Search
  • Follow NativePlanet
Share
» »ಇದು ರಾಜಸ್ಥಾನದ ಪ್ರಸಿದ್ಧವಾದ ಕೋಟೆಗಳು

ಇದು ರಾಜಸ್ಥಾನದ ಪ್ರಸಿದ್ಧವಾದ ಕೋಟೆಗಳು

ಶ್ರೀಮಂತ ಸಂಸ್ಕøತಿಯನ್ನು ಹೊಂದಿರುವ ಹಾಗು ಭವ್ಯವಾದ ಪರಂಪರೆಯನ್ನು ಹೊಂದಿರುವ ರಾಜಸ್ಥಾನವು ತನ್ನದೇ ಆದ ಸ್ಥಾನದಿಂದ ವಿಶ್ವ ವಿಖ್ಯಾತವಾಗಿದೆ. ರಾಜಸ್ಥಾನದ ಕೋಟೆಗಳು ಶತಮಾನಗಳಿಂದಲೂ ಮರುಭೂಮಿ ರಾಜ್ಯದಲ್ಲಿನ ಅದ್ಭುತವಾದ ಪ್ರವಾಸಿ ತಾಣಗಳಾಗಿವೆ. ಬೃ

ಶ್ರೀಮಂತ ಸಂಸ್ಕøತಿಯನ್ನು ಹೊಂದಿರುವ ಹಾಗು ಭವ್ಯವಾದ ಪರಂಪರೆಯನ್ನು ಹೊಂದಿರುವ ರಾಜಸ್ಥಾನವು ತನ್ನದೇ ಆದ ಸ್ಥಾನದಿಂದ ವಿಶ್ವ ವಿಖ್ಯಾತವಾಗಿದೆ. ರಾಜಸ್ಥಾನದ ಕೋಟೆಗಳು ಶತಮಾನಗಳಿಂದಲೂ ಮರುಭೂಮಿ ರಾಜ್ಯದಲ್ಲಿನ ಅದ್ಭುತವಾದ ಪ್ರವಾಸಿ ತಾಣಗಳಾಗಿವೆ. ಬೃಹತ್ ಕೋಟೆಗಳು, ದುರಂತ, ತ್ಯಾಗ, ಕಲೆ ಮತ್ತು ವಾಸ್ತು ಶಿಲ್ಪಗಳನ್ನು ಕೋಟೆಗಳಿಂದ ನಾವು ತಿಳಿದುಕೊಳ್ಳಬಹುದು. ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿರುವ ಈ ಕೋಟೆಗಳು ರಾಜಸ್ಥಾನದಲ್ಲಿನ ಭವ್ಯವಾದ ಪರಂಪರೆಯನ್ನು ನಮ್ಮ ಭಾರತದೇಶದ ಜನರಿಗೆ ಸಾರಿ ಹೇಳುತ್ತದೆ.

ಪ್ರಸ್ತುತ ಲೇಖನದಲ್ಲಿ ಸುಂದರವಾದ ಹಾಗು ಟಾಪ್ 6 ರಾಜಸ್ಥಾನದ ಕೋಟೆಗಳನ್ನು ಸಂಕ್ಷೀಪ್ತವಾಗಿ ತಿಳಿಯೋಣ.

ಜೈಸಲ್ಮೇರ್ ಕೋಟೆ

ಜೈಸಲ್ಮೇರ್ ಕೋಟೆ

ಇದನ್ನು ಸೋನಾರ್ ಖಿಲಾ (ಗೋಲ್ಡನ್ ಫೋರ್ಟ್) ಮರುಭೂಮಿಯ ಅಪಾರ ವಿಸ್ತರಣೆ ಹೊಂದಿದೆ. ಎಲ್ಲಾ ದಿಕ್ಕುಗಳಲ್ಲಿ ಸಾಕ್ಷಿಯಾಗಿ ಟ್ರಿಕುಟಾ ಬೆಟ್ಟದ ಮೇಲೆ ಹೊಳೆಯುವ ಕಿರೀಟದಂತೆ ಇರುತ್ತದೆ. ಇಲ್ಲಿ ಸುಂದರವಾದ ಹಿಂದೂ ಮತ್ತು ಜೈನ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. 4 ಕಡೆಗಳಿಂದಲೂ ಈ ಭವ್ಯವಾದ ಕೋಟೆಗೆ ಪ್ರವೇಶಗಳಿವೆ. ಇದನ್ನು 12 ನೇ ಶತಮಾನದ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಿರುವ ಕೋಟೆಯಾಗಿದೆ.

Koshy Koshy

ತೆರಳುವ ಬಗೆ ಹೇಗೆ?

ತೆರಳುವ ಬಗೆ ಹೇಗೆ?

ಜೋಧಪುರವು ಈ ಕೋಟೆಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಸುಮಾರು 282 ಕಿ.ಮೀ ಜೈಸಲ್ಮೇರ್ ಅತ್ಯುತ್ತಮ ರಸ್ತೆ ಮತ್ತು ಸಂಪರ್ಕವನ್ನು ಹೊಂದಿದೆ. ಈ ಭವ್ಯವಾದ ಕೋಟೆಗೆ ಭೇಟಿಯ ಸಮಯ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ. ಈ ಕೋಟೆಗೆ ಪ್ರವೇಶ ಶುಲ್ಕವನ್ನು ಪಾವತಿಸಬೇಕು. ಭಾರತೀಯರಿಗೆ 30 ರೂಪಾಯಿ ಹಾಗು ವಿದೇಶಿಯರಿಗೆ 250 ರೂಪಾಯಿಗಳು.

ಅಂಬರ್ ಫೋರ್ಟ್

ಅಂಬರ್ ಫೋರ್ಟ್

ಅಮರ್ ಆಫ್ ಅಮರ್ ಕೋಟೆಯು ರಾಜಸ್ಥಾನದ ಆದ್ಭುತ ಬೆಟ್ಟದ ಕೋಟೆಗಳಲ್ಲಿ ಒಂದಾಗಿದೆ. 10 ನೇ ಶತಮಾನದ ಕೋಟೆ ರಜಪೂತರ ಮಿಲಿಟರಿ ವಾಸ್ತು ಶಿಲ್ಪದ ರಕ್ಷಣೆಗೆ ಉತ್ತಮವಾದ ಉದಾರಣೆಯಾಗಿದೆ. ಇಲ್ಲಿ ಸುಂದರವಾದ ಸರೋವರಗಳು, ನೀರಿನ ಟ್ಯಾಂಕ್‍ಗಳು, ತೋಟಗಳು ಮತ್ತು ಅರಣ್ಯದ ಬೆಟ್ಟಗಳನ್ನು ಇಲ್ಲಿ ಕಾಣಬಹುದು. ಅಮೃತಶಿಲೆ ಮತ್ತು ಕೆಂಪು ಮರಳುಗಲ್ಲಿನಿಂದ ಕಟ್ಟಲಾಗಿದೆ. ಇಲ್ಲಿ ದೊಡ್ಡ ದೊಡ್ಡ ಅರಮನೆಗಳು, ಕೋಣೆಗಳು ಮತ್ತು ದೇವಾಲಯಗಳನ್ನು ಕಾಣಬಹುದು.

ತೆರಳುವ ಬಗೆ ಹೇಗೆ?

ತೆರಳುವ ಬಗೆ ಹೇಗೆ?

ಜೈಪುರ್ ವಿಮಾನ ನಿಲ್ದಾಣವು ಕೇವಲ 25 ಕಿ.ಮೀ ದೂರದಲ್ಲಿದೆ. ಈ ನಗರದಲ್ಲಿ ಹಲವಾರು ರೈಲುಗಳನ್ನು ಕಾಣಬಹುದಾಗಿದೆ. ಕೋಟೆಗೆ ಭೇಟಿಯ ಸಮಯ ಬೆಳಗ್ಗೆ 9:30 ನಿಂದ 4:30 ಯವರೆಗೆ ಪ್ರವೇಶವನ್ನು ಪಡೆಯಬಹುದು. ಭಾರತೀಯರಿಗೆ ಪ್ರವೇಶ 25 ರೂಪಾಯಿಗಳು, ವಿದೇಶಿಯರಿಗೆ 200 ರೂಪಾಯಿಗಳು ಪಾವತಿಸಬೇಕಾಗುತ್ತದೆ.

ಚಿತ್ತೂರ್‍ಘಡ್ ಕೋಟೆ

ಚಿತ್ತೂರ್‍ಘಡ್ ಕೋಟೆ

7 ನೇ ಶತಮಾನದಲ್ಲಿ ನಿರ್ಮಿಸಲಾದ ಭಾರತದ ಅತಿ ದೊಡ್ಡದಾದ ಕೋಟೆ ಇದಾಗಿದ್ದು, ಇದು ಕೆಲವು ಪುರಾಣ ಕಥೆಗಳನ್ನು ಕೂಡ ಹೊಂದಿದೆ. ಈ ಸುಂದರವಾದ ಕೋಟೆಗೆ ತ್ಯಾಗದ ಬಲಿದಾನವನ್ನು ನಾವು ಕಂಡುಕೊಳ್ಳಬಹುದು. ಇಲ್ಲಿ 7 ಬೃಹತ್ ಪ್ರವೇಶ ದ್ವಾರಗಳಿವೆ. 2 ಸ್ಮರಣಾರ್ಥಕ ಗೋಪುರಗಳು, ಚಕ್ರಾಧಿಪತ್ಯದ ಅರಮನೆಗಳು ಮತ್ತು ಜಲಾಶಯಗಳ ಆಕರ್ಷಕ ದೃಶ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ.

Santosh Namby

ತೆರಳುವ ಬಗೆ ಹೇಗೆ?

ತೆರಳುವ ಬಗೆ ಹೇಗೆ?

ಈಸ್ಟ್ ವೆಸ್ಟ್ ಕಾರಿಡಾರ್ ಮತ್ತು ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಹೈವೇ ಮತ್ತು ರೈಲ್ವೆ ಜಂಕ್ಷನ್ ಇದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಉದಯಪುರದಲ್ಲಿದೆ. ಇಲ್ಲಿಂದ ಈ ಭವ್ಯವಾದ ಕೋಟೆಗೆ ಸುಮಾರು 97 ಕಿ.ಮೀ ದೂರದಲ್ಲಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೋಟೆಯನ್ನು ಪ್ರವಾಸಿಗರಿಗೆ ಭೇಟಿಗೆ ಅವಕಾಶವನ್ನು ನೀಡಲಾಗುತ್ತದೆ. ಪ್ರವೇಶ ಶುಲ್ಕವು ಭಾರತೀಯರಿಗೆ 5 ರೂಪಾಯಿಗಳು ಹಾಗು ವಿದೇಶಿಯರಿಗೆ 100 ರೂಪಾಯಿಗಳನ್ನು ಪಾವತಿಸಿ ಪ್ರವೇಶಿಸಬೇಕಾಗುತ್ತದೆ.

ಮೆಹರಾಂಗ್ ಘಡ್ ಕೋಟೆ

ಮೆಹರಾಂಗ್ ಘಡ್ ಕೋಟೆ

ರಾಜಸ್ಥಾನದಲ್ಲಿ ಭೇಟಿ ನೀಡಲು ಅತ್ಯುತ್ತಮವಾದ ಕೋಟೆಗಳಲ್ಲಿ ಇದು ಒಂದಾಗಿದೆ. ಇದೊಂದು ಅದ್ಭುತವಾದ ಕೋಟೆಯಾಗಿದೆ. ಇಲ್ಲಿ ಹಲವಾರು ಚಿತ್ರಕಲೆಗಳನ್ನು ಒಳಗೊಂಡ ವಸ್ತು ಸಂಗ್ರಾಲಯವಿದೆ. ಇಲ್ಲಿಯೂ ಕೂಡ 7 ಪ್ರವೇಶ ದ್ವಾರಗಳಿವೆ. ಒಂದು ಗುಡ್ಡದ ಮೇಲೆ ನಿಂತಿರುವ ಈ ಕೋಟೆಯು ಸುಮಾರು 15 ನೇ ಶತಮಾನದ ಪ್ರಾಚೀನವಾದ ಕೋಟೆಯಾಗಿದೆ.

Alicia Nijdam

ತೆರಳುವ ಬಗೆ ಹೇಗೆ?

ತೆರಳುವ ಬಗೆ ಹೇಗೆ?

ರೈಲು, ರಸ್ತೆ ಮತ್ತು ವಿಮಾನದ ಮೂಲಕ ಜೋದಾಪುರ್ ವಿಮಾನ ನಿಲ್ದಾಣದ ಮೂಲಕ ತೆರಳಬಹುದಾಗಿದೆ. ಸುಮಾರು 300 ಮೀಟರ್ ಎತ್ತರದಿಂದ ಈ ಕೋಟೆಯನ್ನು ಪ್ರವೇಶಿಸಬಹುದು. ಪ್ರವಾಸಿಗರಿಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವೆಗೆ ಪ್ರಾರಂಭವಾಗುತ್ತದೆ. ಭಾರತೀಯರಿಗೆ 60 ರೂಪಾಯಿಗಳು ಹಾಗು ವಿದೇಶಿಯರಿಗೆ 400 ರೂಪಾಯಿಗಳನ್ನು ಪಾವತಿ ಮಾಡಿ ಪ್ರವೇಶ ಮಾಡಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X