Search
  • Follow NativePlanet
Share
» »ಭಾರತದ 1000 ವರ್ಷಗಳ ದೇವಾಲಯಗಳಿವು...

ಭಾರತದ 1000 ವರ್ಷಗಳ ದೇವಾಲಯಗಳಿವು...

ನಮ್ಮ ದೇಶದಲ್ಲಿ ಹಿಂದೂ ಧರ್ಮದ ಉಗಮದಿಂದಲೂ ಉಚ್ಛ ಸ್ಥಾನದಲ್ಲಿರುವುದಕ್ಕೆ ಕಾರಣ ದೇವಾಲಯಗಳು. ಈ ದೇವಾಲಯ ಅಂದಿನ ಪುರಾತನವಾದ ಸಂಸ್ಕøತಿಗೆ, ಸಂಪ್ರದಾಯಕ್ಕೆ ನಿದರ್ಶನವಾಗಿದೆ. ಚಾರಿತ್ರಿಕವಾಗಿ ಕೂಡ ಪ್ರಖ್ಯಾತಿಯನ್ನು ಪಡೆದಿದೆ. ಕ್ರಿ.ಶ 1 ನೇ ಶ

By Sowmyabhai

ನಮ್ಮ ದೇಶದಲ್ಲಿ ಹಿಂದೂ ಧರ್ಮದ ಉಗಮದಿಂದಲೂ ಉಚ್ಛ ಸ್ಥಾನದಲ್ಲಿರುವುದಕ್ಕೆ ಕಾರಣ ದೇವಾಲಯಗಳು. ಈ ದೇವಾಲಯ ಅಂದಿನ ಪುರಾತನವಾದ ಸಂಸ್ಕøತಿಗೆ, ಸಂಪ್ರದಾಯಕ್ಕೆ ನಿದರ್ಶನವಾಗಿದೆ. ಚಾರಿತ್ರಿಕವಾಗಿ ಕೂಡ ಪ್ರಖ್ಯಾತಿಯನ್ನು ಪಡೆದಿದೆ. ಕ್ರಿ.ಶ 1 ನೇ ಶತಮಾನದಿಂದ ನಿರ್ಮಾಣ ಕಟ್ಟಡಗಳನ್ನು ಅನೇಕವು ನಮ್ಮ ಭಾರತ ದೇಶದಲ್ಲಿ ಕಾಣಿಸುತ್ತವೆ. ಇವುಗಳಿಂದಾಗಿ ಹಿಂದೂ ಯುಗವು ಚರಿತ್ರೆಯ ಮೇಲೆ ಹೆಚ್ಚು ಅವಗಹನೆ ಮೂಡಿತು ಎಂದು ಚರಿತ್ರೆಕಾರರು ಹೇಳುತ್ತಾರೆ.

ಭಾರತ ದೇಶದಲ್ಲಿ ಸಾವಿರ ವರ್ಷಗಳಿಗಿಂತ ಹೆಚ್ಚು ಪುರಾತನವಾದ ದೇವಾಲಯಗಳು ಅನೇಕವಿವೆ. ಅವುಗಳು ಯಾವುದೇ ರೀತಿಯಲ್ಲಿಯೂ ಭಿನ್ನವಾಗದೇ ಪ್ರಕೃತಿಯ ವೈಪರಿತ್ಯಕ್ಕೆ ತಡೆದುಕೊಂಡು ಸಾಕ್ಷಿಯಾಗಿ ನಿಂತಿದೆ. ಅಂತಹ ದೇವಾಲಯಗಳಿಗೆ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಸಾವಿರ ವರ್ಷದ ದೇವಾಲಯಗಳು ಎಂದರೆ ಆಶ್ಚರ್ಯವನ್ನು ಉಂಟು ಮಾಡದೇ ಇರದು.

ಪ್ರಸ್ತುತ ಲೇಖನದಲ್ಲಿ ಭಾರತ ದೇಶದಲ್ಲಿರುವ ಸಾವಿರ ವರ್ಷಗಳಿಗಿಂತ ಹೆಚ್ಚು ಪುರಾತನವಾದ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ.

1.ಬದರಿನಾಥ ದೇವಾಲಯ

1.ಬದರಿನಾಥ ದೇವಾಲಯ

PC:YOUTUBE

ಉತ್ತರಾಖಂಢದಲ್ಲಿರುವ ಬದರಿನಾಥ ಕ್ಷೇತ್ರದ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಇಲ್ಲಿ ಮಹಾವಿಷ್ಣುವು ನೆಲೆಸಿದ್ದಾನೆ. ಭೂಲೋಕದ ವೈಕುಂಠ ಎಂದು ಕರೆಯಲಾಗುವ ಈ ದೇವಾಲಯವು ಹಿಮಾಲಯದಲ್ಲಿನ 10.000 ಅಡಿ ಎತ್ತರದಲ್ಲಿದೆ. ಇಲ್ಲಿ ಪಿತೃದೇವತೆಯರಿಗೆ ಪಿಂಡ ಪ್ರಧಾನವನ್ನು ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಪ್ರತಿಯೊಬ್ಬರು ಭೇಟಿ ನೀಡಲೇಬೇಕಾದ ದೇವಾಲಯ ಎಂದು ಹೇಳುತ್ತಾರೆ.

2.108 ವೈಷ್ಣವ ಕ್ಷೇತ್ರ

2.108 ವೈಷ್ಣವ ಕ್ಷೇತ್ರ

PC:YOUTUBE

ಈ ತೀರ್ಥಕ್ಷೇತ್ರವನ್ನು 108 ವಿಷ್ಣುವಿನ ದಿವ್ಯವಾದ ಕ್ಷೇತ್ರಗಳಲ್ಲಿ ಇದು ಕೂಡ ಒಂದು ಎಂದು ಹೇಳಲಾಗುತ್ತದೆ. ಉತ್ತರಾಖಂಡದಲ್ಲಿರುವ ಬದರೀನಾಥ ದೇವಾಲಯವು ಪವಿತ್ರವಾದ ಪುಣ್ಯಸ್ಥಳಗಳಲ್ಲಿ ಒಂದಾಗಿದೆ. ಪ್ರತಿ ವರ್ಷವೂ ಈ ದೇವಾಲಯಕ್ಕೆ ಅನೇಕ ಮಂದಿ ಸ್ವಾಮಿಯ ದರ್ಶನಕ್ಕೆ ಭೇಟಿ ನೀಡುತ್ತಿರುತ್ತಾರೆ.

3.ಚಾರ್ ಧಾಂ

3.ಚಾರ್ ಧಾಂ

PC:YOUTUBE

ಚಾರ್ ಧಾಂ ಎಂದರೆ ಭಾರತದ 4 ಪ್ರಮುಖವಾದ ಹಿಂದೂ ಯಾತ್ರಾ ಸ್ಥಳಗಳೇ ಆಗಿವೆ. ಬದರೀನಾಥ್ ಕೂಡ ಆ ಕ್ಷೇತ್ರಗಳಲ್ಲಿ ಒಂದಾಗಿದೆ. ದ್ವಾರಕಾ, ಪುರಿ ಮತ್ತು ರಾಮೇಶ್ವರಂ ಇತರ ದೇವಾಲಯಗಳಾಗಿವೆ. ಚೋಟಾ ಚಾರ್ ಧಾಂ ಹಿಮಾಲಯದಲ್ಲಿ ನೆಲೆಗೊಂಡಿರುವ ಮತ್ತೊಂದು ಯಾತ್ರಾ ಸ್ಥಳವಾಗಿದೆ. ಈ ಸ್ಥಳಗಳಲ್ಲಿ ಬದರಿನಾಥ್, ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥ್ ಸಹ ಸೇರಿದೆ.

4.ಕುಂಭೇಶ್ವರ ದೇವಾಲಯ

4.ಕುಂಭೇಶ್ವರ ದೇವಾಲಯ

PC:YOUTUBE

ಕುಂಡವನ್ನು ತಯಾರು ಮಾಡಿದ ಮಣ್ಣಿನಿಂದ ಶಿವಲಿಂಗವನ್ನು ಈ ದೇವಾಲಯದಲ್ಲಿ ಪ್ರತಿಷ್ಟಾಪಿಸಿದ್ದಾರೆ. ಇದು ತಮಿಳುನಾಡಿನ ಕುಂಭಕೋಣಂನಲ್ಲಿನ ಕುಂಭೇಶ್ವರ ದೇವಾಲಯದಲ್ಲಿದೆ. ಈ ಅದ್ಭುತವಾದ ದೇವಾಲಯವನ್ನು 9 ನೇ ಶತಮಾನದಲ್ಲಿ ಚೋಳ ರಾಜರು ನಿರ್ಮಾಣ ಮಾಡಿದರು ಎನ್ನಲಾಗಿದೆ. ಅತ್ಯಂತ ಎತ್ತರವಾದ ಶಿಖರವನ್ನು ಹೊಂದಿರುವ ಈ ದೇವಾಲಯಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ ಎಂದು ನಂಬಲಾಗಿದೆ.

5.ಉತ್ಸವ

5.ಉತ್ಸವ

PC:YOUTUBE

ಕುಂಭೇಶ್ವರನಾಗಿ ಇಲ್ಲಿ ಪರಮಶಿವನು ನೆಲೆಸಿದ್ದಾನೆ. ಈ ದೇವಾಲಯಕ್ಕೆ ಒಂದು ಪುರಾಣ ಕಥೆಯು ಕೂಡ ಇದೆ. ತಮಿಳುನಾಡಿನ ಫೆಬ್ರವರಿ ಅಥವಾ ಮಾರ್ಚ್ ಅವಧಿಯಲ್ಲಿ ಪ್ರತಿ 12 ವರ್ಷಗಳಿಗೆ ಒಮ್ಮೆ ಇಲ್ಲಿ ಉತ್ಸವ ನಡೆಸುತ್ತಾರೆ. ಆ ಸಮಯದಲ್ಲಿ ಭಾರತದ ಹಲವಾರು ಭಾಗಗಳಿಂದ ಲಕ್ಷಾಂತರ ಮಂದಿ ಯಾತ್ರಿಕರು ಕುಂಭಕೋಣಂಗೆ ಭೇಟಿ ನೀಡುತ್ತಾರೆ.

6.ಮುಂಡೇಶ್ವರಿ ಪುಣ್ಯಕ್ಷೇತ್ರ

6.ಮುಂಡೇಶ್ವರಿ ಪುಣ್ಯಕ್ಷೇತ್ರ

PC:YOUTUBE

ಮುಂಡೇಶ್ವರಿ ದೇವಾಲಯವು ವಿಶ್ವದಲ್ಲಿಯೇ ಅತ್ಯಂತ ಹಳೆಯದಾದ ದೇವಾಲಯ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಬಿಹಾರದ ಕೈಮೂರ್ ಜಿಲ್ಲೆಯ ಕೌರಾದಲ್ಲಿ ಈ ದೇವಾಲಯವಿದೆ. ಇದು ಮಹಾಶಿವ ಹಾಗು ಶಕ್ತಿಗೆ ಅರ್ಪಿತವಾಗಿದೆ. ಇದನ್ನು ಕ್ರಿ.ಪೂ 3 ಅಥವಾ 4 ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಗುರುತಿಸಲಾಗಿದೆ.

7.ವಾಸ್ತು ಶಿಲ್ಪ

7.ವಾಸ್ತು ಶಿಲ್ಪ

PC:YOUTUBE

ಈ ಪುರಾತನವಾದ ದೇವಾಲಯವು ಅಷ್ಟಭುಜಾಕೃತಿಯ ಯೋಜನೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ನಾಗರಾ ಶೈಲಿಯ ವಾಸ್ತುಶಿಲ್ಪದ ನಂತರ, ಬಿಹಾರದ ಪ್ರಸಿದ್ಧವಾದ ವಾಸ್ತುಶಿಲ್ಪದ ಪ್ರಕಾರವಾಗಿದೆ. ದೇವಾಲಯದ ನಾಲ್ಕು ಬದಿಗಳಲ್ಲಿ ಬಾಗಿಲುಗಳು ಅಥವಾ ಕಿಟಕಿಗಳು ಇವೆ. ಇತರ ನಾಲ್ಕು ಗೋಡೆಗಳಲ್ಲಿ ಪ್ರತಿಮೆಗಳಿಗೆ ಸಣ್ಣದಾದ ಗೂಡುಗಳಿವೆ.

8.ಶ್ರೀಮಂತ ಕೆತ್ತನೆ

8.ಶ್ರೀಮಂತ ಕೆತ್ತನೆ

PC:YOUTUBE

ದೇವಾಲಯದ ಒಳಾಂಗಣದ ಗೋಡೆಗಳು ಶ್ರೀಮಂತ ಕೆತ್ತನೆಗಳು ಮತ್ತು ಆಕಾರಗಳನ್ನು ಹೊಂದಿದೆ. ದೇವಾಲಯದ ಪ್ರವೇಶದ್ವಾರವು ಗಂಗಾ, ಯಮುನಾ ಮತ್ತು ಇತರ ಮೂರ್ತಿಗಳ ಕೆತ್ತನೆಗಳಿಂದ ಬಾಗಿಲನ್ನು ಹೊಂದಿದೆ. ಗರ್ಭಗುಡಿಯಲ್ಲಿ ಶಿವ ಮತ್ತು ದೇವಿ ಮುಂಡೇಶ್ವರಿ ದೇವರನ್ನು ಪೂಜಿಸಲಾಗುತ್ತದೆ. ಇಲ್ಲಿ ಪೂಜಿಸಲಾಗುವ ಇತರ ದೇವತೆಗಳೆಂದರೆ ವಿಷ್ಣು, ಗಣೇಶ ಮತ್ತು ಸೂರ್ಯ.

9.ಎಲ್ಲೋರಾ

9.ಎಲ್ಲೋರಾ

PC:YOUTUBE

ಇದು ಸಾವಿರ ವರ್ಷಗಳಿಗಿಂತಲೂ ಪುರಾತನವಾದ ಹಿಂದೂ ದೇವಾಲಯವಾಗಿದೆ. ಎಲ್ಲೋರಾ ಗ್ರಾಮವು ಮಹಾರಾಷ್ಟ್ರದಲ್ಲಿನ ಔರಂಗಬಾದ್‍ನಿಂದ ಸುಮಾರು 30 ಕಿ.ಮೀ ದೂರದಲ್ಲಿ ಇದೆ. ಸುಂದರವಾದ ಸ್ಮಾರಕದ ಗುಹೆಗಳಿಗೆ ಇದು ಪ್ರಸಿದ್ಧಿಯನ್ನು ಪಡೆದಿದೆ. ಎಲ್ಲೋರ ಗುಹೆಗಳು ವಿಶ್ವ ಪರಂಪರೆಯ ಸಂಪತ್ತು ಆಗಿ ಗುರುತಿಸಲ್ಪಟ್ಟಿದೆ. ಎಲ್ಲೋರ ಭಾರತೀಯ ರಮಣೀಯ ಶಿಲ್ಪಗಳನ್ನು ಪ್ರತಿಬಿಂಬಿಸುತ್ತದೆ.

10.ಎಲ್ಲೋರಾ

10.ಎಲ್ಲೋರಾ

PC:YOUTUBE

ಒಂದು ಪರ್ವತದ ಮೇಲಿನಿಂದ ಕೆಳಗೆ ಕೆತ್ತನೆ ಮಾಡುತ್ತಾ ಒಂದು ಅದ್ಭುತವಾದ ದೇವಾಲಯದ ಸಮುದಾಯವನ್ನು ಆವಿಷ್ಕಾರಿಸಿದ್ದಾರೆ. ಆ ದೇವಾಲಯದಲ್ಲಿ ಅಣು ಅಣುವಿನಲ್ಲಿಯೂ ಭಾರತೀಯ ಶಿಲ್ಪಕಲಾ ನೈಪುಣ್ಯವು ಉಕ್ಕುತ್ತಿರುವುದನ್ನು ಕಾಣಬಹುದು.

11.ಎಲ್ಲೋರಾ

11.ಎಲ್ಲೋರಾ

PC:YOUTUBE

ಕಂಗೊಳಿಸುವ ಶಿಲ್ಪಗಳು, ಎಂದಿಗೂ ಅದ್ಭುತವಾದ ದೃಶ್ಯಗಳಿಂದ ಪ್ರವಾಸಿಗರನ್ನು ಸೊರೆಗೊಳಿಸುವ ವೈಭವ. ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣ ಮಾಡಿದ ಈ ಅದ್ಭುತವಾದ ದೇವಾಲಯವನ್ನು ವೀಕ್ಷಿಸಿದ ವಿದೇಶಿ ಶಿಲ್ಪಗಳ ಇಂಜನಿಯರಿಂಗ್ ಮೇಧಾವಿಗಳಿಗೂ ಕೂಡ ಸಾವಿರ ವರ್ಷಗಳ ಹಿಂದೆ ಇಂದಿನ ಭಾರತೀಯ ಶಿಲ್ಪಕಲೆಗಳನ್ನು ನೋಡಿ ನಂಬಲಾಗದೇ ಚಕಿತರಾದರು.

12.ಎಲ್ಲೋರಾ

12.ಎಲ್ಲೋರಾ

PC:YOUTUBE

ಟೆಕ್ನಾಲಜಿ ಸಾಕಷ್ಟು ಬೆಳೆದಿದೆ. ಆಧುನಿಕ ಟೆಕ್ನಾಲಜಿದಿಂದ ಅಸಾಧ್ಯವಾದುದು ಏನು ಇಲ್ಲ ಎಂದು ಅಂದುಕೊಳ್ಳುತ್ತಿರುತ್ತೇವೆ. ಆದರೆ ಪ್ರಪಂಚದಲ್ಲಿ ಮಾನವನ ಮೇಧಸ್ಸಿಗೆ ತಿಳಿಯದ ಹಲವಾರು ಅಧ್ಭುತಗಳು ಇವೆ. ಆ ಕಾಲದಲ್ಲಿ ಅವುಗಳು ಹೇಗೆ ಸಾಧ್ಯವಾದುವು ಎಂಬುದು ಇಂದಿಗೂ ಬಗೆಹರಿಸಲಾಗದ ರಹಸ್ಯವಾಗಿಯೇ ಉಳಿದುಬಿಟ್ಟಿದೆ.ಯಾವುದೇ ದೇವಾಲಯವನ್ನು ಸಾಮಾನ್ಯವಾಗಿ ನೆಲದಿಂದ ಬುನಾದಿ ಪ್ರಾರಂಭಿಸುತ್ತಾರೆ. ಆದರೆ ಈ ದೇವಾಲಯವನ್ನು ಮಾತ್ರ ಶಿಖರದಿಂದಾಗಿ ಪ್ರಾರಂಭಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X