• Follow NativePlanet
Share
» »ಕಡಿಮೆ ಬೆಲೆಯಲ್ಲಿ ನಿಮ್ಮನ್ನು ಆರ್ಕಷಿಸುವ ಗೋವಾದ ಶಾಪಿಂಗ್ ಮಾರ್ಕೆಟ್‍ಗಳಿವು....

ಕಡಿಮೆ ಬೆಲೆಯಲ್ಲಿ ನಿಮ್ಮನ್ನು ಆರ್ಕಷಿಸುವ ಗೋವಾದ ಶಾಪಿಂಗ್ ಮಾರ್ಕೆಟ್‍ಗಳಿವು....

Written By:

ಶಾಪಿಂಗ್ ಮಾಡುವುದೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹುದು. ಅದರಲ್ಲೂ ಹೆಂಗಸರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಪ್ರಿಯವಾದುದೇ ಶಾಪಿಂಗ್. ವಾರಾಂತ್ಯ ಬಂದರೆ ಸಾಕು ಆ ಶಾಪಿಂಗ್ ಮಾಲ್‍ಗೆ ಈ ಶಾಪಿಂಗ್ ಮಾಲ್ ಎಂದು ತಿರುಗುತ್ತಾ ಇರುತ್ತಾರೆ.

ಗೋವಾ ತನ್ನ ಅದ್ಭುತ ಸೌಂದರ್ಯದಿಂದ ಪ್ರವಾಸಿಗರನ್ನು ಆರ್ಕಷಿಸುತ್ತದೆ. ಗೋವಾ ಕರ್ನಾಟಕದಿಂದ ಹತ್ತಿರವಿರುವ ರಾಜ್ಯವಾಗಿದೆ. ಹಾಗಾಗಿ ಪ್ರವಾಸಿಗರು ತಮ್ಮ ಅಮೂಲ್ಯವಾದ ಕ್ಷಣಗಳನ್ನು ಗೋವಾ ಎಂಬ ಸುಂದರವಾದ ಪ್ರದೇಶದಲ್ಲಿ ಕಳೆಯಲು ಬಯುಸುತ್ತಾರೆ.

ಗೋವಾ ಕೇವಲ ತನ್ನ ಬೀಚ್‍ಗಳು, ಪಾರ್ಟಿಗಳು, ಹೋಟೆಲ್‍ಗಳು, ಸಮುದ್ರ ತಿನಿಸುಗಳಿಗೆ ಪ್ರಸಿದ್ಧಿಯನ್ನು ಪಡೆದಿಲ್ಲ ಬದಲಾಗಿ ಗೋವಾದಲ್ಲಿನ ಕೆಲವು ಸೂಕ್ತವಾದ ಶಾಪಿಂಗ್ ಮಾಲ್‍ಗಳು ಕೂಡ ಇವೆ. ಗೋವಾದಲ್ಲಿ ಶಾಪಿಂಗ್ ಮಾರ್ಕೆಟ್ ಎಂದೇ ಪ್ರಸಿದ್ಧಿ ಹೊಂದಿರುವ ನಿರ್ಧಿಷ್ಟವಾದ ಸ್ಥಳವಿದೆ. ಇಲ್ಲಿನ ಶಾಪಿಂಗ್ ನಿಮಗೆ ಮರೆಯಲಾಗದ ಅನುಭೂತಿ ಹಾಗೂ ವಸ್ತುವಾಗಿರುತ್ತದೆ.

ಪ್ರಸ್ತುತ ಲೇಖನದಲ್ಲಿ ಗೋವಾದ ಕೆಲವು ಪ್ರಸಿದ್ಧವಾದ ಶಾಂಪಿಂಗ್ ಮಾರ್ಕೆಟ್‍ಗಳ ಬಗ್ಗೆ ತಿಳಿಯೋಣ. ಒಮ್ಮೆ ಗೋವಾಗೆ ಹೋದಾಗ ತಪ್ಪದೇ ಈ ಶಾಪಿಂಗ್ ಮಾರ್ಕೆಟ್‍ಗೆ ಭೇಟಿ ನೀಡಿ ಆನಂದಿಸಿ....

ಅಂಜುನಾ ಮಾರ್ಕೆಟ್

ಅಂಜುನಾ ಮಾರ್ಕೆಟ್

ಈ ಅಂಜುನಾ ಮಾರ್ಕೆಟ್ ವಾರದಲ್ಲಿ ಬುಧುವಾರದ ದಿನದಂದು ಮಾತ್ರ ಶಾಪಿಂಗ್ ಮಾಡಲು ಅವಕಾಶವಿರುತ್ತದೆ. ಈ ಮಾರ್ಕೆಟ್ ಗೋವಾದಲ್ಲಿನ ಮೊದಲ ಅತ್ಯುತ್ತಮವಾದ ಶಾಪಿಂಗ್ ಮಾರ್ಕೆಟ್. ಅಂಜುನಾ ಮಾರ್ಕೆಟ್ ಕಡಲ ತೀರದ ಹತ್ತಿರದಲ್ಲಿದೆ. ಈ ಮಾರುಕಟ್ಟೆಯಲ್ಲಿ ಕಾಶ್ಮೀರಿ, ಗುಜರಾತಿ ಮತ್ತು ಟೆಬೆಟಿಯನ್ ಅಂಗಡಿಗಳ ಸಂಯೋಜನೆಯನ್ನು ಇಲ್ಲಿ ಕಾಣಬಹುದಾಗಿದೆ.

ಇಲ್ಲಿ ದೇಶಿಯ ಹಾಗೂ ವಿದೇಶಿಯ ವಸ್ತ್ರ ವಿನ್ಯಾಸವನ್ನು ಕೂಡ ಕಾಣಬಹುದಾಗಿದೆ. ಇಲ್ಲಿ ದೊರಕದೇ ಇರುವ ವಸ್ತುಗಳೇ ಇಲ್ಲವಂತೆ. ಕಡಿಮೆ ಬೆಲೆಯಲ್ಲಿ ಅತಿಹೆಚ್ಚು ವಸ್ತುಗಳನ್ನು ಶಾಪಿಂಗ್ ಮಾಡಿಬರಬಹುದಾಗಿದೆ.

ಪಿ.ಎಮ್ ನೈಟ್ ಮಾರ್ಕೆಟ್

ಪಿ.ಎಮ್ ನೈಟ್ ಮಾರ್ಕೆಟ್

ಬೀಚ್‍ನ ಸಮೀಪದಲ್ಲಿಯೇ ಸುಂದರವಾದ ಈ ಪಿ.ಎಮ್ ಮಾರ್ಕೆಟ್ ಇದೆ. ಈ ಮಾರ್ಕೆಟ್‍ನಲ್ಲಿ ಹಲವು ಬಗೆ ಬಗೆಯ ವಸ್ತುಗಳು ಹಾಗೂ ಪಾದಾರ್ಥಗಳನ್ನು ಮಾರಾಟ ಮಾಡಲಾಗುತ್ತದೆ. ಈ ಪಿ.ಎಮ್ ನೈಟ್ ಮಾರ್ಕೆಟ್ ವಾರದಲ್ಲಿ ಶನಿವಾರದಂದು ಮಾತ್ರ ತೆರೆದಿರಲಾಗುತ್ತದೆ.

ಈ ಮಾರ್ಕೆಟ್‍ನಲ್ಲಿ ಶಾಪಿಂಗ್ ಮಾಡಲು ಬಯಸುವವರಿಗೆ ಹಲವಾರು ರೀತಿಯ ಉಡುಪುಗಳು, ಆಭರಣಗಳು, ಬ್ಯಾಗ್ಸ್, ಸಂಬಾರು ಪಾದಾರ್ಥಗಳು ಇನ್ನೂ ಹಲವಾರು ರೀತಿಯ ವಸ್ತುಗಳನ್ನು ಶಾಪಿಂಗ್ ಮಾಡಬಹುದಾಗಿದೆ.

PC:Ipshita B

ಮಾರ್ ಗೋವಾ ಮಾರ್ಕೆಟ್

ಮಾರ್ ಗೋವಾ ಮಾರ್ಕೆಟ್

ಈ ಮಾರ್ ಗೋವಾ ಮಾರ್ಕೆಟ್‍ನ ಒಳ ಪ್ರವೇಶವಾದರೆ ಯಾವುದು ಶಾಪಿಂಗ್ ಮಾಡಬೇಕು ಎಂಬುದೇ ನಿಮಗೆ ಮರೆತುಹೋಗುತ್ತದೆ. ಒಳ ಪ್ರವೇಶ ಮಾಡುತ್ತಿದ್ದಂತೆ ಬಗೆ ಬಗೆಯ ವಸ್ತುಗಳು ಕಣ್ಣಿಗೆ ಹಬ್ಬ ನೀಡಿದಂತೆ ಆಗುತ್ತದೆ. ಇಲ್ಲಿ ಮಸಾಲೆ ಪಾದಾರ್ಥಗಳು, ಅಭರಣಗಳು, ಉಡುಪುಗಳು, ಉಡುಗೊರೆ ವಸ್ತುಗಳನ್ನು ಇಲ್ಲಿ ನೀವು ಶಾಪಿಂಗ್ ಮಾಡಬಹುದಾಗಿದೆ.

ಈ ಮಾರ್ಕೆಟ್ ಗೋವಾದಲ್ಲಿಯೇ ಅತ್ಯುತ್ತಮವಾದ ಮಾರುಕಟ್ಟೆಯಲ್ಲಿ ಒಂದಾಗಿದೆ. ಇದನ್ನು ಗಾಂಧಿ ಮಾರ್ಕೆಟ್ ಎಂದೂ ಸಹ ಕರೆಯುತ್ತಾರೆ.


PC:sara marlowe

ಕ್ಯಾಲಂಗುಟೆ ಮಾರ್ಕೆಟ್

ಕ್ಯಾಲಂಗುಟೆ ಮಾರ್ಕೆಟ್

ಕ್ಯಾಲಂಗುಟೆ ಮಾರ್ಕೆಟ್ ಶಾಪಿಂಗ್ ಮಾಡುವವರಿಗಂತೂ ಒಂದು ಸ್ವರ್ಗವಿದ್ದಂತೆ. ಈ ಮಾರುಕಟ್ಟೆಯಲ್ಲಿ ಬಟ್ಟೆಗಳಿಂದ ಹಿಡಿದು ಅಭರಣಗಳು ಇನ್ನೂ ಹಲವಾರು ರೀತಿಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಇಲ್ಲಿ ಲೋಹ, ಚರ್ಮ ಹಾಗೂ ಮಣ್ಣಿನಿಂದ ತಯಾರಿಸಿದ ಬಗೆ ಬಗೆಯ ಅಲಂಕಾರಿಕ ವಸ್ತುಗಳು ಹಾಗೂ ಉಡುಪುಗಳನ್ನು ಮಾರಾಟ ಮಾಡಲಾಗುತ್ತದೆ.

ಇಲ್ಲಿ ಎಲ್ಲಾ ರೀತಿಯ ವಸ್ತುಗಳು ಇರುವುದರಿಂದ ಕೇವಲ ದೇಶಿಯರೇ ಅಲ್ಲದೇ ವಿದೇಶಿಯರು ಕೂಡ ಈ ಸ್ಥಳಕ್ಕೆ ಬಂದು ಶಾಪಿಂಗ್ ಮಾಡುತ್ತಾರೆ. ವಿಷೇಶವೆನೆಂದರೆ ಈ ಶಾಪಿಂಗ್ ಮಾರ್ಕೆಟ್‍ನಲ್ಲಿ ನಿರಂತರವಾಗಿ ಶಾಪಿಂಗ್ ಮಾಡುವುದರಿಂದ ವಿಧ ವಿಧವಾದ ನವೀನ ವಸ್ತುಗಳನ್ನು ತಂದು ಮಾರಾಟ ಮಾಡಲಾಗುತ್ತದೆ.

PC:Extempore

ಪಣಜಿಂ ಮಾರುಕಟ್ಟೆ

ಪಣಜಿಂ ಮಾರುಕಟ್ಟೆ

ಶಾಪಿಂಗ್‍ನ ಜೊತೆಗೆ ಜೊತೆಗೆ ರೊಮಾಂಚನ ಅನುಭವಿಸಬೇಕು ಎಂದು ನಿಮ್ಮ ಮನದ ಆಸೆ ಇದ್ದರೆ ಪಣಜಿಂ ಮಾರುಕಟ್ಟೆಗೆ ಒಮ್ಮೆ ಭೇಟಿ ಕೊಡಿ. ಈ ಮಾರ್ಕೆಟ್‍ನಲ್ಲಿ ವಿವಿಧ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಅತ್ಯಂತ ಸುಂದರವಾದ ರೀತಿಯಲ್ಲಿ ಮಾರಾಟ ಮಾಡುವ ಉತ್ತಮ ಯೋಜಿತ ಮಾರುಕಟ್ಟೆ ಇದು.

ಈ ಮಾರುಕಟ್ಟೆಯಲ್ಲಿ ಅಭರಣದಿಂದ ಹಿಡಿದು ದಿನಸಿ ಆಹಾರದವರೆಗೂ ಕೂಡ ಎಲ್ಲವನ್ನೂ ಕೊಳ್ಳಬಹುದಾಗಿದೆ. ಈ ಪಣಜಿಂ ಮಾರುಕಟ್ಟೆಯಿಂದ ಗೋವಾದ ಅದ್ಭುತವಾದ ಶಾಪಿಂಗ್ ನೆನಪುಗಳನ್ನು ಪಡೆಯಬಹುದು.

PC:Pixelmattic WordPress Agency

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ