• Follow NativePlanet
Share
Menu
» »ಮಹಿಳೆಯರು ಒಂಟಿಯಾಗಿ ಹೋಗಬಾರದ ಪ್ರದೇಶಗಳು ಇವು...

ಮಹಿಳೆಯರು ಒಂಟಿಯಾಗಿ ಹೋಗಬಾರದ ಪ್ರದೇಶಗಳು ಇವು...

Posted By:

ಮಹಿಳೆಯರಿಗೆ ಅತ್ಯಂತ ಅಪಾಯವಾದ ಪ್ರದೇಶಗಳು ಎಂದು ಭಾವಿಸುವ ಪ್ರಪಂಚದಲ್ಲಿನ ಮೊದಲ 5 ದೇಶಗಳಲ್ಲಿ ಭಾರತ ದೇಶವು ಒಂದು. ನೋಡಿ ಯಾವ ಸ್ಥಾನದಲ್ಲಿ ನಮ್ಮ ಭಾರತವಿದೆ ಎಂದು. ಗೂಗಲ್ ಟ್ರೆಂಡ್ಸ್ "ಸೆಕ್ಸ್" ಎಂಬ ಪದವನ್ನು ಟೈಪ್ ಮಾಡಿ 7 ದೇಶಗಳಲ್ಲಿ ಭಾರತ ದೇಶವು ಒಂದು ಎಂದು ಹೇಳಿದೆ ಇಂಟರ್ ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ಒಂದು ವಿಧದಲ್ಲಿ ಭಾರತ ದೇಶದಲ್ಲಿ ಒಂದು ಘೋರವಾದ ಸ್ಥಾನದಲ್ಲಿದೆ ಎಂದು ತಿಳಿಸಿತು. ಹಾಗಾದರೆ ಮಹಿಳೆಯರು ಒಂಟಿಯಾಗಿ ಭಾರತ ದೇಶದ ಯಾವ ಯಾವ ಪ್ರದೇಶಗಳಿಗೆ ಭೇಟಿ ನೀಡಬಾರದು ಎಂಬುದನ್ನು ತಿಳಿದುಕೊಳ್ಳೋಣ. ಕನಿಷ್ಟ ಪಕ್ಷ ಈಗಲಾದರೂ ಜಾಗ್ರತ್ತೆಯಿಂದ ಇರಿ.

ಮಹಾತ್ಮ ಗಾಂಧಿಯು ಯಾವಾಗ ಮಹಿಳೆಯರು ಅರ್ಥರಾತ್ರಿ ರಸ್ತೆಯ ಮೇಲೆ ತಿರುಗುತ್ತಾರೆಯೋ ಆಗಲೇ ನಮಗೆ ದೊರೆತ ನಿಜವಾದ ಸ್ವತಂತ್ರ್ಯ ಎಂದು ಏಕೆ ಹೇಳಿದರು ಎಂಬುದು ಗೊತ್ತಿಲ್ಲವಾದರೂ, ಈಗ ಅದು ರಿವರ್ಸ್ ಆಗಿದೆ. ಮಹಿಳೆಯು ಅರ್ಥರಾತ್ರಿಯಂದು ಅಲ್ಲ....ಬೆಳಗಿನ ಜಾವದೊಂದು ಕೂಡ ಓಡಾಡುವುದು ಭಯದ ಪರಿಸ್ಥಿತಿ ಬಂದು ಒದಗಿದೆ.

1.ದೆಹಲಿ

1.ದೆಹಲಿ

Photo Courtesy: manuel secher

ದೆಹಲಿ ಭಾರತ ದೇಶದಲ್ಲಿನ ಮಹಿಳೆಯರಿಗೆ ಸುರಕ್ಷಿತವಲ್ಲದ ಪ್ರದೇಶವಾಗಿ ಹೆಸರುವಾಸಿಯಾಗಿದೆ. ಕೆಲವು ವರ್ಷಗಳ ಹಿಂದೆ ನಡೆದ ಗ್ಯಾಂಗ್ ರೇಪ್ (ಅತ್ಯಾಚಾರ) ಘಟನೆಯು ಡೆಲ್ಲಿಗೆ "ರೇಪ್ ರಾಜಧಾನಿ" ಎಂದು ಹೊಸದಾಗಿ ಟೈಟಲ್ ನೀಡಲಾಗಿದೆ. ನ್ಯಾಷನಲ್ ಕ್ರೈಮ್ ರಿಕಾರ್ಡ್ಸ್ ಬ್ಯೂರು (ಎನ್.ಸಿ.ಆರ್.ಬಿ) ಪ್ರಕಾರ, ರಾಜಧಾನಿಯಲ್ಲಿ ಒಟ್ಟು ರೇಪ್ ಕೇಸ್‍ಗಳು ಶೇಕಡ 23.8 ಎಂದು ನಿರ್ಧರಿಸಿದ್ದಾರೆ. ನೀವು ಒಂದು ವೇಳೆ ಈ ಪ್ರದೇಶದಲ್ಲಿ ಇರುವುದಾದರೆ ನೊಯಿಡಾ ಎಂಬ ಸ್ಥಳದಲ್ಲಿ ಮಾತ್ರ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

2.ಕೋಲ್ಕತ್ತ

2.ಕೋಲ್ಕತ್ತ

Photo Courtesy: babakoto .eu

ಕೋಲ್ಕತ್ತದಲ್ಲಿ ಮಹಿಳೆಯರಿಗೆ ಟೀಜಿಂಗ್, ಹಿಂಸಿಸುವುದು, ಅನುಮಾನ, ಅತ್ಯಾಚಾರ ಮಾಡುವುದು ಮತ್ತು ಅನೇಕ ತಪ್ಪುಗಳು ನಡೆಯುತ್ತಿವೆ. ಪಶ್ಚಿಮ ಬೆಂಗಾಲ್ ಮಹಿಳೆಯರ ಮೇಲೆ ಹೆಚ್ಚು ಅತ್ಯಾಚಾರ ಮಾಡುವ ಪ್ರದೇಶವೆಂದೇ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಮಹಿಳೆಯರ ಮೇಲೆ ಹೀನ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಎಷ್ಟೇ ಸರ್ಕಾರಗಳು ಬಂದರೂ ಕೂಡ ಕೊನೆಗೆ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್ ಅಧಿನೇತ್ರಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದರು ಕೂಡ ಏನೂ ಮಾಡಲಾಗದ ಪರಿಸ್ಥಿತಿ ಉಂಟಾಗಿದೆ.

3.ಬೆಂಗಳೂರು

3.ಬೆಂಗಳೂರು

Photo Courtesy: Vicky W.

ಭಾರತ ದೇಶದಲ್ಲಿನ ಎಲಕ್ರ್ಟಾನಿಕ್ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರು ಕೂಡ ಮಹಿಳೆಯರಿಗೆ ಅಷ್ಟು ಸೇಫ್ ಅಲ್ಲ. ಬೆಂಗಳೂರು ದಕ್ಷಿಣ ಭಾರತ ದೇಶದ ತಪ್ಪುಗಳನ್ನು ಮಾಡುವ ರಾಜಧಾನಿಯಾಗಿ ಮಾರ್ಪಾಟಾಗಿದೆ. ಇಲ್ಲಿ ಡ್ರಗ್ಸ್ ಮತ್ತು ಅತ್ಯಾಚಾರಗಳ ಕಾರಣವಾಗಿ ರಾತ್ರಿಯ ಸಮಯದಲ್ಲಿ ಕೆಲಸ ಮಾಡುವವರಿಗೆ ಈ ನಗರವು ಅಷ್ಟು ಸುರಕ್ಷಿತವಲ್ಲ, ಅನೇಕ ಮಂದಿ ಮಹಿಳೆಯರು ಈ ಪ್ರದೇಶಕ್ಕೆ ರಾತ್ರಿಯ ಸಮಯದಲ್ಲಿ ಭೇಟಿ ನೀಡಲು ಭಯಪಡುವುದುಂಟು.

4.ಗುರ್ಗಾವ್

4.ಗುರ್ಗಾವ್

Photo Courtesy: Harsh Mangal

ಗುರ್ಗಾವ್‍ನಲ್ಲಿ ರೇಪ್ ಕೇಸ್‍ಗಳು ಮತ್ತು ತಪ್ಪುಗಳು ಹೆಚ್ಚಾಗಿ ಇರುವುದರಿಂದ ಮಹಿಳೆಯರು ಈ ಪ್ರದೇಶಕ್ಕೆ ಭೇಟಿ ನೀಡುವುದು ಅಷ್ಟು ಸುರಕ್ಷಿತವಲ್ಲ. ಗುರ್ಗಾವ್ ಹರಿಯಾಣದಲ್ಲಿನ 2 ನೇ ಅತಿದೊಡ್ಡದಾದ ನಗರವಾಗಿದೆ. ಮುಖ್ಯವಾಗಿ ಕೆಲಸ ಮಾಡುವ ಮಹಿಳೆಯರಿಗೆ ರಾತ್ರಿಯ ಸಮಯದಲ್ಲಿ ಹಿಂಸಿಸುವುದು, ಅಪಹರಣೆಯಂತಹ ತಪ್ಪುಗಳು ಇಲ್ಲಿ ಹೆಚ್ಚಾಗಿ ಮಾಡುವುದರಿಂದ, ಈ ಪ್ರದೇಶವು ಅಷ್ಟು ಸುರಕ್ಷಿತವಲ್ಲ.

5.ಮುಂಬೈ

5.ಮುಂಬೈ

Photo Courtesy: jubindave

ಸರ್ಕಾರದ ಕೆಲವು ಆಧಾರದ ಪ್ರಕಾರ, ರೇಪ್ ಕೇಸ್‍ಗಳು ಶೇ 10.8 ರಷ್ಟು ಮುಂಬೈನಲ್ಲಿಯೇ ನಡೆಯುತ್ತವೆಯಂತೆ. ಭಾರತ ದೇಶದ ಆರ್ಥಿಕ ರಾಜಧಾನಿಯಾಗಿ ಒಂದು ಸುರಕ್ಷಿತವಾದ ಪ್ರದೇಶ ಎಂದೇ ಭಾವಿಸಲಾಗುತ್ತಿತ್ತು. ಆದರೆ ವೇಶ್ಯಾವಾಟಿಕೆಯನ್ನು ನ್ಯಾಯವಾದ ಕೆಲಸ ಎಂದು ಮಾಡಿರುವ ಕಾರಣ ಮಹಿಳೆಯರು ಈ ನಗರಕ್ಕೆ ಭೇಟಿ ನೀಡುವುದು ಅಷ್ಟು ಉತ್ತಮವಾದುದು ಅಲ್ಲ. ಮಹಿಳೆಯರು ಒಂಟಿಯಾಗಿದ್ದರೆ ಅಪಹರಣಕ್ಕೆ ಗುರಿಯಾಗುವುದಂತು ಖಂಡಿತ. ಮಹಿಳೆಯರನ್ನು ವಸ್ತುವಿನಂತೆ ಮಾರಾಟ ಮಾಡಲಾಗುತ್ತದೆ.

6.ಮಧ್ಯ ಪ್ರದೇಶ

6.ಮಧ್ಯ ಪ್ರದೇಶ

Photo Courtesy: Abhishek727

ಎಫ್.ಎಸ್,ಐ ಪ್ರಕಾರ ಮಧ್ಯ ಪ್ರದೇಶ ಕೂಡ ಮಹಿಳೆಯರಿಗೆ ಭದ್ರತೆ ಇಲ್ಲದ ನಗರವಾಗಿ ಉದ್ಭವಿಸಿದೆ. ಭದ್ರತಾ ಪ್ರಧಾನವಾದ ಪರಿಶೀಲನೆಯಲ್ಲಿ ತಿಳಿದುಬಂದ ವರದಿಯ ಪ್ರಕಾರ, ಮಧ್ಯ ಪ್ರದೇಶ ಮಹಿಳೆಯರಿಗೆ ಸುರಕ್ಷಿತವಾದ ಪ್ರದೇಶವಲ್ಲ ಎಂದು ತಿಳಿದು ಬಂದಿದೆ. ಮಧ್ಯ ಪ್ರದೇಶದಲ್ಲಿ ಅನೇಕ ಅತ್ಯಾಚಾರದ ಸಮಾಚಾರಗಳ ಬಗ್ಗೆ ನೀವು ಕೇಳೇ ಇರುತ್ತಿರಾ.

7.ಹೈದ್ರಾಬಾದ್

7.ಹೈದ್ರಾಬಾದ್

Photo Courtesy: రవిచంద్ర

ಇನ್ನು ಹೈದ್ರಾಬಾದ್ ಕೂಡ ಮಹಿಳೆಯರಿಗೆ ಸುರಕ್ಷಿತವಲ್ಲದ ಪ್ರದೇಶವೇ ಆಗಿದೆ, 2011 ರಲ್ಲಿ ಹೈದ್ರಾಬಾದ್‍ನಲ್ಲಿ ಸುಮಾರು 157 ಕೇಸುಗಳು ನಮೂದಾಗಿವೆ. ಭಾರತ ದೇಶದಲ್ಲಿ ಈ ಪ್ರದೇಶವು ಮಹಿಳೆಯರಿಗೆ ಅಷ್ಟು ಸುರಕ್ಷಿತವಾದುದು ಅಲ್ಲ ಎಂದೇ ಹೇಳಲಾಗುತ್ತದೆ. ಈ ನಗರದಲ್ಲಿ ರೇಪ್ ಕೇಸ್‍ಗಳು ಸಂಖ್ಯೆಯು ಕೂಡ ಅಭಿವೃದ್ಧಿ ಹೊಂದಿದೆ. ಕೆಲವು ತಿಂಗಳ ಹಿಂದೆ ಒಬ್ಬ ಅಮೆರಿಕನ್ ಯುವತಿ ಮೇಲೆ ನಡೆದ ಘಟನೆಯಿಂದ ಹೈದ್ರಾಬಾದ್ ನಗರವು ಮತ್ತಷ್ಟು ಸುರಕ್ಷಿತವಲ್ಲದ ಪ್ರದೇಶವಾಗಿ ಅಭಿವೃದ್ಧಿ ಹೊಂದಿದೆ.

8.ಪೂಣೆ

8.ಪೂಣೆ

Photo Courtesy : djoh

ಮಹಾರಾಷ್ಟ್ರದಲ್ಲಿ ಮುಂಬೈ ನಂತರ 2 ನೇ ಅತಿ ದೊಡ್ಡ ನಗರ ಪೂಣೆ. ನಗರವೇ ಆದರೂ ಮಹಿಳೆಯರಿಗೆ ಮಾತ್ರ ವಿಭಿನ್ನವಾದ ಅನುಭವವನ್ನು ಅನುಭವಿಸಬೇಕಾಗುತ್ತದೆ. ಇಲ್ಲಿ ವ್ಯವಸ್ಥೆ ಅಷ್ಟು ಚೆನ್ನಾಗಿಲ್ಲ, ಹದಗಿಟ್ಟಿರುವುದರಿಂದ ಮಹಿಳೆಯರಿಗೆ ಸುರಕ್ಷಿತವಾದ ಪ್ರದೇಶ ಇದಾಗಿಲ್ಲ.

9.ಉತ್ತರ ಪ್ರದೇಶ

9.ಉತ್ತರ ಪ್ರದೇಶ

Photo Courtesy:Harshvardhansonkar

ಉತ್ತರ ಪ್ರದೇಶವು ಸುಮಾರು 11.9 ಶೇಕಡ ಹಿಂಸಾತ್ಮಕ ತಪ್ಪುಗಳನ್ನು ಮಾಡುತ್ತಿವೆ ಎಂದು ಹೇಳಲಾಗಿದೆ, ಮಹಿಳೆಯರ ಮೇಲೆ ಯಾವುದೇ ದಾಳಿಯಾದರೂ ಕೂಡ ಮಾಡಬಹುದು. ಇಲ್ಲಿ ಮಹಿಳೆಯರು ಭದ್ರತೆ ಮತ್ತಷ್ಟು ಸಂದೇಹಸ್ಪದವಾಗಿರುತ್ತದೆ. ಉತ್ತರ ಪ್ರದೇಶದ ಬಗ್ಗೆ ನೀವು ಫೇಪರ್‍ನಲ್ಲಿ, ಟಿವಿ ನ್ಯೂಸ್ ಚಾನೆಲ್‍ನಲ್ಲಿ ಕೇಳೆ ಇರುತ್ತೀರಾ.

10.ಗೋವಾ

10.ಗೋವಾ

Photo Courtesy: Flickr

ಇಲ್ಲಿ ಭದ್ರತಾ ಸಮಸ್ಯೆ ಹೆಚ್ಚಾಗಿಯೇ ಇದೆ. ಗೋವಾಗೆ ಭೇಟಿ ನೀಡುವುದಕ್ಕಿಂತ ಮುಂಚೆ ಒಮ್ಮೆ ಯೋಚಿಸಲೇಬೇಕು. ಈ ಪ್ರದೇಶವು ಡ್ರಗ್ಸ್‍ಗೆ ಪ್ರಸಿದ್ಧವಾದುದು. ಮಹಿಳೆಯರು ಒಂಟಿಯಾಗಿ ಇಲ್ಲಿ ದೊರೆತರೆ ಅತ್ಯಾಚಾರ ಮಾಡಿರುವ ಅನೇಕ ಘಟನೆಗಳು ನಡೆದಿವೆ. ವಿದೇಶಿಯರಿಗೆ ಇದು ಮಾಮೂಲಿಯಾದ ವಿಚಾರವಾದರೂ ಕೂಡ ನಮ್ಮ ಭಾರತೀಯರಿಗೆ ಮಾತ್ರ ಮಾನ, ಪ್ರಾಣದ ವಿಚಾರ. ಒಮ್ಮೆ ಈ ಎಲ್ಲಾ ನಗರ ಪ್ರದೇಶಗಳಿಗೆ ಭೇಟಿ ನೀಡುವುದಕ್ಕಿಂತ ಮುಂಚೆ ಅಲೋಚಿಸಿ ತೆರಳಿ ಅಥವಾ ಜೊತೆಗೆ ಹೋಗಿ ಬನ್ನಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ