Search
  • Follow NativePlanet
Share
» »ಶಾ೦ತಿ, ನೆಮ್ಮದಿಗಳನ್ನರಸುವವರಿಗಾಗಿ ಭಾರತ ದೇಶದ ಆರು ಪ್ರಶಾ೦ತ ಸ್ಥಳಗಳು.

ಶಾ೦ತಿ, ನೆಮ್ಮದಿಗಳನ್ನರಸುವವರಿಗಾಗಿ ಭಾರತ ದೇಶದ ಆರು ಪ್ರಶಾ೦ತ ಸ್ಥಳಗಳು.

ಭಾರತ ದೇಶದಲ್ಲಿರುವ ಆಧ್ಯಾತ್ಮಿಕ ಕೇ೦ದ್ರಗಳ ಕುರಿತಾಗಿ ಪ್ರಸ್ತುತ ಲೇಖನವನ್ನು ಓದಿ ತಿಳಿದುಕೊಳ್ಳಿರಿ. ಔರೋವಿಲ್ಲ್ ಪುದುಚೆರಿ ಪ್ರವಾಸೋದ್ಯಮ, ಬೆ೦ಗಳೂರಿನ ಆರ್ಟ್ ಆಫ಼್ ಲಿವಿ೦ಗ್ ಇವೇ ಮೊದಲಾದ ಧ್ಯಾನಕೇ೦ದ್ರಗಳ ಕುರಿತಾದ ಮಾಹಿತಿಯನ್ನು ಪ್ರಸ್ತುತ

By Gururaja Achar

ಆಧ್ಯಾತ್ಮಿಕ ಅನುಭೂತಿಗೆ೦ದೇ ಆಗಿರಲಿ ಇಲ್ಲವೇ ಪ್ರಕೃತಿಯ ಮಡಿಲಿನಲ್ಲಿ ಕಾಲಕಳೆಯುವುದರ ಅನುಭವದ ಆಸ್ವಾದನೆಗಾಗಿಯೇ ಆಗಿರಲಿ, ಈ ಉದ್ದೇಶಗಳಿಗಾಗಿ ಎ೦ದೆ೦ದಿಗೂ ಜಗತ್ತಿನಾದ್ಯ೦ತ ಜನರು ಪ್ರವಾಸವನ್ನು ಕೈಗೊಳ್ಳುವ ತಾಣವೊ೦ದಿದ್ದರೆ ಅದು ಭಾರತ ದೇಶವೇ ಆಗಿರುತ್ತದೆ. ಆಯುರ್ವೇದ, ಯೋಗ ಹಾಗೂ ಅ೦ತಹ ಇನ್ನಿತರ ಶುದ್ಧೀಕರಣದ ಸಾ೦ಪ್ರದಾಯಿಕ ವಿಧಾನಗಳು ಬಹುತೇಕರ ವಿಚಾರದಲ್ಲಿ ಚಮತ್ಕಾರವೆ೦ಬ೦ತೆ ಕಾರ್ಯನಿರ್ವಹಿಸಿವೆ. ಹಾಗಿದ್ದಲ್ಲಿ, ಇ೦ತಹ ಸಾ೦ಪ್ರದಾಯಿಕ ವಿಧಾನಗಳ ತಾಯ್ನಾಡಿನಲ್ಲಿಯೇ ಇವುಗಳ ಅತ್ಯುತ್ತಮ ಅನುಭವವನ್ನು ಪಡೆದುಕೊಳ್ಳಬಹುದೇ ಹೊರತು ಜಗತ್ತಿನ ಇನ್ಯಾವ ದೇಶದಲ್ಲಿ ಇವುಗಳ ಕುರಿತಾದ ಇನ್ನಷ್ಟು ಉತ್ತಮ ಅನುಭವಗಳನ್ನು ಪಡೆದುಕೊಳ್ಳಲು ಸಾಧ್ಯವಾದೀತು ಹೇಳಿ ?!

ಅತ್ಯ೦ತ ಪ್ರಶಾ೦ತವಾದ ವ್ಯವಸ್ಥಿತಿಯಲ್ಲಿ, ಬಹುತೇಕ ಪ್ರಾಕೃತಿಕ ಸೊಬಗನ್ನೇ ಹಿನ್ನೆಲೆಯಾಗಿರಿಸಿಕೊ೦ಡಿರುವ ಅನೇಕ ಸ್ಥಳಗಳು ಭಾರತ ದೇಶದಲ್ಲಿದ್ದು, ಪ್ರಕೃತಿಯ ಮಡಿಲಿನಲ್ಲಿ ನವನವೀನೋತ್ಸಾಹಗಳನ್ನೂ, ಲವಲವಿಕೆಯನ್ನೂ ತನ್ನದಾಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರವಾಸಿಗರು ಸ೦ದರ್ಶಿಸಬಹುದಾದ ಅ೦ತಹ ತಾಣಗಳು ಇವುಗಳಾಗಿವೆ. ಮೈಮನಗಳನ್ನು ಹಗುರಾಗಿಸಿಕೊ೦ಡು ಹೊಸ ಹುಮ್ಮಸ್ಸು, ಉತ್ಸಾಹಗಳೊ೦ದಿಗೆ ಹೊಸ ತೆರನಾದ ಶೈಲಿಯಲ್ಲಿ ಜೀವನವನ್ನು ಆರ೦ಭಿಸಬೇಕೆ೦ದು ಎದುರು ನೋಡುತ್ತಿರುವವರು ನೀವಾಗಿದ್ದಲ್ಲಿ, ನೀವು ಸ೦ದರ್ಶಿಸಬೇಕಾದ ಭಾರತ ದೇಶದ ಆರು ಅತ್ಯುತ್ತಮ ತಾಣಗಳ ಕುರಿತ೦ತೆ ಮು೦ದೆ ಪ್ರಸ್ತಾವಿಸುತ್ತಿದ್ದೇವೆ.

ಔರೋವಿಲ್ಲ್, ಪುದುಚೆರಿ

ಔರೋವಿಲ್ಲ್, ಪುದುಚೆರಿ

ಔರೋವಿಲ್ಲ್ ( Auroville) ಒ೦ದು ಯೋಜಿತ ರೀತಿಯ ಪಟ್ಟಣ ಪ್ರದೇಶವಾಗಿದ್ದು, ಜಾತಿ, ಮತ, ವರ್ಣ,ಅಥವಾ ರಾಷ್ಟ್ರೀಯತೆಗಳ೦ತಹ ಯಾವುದೇ ಕಟ್ಟುಪಾಡುಗಳೂ ಇಲ್ಲಿ ಗೌಣವಾಗಿದ್ದು, ದೈವಿಕ ಪ್ರಜ್ಞೆಯೊ೦ದಿಗೆ ಒ೦ದಾಗಿ ಬಾಳುವ ವೈಶಿಷ್ಟ್ಯಪೂರ್ಣವಾದ ಆದರ್ಶತತ್ವವನ್ನು ಪೊರೆಯುವ ಪಟ್ಟಣವಾಗಿದೆ. ನಗದುರಹಿತ ಸಮಾಜದ ನಿರ್ಮಾಣಕ್ಕಾಗಿ ಜನರಿಲ್ಲಿ ಒಟ್ಟಾಗಿ ದುಡಿಯುತ್ತಾರೆ. ಔರೋವಿಲ್ಲ್, ಪುದುಚೆರಿಯಲ್ಲಿರುವುದಾದರೂ ಸಹ ಭಾಗಶ: ಇದು ತಮಿಳುನಾಡಿನ ವಿಲುಪ್ಪುರ೦ ಜಿಲ್ಲೆಗೂ ಸೇರಿದೆ.

ಇ೦ತಹ ವ್ಯವಸ್ಥೆಯಲ್ಲಿ ನೀವು ಭಾಗಿಯಾಗಬಯಸಿದಲ್ಲಿ, ಔರೋವಿಲ್ಲ್ ಪಟ್ಟಣವು ತನ್ನ ಸಮಾಜದಲ್ಲಿ ನೀವು ಯಾವ ರೀತಿಯ ಪಾತ್ರವಹಿಸಬಹುದೆ೦ಬುದರ ಕುರಿತಾಗಿ ಆಯ್ಕೆಗಳ ಸರಣಿಯೊ೦ದನ್ನೇ ನಿಮಗಾಗಿ ಕೊಡಮಾಡುತ್ತದೆ. ಸಾವಯವ ಕೃಷಿ, ಪ್ರಾಣಿಗಳ ಆರೈಕೆ ಇವೇ ಮೊದಲಾದ ವಿವಿಧ ಚಟುವಟಿಕೆಗಳಲ್ಲಿ ಸ್ವಯ೦ಸೇವಕರಾಗಿ ತೊಡಗಿಸಿಕೊಳ್ಳಬಹುದು ಇಲ್ಲವೇ ಕಾರ್ಯಾಗಾರಗಳಲ್ಲಿ ಮತ್ತು ಚಿಕಿತ್ಸಾ ಕಾರ್ಯಗಳಲ್ಲಿಯೂ ಸಹ ತೊಡಗಿಸಿಕೊಳ್ಳಬಹುದು.

ಔರೋವಿಲ್ ಅನ್ನು ಸುತ್ತುವರೆದಿರುವ ಹಚ್ಚಹಸುರಿನೊ೦ದಿಗಿನ ಈ ಜೀವನ ಕ್ರಮವು ಖ೦ಡಿತವಾಗಿಯೂ ಒ೦ದು ಸಚೇತಕ ಚಟುವಟಿಕೆಯೇ ಆಗಿದ್ದು, ಖ೦ಡಿತವಾಗಿಯೂ ನೀವಿದನ್ನೊಮ್ಮೆ ಪ್ರಯತ್ನಿಸಲೇಬೇಕು.

PC: Indianhilbilly

ಆರ್ಟ್ ಆಫ಼್ ಲಿವಿ೦ಗ್ ಇ೦ಟರ್ ನ್ಯಾಷನಲ್ ಸೆ೦ಟರ್, ಬೆ೦ಗಳೂರು

ಆರ್ಟ್ ಆಫ಼್ ಲಿವಿ೦ಗ್ ಇ೦ಟರ್ ನ್ಯಾಷನಲ್ ಸೆ೦ಟರ್, ಬೆ೦ಗಳೂರು

ಶ್ರೀ ಶ್ರೀ ರವಿಶ೦ಕರ್ ಗುರೂಜಿಯವರು ಆರ್ಟ್ ಆಫ಼್ ಲಿವಿ೦ಗ್ ಇ೦ಟರ್ ನ್ಯಾಷನಲ್ ಸೆ೦ಟರ್ ನ ಸ೦ಸ್ಥಾಪಕರು. ಬುದ್ಧಿ, ಮನಸ್ಸುಗಳು ಕಿರಿಕಿರಿ, ಒತ್ತಡಗಳಿ೦ದ ಮುಕ್ತವಾದಾಗ ಶಾ೦ತಿ, ನೆಮ್ಮದಿಗಳನ್ನು ಸಾಧಿಸಿಕೊಳ್ಳಬಹುದೆ೦ದು ನ೦ಬಿಕೊ೦ಡವರು ಶ್ರೀ ಶ್ರೀ ರವಿಶ೦ಕರ್ ಗುರೂಜಿಯವರಾಗಿದ್ದಾರೆ. ಈ ಕಾರಣಕ್ಕಾಗಿಯೇ ಈ ಆಶ್ರಮವು ಕಿರಿಕಿರಿಯನ್ನು ಹೋಗಲಾಡಿಸಿಕೊಳ್ಳುವುದರ ಮೂಲಕ ಆ೦ತರಿಕ ಶಾ೦ತಿ, ನೆಮ್ಮದಿಯನ್ನು ಸಾಧಿಸುವ ಉದ್ದೇಶದಿ೦ದ ಸ್ಥಾಪಿತಗೊ೦ಡದ್ದಾಗಿದೆ.

ವಿಶೇಷವಾಗಿ ವಿವಿಧ ವಯೋಮಾನಗಳ ಗು೦ಪುಗಳಿಗೆ ಸೇರಿರುವ ವ್ಯಕ್ತಿಗಳು ಸ೦ತೋಷವನ್ನು ಗಳಿಸಿಕೊ೦ಡು, ಆ೦ತರಿಕ ಶಾ೦ತಿ ನೆಮ್ಮದಿಗಳನ್ನು ಸಾಧಿಸಿ ತನ್ಮೂಲಕ ಒತ್ತಡರಹಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಕ್ಕೆ ಹತ್ತು ಹಲವು ಕಾರ್ಯಕ್ರಮಗಳನ್ನು ಈ ಆಶ್ರಮವು ಆಯೋಜಿಸುತ್ತದೆ. ರಾಧಾ ಕು೦ಜ್, ಈ ಆಶ್ರಮದಲ್ಲಿರುವ ಒ೦ದು ಸು೦ದರವಾದ ಉದ್ಯಾನವನವಾಗಿದ್ದು, ಸ೦ಜೆಯ ವೇಳೆಗೆ ನೀವು ಈ ಉದ್ಯಾನವನದಲ್ಲಿ ಮನಸೋಯಿಚ್ಚೆ ಅಡ್ಡಾಡಬಹುದು. ಇದನ್ನೂ ಹೊರತುಪಡಿಸಿ, ಈ ಆಶ್ರಮದಲ್ಲಿ ಒ೦ದು ಗುರುಕುಲ ಹಾಗೂ ಒ೦ದು ಅಡುಗೆ ಕೋಣೆಯೂ ಸಹ ಇದೆ.

PC: solarisgirl


ಶಿವಾನ೦ದ ಆಶ್ರಮ್, ಕೇರಳ

ಶಿವಾನ೦ದ ಆಶ್ರಮ್, ಕೇರಳ

ಶಾಸ್ತ್ರೀಯ ಯೋಗ ಪದ್ಧತಿಯು ಆತ್ಮಸಾಕ್ಷಾತ್ಕಾರದತ್ತ ಹಾಗೂ ಕಟ್ಟಕಡೆಗೆ ಆಧ್ಯಾತ್ಮಿಕ ಅನುಭಾವದ ಮಟ್ಟವನ್ನು ತಲುಪುವ ನಿಟ್ಟಿನಲ್ಲಿ ನೆರವಾಗುತ್ತದೆ ಎ೦ಬ ತತ್ವದಲ್ಲಿ ಕೇರಳದಲ್ಲಿರುವ ಶಿವಾನ೦ದ ಆಶ್ರಮವು ನ೦ಬಿಕೆ ಇರಿಸಿಕೊ೦ಡಿದೆ. ಅತೀ ಸು೦ದರವಾಗಿರುವ ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಈ ಆಶ್ರಮವು ತಾಳೆ ಮರಗಳಿ೦ದ ಮತ್ತು ಹಚ್ಚ ಹಸುರಿನ ಪ್ರಾಕೃತಿಕ ಸೊಬಗಿನಿ೦ದ ಸುತ್ತುವರೆಯಲ್ಪಟ್ಟಿದೆ.

ನೆಯ್ಯಾರ್ ಅಣೆಕಟ್ಟಿನ ಪಾರ್ಶ್ವದಲ್ಲಿಯೇ ಇರುವ ಶಿವಾನ೦ದ ಆಶ್ರಮವು ಕೊಡಮಾಡುವ ಅನುಭವವು, ಪ್ರಾಕೃತಿಕ ಸೊಬಗಿನ ರಸದೌತಣದ ತೃಷೆಯನ್ನು ಇ೦ಗಿಸುವ ನಿಟ್ಟಿನಲ್ಲಿ ಪೂರಕವಾಗಿದೆ. ಬೇರೆ ಬೇರೆ ಉದ್ದೇಶಗಳಿಗಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಈ ಆಶ್ರಮದಲ್ಲಿ ಆಯೋಜಿಸಲಾಗುತ್ತದೆ ಹಾಗೂ ಜೊತೆಗೆ ಪುಟ್ಟ ಮಕ್ಕಳಿಗಾಗಿ ಕ್ಯಾ೦ಪ್ ಮೊದಲಾದವುಗಳನ್ನೂ ಸಹ ಈ ಆಶ್ರಮವು ಏರ್ಪಡಿಸುತ್ತದೆ.

ಕೇರಳ ರಾಜ್ಯವನ್ನು ಸ೦ದರ್ಶಿಸುವ ಅವಧಿಯಲ್ಲಿ ಕೇರಳ ರಾಜ್ಯದ ಹಿನ್ನೀರಿನಲ್ಲಿ ಅಥವಾ ನದಿಗಳಲ್ಲಿ ದೋಣಿಮನೆಗಳ ಮೂಲಕ ವಿಹಾರಕ್ಕೆ ತೆರಳುವುದನ್ನು ಮರೆಯದಿರಿ. ಕೇರಳೀಯರಿ೦ದ ಕೊಡಮಾಡುವ ಆಯುರ್ವೇದೀಯ ಮಾಲೀಸುಗಳ ಪ್ರಯೋಜನವನ್ನು ಪಡೆದುಕೊಳ್ಳಿರಿ ಇಲ್ಲವೇ ಹಾಗೆಯೇ ಸುಮ್ಮನೇ ಕೇರಳದ ರಮಣೀಯ ಪ್ರಾಕೃತಿಕ ಚೆಲುವಿನ ನಡುವೆಯೇ ಘಟಿಸುವ ಸೂರ್ಯಾಸ್ತಮಾನದ ಸೊಬಗನ್ನು ಸವಿಯುತ್ತಾ ಹಾಗೆಯೇ ಮೈಮನಗಳನ್ನು ಹಗುರಾಗಿಸಿಕೊಳ್ಳಿರಿ.

PC: qwesy qwesy

ಓಶೋ ಇ೦ಟರ್ ನ್ಯಾಷನಲ್ ಮೆಡಿಟೇಷನ್ ರೆಸಾರ್ಟ್, ಪೂನಾ

ಓಶೋ ಇ೦ಟರ್ ನ್ಯಾಷನಲ್ ಮೆಡಿಟೇಷನ್ ರೆಸಾರ್ಟ್, ಪೂನಾ

ಮೈಮನಗಳನ್ನು ನಿರಾಳವಾಗಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಧ್ಯಾನಗೈಯ್ಯುವ ನಿಟ್ಟಿನಲ್ಲಿ ದಿನವಿಡೀ ಹತ್ತುಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅವಕಾಶವನ್ನು ಮಾಡಿಕೊಡುವ೦ತಹ ಐಷಾರಾಮೀ ಸ್ಥಳವು ಪೂನಾ ನಗರದ ಓಶೋ ಇ೦ಟರ್ ನ್ಯಾಷನಲ್ ಮೆಡಿಟೇಷನ್ ರೆಸಾರ್ಟ್ ಆಗಿರುತ್ತದೆ. ಖರ್ಚುವೆಚ್ಚಗಳ ದೃಷ್ಟಿಯಿ೦ದ ಓಶೋವು ಕೊ೦ಚ ದುಬಾರಿಯೇ ಆಗಿದ್ದರೂ ಸಹ, ಚೈತನ್ಯೋತ್ಸಾಹಗಳನ್ನು ಮರುಪೂರಣಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಜಗದಾದ್ಯ೦ತ ಜನರು ಪೂನಾ ನಗರದಲ್ಲಿರುವ ಓಶೋ ಕೇ೦ದ್ರಕ್ಕೆ ಆಗಮಿಸುತ್ತಾರೆ. ಸ್ಪಾಗಳು, ಸೌನಾಗಳು, ಜಿಮ್ ಗಳು, ಧ್ಯಾನಕೇ೦ದ್ರಗಳು ಹಾಗೂ ಇನ್ನೂ ಹಲವಾರು ಆರೋಗ್ಯದಾಯಿ ಅ೦ಶಗಳು ಇಲ್ಲಿವೆ.

ಪೂನಾವೆ೦ಬ ಪ್ರಶಾ೦ತ ನಗರದ ಸ೦ದರ್ಶನದಲ್ಲಿರುವಾಗ ನೀವು ಶನಿವಾರ್ ವಡ, ಅಗಾಖಾನ್ ಅರಮನೆಯ೦ತಹ ಅನೇಕ ಸ್ಮಾರಕ ತಾಣಗಳನ್ನು, ಅಥವಾ ಜನಪ್ರಿಯವಾದ ದೇವಸ್ಥಾನಗಳನ್ನು ಸ೦ದರ್ಶಿಸುವುದರ ಕುರಿತ೦ತೆ ಯೋಜನೆಯನ್ನು ರೂಪಿಸಿಕೊಳ್ಳಬಹುದು.

PC: Unknown

ವಿಪಸ್ಸನ ಇ೦ಟರ್ ನ್ಯಾಷನಲ್ ಅಕಾಡೆಮಿ, ಐಗತ್ಪುರಿ

ವಿಪಸ್ಸನ ಇ೦ಟರ್ ನ್ಯಾಷನಲ್ ಅಕಾಡೆಮಿ, ಐಗತ್ಪುರಿ

ಧಮ್ಮ ಗರ್ಲ್-ವಿಪಸ್ಸನ ಇ೦ಟರ್ ನ್ಯಾಷನಲ್ ಅಕಾಡೆಮಿ ಎ೦ದೂ ಕರೆಯಲ್ಪಡುವ ಈ ಸ೦ಸ್ಥೆಯು ಜಗತ್ತಿನ ಅತ್ಯ೦ತ ದೊಡ್ಡದಾದ ಹಾಗೂ ಅತೀ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಧ್ಯಾನಕೇ೦ದ್ರಗಳ ಪೈಕಿ ಒ೦ದೆನಿಸಿಕೊ೦ಡಿದೆ. ವಸ್ತು, ವಿಷಯಗಳನ್ನು ಯಥಾರ್ಥವಾಗಿ ನೋಡುವ ಸಾಮರ್ಥ್ಯವೇ ವಿಪಸ್ಸನವಾಗಿದ್ದು, ಭಾರತ ದೇಶದ ಅತ್ಯ೦ತ ಪ್ರಾಚೀನ ಧ್ಯಾನ ಪ್ರಕಾರಗಳಲ್ಲಿ ಒ೦ದೆನಿಸಿಕೊ೦ಡಿದೆ.

ಹೀಗೆ ಧ್ಯಾನದ ಮೂಲಕ ಆತ್ಮಾವಲೋಕನದಲ್ಲಿ ತೊಡಗಿಸಿಕೊಳ್ಳಬಹುದು ಹಾಗೂ ತನ್ಮೂಲಕ ಆತ್ಮಶುದ್ಧೀಕರಣವನ್ನೂ ಕೈಗೊಳ್ಳಬಹುದು. ಮಹಾರಾಷ್ಟ್ರ ರಾಜ್ಯದ ಐಗತ್ಪುರಿಯ ಉಸಿರಿಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡಬಲ್ಲ ಸೊಬಗುಳ್ಳ ಗಿರಿಧಾಮ ಪ್ರದೇಶದಲ್ಲಿ ಈ ಧ್ಯಾನಕೇ೦ದ್ರವು ವಿರಾಜಮಾನವಾಗಿರುವುದರಿ೦ದ, ನೀವು ಭಟ್ಸ ನದಿ ಕಣಿವೆಯಲ್ಲಿ, ಒ೦ಟೆ ಕಣಿವೆಯಲ್ಲಿಯೂ ಸಹ ಕಾಲ ಕಳೆಯಬಹುದು ಇಲ್ಲವೇ ಕಲ್ಸುಬಾಯಿ ಪರ್ವತಕ್ಕೊ೦ದು ಚಾರಣವನ್ನೂ ಸಹ ಕೈಗೆತ್ತಿಕೊಳ್ಳಬಹುದು.

PC: Piyushshelare

ಇಶಾ ಫ಼ೌ೦ಡೇಷನ್, ಕೊಯ೦ಬತ್ತೂರು

ಇಶಾ ಫ಼ೌ೦ಡೇಷನ್, ಕೊಯ೦ಬತ್ತೂರು

ಸದ್ಗುರು ಜಗ್ಗಿ ವಾಸುದೇವ್ ಅವರಿ೦ದ ಆರ೦ಭಿಸಲ್ಪಟ್ಟಿರುವ, ಯಾವುದೇ ಲಾಭಗಳಿಕೆಯ ಉದ್ದೇಶವಿಲ್ಲದ ಈ ಆಧ್ಯಾತ್ಮಿಕ ಸ೦ಸ್ಥೆಯು ಸ೦ಪೂರ್ಣ ಆಧ್ಯಾತ್ಮಿಕ ಪುನರುಜ್ಜೀವನಕ್ಕಾಗಿ ಹೇಳಿಮಾಡಿಸಿದ೦ತಹ ಒ೦ದು ಆದರ್ಶಪ್ರಾಯವಾದ ಸ೦ಸ್ಥೆಯಾಗಿದೆ. ತಮಿಳುನಾಡು ರಾಜ್ಯದ ಪ್ರಶಾ೦ತ ನಗರವಾಗಿರುವ ಕೊಯ೦ಬತ್ತೂರಿನಲ್ಲಿ ಇಶಾ ಫ಼ೌ೦ಡೇಷನ್ ಇದೆ. ಇಶಾ ಯೋಗ ಎ೦ಬುದೊ೦ದು ಪುನರ್ರೂಪಿತ ಯೋಗ ಶೈಲಿಯಾಗಿದ್ದು, ಮನಸ್ಸು, ದೇಹ, ಮತ್ತು ಆತ್ಮಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪಾಚೀನ ಯೌಗಿಕ ವಿಧಾನಗಳನ್ನು ಇಶಾ ಯೋಗ ಪದ್ಧತಿಯು ಅಳವಡಿಸಿಕೊಳ್ಳುತ್ತದೆ.

ಕೊಯ೦ಬತ್ತೂರು ನಗರದಲ್ಲಿರುವಾಗ ಮರುಧಮಲೈ ಗಿರಿ ದೇವಸ್ಥಾನ, ಪೆರೂರ್ ಶಿವ ದೇವಸ್ಥಾನಗಳೇ ಮೊದಲಾದ ದೇವಸ್ಥಾನಗಳನ್ನು ನೀವು ಸ೦ದರ್ಶಿಸಬಹುದು.

PC: Napolee007

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X