Search
  • Follow NativePlanet
Share
» »ಜೀವನದಲ್ಲಿ ಒಮ್ಮೆಯಾದರೂ ಅಮೃತ್‌ಸರಕ್ಕೆ ಹೋಗಬೇಕು ಯಾಕೆ?

ಜೀವನದಲ್ಲಿ ಒಮ್ಮೆಯಾದರೂ ಅಮೃತ್‌ಸರಕ್ಕೆ ಹೋಗಬೇಕು ಯಾಕೆ?

ಪಂಜಾಬ್‌ನ ರಾಜಧಾನಿಯಾಗಿರುವ ಅಮೃತಸರವು ಗೋಲ್ಡನ್ ಟೆಂಪಲ್‌ನಿಂದಾಗಿಯೇ ಪ್ರಸಿದ್ಧಿ ಹೊಂದಿದೆ. ಪ್ರತಿವರ್ಷ ದೇಶ ವಿದೇಶಗಳಿಂದ ಭಕ್ತರು ಇಲ್ಲಿಗೆ ಪ್ರಾರ್ಥಿಸಲು ಬರುತ್ತಾರೆ. ಅಮೃತ್‌ಸರ ನಗರವನ್ನು 16ನೇ ಶತಮಾನದಲ್ಲಿ 4ನೇ ಸಿಖ್ ಗುರು ರಾಮ್‌ದಾಸ್ ಸ್ಥಾಪಿಸಿದರು. ಅಲ್ಲಿನ ಅಮೃತ ಸರೋವರದ ಕಾರಣದಿಂದಾಗಿ ಈ ನಗರಕ್ಕೆ ಅಮೃತ್ ಸರ ಎಂದು ಹೆಸರಿಡಲಾಗಿದೆ. 1601ರಲ್ಲಿ ರಾಮ್‌ದಾಸ್‌ರ ಉತ್ತರಾಧಿಕಾರಿಯಾಗಿದ್ದ ಗುರು ಅರ್ಜುನ್ ದೇವ್‌ ಅಮೃತ್ ಸರದ ವಿಕಾಸ ಮಾಡಿದ್ದರು.

ಇಲ್ಲೆಲ್ಲಾ ನಿಮಗೆ ಪ್ರತಿದಿನ ಉಚಿತ ಊಟ ಸಿಗುತ್ತದೆ...ದುಡ್ಡು ಕೋಡೋ ಅಗತ್ಯವಿಲ್ಲ

ಸಿಖ್‌ರ ಧಾರ್ಮಿಕ ಸ್ಥಳವಾಗಿರುವ ಅಮೃತಸರವು ವಾಘಾ ಬಾರ್ಡರ್, ಜಲಿಯಾನಾ ವಾಲಾ ಬಾಗ್‌ ಗಾಗಿ ಹೆಸರುವಾಸಿಯಾಗಿದೆ. ಧಾರ್ಮಿಕ ಸ್ಥಳವಾಗಿರುವ ಕಾರಣ ಇಲ್ಲಿ ಪ್ರತಿದಿನವೂ ಭಕ್ತರ ದಂಡೇ ಇರುತ್ತದೆ. ಒಂದು ವೇಳೆ ನೀವು ಅಮೃತ್ ಸರದ ಪ್ರವಾಸ ಕೈಗೊಳ್ಳಬೇಕೆಂದಿದ್ದೀರೆಂದಾರೆ ಈ ಪ್ಲ್ಯಾನ್‌ನ್ನು ಖಂಡಿತಾ ಅಳವಡಿಸಿ.

ಇಲ್ಲಿ ಪ್ರಾರ್ಥಿಸಿದರೆ ಶನಿದೆಸೆಯಿಂದ ಮುಕ್ತಿ ಸಿಗುತ್ತಂತೆ!

ವಿಶ್ವ ವಿಖ್ಯಾತ ಸ್ವರ್ಣ ಮಂದಿರ

ವಿಶ್ವ ವಿಖ್ಯಾತ ಸ್ವರ್ಣ ಮಂದಿರ

ಹರ್ಮೀಂದರ್ ಸಾಹೀಬ್‌ನಲ್ಲಿ ನಮಿಸದೆ ಹಾಗೂ ಅಲ್ಲಿ ಸಿಗುವ ಪ್ರಸಾದವನ್ನು ಸೇವಿಸದೆ ಅಮೃತ ಸರದ ಟ್ರಿಪ್ ಪೂರ್ಣಗೊಳ್ಳುವುದಿಲ್ಲ. ಅಮೃತ ಸರದಲ್ಲಿರುವ ಈ ಮಂದಿರವನ್ನು 5ನೇ ಸಿಖ್ ಗುರು ಅರ್ಜುನ್ ದೇವ್‌ 16ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದರು. 19 ನೇ ಶತಮಾನದಲ್ಲಿ ಮಹಾರಾಜ ರಣಜೀತ್ ಸಿಂಗ್ ಈ ಗುರುದ್ವಾರಕ್ಕೆ 400 ಕಿ.ಗ್ರಾಂ ಚಿನ್ನದ ಕಸೂತಿಯನ್ನು ಮಾಡಿಸಿದರು. ಇದರಿಂದ ಈ ಮಂದಿರಕ್ಕೆ ಸ್ವರ್ಣ ಮಂದಿರ ಎನ್ನುವ ಹೆಸರು ಬಂದಿದೆ.

ಅಲ್ಲಿನ ನಿಯಮಗಳು ಈ ರೀತಿ ಇವೆ

ಅಲ್ಲಿನ ನಿಯಮಗಳು ಈ ರೀತಿ ಇವೆ

ಇಲ್ಲಿಗೆ ಬರುವ ಪ್ರವಾಸಿಗರಿಗೆ ಭಕ್ತರಿಗೆ ಅಲ್ಲಿನ ಶುಚಿತ್ವದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಭಕ್ತರು ಅಲ್ಲಿನ ಶುಚಿತ್ವದ ಕಡೆ ಗಮನ ನೀಡಬೇಕಾಗುತ್ತದೆ. ಅಲ್ಲಿನ ನಿಯಮಗಳು ಈ ರೀತಿ ಇವೆ.

  • ಗುರುದ್ವಾರದ ಒಳಗೆ ಚಪ್ಪಲಿ ತೆಗೆದು ಕಾಲು ತೊಳೆದು ಒಳಗೆ ಪ್ರವೇಶಿಸಬೇಕು.
  • ಇದರೊಳಗೆ ಬರುವವರು ತಲೆಗೆ ಟವೆಲ್ ಹಾಕಿ ಬರಬೇಕು.
  • ಯಾವುದೇ ರೀತಿಯ ಮಧ್ಯ ಸೇವನೆ, ಮಾಂಸಾಹಾರ ನಿಷೇಧಿಸಲಾಗಿದೆ.
  • ಫೋಟೋ ತೆಗೆಯುವವರು ಕೇವಲ ಹೊರಗಿನಿಂದ ತೆಗೆಯಬಹುದು. ಗುರುದ್ವಾರದ ಒಳಗೆ ಫೋಟೋ ತೆಗೆಯುವಂತಿಲ್ಲ.
ವಾಘಾ ಬಾರ್ಡರ್

ವಾಘಾ ಬಾರ್ಡರ್

ನೀವು ನಿಮ್ಮ ವಾಹನದಿಂದ ಇಳಿದುಕೊಂಡು ವಾಘಾ ಬಾರ್ಡರ್ ಬಳಿ ಹೋಗುತ್ತಿದ್ದಂತೆ ನಿಮ್ಮೊಳಗೆ ದೇಶ ಭಕ್ತಿಯ ರಕ್ತ ಕುದಿಯಲಾರಂಭಿಸುತ್ತದೆ. ಇಲ್ಲಿ ಪ್ರತಿದಿನ ಎರಡು ದೇಶಗಳ ನಡುವೆ ರೀಟ್ರಿಟ್ ಸೆರೆಮನೆ ಆಯೋಜಿಸಲಾಗುತ್ತದೆ. ಇದನ್ನು ನೋಡಿದ ಪ್ರತಿಯೊಬ್ಬರಿಗೂ ದೇಶದ ಬಗ್ಗೆ ಹೆಮ್ಮೆ ಅನಿಸುತ್ತದೆ. ವಾಘಾ ಎನ್ನುವುದು ಒಂದು ಹಳ್ಳಿ. ಇದು ಭಾರತ ಹಾಗೂ ಪಾಕಿಸ್ತಾನದ ಬಾರ್ಡರ್ ಎನ್ನಲಾಗುತ್ತದೆ. ಇಲ್ಲಿ ಪ್ರತಿದಿನ ಸಂಜೆ ಭಾರತ ಹಾಗೂ ಪಾಕಿಸ್ತಾನದ ಸೈನಿಕರು ಒಟ್ಟಾಗುತ್ತಾರೆ.

ರುಚಿಕರ ಆಹಾರ

ರುಚಿಕರ ಆಹಾರ

ಆಹಾರ ಪ್ರೀಯರಿಗೆ ಅಮೃತ್‌ಸರ್ ಉತ್ತಮ ಸ್ಥಳವಾಗಿದೆ. ಇಲ್ಲಿ ನೀವು ರುಚಿಕರ ಶಾಖಾಹಾರಿ ಹಾಗೂ ಮಾಂಸಾಹಾರಿ ಆಹಾರವನ್ನು ಸವಿಯಬಹುದು . ಇಲ್ಲಿ ಆಹಾರವನ್ನು ಬಹಳ ಶುಚಿತ್ವದಿಂದ ತಯಾರಿಸಲಾಗುತ್ತದೆ. ಅಮೃತಸರಕ್ಕೆ ಹೋದರೆ ಅಲ್ಲಿನ ಆಹಾರವ ಸವಿಯನ್ನು ಸವಿಯಲೇ ಬೇಕು. ಇನ್ನು ಅಲ್ಲಿನ ಲಸ್ಸಿ, ಫಲೋದಾಮ ಕುಲ್ಫಿ ತಿನ್ನೋದನ್ನು ಮರೆಯಬೇಡಿ.

ಗುರುದ್ವಾರದಲ್ಲಿ ಸಿಗುವ ಪ್ರಸಾದ

ಗುರುದ್ವಾರದಲ್ಲಿ ಸಿಗುವ ಪ್ರಸಾದ

PC: youtube

ಗುರುದ್ವಾರದಲ್ಲಿ ಪೂಜೆಯ ನಂತರ ಅನ್ನದ ಪ್ರಸಾದವನ್ನು ವಿತರಿಸುತ್ತಾರೆ. ಇದನ್ನು ತಿಂದಿಲ್ಲವೆಂದರೆ ನಿಮ್ಮ ಗುರುದ್ವಾರ ಯಾತ್ರೆ ಪೂರ್ಣವಾಗೋದೇ ಇಲ್ಲ. ಮಂದಿರದಲ್ಲಿ ನೀಡಲಾಗುವ ಈ ಅನ್ನದ ಪ್ರಸಾದವು ಬಹಳ ಶುಚಿಯಿಂದ ಕೂಡಿರುತ್ತದೆ ಹಾಗೆಯೇ ರುಚಿಕರವೂ ಆಗಿರುತ್ತದೆ.

ಜಲಿಯನ್ ವಾಲಾ ಬಾಗ್

ಜಲಿಯನ್ ವಾಲಾ ಬಾಗ್

Pc:shankar s

ಜಲಿಯನ್ ವಾಲಾ ಬಾಗ್ ಸ್ವತಂತ್ರ ಸಂಗ್ರಾಮದ ಒಂದು ಉದಾಹರಣೆಯಾಗಿದೆ. ಅದು 2000 ಸಿಖ್ , ಹಿಂದೂಗಳು ಹುತಾತ್ಮರಾಗಿರುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಗೋಡೆಗಳಲ್ಲಿ ಇಂದಿಗೂ ಗುಂಡಿನ ಗುರುತು ಇದೆ. ಇಲ್ಲೇ ಹುತಾತ್ಮರಾದವರ ನೆನಪಿಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ.

ಶಾಪಿಂಗ್

ಶಾಪಿಂಗ್

ಅಮೃತ್‌ ಸರವು ಶಾಪಿಂಗ್‌ಗಾಗಿಯೂ ಹೆಸರುವಾಸಿಯಾಗಿದೆ. ಅಮೃತ್‌ ಸರಕ್ಕೆ ಬರುವ ಪ್ರವಾಸಿಗರು ಇಲ್ಲಿಂದ ಪಂಜಾಬಿ ಸೂಟ್, ಸಿಖ್ ಧರ್ಮಕ್ಕೆ ಸಂಬಂಧಿಸಿದಂತಹ ಮಹತ್ವಪೂರ್ಣ ವಸ್ತುವನ್ನು ಕೊಳ್ಳುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X