Search
  • Follow NativePlanet
Share
» »ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ 2022ರ ಲಾಲ್ ಬಾಗ್ ಪುಷ್ಪ ಪ್ರದರ್ಶನ

ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ 2022ರ ಲಾಲ್ ಬಾಗ್ ಪುಷ್ಪ ಪ್ರದರ್ಶನ

2022ರ ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಲಾಲ್ ಬಾಗ್ ನ ಪುಷ್ಪ ಪ್ರದರ್ಶನದಲ್ಲಿ ಭಾಗಿಯಾಗಿ

ಭಾರತದ ಉದ್ಯಾನನಗರಿ ಎಂದೇ ಪ್ರಸಿದ್ದಿಯನ್ನು ಹೊಂದಿರುವ ಬೆಂಗಳೂರು ಅತ್ಯಂತ ನಿರೀಕ್ಷಿತ ಫ಼್ಲವರ್ ಶೋ (ಪುಷ್ಪ ಪ್ರದರ್ಶನ)ವನ್ನು ಸಸ್ಯಕಾಶಿ ಲಾಲ್ ಬಾಗ್ ನಲ್ಲಿ 2022ರ ಆಗಸ್ಟ್ 05ರಿಂದ ಅಗಸ್ಟ್ 15ರ ವರೆಗೆ ಆಯೋಜಿಸಲಾಗಿದ್ದು, ಲಾಲ್ ಬಾಗ್ ನ ಈ ಬೊಟಾನಿಕಲ್ ಗಾರ್ಡನ್ ನಲ್ಲಿ ಫಲಪುಷ್ಪ ಪ್ರದರ್ಶನವನ್ನು ವರ್ಷದಲ್ಲಿ ಎರಡು ಬಾರಿ ಆಯೋಜಿಸಲಾಗುತ್ತದೆ ಒಮ್ಮೆ ಗಣರಾಜ್ಯದ ಪ್ರಯುಕ್ತವಾಗಿ ಆಯೋಜಿಸಲ್ಪಟ್ಟರೆ ಇನ್ನೊಮ್ಮೆ ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಈ ಪ್ರದರ್ಶನವನ್ನು ನಡೆಸಲಾಗುತ್ತದೆ.

ಈ ಸಲದ ಅಂದರೆ 2022ರ ಸ್ವಾತ್ರಂತ್ರ ದಿನಾಚರಣೆಯ ಲಾಲ್ ಬಾಗ್ ಪುಷ್ಪ ಪ್ರದರ್ಶನವು ಶೂನ್ಯ-ತ್ಯಾಜ್ಯ, ಪ್ಲಾಸ್ಟಿಕ್ ರಹಿತ ಮತ್ತು ಕಸರಹಿತ ರ್ಯಕ್ರಮದ ಉದ್ದೇಶ ಆಗಿದ್ದು, ಈ ಮೆಗಾ ಈವೆಂಟ್‌ನಲ್ಲಿ 10 ರಿಂದ 15 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.

Independence Day Lalbagh Flower Show 2022

2022 ರ ಲಾಲ್ ಬಾಗ್ ನಲ್ಲಿಯ ಪುಷ್ಪ ಪ್ರದರ್ಶನ

ಈ ಪ್ರದರ್ಶನವು ಊಟಿ, ನ್ಯೂಜಿಲೆಂಡ್, ಹಾಲೆಂಡ್, ಅಮೇರಿಕಾ ಅರ್ಜೆಂಟೀನಾ, ಕೀನ್ಯಾ ಮತ್ತು ಇತರ ಹಲವು ದೇಶಗಳಿಂದ ಭಾರತೀಯ ಮತ್ತು ಅಂತರಾಷ್ಟ್ರೀಯ ಪುಷ್ಪಗಳನ್ನು ಪ್ರದರ್ಶಿಸುತ್ತದೆ. ಅಲ್ಲದೆ ಊಟಿಯ 20 ಬಗೆಯ ಸಮಶೀತೋಷ್ಣ ಹೂವುಗಳು, 50-60 ವಿಧದ ಸ್ಥಳೀಯ ಹೂವುಗಳು ಮತ್ತು 27 ಇತರ ಪ್ರಭೇದದ ಹೂಗಳು ಸೇರಿದಂತೆ 10 ದೇಶಗಳ ತುಲಿಪ್, ಹೈಡ್ರೇಂಜ, ಹೈಪರಿಕಮ್ ಬೆರ್ರಿ ಸೇರಿದಂತೆ ಹೂವುಗಳನ್ನೂ ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಬೊಟಾನಿಕಲ್ ಗಾರ್ಡನ್‌ನಲ್ಲಿರುವ ಗಾಜಿನ ಮನೆಯಲ್ಲಿ ಸುಂದರವಾದ ಆರ್ಕಿಡ್‌ಗಳು, ಬಿಗೋನಿಯಾ, ಕಾರ್ನೇಷನ್, ಲಿಲ್ಲಿ ಮತ್ತು ಹಯಸಿಂತ್ ಸೇರಿದಂತೆ 65 ರೀತಿಯ ಹೂವಿನ ಸಸ್ಯಗಳನ್ನು ಪ್ರದರ್ಶಿಸಲಾಗುತ್ತದೆ.

ಲಾಲ್ ಬಾಗ್ ನ ಈ ಪುಷ್ಪ ಪ್ರದರ್ಶನವು ಭಾರತದ ವಿವಿಧ ಭಾಗಗಳಿಂದ ಮತ್ತು ವಿದೇಶದ ಅಸಂಖ್ಯಾತ ಜನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಹೂವುಗಳ ಜೊತೆಗೆ ಶಾಂತ ಹಾಗೂ ಪ್ರಶಾಂತ ವಾತಾವರಣದಲ್ಲಿ ಆನಂದಿಸಬೇಕೆಂದಿದ್ದಲ್ಲಿ, ಈ ಸ್ಥಳಕ್ಕೆ ಬೆಳಿಗ್ಗೆ ಬೇಗ ತಲುಪಿ ಈ ಸಮಯದಲ್ಲಿ ಜನ ದಟ್ಟಣೆ ಕಡಿಮೆ ಇರುತ್ತದೆ.

2022 ರ ಲಾಲ್ ಬಾಗ್ ನಲ್ಲಿಯ ಪುಷ್ಪ ಪ್ರದರ್ಶನ

ಸ್ವಾತಂತ್ರ್ಯ ದಿನದ ಲಾಲ್‌ಬಾಗ್ ಪುಷ್ಪ ಪ್ರದರ್ಶನ 2022 ದಿನಾಂಕ: 05 ಆಗಸ್ಟ್ 2022 ರಿಂದ 15 ಆಗಸ್ಟ್ 2022 ರವರೆಗೆ.

Independence Day Lalbagh Flower Show 2022

2022 ರ ಲಾಲ್ ಬಾಗ್ ನಲ್ಲಿಯ ಪುಷ್ಪ ಪ್ರದರ್ಶನ

ಸ್ವಾತಂತ್ರ್ಯ ದಿನದ ಲಾಲ್‌ಬಾಗ್ ಪುಷ್ಪ ಪ್ರದರ್ಶನ 2022 ರ ಪ್ರಮುಖ ಥೀಮ್

"ನಟರಾದ ಡಾ. ರಾಜಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ"

ಕರ್ನಾಟಕಕ್ಕೆ ಇಲ್ಲಿಯ ನಟರಾದ ಪುನೀತ್ ರಾಜ ಕುಮಾರ್ ಅವರ ಕೊಡುಗೆ ಅಪಾರವಾದದ್ದು. ಅವರು ಕೋಟ್ಯಾಂತರ ಜನರನ್ನು ಚಲನಚಿತ್ರದ ಮೂಲಕ ಕೇವಲ ಮನೋರಂಜಿಸಿದ್ದು ಮಾತ್ರವಲ್ಲದೆ, ಉತ್ತಮ ಕೆಲಸಗಳು ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯ ಜನರಿಗೆ ಸಹಾಯ ಮಾಡಿದವರಾಗಿದ್ದಾರೆ. ಪ್ರತಿ ವರ್ಷವೂ ಹೂವಿನ ಪ್ರದರ್ಶನಕ್ಕೆ ವಿಭಿನ್ನ ಥೀಮ್ ಇರುತ್ತದೆ ಅದರಂತೆಯೇ ಈ ಸಲ ಈ ಸ್ವಾತಂತ್ರ್ಯ ದಿನದಂದು ಮೈಸೂರು ತೋಟಗಾರಿಕಾ ಸಂಘದ ಆಡಳಿತಾಧಿಕಾರಿಗಳು ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರಿಗೆ ಈ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

Independence Day Lalbagh Flower Show 2022

2022 ರ ಲಾಲ್ ಬಾಗ್ ನಲ್ಲಿಯ ಪುಷ್ಪ ಪ್ರದರ್ಶನ

ಸ್ವಾತಂತ್ರ್ಯ ದಿನದ ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್ ನ ಪ್ರಮುಖ ಆಕರ್ಷಣೆಗಳು:

* ಗ್ಲಾಸ್ ಹೌಸ್ (ಗಾಜಿನ ಮನೆ)

* ಹೂ ಗಡಿಯಾರ ( ಫ಼್ಲವರ್ ಕ್ಲಾಕ್)

* ಲಾಲ್ ಬಾಗ್ ಲೇಕ್

* ಟೋಪಿಯರಿ ಗಾರ್ಡನ್

* ಮರದ ಪಳೆಯುಳಿಕೆ(ಟ್ರೀ ಪೊಸಿಲ್)

* ಪಾರಿವಾಳದ ಮನೆ

* ಬೋನ್ಸಾಯ್ ಗಾರ್ಡನ್

* ಪಾರಿವಾಳ ಕಾಲೋನಿ

* ಕಾವಲು ಕೊಠಡಿ

2022 ರ ಲಾಲ್ ಬಾಗ್ ನಲ್ಲಿಯ ಪುಷ್ಪ ಪ್ರದರ್ಶನ

* ಬ್ಯಾಂಡ್ ಸ್ಟ್ಯಾಂಡ್

* ಬೊಂಬಾಕ್ಸ್ ಮರ

* ಕೆಂಪೇಗೌಡ ಗೋಪುರ

* ಲಾಲ್‌ಬಾಗ್ ರಾಕ್

* ತೋಟಗಾರಿಕಾ ಉಪನ್ಯಾಸ ಭವನ

* ಲಾಲ್‌ಬಾಗ್ ಹೌಸ್

* ಚಾಮರಾಜ ಒಡೆಯರ್ ಪ್ರತಿಮೆ

* ನಿರ್ದೇಶನಾಲಯ ಕಟ್ಟಡ

* ಲಾಲ್‌ಬಾಗ್ ಮ್ಯೂಸಿಯಂ

* ಜಿಂಕೆ ಪ್ಯಾಡಾಕ್

* ಲಾಲ್‌ಬಾಗ್ ನಿರ್ದೇಶಕರ ಬಂಗಲೆ

* ರೋಸ್ ಗಾರ್ಡನ್

* ಆನೆಗಾತ್ರದ ಕಾಂಡದ ಮರದ ಕೊಂಬೆ

* ರೇಷ್ಮೆ ಹತ್ತಿ ಮರ

* ಕ್ರುಂಬಿಗೆಲ್ ಹಾಲ್

Independence Day Lalbagh Flower Show 2022

2022 ರ ಲಾಲ್ ಬಾಗ್ ನಲ್ಲಿಯ ಪುಷ್ಪ ಪ್ರದರ್ಶನ

ಸ್ವಾತಂತ್ರ್ಯ ದಿನದ ಲಾಲ್ ಬಾಗ್ ಪುಷ್ಪ ಪ್ರದರ್ಶನದ ಸಮಯ: ಬೆಳಿಗ್ಗೆ 9 ರಿಂದ ಸಾಯಂಕಾಲ 6 ರವರೆಗೆ.

ಸ್ವಾತಂತ್ರ್ಯ ದಿನದ ಲಾಲ್ ಬಾಗ್ ಪುಷ್ಪ ಪ್ರದರ್ಶನದ ಟಿಕೇಟು ದರ : ಪ್ರತಿ ವ್ಯಕ್ತಿಗೆ , ವಯಸ್ಕರಿಗೆ 80/- ರೂಪಾಯಿಗಳು (ವಾರದ ದಿನಗಳಲ್ಲಿ) ಹಾಗೂ 100/-ರೂಪಾಯಿಗಳು (ವಾರಾಂತ್ಯದಲ್ಲಿ)ಆಗಿದ್ದು, ಮಕ್ಕಳಿಗೆ ಪ್ರತಿಯೊಬ್ಬರಿಗೆ 30/- ರೂಪಾಯಿಗಳು ಆಗಿರುತ್ತದೆ.

ಲಾಲ್‌ಬಾಗ್ ಪುಷ್ಪ ಪ್ರದರ್ಶನ 2022

2022 ರ ಸ್ವಾತಂತ್ರ್ಯ ದಿನದ ಲಾಲ್‌ಬಾಗ್ ಪುಷ್ಪ ಪ್ರದರ್ಶನಕ್ಕೆ ತಲುಪುವುದು ಹೇಗೆ

ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್ ತಲುಪಲು ಉತ್ತಮ ಮಾರ್ಗವೆಂದರೆ ಮೆಟ್ರೋ. ಯಲಚೇನಹಳ್ಳಿ ಕಡೆಗೆ ಹಸಿರು ಮಾರ್ಗವನ್ನು ಆಯ್ಕೆಮಾಡಿಕೊಂಡು ಲಾಲ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಇಳಿಯಿರಿ.

Independence Day Lalbagh Flower Show 2022

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರೆ. ಕೆಂಪೇಗೌಡ ಬಸ್ ನಿಲ್ದಾಣವು ಪ್ರಮುಖ ಬಸ್ ನಿಲ್ದಾಣವಾಗಿದ್ದು, ಇದು ಲಾಲ್ ಬಾಗ್ ನಿಂದ 5 ಕಿ.ಮೀ ದೂರದಲ್ಲಿದೆ. ಮತ್ತು ನಿಮ್ಮ ವಾಹನದಲ್ಲಿ ಪ್ರಯಾಣಿಸುತ್ತಿದ್ದರೆ, ವಿಧಾನಸೌಧದಿಂದ ಕೇವಲ 4 ಕಿ.ಮೀ. ದೂರದಲ್ಲಿರುವ ಈ ಸ್ಥಳವನ್ನು ತಲುಪಬಹುದಾಗಿದೆ.

ದಯವಿಟ್ಟು ಗಮನಿಸಿ

* ದ್ವಿಚಕ್ರ ವಾಹನಗಳ ಪಾರ್ಕಿಂಗ್ ಅಲ್-ಅಮೀನ್ ಕಾಲೇಜು ಮತ್ತು ಡಬಲ್ ರೋಡ್ ಗೇಟ್ ಬಳಿಯ ಹಾಪ್‌ಕಾಮ್ಸ್ ಆವರಣದಲ್ಲಿರುತ್ತದೆ.

* ನಾಲ್ಕು ಚಕ್ರದ ವಾಹನಗಳಿಗೆ ಶಾಂತಿನಗರ ಬಸ್ ನಿಲ್ದಾಣ, ಜೆ.ಸಿ.ರಸ್ತೆಯಲ್ಲಿರುವ ಬಿಬಿಎಂಪಿ ವಾಹನ ನಿಲುಗಡೆ ಸ್ಥಳ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X