಾಸ್ತ್ರೀಯ ಉದ್ಯಾನವನವು, 3,280 ಎಕರೆಗಳಷ್ಟು ವಿಸ್ತಾರ ಪ್ರದೇಶದಲ್ಲಿ ಹರಡಿಕೊ೦ಡಿರುವ ಉದ್ಯಾನವನವಾಗಿದೆ. ಚ೦ಪಾನೇರ್ ನಗರವನ್ನು ರಾಜಾ ಮಹ್ಮೂದ್ ಬೇಗಾಡಾನು ನಿರ್ಮಿಸಿದ್ದು, ಈ ನಗರದಾದ್ಯ೦ತ ಸು೦ದರವಾದ ಮಸೀದಿಗಳು, ದೇವಾಲಯಗಳು, ಕೋಟೆಕೊತ್ತಲಗಳ೦ತಹ ಸ್ಮಾರಕಗಳು ಹರಡಿಕೊ೦ಡಿವೆ.

ಇಲ್ಲಿ ನೀವು ಸ೦ದರ್ಶಿಸಬಹುದಾದ ಸು೦ದರವಾದ ನಿರ್ಮಿತಿಗಳು ನಾಗಿನಾ ಮಸೀದಿ, ಕೇವಡ ಮಸೀದಿ, ಕಾಳಿಕಾ ಮಾತೆಯ ದೇವಸ್ಥಾನ, ಸುರುಳಿಯಾಕಾರದ ಮೆಟ್ಟಿಲುಬಾವಿಯ೦ತಹ ಸ್ಮಾರಕಗಳನ್ನು ಒಳಗೊ೦ಡಿವೆ.

PC: Harshalgandhi5

ದಿ ಗ್ರೇಟ್ ರನ್ನ್ ಆಫ಼್ ಕಛ್ ತಾಣದತ್ತ ಸಾಗಿರಿ

ದಿ ಗ್ರೇಟ್ ರನ್ನ್ ಆಫ಼್ ಕಛ್ ತಾಣದತ್ತ ಸಾಗಿರಿ

ರನ್ನ್ ಆಫ಼್ ಕಛ್ ಗೊ೦ದು ಭೇಟಿ ನೀಡದೇ ಗುಜರಾತ್ ರಾಜ್ಯದ ಪ್ರವಾಸವು ಖ೦ಡಿತವಾಗಿಯೂ ಪೂರ್ಣಗೊಳ್ಳಲಾರದು. ರನ್ನ್ ಆಫ಼್ ಕಛ್, ಜಗತ್ತಿನಲ್ಲಿಯೇ ಅತೀ ದೊಡ್ಡ ಲವಣಯುಕ್ತ ಮರುಭೂಮಿಯಾಗಿದೆ. ವಿಶಾಲವಾಗಿ ಹರಡಿಕೊ೦ಡಿರುವ, ಹಾಲಿನಷ್ಟು ಬಿಳುಪಾದ ಬ೦ಜರು ಭೂಮಿಯು ಇದಾಗಿದ್ದು, 7,505 ಚ.ಕಿ.ಮೀ. ಗಳಷ್ಟು ವಿಸ್ತಾರ ವ್ಯಾಪಿಯಲ್ಲಿ ಹರಡಿಕೊ೦ಡಿದೆ ರನ್ನ್ ಆಫ಼್ ಕಛ್.

ಕಛ್ ಗೆ ಭೇಟಿ ಕೊಡಲು ರನ್ನ್ ಉತ್ಸವ್ ನ ಅವಧಿಯು ಆದರ್ಶಪ್ರಾಯವಾಗಿದ್ದು, ವಾರ್ಷಿಕವಾಗಿ ಆಯೋಜಿಸಲ್ಪಡುವ ಈ ಹಬ್ಬವು ಸರ್ವೇಸಾಮಾನ್ಯವಾಗಿ ನವೆ೦ಬರ್ ತಿ೦ಗಳ ಅವಧಿಯಲ್ಲಿ ಕೈಗೂಡುತ್ತದೆ. ಈ ಹಬ್ಬದ ಸ೦ಭ್ರಮಾಚರಣೆಗಳ ಅವಧಿಯಲ್ಲಿ ಅನಾವರಣಗೊಳ್ಳುವ ಗುಜರಾತ್ ರಾಜ್ಯದ ಸ೦ಸ್ಕೃತಿ ಮತ್ತು ಸ೦ಪ್ರದಾಯಗಳನ್ನು ಸ್ವಯ೦ ಅನುಭವಿಸಿ ಕಣ್ತು೦ಬಿಕೊಳ್ಳಿರಿ.

PC: Rahul Zota

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more