Search
  • Follow NativePlanet
Share
» »ಜೇಬಲ್ಲಿ 7 ರಿಂದ 10 ಸಾವಿರ ಇದ್ರೆ ಸಾಕು, ಒಂದು ವಾರ ಟ್ರಿಪ್‌ ಪ್ಲಾನ್‌ ಮಾಡ್ಬೋದು…ಅದು ಎಲ್ಲೆಲ್ಲಿಗೆ ಗೊತ್ತಾ?

ಜೇಬಲ್ಲಿ 7 ರಿಂದ 10 ಸಾವಿರ ಇದ್ರೆ ಸಾಕು, ಒಂದು ವಾರ ಟ್ರಿಪ್‌ ಪ್ಲಾನ್‌ ಮಾಡ್ಬೋದು…ಅದು ಎಲ್ಲೆಲ್ಲಿಗೆ ಗೊತ್ತಾ?

ಎದ್ದು ಬಿದ್ದು ಕೆಲಸ ಕೆಲಸ ಅನ್ನೋರು ಬಹಳ ಸಮಯದಿಂದ ಎಲ್ಲಿಗಾದರೂ ಟ್ರಿಪ್‌ ಹೋಗಲೇಬೇಕು ಅಂದುಕೊಳ್ಳುತ್ತೀರಿ. ಆದರೆ ಈ ಪ್ಲಾನ್ ರಜೆ ಸಿಗದೆ ಅಥವಾ ದುಡ್ಡಿನ ಕಾರಣಕ್ಕಾಗಿ ಪ್ರತಿ ಬಾರಿ ಫ್ಲಾಪ್‌ ಆಗುತ್ತದೆ. ಆದರೆ ನಿಜಕ್ಕೂ ನೀವು ಸರಿಯಾಗಿ ಪ್ಲಾನ್‌ ಮಾಡಿ ಒಂದು ವಾರ ರಜೆ ತೆಗೆದುಕೊಂಡರೆ ನೋಡಲು ಅದ್ಭುತ ಸ್ಥಳಗಳಿವೆ. ಹೌದು, ಇವುಗಳಿಗೆ ಭೇಟಿ ನೀಡಲು ಒಂದು ಅಥವಾ ಎರಡು ದಿನಗಳು ಸಾಕಾಗುವುದಿಲ್ಲ. ಮತ್ತೆ ಇಷ್ಟು ದಿನ ರಜೆ ಕಳೆಯಬೇಕಾದರೆ ಜೇಬಿನಲ್ಲಿ ಹಣವಿರಬೇಕು. ಹೆಚ್ಚು ಹಣವೇನು ಬೇಕಿಲ್ಲ. ಕೇವಲ 10,000 ರೂ.ಗಳ ಒಳಗೆ ನೀವು ಕವರ್ ಮಾಡಬಹುದಾದ ಕೆಲವು ಪ್ರವಾಸಿ ತಾಣಗಳಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ....

ಬೆಂಗಳೂರು ಸುತ್ತಮುತ್ತ

ಬೆಂಗಳೂರು ಸುತ್ತಮುತ್ತ ನೋಡಲು ಒಂದಲ್ಲ ಅನೇಕ ಬಜೆಟ್ ಸ್ನೇಹಿ ತಾಣಗಳಿವೆ. ಸ್ಕಂದಗಿರಿ, ಮಡಿಕೇರಿ, ಕನಕಪುರ, ಸಕಲೇಶಪುರ, ಚಿಕ್ಕಮಗಳೂರು, ವಯನಾಡು, ಊಟಿ, ಕಬಿನಿಯನ್ನು ನೀವು ಕಡಿಮೆ ಬಜೆಟ್‌ನಲ್ಲಿ ನೋಡಬಹುದು. ಆದರೆ ಸಮಯವಿರಬೇಕು ಅಷ್ಟೇ.

nandihills

ದೆಹಲಿಯ ಸುತ್ತಮುತ್ತ

ಬೆಂಗಳೂರು ಸುತ್ತಮುತ್ತಲಿರುವ ಸ್ಥಳಗಳನ್ನು ಈಗಾಗಲೇ ನೋಡಿರುವವರು ದೆಹಲಿಗೆ ಪ್ಲಾನ್‌ ಮಾಡಬಹುದು. ನೀವು ದೆಹಲಿಗೆ ತೆರಳಿದರೆ ಅಲ್ಲಿಂದ ಕೆಲವೇ ಗಂಟೆಗಳ ದೂರದಲ್ಲಿರುವ ಪ್ರವಾಸಿ ತಾಣಗಳು ಸಾಕಷ್ಟಿವೆ. ದೆಹಲಿ ಸುತ್ತಲಿರುವ ಬಜೆಟ್‌ ಫ್ರೆಂಡ್ಲಿ ತಾಣಗಳ ಪೈಕಿ ಮೊದಲಿಗೆ ಉತ್ತರಾಖಂಡ ಆಯ್ಕೆ ಮಾಡಿಕೊಳ್ಳಬಹುದು. ಉತ್ತರಾಖಂಡದಲ್ಲಿ ಫ್ಲವರ್‌ ವ್ಯಾಲಿ, ಚೋಪ್ಟ- ತುಂಗನಾಥ್, ಚಾರ್ ಧಾಮ್ ಯಾತ್ರೆ, ಮುಕ್ತೇಶ್ವರ್, ಚಕ್ರತಾ, ಔಲಿಗೆ ತೆರಳಬಹುದು.

ಆ ನಂತರ ಹಿಮಾಚಲ. ಇಲ್ಲಿ ಡಾಲ್ಹೌಸಿ, ಅಂಡ್ರೆಟ್ಟಾ, ಲೇಹ್-ಲಡಾಖ್, ಮೆಕ್ಲಿಯೋಡ್ಗಂಜ್, ಸ್ಪಿಟಿ ಕಣಿವೆ, ಸೇಥನ್ ಕಣಿವೆ, ಖಜ್ಜಿಯಾರ್ ಒಮ್ಮೆಯಾದರೂ ನೋಡಬಹುದಾದ ತಾಣಗಳು.

ರಾಜಸ್ಥಾನಕ್ಕೆ ತೆರಳಿದರೆ ಕ್ರಮವಾಗಿ ಉದಯಪುರ, ಜೈಪುರ, ಮೌಂಟ್ ಅಬು , ಪುಷ್ಕರ್, ಜೋಧ್‌ಪುರ ನೋಡಬಹುದು. ಇಲ್ಲಿಗೆಲ್ಲಾ ತೆರಳಿದರೆ ನಿಮಗೆ ಹಣ ಹೆಚ್ಚು ಖರ್ಚಾಗುವುದಿಲ್ಲ.

meghalaya

ಮಧ್ಯಪ್ರದೇಶದ ಸುತ್ತಮುತ್ತ..

ಖಜುರಾಹೊ, ಪಚ್ಮರ್ಹಿ, ಭೇದಘಾಟ್, ಕನ್ಹಾ ರಾಷ್ಟ್ರೀಯ ಉದ್ಯಾನವನ, ಓರ್ಚಾ, ಮಾಂಡು, ಸಾಂಚಿ, ಉಜ್ಜಯಿನಿ, ಬಾಂಧವಗಢ ರಾಷ್ಟ್ರೀಯ ಉದ್ಯಾನವು ಮಧ್ಯಪ್ರದೇಶದಲ್ಲಿ ನೋಡಬಹುದಾದ ಪ್ರವಾಸಿ ತಾಣಗಳಾಗಿವೆ.

kerala alleppey

ಕೇರಳದ ಸುತ್ತಮುತ್ತ

ಮೊನ್ನೆಯಷ್ಟೇ ವರುಣನ ಆರ್ಭಟಕ್ಕೆ ದೇವರ ನಾಡು ಕೇರಳ ನಲುಗಿದೆ. ವಿಶೇಷವಾಗಿ ಇಲ್ಲಿನ ವಯನಾಡು ದುರಂತ ಯಾರೂ ಮರೆಯುವ ಹಾಗಿಲ್ಲ. ಸದ್ಯ ಇಲ್ಲಿ ಇನ್ನು ಮಳೆ, ಭೂಕುಸಿತ ಉಂಟಾಗುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ನೀವು ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಅಲೆಪ್ಪಿ, ಮುನ್ನಾರ್ , ವರ್ಕಲಾ, ಕುಮಾರಕೋಮ್, ಕೋವಲಂ, ಪುವಾರ್ ದ್ವೀಪ, ಇಡುಕ್ಕಿ, ತ್ರಿಶೂರ್ ಗೆ ಪ್ರವಾಸ ಹಮ್ಮಿಕೊಳ್ಳಬಹುದು. ಆದರೆ ಯಾವುದೇ ಪ್ರದೇಶಗಳಿಗೆ ತೆರಳುವ ಮುನ್ನ ಒಮ್ಮೆ ನೀವು ಅಲ್ಲಿನ ಹವಮಾನ ಹಾಗೂ ಸ್ಥಳೀಯರ ಅಥವಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಹೊರಟರೆ ಒಳಿತು.

ಐಆರ್‌ಸಿಟಿಸಿ ಪ್ಯಾಕೇಜ್‌

ಇವುಗಳ ಹೊರತಾಗಿ ಇತ್ತೀಚೆಗೆ ಐಆರ್‌ಸಿಟಿಸಿ ಸಹ ಅನೇಕ ಪ್ರವಾಸ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿದೆ. ನೀವು ಅವುಗಳನ್ನು ಸಹ ನೋಡಬಹುದು ಅಥವಾ ಸದುಪಯೋಗಪಡಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಸ್ನೇಹಿತರೊಂದಿಗೆ ಕೂತು ಚರ್ಚೆ ನಡೆಸಿ ದೀರ್ಘ ವಾರಾಂತ್ಯವನ್ನು ಯೋಜಿಸಿದರೆ ಬಜೆಟ್ ಮತ್ತಷ್ಟು ಕಡಿಮೆಯಾಗಬಹುದು. ಹಾಗೆಯೇ ಬಜೆಟ್ ಸ್ನೇಹಿ ಪ್ರಯಾಣಕ್ಕಾಗಿ, ದುಬಾರಿ ಹೋಟೆಲ್‌ಗಳ ಬದಲಿಗೆ ಹೋಮ್‌ಸ್ಟೇ ಆಯ್ಕೆಯನ್ನು ಆರಿಸಿ. ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸಿ ಮತ್ತು ಬುದ್ಧಿವಂತಿಕೆಯಿಂದ ಶಾಪಿಂಗ್ ಮಾಡಿ. ಆಗ ನೀವು ಇನ್ನೂ ಹೆಚ್ಚಿನ ಹಣವನ್ನು ಉಳಿಸುತ್ತೀರಿ. ಒಟ್ಟಾರೆ ನೀವು ಈ ಆಯ್ಕೆಗಳ ಜೊತೆ ಅದ್ಭುತ ಸ್ಥಳವನ್ನು ಆರಿಸಿಕೊಳ್ಳಿ. ದೀರ್ಘಕಾಲದವರೆಗೆ ಪ್ರವಾಸವನ್ನು ಆನಂದಿಸಬಹುದು.

More News

Read more about: india trip ಭಾರತ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+