Search
  • Follow NativePlanet
Share
» »5 ನೇಯ ಶತಮಾನದ ವಿಸ್ಮಯಕರ ಜೋಗೇಶ್ವರಿ!

5 ನೇಯ ಶತಮಾನದ ವಿಸ್ಮಯಕರ ಜೋಗೇಶ್ವರಿ!

By Vijay

ಜೋಗೇಶ್ವರಿ ಒಂದು ಚಿಕ್ಕ ಪುಟ್ಟ ದೈವ ಸನ್ನಿಧಿಗಳನ್ನುಳ್ಳ ಗುಹೆಗಳ ಸಮೂಹವಾಗಿದ್ದು ಹಿಂದು ಹಾಗೂ ಬೌದ್ಧ ಮಹಾಯಾನಗಳ ನಂಟನ್ನು ಹೊಂದಿದೆ. ಈ ಗುಹೆಗಳಿಗೊಮ್ಮೆ ಭೇಟಿ ನೀಡಿದರೆ ಸಾಕು,ಒಂದು ಅಜ್ಞಾತ ಮನೋಭಾವನೆಯು ಮನದಲ್ಲಿ ಮೂಡದೆ ಇರಲಾರದು.

ಈ ಗುಹೆಗಳು ಒಂದುವರೆ ಸಾವಿರ ವರ್ಷಗಳಷ್ಟು ಪುರಾತನವಾಗಿದೆ. ಈ ಗುಹೆಗಳು ದೇಶದ ಅತ್ಯಂತ ಗೌಜು ಗದ್ದಲಗಳನ್ನು ಹೊಂದಿರುವ ಮಹಾನಗರಗಳ ಪೈಕಿ ಒಂದರಲ್ಲಿ ಸ್ಥಿತವಿದೆಯಾದರೂ ಆ ಮಹಾನಗರದ ತೀವ್ರತೆ ಇಲ್ಲಿ ಭೇಟಿ ನೀಡಿದಾಗ ಸ್ವಲ್ಪವೂ ಇಣುಕಿ ನೋಡದು.

ದಿನನಿತ್ಯದ ಮುಂಬೈ ಜೀವನ ಹೀಗಿರುತ್ತದೆ!

ಬದಲಿಗೆ ಭೇಟಿ ನೀಡುವವರಿಗೆ ಒಂದು ವಿಚಿತ್ರ ಆಭಾಸ ಮನದಲ್ಲಿ ಮೂಡಬಹುದು. ಏಕೆಂದರೆ ಈ ಅತಿ ಪುರಾತನ ರಚನೆಗಳೆ ಹಾಗಿವೆ. ಒಂದೊಂದು ಗುಹೆಗಳು ತನ್ನದೆ ಆದ ವಿಶೇಷತೆಯನ್ನು ಹೊಂದಿದ್ದು ತನ್ನದೆ ಆದ ನಿಗೂಢ ಕಥೆಯನ್ನು ಹೇಳುತ್ತಿರುವಂತಿವೆ. ಆದರೆ ಅದನ್ನು ಕೇಳಿಸಿಕೊಳ್ಳುವ ಒಳ ಕಿವಿ ಇರಬೇಕಷ್ಟೆ.

ಪ್ರಸ್ತುತ ಲೇಖನದ ಮೂಲಕ ಏನಿದು ಜೋಗೇಶ್ವರಿ? ಈ ಗುಹಾ ಸಮೂಹಗಳು ಎಲ್ಲಿವೆ ಎಂಬುದರ ಕುರಿತು ಮಾಹಿತಿಯನ್ನು ತಿಳಿಯಿರಿ.

ಎಲ್ಲಿದೆ?

ಎಲ್ಲಿದೆ?

ಜೋಗೇಶ್ವರಿ ಎಂಬುದು ಮುಂಬೈ ಮಹಾನಗರದ ಪ್ರಸಿದ್ಧ ಸ್ಥಳವೊಂದರ ಹೆಸರಾಗಿದ್ದು ಆ ಹೆಸರು ಅಲ್ಲಿರುವ ಅತಿ ಪುರಾತನ ಜೋಗೇಶ್ವರಿ ಗುಹೆಗಳ ಸಮೂಹದಿಂದಲೆ ಬಂದಿರುವುದಾಗಿದೆ.

ಚಿತ್ರಕೃಪೆ: Aalokmjoshi

ಶಕ್ತಿ ದೇವಿ

ಶಕ್ತಿ ದೇವಿ

ಮೂಲತಃ ಜೋಗೇಶ್ವರಿಯಲ್ಲಿ ಮಾತೆ ಯೋಗೇಶ್ವರಿಯ ಸನ್ನಿಧಿಯಿದೆ. ಶಕ್ತಿಯ ಅವತಾರದವಾದ ಈ ದೇವಿಯನ್ನು ಜೋಗೇಶ್ವರಿ ಎಂತಲೂ ಸಹ ಕರೆಯಲಾಗುತ್ತದೆ. ಹಾಗಾಗಿ ಈ ಪ್ರದೇಶಕ್ಕೆ ಜೋಗೇಶ್ವರಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಚಿತ್ರಕೃಪೆ: Vks0009

ಶಕ್ತಿಶಾಲಿ

ಶಕ್ತಿಶಾಲಿ

ಜೋಗೇಶ್ವರಿ ದೇವಿಯು ಎಷ್ಟು ಪ್ರಸಿದ್ಧಳಾಗಿದ್ದಾಳೆಂದರೆ ಮುಂಬೈ ನಗರ ಹಾಗೂ ಸುತ್ತಮುತ್ತಲಿನ ಕೆಲವು ಸ್ಥಳೀಯ ಮರಾಠಿ ಕುಟುಂಬದವರ ಕುಲದೇವಿಯಾಗಿ ಜೋಗೇಶ್ವರಿ ಆರಾಧಿಸಲ್ಪಡುತ್ತಾಳೆ. ಅಲ್ಲದೆ ಗುಜರಾತಿನ ಕೆಲವು ಭಾಗದ ಜನರು ಈಕೆಯ ಅನುಯಾಯಿಗಳಾಗಿದ್ದಾರೆ.

ಚಿತ್ರಕೃಪೆ: Aalokmjoshi

ಇತಿಹಾಸಕಾರರ ಅಭಿಪ್ರಾಯ

ಇತಿಹಾಸಕಾರರ ಅಭಿಪ್ರಾಯ

ಬಲು ಪುರಾತನವಾದದ್ದು

ಕೆಲವು ಇತಿಹಾಸಕಾರ ಪ್ರಕಾರ, ಈ ಗುಹಾ ದೇವಾಲಯಗಳು ಭಾರತದ ಅತಿ ದೊಡ್ಡ ಮತ್ತು ಅತಿ ಪುರಾತನ ಬಂಡೆಯಲ್ಲಿ ಕಡಿದ ಗುಹಾ ರಚನೆಗಳು ಎನ್ನಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇತಿಹಾಸವಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಚಿತ್ರಕೃಪೆ: Vks0009

ವಕಟಕ

ವಕಟಕ

ಹಿಂದೆ ಐದನೇಯ ಶತಮಾನದಲ್ಲಿ ವಕಟಕ ಸಾಮ್ರಾಜ್ಯದ ಅಧಿಪತ್ಯದಲ್ಲಿ ಬೌದ್ಧ ಗುಹೆಗಳ ನಿರ್ಮಾಣವಾಗುತ್ತಿತ್ತು. ಇದೆ ಸಮಯದಲ್ಲಿ ಮಹಾರಾಷ್ಟ್ರ ಅಜಂತಾ ಮತ್ತು ಎಲ್ಲೋರಾಗುಹೆಗಳ ರಚನಾಕಾರ್ಯ ಸ್ಥಗಿತಗೊಂಡು ಶಿಲ್ಪಕಾರರು ಮುಂಬೈ ಪ್ರದೇಶದತ್ತ ಸಾಗಿದರಂತೆ!

ಚಿತ್ರಕೃಪೆ: Vks0009

ಇದೆ ಸಮಯದಲ್ಲಿ

ಇದೆ ಸಮಯದಲ್ಲಿ

ಈ ಸಮಯದಲ್ಲಿ ಮುಂಬೈ ಪ್ರಾಂತ್ಯದಲ್ಲಿ ಬಂಡೆ ಕಡೆದು ದೇವಾಲಯ ನಿರ್ಮಿಸುವ ಕಾಮಾಗಾರಿಗಳು ಹೆಚ್ಚಿನ ಮಹತ್ವ ಪಡೆದುಕೊಂಡವು ಹಾಗೂ ಆ ಸಮಯದಲ್ಲಿ ಈ ಜೋಗೇಶ್ವರಿ ಗುಹಾ ಸಮೂಹಗಳ ನಿರ್ಮಾಣವಾಯಿತೆನ್ನಲಾಗಿದೆ.

ಚಿತ್ರಕೃಪೆ: Aalokmjoshi

ಮುಂಬೈ ಹೃದಯ ಭಾಗದಲ್ಲಿ

ಮುಂಬೈ ಹೃದಯ ಭಾಗದಲ್ಲಿ

ಪ್ರಸ್ತುತ ಮುಂಬೈ ನಗರದ ಜೋಗೇಶ್ವರಿ ಬಡಾವಣೆಯ ಹೃದಯ ಭಾಗದಲ್ಲಿ ಈ ಪ್ರಸಿದ್ಧ ಐತಿಹಾಸಿಕ ತಾಣವಿದ್ದು ಸಾಕಷ್ಟು ಜನ ಇತಿಹಾಸಪ್ರಿಯ ಪ್ರವಾಸಿಗರಿಂದ ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Vks0009

ಟ್ಯಾಕ್ಸಿಗಳು ದೊರೆಯುತ್ತವೆ

ಟ್ಯಾಕ್ಸಿಗಳು ದೊರೆಯುತ್ತವೆ

ಅಂಧೇರಿಯ ಉತ್ತರ ದಿಕ್ಕಿನಲ್ಲಿ ಸ್ಥಿತವಿರುವ ಜೋಗೇಶ್ವರಿಗೆ ತೆರಳಲು ಬಸ್ಸು ನಿಲ್ದಾಣ, ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಿಂದ ಸಾಕಷ್ಟು ಬಾಡಿಗೆ ರಿಕ್ಷಾಗಳು ಹಾಗೂ ಟ್ಯಾಕ್ಸಿಗಳು ದೊರೆಯುತ್ತವೆ.

ಚಿತ್ರಕೃಪೆ: Vks0009

ಸಾಕಷ್ಟು ಜನ ಭಕ್ತರು

ಸಾಕಷ್ಟು ಜನ ಭಕ್ತರು

ಮೂಲತಃ ಈ ಗುಹೆಗಳು ಜೋಗೇಶ್ವರಿ ದೇವಿಯ ಕಾಲಿನ ಹೆಜ್ಜೆ ಹಾಗೂ ಆಕೆಯ ಉಪಸ್ಥಿತಿಂದ ಪ್ರಸಿದ್ಧವಾಗಿದ್ದರೂ ಶಿವ ದೇವರಿಗೆ ಮುಡಿಪಾದ ಗುಹಾ ಸಂಕೀರ್ಣ ಇದಾಗಿದೆ. ಹಾಗಾಗಿ ಸಕಷ್ಟು ಸಂಖ್ಯೆಯಲ್ಲಿ ಶಿವನ ಅನುಯಾಯಿಗಳೂ ಸಹ ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Vks0009

ಮೊದಲಿಗೆ

ಮೊದಲಿಗೆ

ಮೊದ ಮೊದಲು ಇದನ್ನು ಅಂಬೋಲಿ ಗುಹೆಗಳೆಂದು ಕತ್ರೆಯಲಾಗುತ್ತಿತ್ತು. ಕಾರಣ ಇಲ್ಲಿಗೆ ಹತ್ತಿರದಲ್ಲಿರುವ ಅಂಬೋಲಿ ಎಂಬ ಹೆಸರಿನ ಕಾರಣದಿಂದಾಗಿ. ಆದರೆ ಕ್ರಮೇಣ ಜೋಗೇಶ್ವರಿ ಎಂಬ ಹೆಸರು ಪ್ರಚಲಿತದಲ್ಲಿ ಬಂತು.

ಚಿತ್ರಕೃಪೆ: Vks0009

ನೆರೆಯುವ ಭಕ್ತಾದಿಗಳು

ನೆರೆಯುವ ಭಕ್ತಾದಿಗಳು

ಪ್ರತಿ ಶಿವರಾತ್ರಿ ಹಬ್ಬ ಹಾಗೂ ಕಾರ್ತಿಕ ಸೋಮವಾರಗಳಂದು ಇಲ್ಲಿ ಜನಸಾಗರವೆ ನೆರೆಯುತ್ತದೆ. ಮಿಕ್ಕಂತೆ ವಾರದಲ್ಲಿ ಸೋಮವಾರಗಳಂದು ಸಾಕಷ್ಟು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: vks0009

ಮುಖದ್ವಾರದಲ್ಲೆ

ಮುಖದ್ವಾರದಲ್ಲೆ

ಶಿವನಿಗೆ ನೆಚ್ಚಿನ ವಸ್ತುಗಳಾದ ಬಿಲ್ವ ಪತ್ರೆ, ಹಾಲು ಮುಂತಾದವುಗಳು ಈ ಗುಹಾ ಸಂಕೀರ್ಣ ಪ್ರವೇಶಿಸುವುದರ ಮುಂಚೆಯೆ ದೊರಕುತ್ತದೆ. ಈ ಗುಹಾ ಸಂಕೀರ್ಣವು ಬಯಲು ಪ್ರದೇಶವೊಂದರಲ್ಲಿ ಸ್ಥಿತವಿದ್ದು ಸುತ್ತಲೂ ಬಂಡೆಗಳಿಂದ ಆವೃತವಾಗಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Vks0009

ಪ್ರಪ್ರಥಮವಾಗಿ

ಪ್ರಪ್ರಥಮವಾಗಿ

ಗುಹೆಗಳೊಳಗೆ ಪ್ರವೇಶಿಸುತ್ತಿದ್ದಂತೆಯೆ ಮೊದಲಿಗೆ ಜೋಗೇಶ್ವರಿ ದೇವಿಯ ದರ್ಶನವಾಗುತ್ತದೆ. ಹಬ್ಬದ ಸಂದರ್ಭಗಳಲ್ಲಿ ಜನರಿಂದ ಈ ದೇಗುಲ ತುಂಬಿ ತುಳುಕುತ್ತಿರುತ್ತದೆ. ನಂತರ ಮುಂದೆ ಸಾಗಿದಂತೆ ಹಲವು ಇತರೆ ಸನ್ನಿಧಿಗಳು ಕಂಡುಬರುತ್ತವೆ.

ಚಿತ್ರಕೃಪೆ: Aalokmjoshi

ವಿಶಿಷ್ಟ

ವಿಶಿಷ್ಟ

ವಿಶೇಷವೆಂದರೆ ಇಲ್ಲಿ ಬೌದ್ಧ ಸನ್ನಿಧಿಗಳನ್ನೂ ಹಾಗೂ ಹಿಂದು ದೇವರುಗಳ ಸನ್ನಿಧಿಗಳನ್ನೂ ಸಹ ಕಣಬಹುದಾಗಿದೆ. ಐತಿಹಾಸಿಕ ದೃಷ್ಟಿಯಿಂದ ಇದು ಬಲು ಮಹತ್ವ ಪಡೆದ ಅಂಶವಾಗಿ ಕಂಡುಬರುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಚಿತ್ರಕೃಪೆ: Sainath468

ಸುಂದರವಾಗಿವೆ

ಸುಂದರವಾಗಿವೆ

ಈ ಗುಹಾ ಸಂಕೀರ್ಣಗಳಲ್ಲಿ ಜೋಗೇಶ್ವರಿ ದೇವಿಯ ಹೊರತಾಗಿ ಗಣೇಶ, ದತ್ತಾತ್ರೇಯ ಹಾಗೂ ಆಂಜನೇಯನ ಸನ್ನಿಧಿಗಳೂ ಸಹ ಉಪಶಿತವಿದ್ದು ಸಾಕಷ್ಟು ಜನ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಈ ಗುಹೆಗಳಲ್ಲಿ ನಡೆದು ಯಾಉದೊ ಒಂದು ರೀತಿಯ ವಿಚಿತ್ರ ಅನುಭೂತಿ ಉಂಟಾಗುತ್ತದೆಂದು ಹಲವರ ಅಭಿಪ್ರಾಯವಾಗಿದೆ.

ಚಿತ್ರಕೃಪೆ: Aalokmjoshi

ನಿಮ್ಮದಾಗಬೇಕೆ?

ನಿಮ್ಮದಾಗಬೇಕೆ?

ನಿಮಗೂ ಸಹ ಒಂದು ಆ ರೀತಿಯ ಅನುಭವ ಉಂಟಾಗಬೇಕೆಂಬ ಬಯಕೆ ಇದ್ದರೆ ಮುಂಬೈಗೆ ಭೇಟಿ ನೀಡಿದಾಗ, ಜೋಗೇಶ್ವರಿ ಗುಹೆಗಳಿಗೊಮ್ಮೆ ಭೇಟಿ ನೀಡಲು ಮರೆಯದಿರಿ. ಸದ್ದು ಗದ್ದಲಗಳ ಜೀವನದ ರಭಸದ ನಡುವೆ ಏಕಾಂಗಿಯಾಗಿ, ನಿಶ್ಯ್ಅಬ್ದದಿಂದ ಸರ್ವರನ್ನೂ ಬರಮಾಡಿಕೊಳ್ಳುವ ಜೋಗೇಶ್ವರಿ ಖಂಡಿತವಾಗಿಯೂ ಒಮ್ಮೆ ಭೇಟಿ ನೀಡಲೇಬೇಕಾದ ತಾಣ.

ಚಿತ್ರಕೃಪೆ: Vks0009

ಇದು ನಮ್ಮ ಆಸ್ತಿ

ಇದು ನಮ್ಮ ಆಸ್ತಿ

ಇನ್ನೊಂದು ವಿಷಾಯವೆಂದರೆ ಈ ಅದ್ಬುತ ಇತಿಹಾಸ ಸಾರುವ ತಾಣವನ್ನು ಸುರಕ್ಷಿತವಾಗಿ ಸಂರಕ್ಷಿಸಿ ಕಾಪಾಡಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮದಾಗಿದೆ. ಇಂದು ಈ ಸ್ಥಳವು ಕೆಲವು ಕಡೆಗಳಲ್ಲಿ ಗಲೀಜು ಮಾಡಲಾಗುವ ಸ್ಥಳವಾಗಿ ಮಾರ್ಪಟ್ಟಿರುವುದು ದುರದೃಷ್ಟಕರ.

ಚಿತ್ರಕೃಪೆ: Aalokmjoshi

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more