Search
  • Follow NativePlanet
Share
» »ಕರ್ನಾಟಕದಲ್ಲಿನ ಈ ಪ್ರಾಚೀನ 5 ದೇವಾಲಯಗಳ ದರ್ಶನದಿಂದ ಮೋಕ್ಷವನ್ನು ಪಡೆಯಬಹುದಂತೆ....

ಕರ್ನಾಟಕದಲ್ಲಿನ ಈ ಪ್ರಾಚೀನ 5 ದೇವಾಲಯಗಳ ದರ್ಶನದಿಂದ ಮೋಕ್ಷವನ್ನು ಪಡೆಯಬಹುದಂತೆ....

ಭಾರತ ದೇಶ ಸಂಸ್ಕøತಿ, ಸಂಪ್ರದಾಯಕ್ಕೆ ಕನ್ನಡಿ ಕರ್ನಾಟಕ ರಾಜ್ಯ. ಮುಖ್ಯವಾಗಿ ಇಲ್ಲಿರುವ ದೇವಾಲಯಲ್ಲಿನ ಶಿಲ್ಪಕಲೆಗಳು ನಮ್ಮ ಸಂಪ್ರದಾಯಗಳಿಗೆ ಪ್ರತಿಬಿಂಬ. ಈ ದಕ್ಷಿಣಾಧಿ ರಾಜ್ಯದಲ್ಲಿ ತಮಿಳುನಾಡು ರಾಜ್ಯದ ನಂತರ ಅತ್ಯಂತ ಪ್ರಾಚೀನ ಹಾಗು ಪುರಾಣ ಪ್

By Sowmyabhai

ಭಾರತ ದೇಶ ಸಂಸ್ಕøತಿ, ಸಂಪ್ರದಾಯಕ್ಕೆ ಕನ್ನಡಿ ಕರ್ನಾಟಕ ರಾಜ್ಯ. ಮುಖ್ಯವಾಗಿ ಇಲ್ಲಿರುವ ದೇವಾಲಯಲ್ಲಿನ ಶಿಲ್ಪಕಲೆಗಳು ನಮ್ಮ ಸಂಪ್ರದಾಯಗಳಿಗೆ ಪ್ರತಿಬಿಂಬ. ಈ ದಕ್ಷಿಣಾಧಿ ರಾಜ್ಯದಲ್ಲಿ ತಮಿಳುನಾಡು ರಾಜ್ಯದ ನಂತರ ಅತ್ಯಂತ ಪ್ರಾಚೀನ ಹಾಗು ಪುರಾಣ ಪ್ರಾಧಾನ್ಯತೆಯನ್ನು ಹೊಂದಿರುವ ದೇವಾಲಯಗಳು ಕರ್ನಾಟಕದಲ್ಲಿಯೇ ಅತ್ಯಧಿಕ ಎಂದೇ ಹೇಳಬಹುದು. ಇಲ್ಲಿನ ಪರಮ ಪವಿತ್ರವಾದ ದೇವಾಲಯಕ್ಕೆ ಕೇವಲ ಭಾರತ ದೇಶದಲ್ಲಿನ ವಿವಿಧ ರಾಜ್ಯದಿಂದಲೇ ಅಲ್ಲದೇ ವಿದೇಶದಿಂದಲೂ ಕೂ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಟೆಂಪಲ್ ಟೂರಿಸಂನಲ್ಲಿ ತಮಿಳುನಾಡಿನ ನಂತರ ಅತ್ಯಧಿಕ ಆದಾಯವನ್ನು ಹೊಂದುತ್ತಿರುವ ರಾಜ್ಯದಲ್ಲಿ ಕರ್ನಾಟಕ ಕೂಡ ಒಂದು. ಇನ್ನು ಇಲ್ಲಿನ ದೇವಾಲಯದಲ್ಲಿನ ಆಚಾರ-ವಿಚಾರಗಳು ಕೂಡ ವಿಭಿನ್ನವಾಗಿವೆ. ಈ ಕ್ರಮದಲ್ಲಿ ಕರ್ನಾಟಕದಲ್ಲಿ ಅತ್ಯಂತ ಪುರಾತನವಾದ ಹಾಗು ಪ್ರಸಿದ್ಧವಾದ ದೇವಾಲಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಇಷ್ಟೇ ಅಲ್ಲ, ಈ ದೇವಾಲಯಗಳಿಗೆ ಭೇಟಿ ನೀಡಿದರೆ ಮೋಕ್ಷವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಹಾಗಾದರೆ ಆ ದೇವಾಲಯಗಳ ಬಗ್ಗೆ ತಿಳಿಯೋಣ.

1.ಕೊಲ್ಲೂರಿನ ಮೂಕಾಂಬಿಕಾ ಕ್ಷೇತ್ರ

1.ಕೊಲ್ಲೂರಿನ ಮೂಕಾಂಬಿಕಾ ಕ್ಷೇತ್ರ

ಮೂಕಾಂಬಿಕ ಕ್ಷೇತ್ರವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರಿನಲ್ಲಿದೆ. ಇಲ್ಲಿ ಮೂಕಾಂಬಿಕೆ ದೇವಿಯು ನೆಲೆಸಿದ್ದಾಳೆ. ವರ್ಷವೀಡಿ ಈ ದೇವಾಲಯಕ್ಕೆ ಕರ್ನಾಟಕ ರಾಜ್ಯದಿಂದಲೇ ಅಲ್ಲದೇ ಕೇರಳ ರಾಜ್ಯದಿಂದಲೂ ಭೇಟಿ ನೀಡುತ್ತಿರುತ್ತಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿರುವ ಚಿಕ್ಕ ದೇವಾಲಯ ಪಟ್ಟಣವಾದ ಕೊಲ್ಲೂರು ಕುಂದಾಪುರ ತಾಲ್ಲೂಕು ಕೇಂದ್ರದಿಂದ ಸುಮಾರು 38 ಕಿ.ಮೀ ದೂರದಲ್ಲಿ ಉಡುಪಿ ನಗರದಿಂದ ಸುಮಾರು 75 ಕಿ.ಮೀ ದೂರದಲ್ಲಿದೆ.

ಇಲ್ಲಿನ ವಿಶೇಷ ಏನೆಂದರೆ ದೇವಿ ಮೂಕಾಂಬಿಕೆಯು ಶಿವಲಿಂಗದ ರೂಪದಲ್ಲಿ ನೆಲೆಸಿದ್ದಾಳೆ. ಈ ಶಿವಲಿಂಗವು ಮಹಾಶಿವ ಹಾಗು ಶಕ್ತಿಯನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ.ಈ ಶಿವಲಿಂಗವು ಮಹಾಶಿವ ಹಾಗು ಶಕ್ತಿಯನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ. ಶ್ರೀ ಚಕ್ರದ ಮೇಲಿನ ಪಂಚಲೋಹದ ಮುಕಾಂಬಿಕೆಯ ವಿಗ್ರಹವನ್ನು ಅದ್ವೈತ ಗುರು ಶ್ರೀ ಶಂಕರಾಚಾರ್ಯರು ಪ್ರತಿಷ್ಟಾಪಿಸಿದರು ಎನ್ನಲಾಗಿದೆ.

2.ಉಡುಪಿ ಶ್ರೀ ಕೃಷ್ಣ ದೇವಾಲಯ

2.ಉಡುಪಿ ಶ್ರೀ ಕೃಷ್ಣ ದೇವಾಲಯ

ಇಲ್ಲಿ ಭಕ್ತರು ಮೂಲವಿರಾಟನನ್ನು ನೇರವಾಗಿ ದರ್ಶಿಸಲು ಆಗುವುದಿಲ್ಲ. ಕೇವಲ ಒಂದು ಕಿಟಕಿಯ ದ್ವಾರದ ಸಹಾಯದಿಂದ ಮಾತ್ರವೇ ಕಾಣುವುದಕ್ಕೆ ಸಾಧ್ಯವಾಗುತ್ತದೆ. ಉಡುಪಿಯಲ್ಲಿನ ಪ್ರಸಿದ್ಧವಾದ ದೇವಾಲಯಗಳಲ್ಲಿ ಇದೇ ಪ್ರಮುಖವಾದುದು ಎಂದೇ ಹೇಳಬಹುದು. ಪುರಾಣ ಕಥೆಯ ಪ್ರಕಾರ ಶ್ರೀಕೃಷ್ಣನ ಪರಮಭಕ್ತನಾದ ಕನಕದಾಸನು ಸ್ವಾಮಿಯ ದರ್ಶನಕ್ಕೆ ಬಂದರೆ ಕೀಳು ಜಾತಿಯವನು ಎಂದು ಹೊರದಬ್ಬುತ್ತಾರೆ.

ಹೀಗಾಗಿ ಸ್ವಾಮಿಯ ದರ್ಶನಕ್ಕೆ ಬಂದ ಮಹಾಭಕ್ತನಿಗೆ ದರ್ಶನ ನೀಡುವ ಸಲುವಾಗಿ ಆಶ್ಚರ್ಯಕರವಾಗಿ ಸ್ವಾಮಿಯೇ ಹಿಂದಿರುಗಿ ಕನಕದಾಸ ಇದ್ದಲಿಗೆ ಮುಖ ಮಾಡಿ ದರ್ಶನವನ್ನು ನೀಡುತ್ತಾನೆ. ಹಾಗಾಗಿಯೇ ಇಲ್ಲಿನ ಮೂಲ ವಿಗ್ರಹವು ಪ್ರವೇಶ ದ್ವಾರದಿಂದ ಅಲ್ಲದೇ ಇಂದಿಗೂ ಕಿಟಕಿಯ ಮೂಖಾಂತರದಿಂದಲೇ ಭಕ್ತರು ದರ್ಶಿಸುತ್ತಾರೆ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡಿ ತಮ್ಮ ಜನ್ಮ ಪಾವನವಾಗಿಸಿಕೊಳ್ಳುತ್ತಿರುತ್ತಾರೆ.

3.ಕ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

3.ಕ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಈ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಅತ್ಯಂತ ಪ್ರಸಿದ್ಧವಾದ ಕ್ಷೇತ್ರವಾಗಿದೆ. ಸುತ್ತಲೂ ಕಾಡು, ನದಿಗಳು, ಮತ್ತು ಅದ್ಭುತವಾದ ನೈಸರ್ಗಿಕ ಪರಿಸರವನ್ನು ಇಲ್ಲಿ ಆನಂದಿಸಬಹುದಾಗಿದೆ. ಸುಬ್ರಹ್ಮಣ್ಯ ಸ್ವಾಮಿಗೆ ಮೀಸಲಾಗಿರುವ ಈ ದೇವಾಲಯವನ್ನು ಭಾರತದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ದೇಶದ ಮೂಲೆ-ಮೂಲೆಗಳಿಂದ ತಮ್ಮ ಸರ್ಪದೋಷವನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ರಾಜ್ಯದ ವಿವಿಧ ಭಾಗಗಳಿಂದ ದೇವಾಲಯಕ್ಕೆ ಬಸ್ಸು, ರೈಲು ಹಾಗು ವಿಮಾನಗಳ ಮೂಲಕ ಸಂಪರ್ಕ ವ್ಯವಸ್ಥೆ ಸಾಧಿಸಬಹುದಾಗಿದೆ.

4.ಧರ್ಮಸ್ಥಳ ಕ್ಷೇತ್ರ

4.ಧರ್ಮಸ್ಥಳ ಕ್ಷೇತ್ರ

ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ನೇತ್ರಾವತಿ ನದಿ ದ೦ಡೆಯ ಮೇಲಿರುವ ಧರ್ಮಸ್ಥಳವು ದೇವಸ್ಥಾನಗಳ ಪಟ್ಟಣವಾಗಿದ್ದು, ಈ ಪಟ್ಟಣವು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತ೦ಗಡಿ ತಾಲೂಕಿನಲ್ಲಿದೆ. ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಧರ್ಮಸ್ಥಳ ದೇವಸ್ಥಾನಕ್ಕೆ ಈ ಪಟ್ಟಣವು ಹೆಸರುವಾಸಿಯಾಗಿದೆ. ಮ೦ಜುನಾಥನೆ೦ದು ಕರೆಯಲ್ಪಡುವ ಶಿವನ ಗರ್ಭಗುಡಿಯು ಈ ದೇವಸ್ಥಾನದಲ್ಲಿದೆ ಹಾಗೂ ಜೊತೆಗೆ ಅಮ್ಮನವರು ಎ೦ದು ಕರೆಯಲ್ಪಡುವ ದೇವತೆಯ ಗುಡಿ ಮತ್ತು ಧರ್ಮದ ಕಾವಲು ದೇವತೆಗಳಾದ ಚ೦ದ್ರನಾಥ ಮತ್ತು ಧರ್ಮ ದೈವಗಳ ಗುಡಿಗಳೂ ಈ ದೇವಸ್ಥಾನದಲ್ಲಿವೆ.

ಧರ್ಮಸ್ಥಳ ದೇವಸ್ಥಾನವು 800 ವರ್ಷಗಳಿಗಿ೦ತಲೂ ಪ್ರಾಚೀನವಾದುದೆ೦ದು ಹೇಳಲಾಗಿದ್ದು, ಇಲ್ಲಿ ಭಗವಾನ್ ಮ೦ಜುನಾಥೇಶ್ವರನನ್ನು ವಿಭಿನ್ನವಾದ ಹಾಗೂ ಅನನ್ಯವಾದ ರೀತಿಯಲ್ಲಿ ಪೂಜಿಸಲಾಗುತ್ತದೆ. ಇಲ್ಲಿನ ಅರ್ಚಕರು ವೈಷ್ಣವರಾಗಿದ್ದು, ವಾಸ್ತವವಾಗಿ ಈ ಅರ್ಚಕರು ಭಗವಾನ್ ವಿಷ್ಣುವಿನ ಅನುಯಾಯಿಗಳಾಗಿದ್ದಾರೆ.

5.ಹೊರನಾಡು ಅನ್ನಪೂಣೇಶ್ವರಿ ದೇವಾಲಯ

5.ಹೊರನಾಡು ಅನ್ನಪೂಣೇಶ್ವರಿ ದೇವಾಲಯ

ಹೊರನಾಡು ಅನ್ನಪೂಣೇಶ್ವರಿ ದೇವಾಲಯವು ಭದ್ರ ನದಿಯ ದಡದಲ್ಲಿದೆ. ಈ ಕ್ಷೇತ್ರವನ್ನು ಹೊರಾನಾಡು ಎಂದು ಕರೆಯಲಾಗುತ್ತದೆ. ಇದು ಅನ್ನಪೂಣೇಶ್ವರಿ ದೇವಿ ಅಥವಾ ಆಹಾರ ದೇವತೆಗೆ ಸಮರ್ಪಿತವಾದ ದೇವಾಲಯವಾಗಿದೆ. ಈ ದೇವಾಲಯವು ಆಗಸ್ತ್ಯರಿಂದ ನಿರ್ಮಾಣ ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ. ಇದು ರಾಜ್ಯದ ಪುರಾತನವಾದ ದೇವಾಲಯಗಳಲ್ಲಿ ಒಂದು. ಇಲ್ಲಿನ ತಾಯಿಯ ವಿಗ್ರಹವು ಅತ್ಯಂತ ಸುಂದರವಾಗಿದೆ. ಈ ಹೊರನಾಡು ದೇವಾಲಯಕ್ಕೆ ಭಕ್ತರು ಬಂದು ಪ್ರಾರ್ಥಿಸಿದರೆ ತಮ್ಮ ಜೀವನದಲ್ಲಿ ಎಂದಿಗೂ ಹಸಿವಿನಿಂದ ಹೋಗುವುದಿಲ್ಲ ಎಂದು ನಂಬಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X