Search
  • Follow NativePlanet
Share
» »ಈ ವೀಕೆಂಡ್‌ನಲ್ಲಿ ತಿರುವನಂತಪುರಂನಿಂದ ಇಲ್ಲಿಗೆಲ್ಲಾ ಹೋಗಿ ಬರಬಹುದು

ಈ ವೀಕೆಂಡ್‌ನಲ್ಲಿ ತಿರುವನಂತಪುರಂನಿಂದ ಇಲ್ಲಿಗೆಲ್ಲಾ ಹೋಗಿ ಬರಬಹುದು

ತಿರುವನಂತಪುರ ಕ್ಕೆ ನೀವು ನಿಮ್ಮ ಪರಿವಾರದ ಜೊತೆ ಅಥವಾ ಸ್ನೇಹಿತರ ಜೊತೆ ಸುತ್ತಾಡಲು ಬರಬಹುದು. ತಿರುವನಂತಪುರದ ಸುತ್ತ ಮುತ್ತಲು ನೋಡಬೇಕಾದಂತಹ ಅನೇಕ ಪ್ರವಾಸಿ ತಾಣಗಳಿವೆ. ಇಂದು ನಾವು ತಿರುವನಂತಪುರ ಬಳಿ ಇರುವ ಕೆಲವು ವೀಕೆಂಡ್ ತಾಣಗಳನ್ನು ತಿಳಿಸಲಿದ್ದೇವೆ.

 ಕನ್ಯಾಕುಮಾರಿ

ಕನ್ಯಾಕುಮಾರಿ

PC: Ravivg5

ತಿರುವನಂತ ಪುರಂನಿಂದ ಸುಮಾರು 102 ಕಿ.ಮಿ ದೂರದಲ್ಲಿ ಕನ್ಯಾಕುಮಾರಿ ಇದೆ. ಇದೊಂದು ಸುಂದರ ತಾಣವಾಗಿದ್ದು ವರ್ಷದಲ್ಲಿ ಕೋಟ್ಯಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಸ್ಥಳವು ಮೂರು ಸರೋವರಗಳು ಸೇರುವ ಸಂಗಮ ಸ್ಥಳದಲ್ಲಿದೆ. ಇಲ್ಲಿ ಬಂಗಾಲದ ಖಡಿ, ಅರಬಿ ಸಾಗರ ಹಾಗೂ ಹಿಂದೂ ಮಹಾಸಾಗರ ಮೂರು ಸೇರುತ್ತದೆ.
ಇಲ್ಲೊಂದು ಮಹಾತ್ಮ ಗಾಂಧೀ ಮೆಮೋರಿಯಲ್ ಇದೆ. ಅಲ್ಲಿ ವಿಸರ್ಜನೆಗೂ ಮೊದಲು ಗಾಂಧೀಯವರ ಅಸ್ಥಿಯನ್ನು ಇಡಲಾಗಿತ್ತು ಎನ್ನಲಾಗುತ್ತದೆ.

ಕೋಲಾರದ ತಾಯಿ ಚೌಡೇಶ್ವರಿ ಮಹಿಮೆಯನ್ನು ಕಂಡಿದ್ದೀರಾ?ಕೋಲಾರದ ತಾಯಿ ಚೌಡೇಶ್ವರಿ ಮಹಿಮೆಯನ್ನು ಕಂಡಿದ್ದೀರಾ?

ಥೆನ್‌ಮಾಲಾ

ಥೆನ್‌ಮಾಲಾ

PC- Akhilan

ಇದೊಂದು ಸುಂದರವಾದ ಪ್ರವಾಸಿ ತಾಣವಾಗಿದೆ. ಇದನ್ನು ಐದು ವಿಭಾಗಗಲ್ಲಿ ವಿಂಗಡಿಸಲಾಗಿದೆ. ಸಾಹಸ ವಲಯ, ಜಿಂಕೆ ಪುನರ್ವಸತಿ ಪ್ರದೇಶ, ಸಾಂಸ್ಕೃತಿಕ ಪ್ರದೇಶ, ನೌಕಾಯಾನಪ್ರದೇಶ ಮತ್ತು ವಿರಾಮ ಪ್ರದೇಶ. ಇದು ದೇಶದ ಮಾತ್ರವಲ್ಲದೆ ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ನೈಸರ್ಗಿಕ ಪರಿಸರವು ಪ್ರವಾಸಿಗರಿಗೆ ತುಂಬಾ ಪ್ರಭಾವ ಬೀರುತ್ತದೆ.

ಕುಮಾರ ಕೋಮ್

ಕುಮಾರ ಕೋಮ್

ತಿರುವನಂತಪುರದಿಂದ 159ಕಿ.ಮೀ ದೂರದಲ್ಲಿನ ಕುಮಾರ ಕೋಣಕ್ಕೂ ಭೇಟಿ ನೀಡಬಹುದು. ಕೇರಳದಲ್ಲಿರುವ ಈ ಸ್ಥಳವು ಹಚ್ಚ ಹಸಿರಿನಿಂದ ಕೂಡಿದ್ದು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಪ್ರವಾಸಿಗರು ಪ್ರಶಾಂತವಾದ ವಾತಾವರಣದಲ್ಲಿ ಕಾಲ ಕಳೆಯಲು ಇಚ್ಚೀಸುತ್ತಾರೆ. ಇಲ್ಲಿನ ತೆಂಗಿನ ತೋಟ ಹಾಗೂ ಖರ್ಜೂರದ ಮರಗಳು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಯುಗಾಂತ್ಯದ ಮುನ್ಸೂಚನೆ ನೀಡುತ್ತಂತೆ ಇಲ್ಲಿನ ಗುಹೆ, ಅಂಥದ್ದೇನಿದೆ ಇದರೊಳಗೆಯುಗಾಂತ್ಯದ ಮುನ್ಸೂಚನೆ ನೀಡುತ್ತಂತೆ ಇಲ್ಲಿನ ಗುಹೆ, ಅಂಥದ್ದೇನಿದೆ ಇದರೊಳಗೆ

ಮುನ್ನಾರ್

ಮುನ್ನಾರ್

PC- Bimal K C

ತಿರುವನಂತಪುರದಿಂದ 274 ಕಿ.ಮೀ ದೂರದಲ್ಲಿ ಮುನ್ನಾರ್ ಇದೆ. ಮುನ್ನಾರ್ ಪರ್ವತಗಳಿಂದ ಸುತ್ತುವರಿದಿದ್ದು, ಚಹಾದ ತೋಟ, ತಂಪಾದ ವಾತಾವರಣ ಹಾಗೂ ವನಸ್ಪತಿಯಿಂದಾಗಿ ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ. ಇಲ್ಲಿ ಅನೇಕ ಜಲಪಾತಗಳೂ ಇವೆ. ಪ್ರಕೃತಿ ಪ್ರೇಮಿಗಳಿಗೆ ಈ ಸ್ಥಳವು ಸ್ವರ್ಗಕ್ಕಿಂತ ಕಮ್ಮಿ ಇಲ್ಲ ಎನ್ನಬಹುದು.

ಕೊಚ್ಚಿ

ಕೊಚ್ಚಿ

ತಿರುವನಂತಪುರಂನಿಂದ 211ಕಿ.ಮೀ ಪ್ರಯಾಣಿಸಿದರೆ ಕೊಚ್ಚಿಯನ್ನು ತಲುಪಬಹುದು. ಇಲ್ಲಿ ನೀವು ಪ್ರಾಕೃತಿಕ ಗತಿ ವಿಧಾನಗಳ ಜೊತೆಗೆ ಸಾಹಸಮಯ ಚಟುವಟಿಕೆಗಳ ಆನಂದವನ್ನೂ ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X