Search
  • Follow NativePlanet
Share
» »ಬೆಂಗಳೂರಿನಲ್ಲಿದೆ ಸುಮಾರು 300 ಕೋಟಿ ವರ್ಷದ ಪ್ರಾಚೀನ ಬಂಡೆ!!!

ಬೆಂಗಳೂರಿನಲ್ಲಿದೆ ಸುಮಾರು 300 ಕೋಟಿ ವರ್ಷದ ಪ್ರಾಚೀನ ಬಂಡೆ!!!

Written By:

ಪುರಾತನವಾದುದು ಎಂದರೆ ಯಾರಿಗೆ ಕುತೂಹಲವಿರುವುದಿಲ್ಲ ಹೇಳಿ? ಯಾವ ಕಾಲದ್ದು, ಯಾರು ನಿರ್ಮಾಣ ಮಾಡಿದ್ದು, ಏಕೆ ನಿರ್ಮಾಣ ಮಾಡಿದರು, ಅದರ ವೈಶಿಷ್ಟತೆ ಏನು? ಎಂಬ ಹಲವಾರು ಪ್ರೆಶ್ನೆಗಳು ನಮ್ಮ ತಲೆಯಲ್ಲಿ ಮೂಡುತ್ತವೆ. ಅಂಥಹದರಲ್ಲಿ 300 ಕೋಟಿ ವರ್ಷದ ಪ್ರಾಚೀನವಾದ ಬಂಡೆ ನಮ್ಮ ಕರ್ನಾಟಕದಲ್ಲಿರುವುದು ಆಶ್ಚರ್ಯವೇ ಸರಿ.

ಆ ಪ್ರಾಚೀನ ಬಂಡೆ ಇರುವುದು ಮಹಾ ನಗರಿ ಬೆಂಗಳೂರಿನಲ್ಲಿ ಎಂಬುದು ಮತ್ತೊಂದು ಆಶ್ಚರ್ಯಕರವಾದ ಸಂಗತಿಯಾಗಿದೆ. ದೊಡ್ಡ ದೊಡ್ಡ ಅಂತಸ್ತಿನ ಮನೆಗಳು, ಮರಗಳನ್ನು ಕಡಿದು ನಿರ್ಮಾಣವಾಗುತ್ತಿರುವ ಮಾಲ್‍ಗಳ ನಡುವೆ 300 ಕೋಟಿ ಇತಿಹಾಸವಿರುವ ಪ್ರಾಚೀನವಾದ ಬಂಡೆಯೇ? ಎಂದು ಆಶ್ಚರ್ಯ ಪಡುವುದು ಸರ್ವೇ ಸಾಮಾನ್ಯವಾದ ಸಂಗತಿಯೇ.....

ಆ ಪ್ರಕಾರವಾಗಿ ವಿಜ್ಞಾನಿಯೊಬ್ಬ "ಪೆನಿನ್ಸುಲಾರ್ ನೆಸ್ಸ್" ಎಂಬ ಪದವೊಂದನ್ನು ಅತ್ಯಂತ ಪ್ರಾಚೀನವಾದ ಬಂಡೆಯ ರಚನೆಗಳಿಗೆ ಅವಿಷ್ಕರಿಸಿದ್ದು, ಆ ಪ್ರಕಾರವಾಗಿ ಭಾರತದಲ್ಲಿ ಒಟ್ಟು ಅಂಥಹ ಬಂಡೆಗಳು ಕೇವಲ 26 ಮಾತ್ರ ಇವೆಯಂತೆ. ಅವುಗಳಲ್ಲಿ ಬೆಂಗಳೂರಿನಲ್ಲಿ 2 ಪೆನಿನ್ಸುಲಾರ್ ನೆಸ್ಸ್ ರಚನೆಯ ಬಂಡೆಗಳನ್ನು ಕಾಣಬಹುದಾಗಿದೆಯಂತೆ. ಹಾಗಾದರೆ ಆ ಬಂಡೆ ಯಾವುದು? ಎಲ್ಲಿದೆ? ಎಂಬುದರ ಬಗ್ಗೆ ಪ್ರಸ್ತುತ ಲೇಖನದ ಮೂಲಕ ತಿಳಿಯೊಣ.

ಹೃದಯ ಭಾಗ

ಹೃದಯ ಭಾಗ

ಬೆಂಗಳೂರಿನ ಹೃದಯ ಭಾಗದಲ್ಲಿ ಒಂದು ಸುಂದರವಾದ ಸ್ಥಳವೆಂದರೆ ಅದು ಬಸವನಗುಡಿ. ಬಸವನಗುಡಿ ಬೆಂಗಳೂರಿನ ಅತ್ಯಂತ ಪ್ರಾಚೀನವಾದ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಪ್ರಾಚೀನತೆಯ ಬಗ್ಗೆ ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತು.

ಸಾಂಪ್ರದಾಯಿಕತೆ

ಸಾಂಪ್ರದಾಯಿಕತೆ

ಬಸವನ ಗುಡಿಯಲ್ಲಿ ಮುಖ್ಯವಾಗಿ ದೇವಾಲಯಗಳು, ಸಾಂಸ್ಕøತಿಕ ಭವನಗಳನ್ನು ಕಾಣಬಹುದಾಗಿದೆ. ಅಲ್ಲದೇ ಏಕಶಿಲೆಯಲ್ಲಿ ಕೆತ್ತಲಾದ ಬಸವಣ್ಣನ ಪ್ರತಿಮೆ ಹಾಗು ದೊಡ್ಡ ಗಣಪತಿಯನ್ನು ಕೂಡ ಇಲ್ಲಿ ಪ್ರಸಿದ್ಧವಾದ ಆಕರ್ಷಣೆಯಾಗಿದೆ.

ಅತಿ ಪುರಾತನವಾದುದು

ಅತಿ ಪುರಾತನವಾದುದು

ದೊಡ್ಡ ಬಸವನಗುಡಿಯು ಚಿಕ್ಕದಾದ ಬೆಟ್ಟವೊಂದರ ಮೇಲೆ ನೆಲೆಸಿದ್ದು, ಆ ಬೆಟ್ಟವೇ "ಪೆನಿನ್ಸುಲಾರ್ ನೆಸ್ಸ್" ರಚನೆಯಾಗಿದೆ. ಎಂದರೆ ಭೂಮಿ ಆಗತಾನೆ ರೂಪಗೊಂಡ ಸಮಯದಲ್ಲಿ ನಿರ್ಮಾಣವಾದ ಅತ್ಯಂತ ಪುರಾತನವಾದ ಬಂಡೆಗಳಲ್ಲಿ ಇದು ಕೂಡ ಒಂದಾಗಿದೆ.

ಬ್ಯೂಗಲ್ ರಾಕ್

ಬ್ಯೂಗಲ್ ರಾಕ್

ಪ್ರಸ್ತುತ ಆ ಬೆಟ್ಟವಿರುವ ತಾಣದಲ್ಲಿ ಒಂದು ಉದ್ಯಾನವನವನ್ನು ನಿರ್ಮಾಣ ಮಾಡಲಾಗಿದ್ದು, ಅದನ್ನೇ ಬ್ಯೂಗಲ್ ರಾಕ್ ಉದ್ಯಾನವನ ಎಂದು ಕರೆಯುತ್ತಾರೆ. ಪ್ರಾಯಶಃ ನೀವು ಅಲ್ಲಿಗೆ ಭೇಟಿ ನೀಡಿದ್ದರೆ ಅದು ಭಾರತದಲ್ಲಿರುವ 26 "ಪೆನಿನ್ಸುಲಾರ್ ನೆಸ್ಸ್"ಗಳಲ್ಲಿ ಇದು ಒಂದು ಎಂದು ಎಂದೂ ಸಹ ಊಹಿಸಿರಲಿಕ್ಕಿಲ್ಲ ಅಲ್ಲವೇ?

ಕಥೆ

ಕಥೆ

ಹಿಂದೆ ಕೆಂಪೇಗೌಡರು ಬೆಂಗಳೂರಿನ ಜವಾಬ್ದಾರಿಯನ್ನು ಹೊತ್ತಿಕೊಂಡಾಗ ಈ ಬಂಡೆಯ ಬೆಟ್ಟದ ಮೇಲೆ ವೀಕ್ಷಣಾ ಗೋಪುರವೊಂದನ್ನು ನಿರ್ಮಾಣ ಮಾಡಿ ಅಲ್ಲಿಯೇ ಕಹಳೆ ಹಿಡಿದುಕೊಂಡು ಕಾವಲುಗಾರನೊಬ್ಬನನ್ನು ನೇಮಿಸಿದರಂತೆ.

ಕಾವಲುಗಾರ

ಕಾವಲುಗಾರ

ಯಾವುದಾದರೂ ಅಪಾಯದ ಸಮಯದಲ್ಲಿ, ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಸಮಯದಲ್ಲಿ ಕಾವಲುಗಾರ ಆಯಾ ಸಂದರ್ಭಗಳಲ್ಲಿ ಕಹಳೆಯನ್ನು ಜೋರಾಗಿ ಊದಿ ಪ್ರತಿಯೊಬ್ಬರಿಗೂ ಸಂದೇಶವನ್ನು ನೀಡುತ್ತಿದ್ದ.

ಬ್ಯೂಗಲ್ ಬಂಡೆ

ಬ್ಯೂಗಲ್ ಬಂಡೆ

ಹೀಗೆ ಕಹಳೆಯನ್ನು ಊದುವ ಬಂಡೆಯಾಗಿ ಕ್ರಮೇಣವಾಗಿ ಆಂಗ್ಲ ಭಾಷೆಯಲ್ಲಿ ಬ್ಯೂಗಲ್ ರಾಕ್ಸ್ ಎಂಬ ಹೆಸರು ಬಂದಿತು. ಇನ್ನು ಭೂ ವಿಜ್ಞಾನದ ವಿಷಯಕ್ಕೆ ಬಂದರೆ ಈ ಕಲ್ಲು ಬಂಡೆಗಳು ಅತ್ಯಂತ ಪುರಾತನವಾದ ಶಿಲಾ ರಚನೆಯಾಗಿದೆ.

500 ಮಿಲಿಯನ್

500 ಮಿಲಿಯನ್

ವಿಜ್ಞಾನಿಗಳ ಪ್ರಕಾರ ಈ ಶಿಲಾ ರಚನೆಗಳು ಎಷ್ಟು ಪುರಾತನವಾದುದು ಎಂದರೆ ಸುಮಾರು 500 ಮಿಲಿಯನ್ ವರ್ಷಗಳಿಗಿಂತ ಪ್ರಾಚೀನವಾದುದು.

ಮತ್ತೊಂದು

ಮತ್ತೊಂದು "ಪೆನಿನ್ಸುಲಾರ್ ನೆಸ್ಸ್"

ಬೆಂಗಳೂರಿನಲ್ಲಿ ಮತ್ತೊಂದು "ಪೆನಿನ್ಸುಲಾರ್ ನೆಸ್ಸ್" ಇರುವುದು ಬೇರಲ್ಲೂ ಅಲ್ಲ ಬೆಂಗಳುರಿನ ಪ್ರಖ್ಯಾತ ಲಾಲ್ ಬಾಗ್ ಉದ್ಯಾನವನದಲ್ಲಿ. ಲಾಲ್ ಭಾಗನ ದಕ್ಷಿಣ ದ್ವಾರದಲ್ಲಿ ಒಂದು ಕಲ್ಲಿನ ಹಾಸೊಂದು ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಅದೇ ಆ ಪ್ರಾಚೀನವಾದ 2 ನೇ ಶಿಲಾ ರಚನೆಯಾಗಿದೆ.

Muhammad Mahdi Karim

ನಿತ್ಯ ಭೇಟಿ

ನಿತ್ಯ ಭೇಟಿ

ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಕೆಂಪೇಗೌಡ ವೀಕ್ಷಣಾ ಗೋಪುರವಿದ್ದು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ.

Polytropos-Commons

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more