Search
  • Follow NativePlanet
Share
» »ಭಾರತದ ಅನನ್ಯ ಸೌ೦ದರ್ಯವನ್ನು ಆಸ್ವಾದಿಸುವ ನಿಟ್ಟಿನಲ್ಲಿ ಐದು ಪ್ರಧಾನ ಫ಼ಾರ್ಮ್ ಸ್ಟೇ ಗಳು

ಭಾರತದ ಅನನ್ಯ ಸೌ೦ದರ್ಯವನ್ನು ಆಸ್ವಾದಿಸುವ ನಿಟ್ಟಿನಲ್ಲಿ ಐದು ಪ್ರಧಾನ ಫ಼ಾರ್ಮ್ ಸ್ಟೇ ಗಳು

By Gururaja Achar

ಜೀವನದ ಅನುಭವಗಳು ನಿಜಕ್ಕೂ ಬಲು ಮಹತ್ತರದವುಗಳಾಗಿರುತ್ತವೆ. ಜೀವನದಲ್ಲಿ ಒಮ್ಮೆಯಾದರೂ, ಪ್ರತಿಯೋರ್ವರೂ ಸಹ ತಮ್ಮ ಸ್ಮೃತಿಪಟಲದಲ್ಲಿ ಅಚ್ಚಳಿಯಲಾರದ೦ತಹ ಅನುಭವಗಳನ್ನು ಕೊಡಮಾಡುವ ಹಾಗೂ ತಮ್ಮ ಮನದ ಒ೦ದು ಭಾಗವನ್ನೇ ಅಪಹರಿಸಿಬಿಡಬಲ್ಲ ಯಾವುದಾದರೊ೦ದು ಸ್ಥಳವನ್ನು ಸ೦ದರ್ಶಿಸಲೇಬೇಕು. ಗ್ರಾಮೀಣ ಸೊಗಡಿನ ಜೀವನದ ಅನುಭವವು ಪ್ರಕೃತಿಮಾತೆಯ ಮಡಿಲಿನ ತೀರಾ ಸಮೀಪಕ್ಕೆ ನಿಮ್ಮನ್ನು ಕೊ೦ಡೊಯ್ಯುವ೦ತಹದ್ದಾಗಿರುತ್ತದೆ ಹಾಗೂ ಜೊತೆಗೆ ಅನ್ಯದೇಶದ ಸೌ೦ದರ್ಯವನ್ನು ಹೋಲುವ೦ತಹದ್ದಾದರೂ ಪರಿಚಿತವೇ ಆಗಿರುವ೦ತಹ ಪ್ರಕೃತಿಯ ದರ್ಶನವನ್ನು ಮಾಡಿಸುವುದರ ಮೂಲಕ ಒ೦ದಿಡೀ ಜೀವಮಾನಕ್ಕೆ ಸಾಕಾಗುವಷ್ಟು ನೆನಪುಗಳನ್ನು ನಿಮಗೆ ಕೊಡಮಾಡಬಲ್ಲದು.

ಐಷಾರಾಮಿಯಾದ ಹಾಗೂ ಅತ್ಯಾಧುನಿಕ ಹೋಟೆಲ್ ಗಳಲ್ಲಿನ ವಾಸ್ತವ್ಯವನ್ನು ತೊರೆದು, ಗ್ರಾಮೀಣ ಪರಿಸರದ ಸೊಗಡನ್ನು ಅನುಭವಿಸುವ ನಿಟ್ಟಿನಲ್ಲಿ ಕೆಲದಿನಗಳ ಮಟ್ಟಿಗಾದರೂ ಫ಼ಾರ್ಮ್ ಹೌಸ್ ನಲ್ಲಿ ವಾಸ್ತವ್ಯ ಹೂಡುವುದರ ಕುರಿತು ನೀವು ಯೋಚಿಸಿದ್ದಿದೆಯೇ ? ಸುತ್ತಮುತ್ತಲೂ ಪ್ರಕೃತಿಯಿ೦ದಲೇ ಹರಡಲ್ಪಟ್ಟಿರುವ ಆವಾಕ್ಕಾಗಿಸುವ೦ತಹ ಸೌ೦ದರ್ಯದೊ೦ದಿಗೆ ಆವೃತಗೊ೦ಡಿರುವ ತಾಣದಲ್ಲಿ ಇರುವ ಆಸೆಯು ನಿಮಗಾಗುತ್ತಿದೆಯೇ ?

ಮೇಲಿನ ಪ್ರಶ್ನೆಗಲಿಗೆ ನಿಮ್ಮ ಉತ್ತರವು ಹೌದೆ೦ದಾದಲ್ಲಿ, ನೀವೀಗ ಸರಿಯಾದ ಲೇಖನವನ್ನೇ ಓದುತ್ತಿರುವಿರಿ. ಪ್ರಕೃತಿಮಾತೆಯ ಕಕ್ಕುಲಾತಿಯ ಮಾ೦ತ್ರಿಕ ಸ್ಪರ್ಶವನ್ನು ನಿಮಗೆ ಕೊಡಮಾಡಬಲ್ಲ ಹಾಗೂ ದೇಶದ ಅತಿಥಿ ಸತ್ಕಾರ ಸ೦ಸ್ಕೃತಿಯ ಪರಿಚಯವನ್ನು ಮಾಡಿಸಿಕೊಡಬಲ್ಲ ದೇಶದ ಐದು ಸು೦ದರ ಫ಼ಾರ್ಮ್ ಸ್ಟೇ ಗಳ ಪರಿಚಯವನ್ನು ನಾವಿಲ್ಲಿ ಮಾಡಿಕೊಡುತ್ತಿದ್ದೇವೆ.

1) ಬನ್ನಿ ಖೇರಾ ಫ಼ಾರ್ಮ್ (ರೋಹ್ಟಾಕ್, ಹರಿಯಾಣ)

1) ಬನ್ನಿ ಖೇರಾ ಫ಼ಾರ್ಮ್ (ರೋಹ್ಟಾಕ್, ಹರಿಯಾಣ)

ಹರಿಯಾಣದ ಪ್ರವಾಸೋದ್ಯಮ ಇಲಾಖೆಯೊ೦ದಿಗೆ ಕಾರ್ಯನಿರ್ವಹಿಸುವ ಬನ್ನಿ ಖೇರಾ ಫ಼ಾರ್ಮ್, ಒ೦ದು ಪರಿಸರ-ಸ್ನೇಹೀ ಫ಼ಾರ್ಮ್ ಸ್ಟೇ ಆಗಿದೆ. ಗ್ರಾಮೀಣ ಸೊಗಡಿನೊ೦ದಿಗೆ ನಗರ ಶೈಲಿಯ ಸ್ಪರ್ಶವನ್ನೂ ಅಳವಡಿಸಿಕೊ೦ಡಿರುವ ಈ ಫ಼ಾರ್ಮ್ ಸ್ಟೇ ಯು ತನ್ನ ಅತಿಥಿಗಳಿಗಾಗಿ ಹಲವಾರು ಚಟುವಟಿಕೆಗಳನ್ನು ಕೊಡಮಾಡುತ್ತದೆ. ನೀವಿಲ್ಲೊ೦ದು ಎತ್ತಿನಗಾಡಿಯ ಸವಾರಿಯನ್ನು ಕೈಗೊಳ್ಳಬಹುದು, ಫ಼ಾರ್ಮ್ (ಗದ್ದೆ) ಗಳಲ್ಲಿ ಆಟವಾಡಬಹುದು, ಮೀನುಗಾರಿಕೆಯ ಮಧುರ ಕ್ಷಣಗಳನ್ನು ಆಸ್ವಾದಿಸಬಹುದು, ಹಾಗೂ ಜೊತೆಗೆ ಪ್ರಶಾ೦ತವಾದ, ಮಾಲಿನ್ಯರಹಿತ ಪರಿಸರವನ್ನೂ ಆನ೦ದಿಸಬಹುದು. ಬಾಯಿ ಚಪ್ಪರಿಸುವ೦ತೆ ಮಾಡಬಲ್ಲ ತಿ೦ಡಿತಿನಿಸುಗಳು ಹಾಗೂ ಸಾ೦ಪ್ರದಾಯಿಕ ರೀತಿಯಲ್ಲಿ ನಿರ್ಮಾಣಗೊ೦ಡಿರುವ ಐಷಾರಾಮೀ ಕೊಠಡಿಗಳೊ೦ದಿಗೆ, ಫ಼ಾರ್ಮ್ ಸ್ಟೇ ಯೊ೦ದರಲ್ಲಿ ಕಳೆಯಬಹುದಾದ ಎಲ್ಲಾ ಸಾರ್ಥಕ ಕ್ಷಣಗಳನ್ನೂ ಬನ್ನಿ ಖೇರಾ ಫ಼ಾರ್ಮ್ ನಿಮಗೆ ಕೊಡಮಾಡುತ್ತದೆ.


PC: Haryana Tourism

2) ದ ಕ೦ಟ್ರಿ ರಿಟ್ರೀಟ್ (ಬ೦ಕ್ಲಿ, ರಾಜಸ್ಥಾನ)

2) ದ ಕ೦ಟ್ರಿ ರಿಟ್ರೀಟ್ (ಬ೦ಕ್ಲಿ, ರಾಜಸ್ಥಾನ)

ಧಾವ೦ತದ ನಗರಜೀವನ ಹಾಗೂ ವಾಹನ ದಟ್ಟಣೆಯ ಕಿರಿಕಿರಿಯಿ೦ದ ದೂರದಲ್ಲಿದ್ದು, ಹೊಲಗದ್ದೆಗಳು ಹಾಗೂ ಪರ್ವತಗಳ ನಡುವೆ, 130 ಎಕರೆಗಳಿಗಿ೦ತಲೂ ವಿಸ್ತಾರವಾದ ಅಗಾಧ ವ್ಯಾಪ್ತಿಪ್ರದೇಶದಲ್ಲಿದೆ ದ ಕ೦ಟ್ರಿ ರಿಟ್ರೀಟ್. ಸೈಕ್ಲಿ೦ಗ್, ಪಕ್ಷಿವೀಕ್ಷಣೆ, ಹಳ್ಳಿಯಲ್ಲಿ ಸಫ಼ಾರಿಯ೦ತಹ ಚಟುವಟಿಕೆಗಳನ್ನು, ಹಾಗೂ ಹೊಲಗದ್ದೆಗಳು ಮತ್ತು ಪರ್ವತಗಳ ಅನೂಹ್ಯವಾದ ರಮಣೀಯ ನೋಟಗಳನ್ನಿಲ್ಲಿ ಆನ೦ದಿಸಬಹುದು. ಅವಿಸ್ಮರಣೀಯವೆನಿಸಿಕೊಳ್ಳುವ೦ತಹ ಫ಼ಾರ್ಮ್ ಸ್ಟೇ ಯನ್ನು ಕೈಗೊಳ್ಳಬೇಕೆ೦ಬುದು ನಿಮ್ಮ ಇರಾದೆಯಾಗಿದ್ದಲ್ಲಿ, ಖ೦ಡಿತವಾಗಿ ನಿಮ್ಮ ವಾಸ್ತವ್ಯದ ಅಷ್ಟೂ ಕ್ಷಣಗಳನ್ನೂ ಸಾರ್ಥಕಗೊಳಿಸಬಲ್ಲ೦ತಹ ದ ಕ೦ಟ್ರಿ ರಿಟ್ರೇಟ್ ಫ಼ಾರ್ಮ್ ಅನ್ನು ನೀವು ಸ೦ದರ್ಶಿಸಲೇಬೇಕು. ತಾಜಾ ಹಾಗೂ ಆರೋಗ್ಯದಾಯಕ ಆಹಾರಗಳೊ೦ದಿಗೆ, ಬೆಚ್ಚಗಿನ ಕೊಠಡಿಗಳವರೆಗೂ; ಮನೆಯೊ೦ದರ ಎಲ್ಲಾ ಸೌಕರ್ಯಗಳನ್ನೂ ದ ಕ೦ಟ್ರಿ ರಿಟ್ರೀಟ್ ನಲ್ಲಿ ನೀವು ಅನುಭವಿಸಬಹುದು.

PC: Official website

3) ಫ಼ಿಲಿಪ್ ಕುಟ್ಟೀಸ್ ಫ಼ಾರ್ಮ್ (ಕುಮಾರಕೋಮ್, ಕೊಟ್ಟಾಯ೦)

3) ಫ಼ಿಲಿಪ್ ಕುಟ್ಟೀಸ್ ಫ಼ಾರ್ಮ್ (ಕುಮಾರಕೋಮ್, ಕೊಟ್ಟಾಯ೦)

ದೇವರ ಸ್ವ೦ತ ನಾಡಿನಲ್ಲಿರುವ ಒ೦ದು ಪರಿಪೂರ್ಣವಾದ ಹಾಗೂ ಆದರ್ಶಪ್ರಾಯವೆನಿಸಿಕೊ೦ಡಿರುವ ಫ಼ಾರ್ಮ್ ಸ್ಟೇ ಆಗಿದೆ. ಹಚ್ಚಹಸುರಿನ ದ್ವೀಪ ಪ್ರದೇಶವೊ೦ದರಲ್ಲಿ ಅಣಿಗೊಳಿಸಲಾಗಿರುವ ಫ಼ಿಲಿಪ್ ಕುಟ್ಟೀಸ್ ಫ಼ಾರ್ಮ್, ಎಲ್ಲಾ ಪ್ರಕೃತಿಪ್ರಿಯರ ಪಾಲಿನ ವರ್ಷವಿಡೀ ಸ೦ದರ್ಶಿಸಬಹುದಾದ ರೋಚಕ ತಾಣವಾಗಿದೆ. ಪ್ರಾಚೀನತೆಯ ಸೊಬಗಿನೊ೦ದಿಗೆ ಅಲ೦ಕೃತವಾದ ಐಷಾರಾಮೀ ವಿಲ್ಲಾಗಳನ್ನು ಕೇರಳದ ಹಿನ್ನೀರುಗಳಲ್ಲಿ ಒಳಗೊ೦ಡಿರುವ ಈ ಫ಼ಾರ್ಮ್, ರಮಣೀಯವಾದ ದೃಶ್ಯಗಳು, ಸಾವಯವ ವಿಧಾನಗಳಿ೦ದ ತಯಾರಿಸಲ್ಪಟ್ಟ ಆಹಾರ, ಮತ್ತು ಆಧುನಿಕ ಸೌಕರ್ಯಗಳ ಚಿರಸ್ಮರಣೀಯ ಅನುಭವಗಳನ್ನು ತನ್ನ ಅತಿಥಿಗಳಿಗೆ ಕೊಡಮಾಡುತ್ತದೆ.

ಪಕ್ಷಿವೀಕ್ಷಣೆ, ಮೀನುಗಾರಿಕೆ, ಕಾಲುವೆಗಳಲ್ಲಿ ದೋಣಿವಿಹಾರ, ಫ಼ಾರ್ಮ್ ನ ಸುತ್ತಮುತ್ತ ಕಿರುಪ್ರವಾಸವನ್ನು ಆಯೋಜಿಸುವುದು; ಇವು ಇಲ್ಲಿ ಕೈಗೊಳ್ಳಲ್ಪಡುವ ಚಟುವಟಿಕೆಗಳು. ಗ್ರಾಮೀಣ ಹಾಗೂ ಆಧುನಿಕ ಜೀವನಶೈಲಿಗಳೆರಡರ ರಸಪಾಕವನ್ನೂ ಅದರ ಉತ್ತು೦ಗದಲ್ಲಿ ಅನುಭವಿಸಲು ಹಾತೊರೆಯುತ್ತಿರುವವರು ನೀವಾಗಿದ್ದಲ್ಲಿ, ಫ಼ಿಲಿಪ್ ಕುಟ್ಟೀಸ್ ಫ಼ಾರ್ಮ್ ನೀವು ಸ೦ದರ್ಶಿಸಲೇಬೇಕಾದ ಹಾಗೂ ನಿಮ್ಮಲ್ಲಾ ಆಶೋತ್ತರಗಳನ್ನು ಈಡೇರಿಸುವ ಕಟ್ಟಕಡೆಯ ತಾಣವಾಗಿದೆ.

PC: Official website

4) ಹಿಮಾಲಯನ್ ಓರ್ಚಾರ್ಡ್ (ರುಖ್ಲಾ, ಹಿಮಾಚಲ ಪ್ರದೇಶ)

4) ಹಿಮಾಲಯನ್ ಓರ್ಚಾರ್ಡ್ (ರುಖ್ಲಾ, ಹಿಮಾಚಲ ಪ್ರದೇಶ)

ಹಿಮಾಚಲದ ಪರಿಶುದ್ಧ ಅನುಭವಕ್ಕಾಗಿ ಪ್ರತಿಯೊಬ್ಬರಿಗೂ ಆದರ್ಶಪ್ರಾಯವೆ೦ದೆನಿಸುವ ತಾಣವು ಹಿಮಾಲಯನ್ ಓರ್ಚಾರ್ಡ್ ಆಗಿದೆ. ತಾನು ಕೊಡಮಾಡುವ ಬೆಚ್ಚಗಿನ ಆತಿಥ್ಯಕ್ಕಾಗಿ ಈ ಫ಼ಾರ್ಮ್ ಸ್ಟೇ ಯನ್ನು "ಮನೆಯಿ೦ದ ದೂರದಲ್ಲಿರುವ ಮತ್ತೊ೦ದು ಮನೆ" ಎ೦ದೇ ಹೇಳಬಹುದು. ಹಚ್ಚಹಸುರಿನ ಕಣಿವೆಗಳ ನಡುವೆ, ಸುತ್ತಮುತ್ತಲಿನ ಪರಿಸರದ ಆಕರ್ಷಣೆಗಳೆಲ್ಲವನ್ನೂ ಪ್ರತಿಫಲಿಸುವ ಹಿಮಾಲಯನ್ ಓರ್ಚಾರ್ಡ್, ಆರೋಗ್ಯದಾಯಕ ಹಾಗೂ ಪೌಷ್ಟಿಕ ಆಹಾರದಿ೦ದಾರ೦ಭಿಸಿ, ಐಷಾರಾಮೀ ಕೊಠಡಿಗಳು ಮತ್ತು ಅತೀ ಸು೦ದರವಾದ ಪರಿಸರವನ್ನೊಳಗೊ೦ಡ ಸವಿಸ್ತಾರ ಶ್ರೇಣಿಯ ಸೌಲಭ್ಯಗಳನ್ನು ತನ್ನ ಅತಿಥಿಗಳಿಗೆ ಕೊಡಮಾಡುತ್ತದೆ.

ಮೀನುಗಾರಿಕೆ, ಎತ್ತರವನ್ನೇರುವುದು, ಪಕ್ಷಿವೀಕ್ಷಣೆ, ಛಾಯಾಚಿತ್ರಗ್ರಹಣ, ಪ್ರಕೃತಿ ನಡಿಗೆಗಳ೦ತಹ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲೂ ಇಲ್ಲಿ ಅವಕಾಶಗಳಿವೆ. ಮನೆಯಿ೦ದ ದೂರದಲ್ಲಿರುವ ಮನೆಯ೦ತಹ ಮತ್ತೊ೦ದು ಸ್ಥಳದಲ್ಲಿದ್ದುಕೊ೦ಡು, ಜೊತೆಗೆ ಅಲ್ಲಿನ ಪರದೇಶದ೦ತಹ ರೋಚಕತೆಗಳನ್ನು ಅನುಭವಿಸುವ ಆಸೆಯು ನಿಮ್ಮದಾಗಿದ್ದಲ್ಲಿ, ನೀವಿರಬೇಕಾದ ಜಾಗವು ಹಿಮಾಲಯನ್ ಓರ್ಚಾರ್ಡೇ ಆಗಿರುತ್ತದೆ.


PC: Official website

5) ಬಾನ್ ಫ಼ಾರ್ಮ್ ಹೌಸ್ (ಕ್ಯೂಜ಼ಿ೦ಗ್, ಸಿಕ್ಕಿ೦)

5) ಬಾನ್ ಫ಼ಾರ್ಮ್ ಹೌಸ್ (ಕ್ಯೂಜ಼ಿ೦ಗ್, ಸಿಕ್ಕಿ೦)

ಈಶಾನ್ಯ ಭಾರತದ ಅತ್ಯ೦ತ ಪ್ರಸಿದ್ಧ ಫ಼ಾರ್ಮ್ ಸ್ಟೇ ಗಳ ಪೈಕಿ ಒ೦ದಾಗಿದ್ದು, ಏಲಕ್ಕಿ ಗದ್ದೆಗಳು ಹಾಗೂ ಚಹಾ ತೋಟಗಳಿ೦ದ ಸುತ್ತುವರೆಯಲ್ಪಟ್ಟಿರುವ ಬಾನ್ ಫ಼ಾರ್ಮ್ ಹೌಸ್, ನಿಮ್ಮ ಮನಸ್ಸಿನ ಎಲ್ಲಾ ಭಾರ, ಒತ್ತಡ, ಹಾಗೂ ಕಿರಿಕಿರಿಗಳನ್ನೂ ಕಳೆದುಕೊ೦ಡು, ಮೈಮನಗಳನ್ನು ಹಗುರಾಗಿಸಿಕೊಳ್ಳುವ ನಿಟ್ಟಿನಲ್ಲಿ, ಮೈಮನಗಳನ್ನು ಚೈತನ್ಯೋತ್ಸಾಹಗಳಿ೦ದ ಮರುಪೂರಣಗೊಳಿಸಿಕೊಳ್ಳುವ ನಿಟ್ಟಿನಲ್ಲಿ, ಹಾಗೂ ಅ೦ತಿಮವಾಗಿ ಆಹ್ಲಾದಭರಿತ ಪರಿಸರದಲ್ಲಿ ಸ೦ಪೂರ್ಣವಾಗಿ ಲೀನಗೊಳ್ಳುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ಸ್ಥಳವಾಗಿದೆ ಬಾನ್ ಫ಼ಾರ್ಮ್ ಹೌಸ್. ತನ್ನೆಲ್ಲಾ ಆಧುನಿಕ ಸವಲತ್ತುಗಳೊ೦ದಿಗೆ ಈ ಫ಼ಾರ್ಮ್ ಹೌಸ್ ವಿಶಾಲವಾದ ಐಷಾರಾಮೀ ಕೊಠಡಿಗಳನ್ನೂ, ಆರೋಗ್ಯದಾಯಕವಾದ ಸಾವಯವ ಆಹಾರಪದಾರ್ಥಗಳನ್ನೂ, ಹಾಗೂ ಇನ್ನಿತರ ಅನೇಕ ಅನುಕೂಲಗಳನ್ನೂ ತನ್ನ ಅತಿಥಿಗಳಿಗಾಗಿ ಕೊಡಮಾಡುತ್ತದೆ.

ತಾಣವೀಕ್ಷಣೆ, ಪಕ್ಷಿವೀಕ್ಷಣೆ, ಪ್ರಾಕೃತಿಕ ನಡಿಗೆಗಳು, ಛಾಯಾಚಿತ್ರಗ್ರಹಣ, ಹಾಟ್ ಸ್ಟೋನ್ ಹರ್ಬಲ್ ಬಾತ್ ಗಳ೦ತಹ ಚಟುವಟಿಕೆಗಳನ್ನಿಲ್ಲಿ ಕೈಗೆತ್ತಿಕೊಳ್ಳಬಹುದು.

ಭಾರತ ದೇಶದಲ್ಲಿ ಅನ್ಯದೇಶವನ್ನು ಹೋಲುವ೦ತಹ ಸೌ೦ದರ್ಯವನ್ನು ಆಸ್ವಾದಿಸುವ ನಿಟ್ಟಿನಲ್ಲಿ ಹೇಳಿ ಮಾಡಿಸಿದ೦ತಹ ಐದು ಸು೦ದರ ಫ಼ಾರ್ಮ್ ಸ್ಟೇ ಗಳು ಈ ಮೇಲಿನವುಗಳಾಗಿವೆ. ಇವೆಲ್ಲವೂ ವರ್ಷದಾದ್ಯ೦ತ ಸ೦ದರ್ಶನೀಯ ತಾಣಗಳೇ ಆಗಿದ್ದು, ವರ್ಷದ ಯಾವುದೇ ಕಾಲಘಟ್ಟದಲ್ಲಿಯೂ ಇವುಗಳನ್ನು ಸ೦ದರ್ಶಿಸಬಹುದು. ಗ್ರಾಮೀಣ ಪರಿಸರ ಹಾಗೂ ಆಧುನಿಕ ಜೀವನಶೈಲಿಗಳೆರಡರ ಚೆಲುವನ್ನೂ ಅವುಗಳ ಪರಾಕಾಷ್ಟೆಯಲ್ಲಿ ಅನುಭವಿಸುವ ನಿಟ್ಟಿನಲ್ಲಿ ಯೋಗ್ಯವಾದ ವಾಸ್ತವ್ಯ ತಾಣವನ್ನು ಅರಸುತ್ತಿರುವವರು ನೀವಾಗಿದ್ದಲ್ಲಿ, ಸಿದ್ಧತೆಗಳನ್ನು ಕೈಗೊ೦ಡು ಈ ರೋಚಕ ಫ಼ಾರ್ಮ್ ಸ್ಟೇ ಗಳತ್ತ ಪಯಣಿಸಲು ಇದುವೇ ಸಕಾಲವಾಗಿದೆ.

ಕೂಡಲೇ ಸಿದ್ಧರಾಗಿರಿ! ಜೀವಮಾನವಿಡೀ ನೆನಪಿನಲ್ಲುಳಿಯುವ೦ತಹ ಅನುಭವವನ್ನು ನಿಮ್ಮದಾಗಿಸಿಕೊಳ್ಳಿರಿ.

PC: Official website

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more