• Follow NativePlanet
Share
Menu
» »ವಿಷಯ - ಒಬ್ಬರು -ತಿಳಿಯಲೇ ಬೇಕಾದ - ಪಟಿಯಾಲ

ವಿಷಯ - ಒಬ್ಬರು -ತಿಳಿಯಲೇ ಬೇಕಾದ - ಪಟಿಯಾಲ

Posted By: Manjula Balaraj Tantry

ಪಟಿಯಾಲವು ಒಂದು ಸಣ್ಣ ನಗರವಾಗಿದ್ದು ಹಲವಾರು ಐತಿಹಾಸಿಕ ಮಹತ್ವಗಳು ಈ ನಗರದಲ್ಲಿ ಹುದುಗಿವೆ. ಈ ಸ್ಥಳವು ತನ್ನ ಆತಿಥ್ಯ, ಐತಿಹಾಸಿಕ ಸ್ಥಳಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಪಂಜಾಬಿನ ಗ್ರಾಮೀಣ ಜೀವನದ ಅನುಭವವನ್ನು ಹೊಂದಲು ಬಯಸುವುದಾದಲ್ಲಿ ಪಟಿಯಾಲವು ಒಂದು ಭೇಟಿ ನೀಡಬಹುದಾದ ಉತ್ತಮವಾದ ಆಯ್ಕೆಯಾಗಿದೆ.

ಪಿಂಟ್ ಗಾತ್ರದ ನಗರ ಪಟಿಯಾಲ ಲಿಬರಲ್ ಪಟಿಯಾಲ ಪೆಗ್ ಮತ್ತು ಪಟಿಯಾಲಾ ಸಲ್ವಾರ್ ಗೆ ಹೆಸರುವಾಸಿಯಾಗಿದೆ . ಇವುಗಳಲ್ಲದೆ, ಈ ಪ್ರಾಚೀನ ನಗರದಲ್ಲಿ ಬೇರೆ ಅತಿ ಹೆಚ್ಚು ಪ್ರಮಾಣದಲ್ಲಿ ಇಲ್ಲ. ಇಲ್ಲಿನ ಜನರು ಅತಿಥಿ ಸತ್ಕಾರ ಮನೋಭಾವದವರಾಗಿದ್ದು ವಿಶಾಲ ಮನೋಭಾವ ಹಾಗೂ ಹಸನ್ಮುಖಿಗಳಾಗಿದ್ದು ಅತಿಥಿಗಳನ್ನು ಹೃತ್ಪೂರ್ವಕವಾಗಿ ಆಮಂತ್ರಿಸಿ ದಪ್ಪನೆಯ ಲಸ್ಸಿಯನ್ನು ಸವಿಯಲು ಕೊಟ್ಟು ಸತ್ಕರಿಸುತ್ತಾರೆ.

ಪಟಿಯಾಲವನ್ನು 1763 ರಲ್ಲಿ ಈ ನಗರದ ಮೊದಲ ರಾಜರಾದ ಬಾಬಾ ಅಲಾ ಸಿಂಗರಿಂದ ಸೇನೆಯನ್ನು ಪ್ರಬಲಗೊಳಿಸುವ ಸಲುವಾಗಿ ಸ್ಥಾಪಿಸಲಾಯಿತು. ಅಫ್ಘಾನಿಸ್ಥಾನ, ಮೊಘಲರು ಮತ್ತು ಮರಾಠರು ಸೇನಾಧಿಕಾರಿಗಳ ಪುನರಾವರ್ತಿತ ದಾಳಿಗಳನ್ನು ತಪ್ಪಿಸುವ ಮೂಲಕ ಈ ಸಾಮ್ರಾಜ್ಯ ಭಾರತದ ಅತ್ಯಂತ ಶಕ್ತಿಶಾಲಿ ರಾಜಪ್ರಭುತ್ವ ರಾಜ್ಯಗಳಲ್ಲಿ ಒಂದಾಯಿತು. 20ನೇ ಶತಮಾನದಲ್ಲಿ, ಮಹಾರಾಜ ಯಾದವೇಂದ್ರ ಸಿಂಗ್ ಅವರು ಭಾರತದ ಒಕ್ಕೂಟದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈಗ ಸದ್ಯಕ್ಕೆ ಈ ನಗರದ ಪೋಲೋ ಮೈದಾನ, ಪಾರ್ಕಗಳು, ಮತ್ತು ಕ್ರಿಕೆಟ್ ಮೈದಾನಗಳು ತಮ್ಮ ಮೃದುತ್ವ ಮತ್ತು ಉತ್ತಮಿಕೆಗೆ ಹೆಸರಾಗಿದೆ. ಇಲ್ಲಿಯ ಪ್ರಶಾಂತವಾದ ಮನೆಗಳು, ಮರದಿಂದ ಮುಚ್ಚಲ್ಪಟ್ಟ ನೆರೆಹೊರೆಯ ಪ್ರದೇಶಗಳು, ವೇಗದಿಂದ ಮುನ್ನುಗ್ಗುತ್ತಿರುವ ಜಗತ್ತಿನಲ್ಲಿ ಒಂದು ಪ್ರಶಾಂತತೆಯ ಅನುಭವವನ್ನು ನೀಡುತ್ತದೆ. ಈ ನಗರದಲ್ಲಿ ತಿಳಿಯಬೇಕಾದ ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಒಂದು ನೋಟ.

ಇಲ್ಲಿಯ ಪರಂಪರೆಯ ಕಡೆಗೆ ಒಂದು ನಡಿಗೆ

ಇಲ್ಲಿಯ ಪರಂಪರೆಯ ಕಡೆಗೆ ಒಂದು ನಡಿಗೆ

ಪಟಿಯಾಲದ ಪ್ರವಾಸೋದ್ಯಮ ಇಲ್ಲಿನ ಪರಂಪರೆಯನ್ನು ತಿಳಿಯ ಪಡಿಸುವುದಕ್ಕಾಗಿ ಒಂದು ನಡಿಗೆಯ ವ್ಯವಸ್ಥೆಯನ್ನು ಇಲ್ಲಿಯ ಪ್ರದೇಶಗಳ ಸುತ್ತ ಮುತ್ತಗಳಲ್ಲಿ ಮಾಡಿಕೊಡುತ್ತದೆ. ಈ ಪ್ರದೇಶದ ಇತಿಹಾಸದ ಕಥೆಗಳನ್ನು ನಿರೂಪಿಸುವ ಹಾಗೂ ಇವುಗಳ ಬಗೆಗೆ ಜ್ಞಾನವುಳ್ಳ ಮಾರ್ಗದರ್ಶಿಯ ನೇತೃತ್ವದಲ್ಲಿ ಶಾಹಿ ಸಮಾಧಿ ಅಥವಾ ರಾಯಲ್ ಸಮಾಧಿಯಿಂದ ಈ ವಾಕ್ (ನಡಿಗೆ) ಪ್ರಾರಂಭವಾಗುತ್ತದೆ.

18ನೇ ಶತಮಾನಗಳಿಂದಲೂ ನೆರೆಹೊರೆಗಳಾಗಿರುವ ಮಾರುಕಟ್ಟೆಗಳಾದ ಬಜಾಜಾ ಬಜಾರ್ ಮತ್ತು ಬಾರ್ಟನ್ ಬಜಾರ್ ಗಳ ಮೂಲಕ ನಡಿಗೆ ಪ್ರಕ್ರಿಯೆಯು ಹಾದು ಹೋಗಿ ದರ್ಶನಿ ದಿಯೋರಿ ತಲುಪುವಲ್ಲಿ ನಡಿಗೆ ಯು ಮುಕ್ತಾಯ ಹಂತಕ್ಕೆ ಬರುತ್ತದೆ. ಇದು ಸಾಮಾನ್ಯ ಜನರು ಮುಂಚೆ ರಾಯಲ್ ಮೆರವಣಿಗೆಗಳನ್ನು ವೀಕ್ಷಿಸಿದ ಸ್ಥಳವಾಗಿರುತ್ತದೆ.

PC: Journojp

ಮೊಲ್ಲಾಗಳಲ್ಲಿ ಒಂದು ಸುತ್ತಾಟ

ಮೊಲ್ಲಾಗಳಲ್ಲಿ ಒಂದು ಸುತ್ತಾಟ

ಅಲಂಕೃತ ಬಾಗಿಲುಗಳು ಮತ್ತು ಬಾಲ್ಕನಿಗಳ ಮೇಲೆ ಸೂಕ್ಷ್ಮವಾದ ಜಾಲರಿ ಕೆಲಸಗಳು ಇವು ಹವೇಲಿವಾಲಾ ಮೊಹಲ್ಲಾದಲ್ಲಿ ಕಂಡು ಬರುವ ಸುಂದರ ದೃಶ್ಯವಾಗಿದೆ ,ಈ ಮೊಹಲ್ಲಾವು ನೆರೆಹೊರೆಗಳಲ್ಲಿ ಅತ್ಯಂತ ಶ್ರೀಮಂತವಾದುದಾಗಿತ್ತು ಅಲ್ಲದೆ ಅನೇಕ ಶ್ರೀಮಂತ ಕುಟುಂಬಗಳ ನೆಲೆಯಾಗಿತ್ತು. ಈಗಿನ ಕಾಲದಲ್ಲಿ ಅಳಿವಿನ ಅಂಚಿನಲ್ಲಿರುವ ಹವೇಲಿಗಳು ಇಲ್ಲಿ ಕೆಲವು ಕಡೆ ಕಾಣ ಸಿಗುತ್ತಿದ್ದು ಹಳೆಯ ಕಾಲದ ಹವೇಲಿಗಳ ಕಡೆಗೆ ಬೆಳಕು ಚೆಲ್ಲುತ್ತದೆ.

ಇಲ್ಲಿನ ಮಾರ್ಗಗಳು ಪ್ರಶಾಂತವಾಗಿ ಗೋಚರಿಸುತ್ತದೆ. ನೀವು ಪ್ರಯಾಣಿಸುವಾಗ ಅಲ್ಲಿ ಛಠಾ ನ್ಯಾನುಮಾಲ್ ಗೆ ಅಡ್ಡಲಾಗಿ ಸಾರ್ವಜನಿಕ ರಸ್ತೆಯ ಮೇಲೆ ನಿರ್ಮಿಸಲಾದ ಖಾಸಗಿ ಕಮಾನುಮಾರ್ಗವು ಸಿಗುತ್ತದೆ. ಮುಂದಕ್ಕೆ ಕಿರಿದಾದ ಸಪ್ಪನ್ ವಾಲಿ ಗಾಲಿ ಅಥವಾ ಸ್ನೇಕ್ ಲೇನ್ ಅನ್ನು ಆಭರಣಕಾರರಿಂದ ವಿನ್ಯಾಸ ಗೊಳಿಸಲ್ಪಟ್ಟಿದೆ. ಬೀದಿ ಎರಡು ಮೀಟರ್ಗಿಂತ ಹೆಚ್ಚು ಅಗಲವಾಗಿಲ್ಲ ಮತ್ತು ಅಂಕು ಡೊಂಕಾಗಿದ್ದು ಯಾವುದೇ ಪಲಾಯನ ಮಾಡುವ ಕಳ್ಳನನ್ನು ನಿಧಾನಗೊಳಿಸುವಂತಿದೆ.

ಪಟಿಯಾಲದ ಕೋಟೆಯನ್ನು ಭೇಟಿ ಕೊಡಿ

ಪಟಿಯಾಲದ ಕೋಟೆಯನ್ನು ಭೇಟಿ ಕೊಡಿ

1763 ರಲ್ಲಿ ಬಾಬಾ ಆಲಾ ಸಿಂಗ್ ರಿಂದ ನಿರ್ಮಿಸಲ್ಪಟ್ಟಿದ್ದು ಈ ಕೋಟೆಯು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಇವು ತುಂಬಾ ಗಟ್ಟಿಯಾದುದಾಗಿದೆ. ಒಂದು ಭವ್ಯವಾದ ಗೇಟ್ ಮೂಲಕ ಪ್ರವೇಶಿ ಸಿದ ಕೂಡಲೇ ವಿಶಾಲವಾದ ಕಿಲಾ ಮುಬಾರಕ್ ಕಂಡುಬರುತ್ತದೆ.

ಇದು ಲಾಸ್ಸಿ ಖಾನಾ ಅಥವಾ ಅಡುಗೆಮನೆ, ಸಾರ್ಹ ಖಾನಾ ಅಥವಾ ತಂಪಾದ ಕೊಠಡಿಗಳನ್ನು ಹೊಂದಿದೆ, ರಾನ್ ಬಾಸ್ ಇದು ಅತಿಥಿ ವಸತಿಗೃಹಗಳು ಮತ್ತು ದರ್ಬಾರ್ ಹಾಲ್ ಆಗಿದೆ. ನಂತರ ಮೇಲೆ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋದಲ್ಲಿ ಇದು ನಿಮ್ಮನ್ನು ಎರಡನೇ ಆವರಣಕ್ಕೆ ಕರೆದೊಯ್ಯುತ್ತದೆ. ಇದು ಅಂಗಳಗಳು, ಉದ್ಯಾನವನಗಳು ಮತ್ತು ಅರಮನೆಗಳನ್ನು ಹೊಂದಿರುತ್ತದೆ.

ಈ ಕೋಟೆಯು ಸುಮಾರು ಹತ್ತು ಎಕರೆಗಳ ವಿಸ್ತಾರವಾದ ಜಾಗಗಳಲ್ಲಿ ಹರಡಿದ್ದು ಇದರ ಗೋಡೆಗಳು ಮತ್ತು ಝರೋಕಾಗಳ ಮೇಲೆ ಪರ್ಶಿಯನ್ ಮತ್ತು ರಜಪೂತರ ವಾಸ್ತುಶಿಲ್ಪಗಳ ಶೈಲಿಯನ್ನು ಪ್ರದರ್ಶಿಸುತ್ತದೆ. ಈ ದೊಡ್ಡದಾದ ದರ್ಬಾರ್ ಹಾಲ್ ಸುಂದರವಾದ ಮೇಣದಬತ್ತಿ ಹಾಗೂ ವಸ್ತು ಸಂಗ್ರಹಾಲಯಗಳನ್ನು ಹೊಂದಿದೆ. ಅಲ್ಲದೆ ಇಲ್ಲಿ ಗುರು ಗೋಬಿಂದ ಸಿಂಗರಿಗೆ ಸಂಭಂದಪಟ್ಟ ಅವರ ಖಜಾನೆಗಳಾದ ಬೆಳ್ಳಿಯ ಸಾರೋಟು, ಜೇಡಿ ಬಾಕು ಮುಂತಾದವುಗಳನ್ನು ಒಳಗೊಂಡಿದೆ.

PC: Official Site

ಚೋಲೇ ಪುರಿ ಯನ್ನು ಸವಿಯಿರಿ

ಚೋಲೇ ಪುರಿ ಯನ್ನು ಸವಿಯಿರಿ

ಪಟಿಯಾಲದ ಬಜಾರ್ ಗಳು ಸುಂದರವಾದ ಚಪ್ಪಲಿಗಳು, ಕೂದಲಿನ ಸೌಂದರ್ಯಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಕೈಯಲ್ಲಿ ನೇಯಲ್ಪಟ್ಟ ಪುಲ್ಕಾರಿ ದುಪ್ಪಟ್ಟಾಗಳ ಅಂಗಡಿಗಳಿಂದ ತುಂಬಿವೆ. ಖಿಲಾ ಬಜಾರ್ ಇವುಗಳಲ್ಲಿ ಹಳೆಯ ಮಾರುಕಟ್ಟೆಗಳಲ್ಲೊಂದಾಗಿದೆ. ಸದ್ದು ಗದ್ದಲಗಳೊಂದಿಗೆ ಅಸ್ತವ್ಯಸ್ತವಾಗಿದ್ದರೂ ಈ ಮಾರುಕಟ್ಟೆ ವರ್ಣಮಯವಾಗಿದೆ. ಇವುಗಳಿಗೆ ಪ್ರವೇಶಿಸುವ ಮೊದಲು. 1983 ರಲ್ಲಿ ಸ್ಥಾಪಿತವಾದ ಪಮ್ಮಿ ಪುರೈನ್ ವಾಲೆಯಲ್ಲಿ ನಿಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳಿ ಇಲ್ಲಿ ಯ ಚೋಲೆ ಪುರಿ ಮತ್ತು ಗ್ಲಾಸಿನಲ್ಲಿ ತುಂಬಿಸಲ್ಪಟ್ಟ ಲಸ್ಸಿಯು ಪ್ರಸಿದ್ದವಾಗಿದೆ.

ಫಾರ್ಮ್ ಸ್ಟೇ ನಲ್ಲಿ ವಿಶ್ರಾಂತಿ ಪಡೆಯಿರಿ.

ಫಾರ್ಮ್ ಸ್ಟೇ ನಲ್ಲಿ ವಿಶ್ರಾಂತಿ ಪಡೆಯಿರಿ.

ಪಂಜಾಬಿನ ಕೃಷಿ ಪ್ರದೇಶದ ಅನುಭವವನ್ನು ಪಡೆಯಿರಿ. ನಗರದ ಹೊರವಲಗಳಲ್ಲಿರುವ ಫಾರ್ಮ್ ಸ್ಟೇ ಯ ಅನುಭವವನ್ನು ಪಡೆಯಲೇ ಬೇಕಾದುದಾಗಿದೆ. ಇಲ್ಲಿರುವಾಗ ಟ್ರ್ಯಾಕ್ಟರ್, ತುಕ್ ತುಕ್ ಅಥವಾ ಎತ್ತಿನ ಮೇಲೆ ಸುಂದರ ಹಳದಿ ಸಾಸಿವೆ ಗದ್ದೆಗಳ ಮೂಲಕ ಓಡಾಡಬಹುದು. ಇಲ್ಲಿ ಸಾವಯವ ತೋಟಗಳ ಕಡೆಗೆ ಹೆಜ್ಜೆ ಹಾಕಿ ಮತ್ತು ಇಲ್ಲಿ ಹಸು ಮತ್ತು ಕುದುರೆಗಳ ಹಾಲನ್ನು ಕರೆಯುವ ಅನುಭವವನ್ನು ಪಡೆಯಬಹುದು . ಇದಲ್ಲದೆ ಕಬ್ಬಿನ ಬುಟ್ಟಿ ನೇಯ್ಗೆ ಮತ್ತು ಮನೆಯಲ್ಲಿ ಮಾಡುವ ಪರಾಟಗಳನ್ನು ಮಾಡುವುದನ್ನು ಕಲಿಯಬಹುದು.


PC: Ana Raquel S. Hernandes

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ