Search
  • Follow NativePlanet
Share
» »ಭಾರತದ 10 ಪ್ರಮುಖ ಐತಿಹಾಸಿಕ ಸ್ಮಾರಕಗಳು

ಭಾರತದ 10 ಪ್ರಮುಖ ಐತಿಹಾಸಿಕ ಸ್ಮಾರಕಗಳು

ರಾಷ್ಟ್ರದಲ್ಲಿರುವ ಹಲವಾರು ದೇವಾಲಯಗಳು, ಮಹಲುಗಳು, ಕೋಟೆಗಳು ಮತ್ತು ಸ್ಮಾರಕಗಳು ಭಾರತದಲ್ಲಿನ ಕಾಲಾನುಕ್ರಮದ ಐತಿಹಾಸಿಕ ತಾಣಗಳನ್ನು ಒಳಗೊಂಡಿವೆ. ಭಾರತದಲ್ಲಿಯ ಕೆಲವು ಪ್ರದೇಶದ ಐತಿಹಾಸಿಕ ಸ್ಮಾರಕಗಳು ಆಯಾ ಪ್ರದೇಶದ ಬೆರಗುಗೊಳಿಸುವ ಮೂಲ, ಇತಿಹಾಸ, ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಅಲ್ಲದೆ ಈ ವಿಶಿಷ್ಟ ಭಾರತೀಯ ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರನ್ನು ಮೋಡಿ ಮಾಡುತ್ತವೆ ಮತ್ತು ಶಾಸ್ತ್ರೀಯ ಮತ್ತು ಕಲಾತ್ಮಕ

ಶೈಲಿಗಳು ಪ್ರವಾಸೋದ್ಯಮದ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತವೆ.

ಅಲ್ಲದೆ, ಭಾರತದಲ್ಲಿ ಕಂಡುಬರುವ ಸ್ಮಾರಕಗಳು ಮತ್ತು ದೇವಾಲಯಗಳು ರಾಷ್ಟ್ರದ ಪ್ರತಿಬಿಂಬಗಳಾಗಿವೆ ಮತ್ತು ಪ್ರಾಚೀನ ನಾಗರೀಕತೆಯನ್ನು ಪ್ರಶಂಸಿಸಲು ಮತ್ತು ಗೌರವಿಸಲು ನಮ್ಮನ್ನು ಪ್ರೇರೇಪಿಸುತ್ತದೆ.

ಭಾರತದ ಹೆಮ್ಮೆಯ ತ್ರಿಕೋನದ ಮೂಲಕ ಪ್ರಯಾಣ ಮಾಡುತ್ತಾ (ದೆಹಲಿಯ ಕೆಂಪು ಕೋಟೆ, ಆಗ್ರಾದ ತಾಜ್ ಮಹಲ್, ಜೈಪುರದ ನಗರ ಅರಮನೆ) ಮತ್ತು ಯುನೆಸ್ಕೊ ವಿಶ್ವ ಮೂಲದ ತಾಣಗಳಾದ ಕುತುಬ್ ಮಿನಾರ್, ಕೆಂಪು ಕೋಟೆ, ಹುಮಾಯೂನ್ ಸಮಾಧಿ, ಫತೇಪುರ್ ಸಿಕ್ರಿ, ಸಾಂಚಿ ಬೌದ್ಧ ಸ್ಮಾರಕಗಳು ಮತ್ತು ಹಂಪಿ ಇತ್ಯಾದಿ ಅದ್ಬುತಗಳಿಗೆ ಭಾರತವು ನೆಲೆಯಾಗುವುದರ ಮೂಲಕ ಭಾರತವನ್ನು ಪ್ರಪಂಚದಾದ್ಯಂತದ ಜನರು ನೋಡುವಂತೆ ಮಾಡುತ್ತದೆ.

ಭಾರತದ ಅತ್ಯಂತ ಹೆಸರುವಾಸಿಯಾದ 10 ಪ್ರಮುಖ ಐತಿಹಾಸಿಕ ಸ್ಮಾರಕಗಳ ಪಟ್ಟಿ ಈ ಕೆಳಗಿನಂತಿವೆ

ಅಂಬರ್ ಕೋಟೆ ಜೈಪುರ

ಅಂಬರ್ ಕೋಟೆ ಜೈಪುರ

ರಜಪೂತ ಸಾಮ್ರಾಜ್ಯದ ವಾಸ್ತುಶಿಲ್ಪಿಗಳು ಈ ಅಂಬರ್ ಕೋಟೆಯನ್ನು ನಿರ್ಮಿಸಿದರು ಈ ಕೋಟೆಯು ತನ್ನ ಭವ್ಯವಾದ ಕಲಾತ್ಮಕ ವಾಸ್ತುಶಿಲ್ಪ ತಾಂತ್ರಿಕತೆಗೆ ಗುರುತಿಸಲ್ಪಟ್ಟಿದೆ. ಅದರ ದೊಡ್ಡ ಕೋಟೆಗಳು ಮತ್ತು ಗೇಟ್‌ಗಳು ಮತ್ತು ಕಲ್ಲುಮಣ್ಣುಗಳಿಂದ ಕೂಡಿದ ರಸ್ತೆಗಳ ಜೊತೆಗೆ ಕೋಟೆಯು ಮಾವೋಟಾ ಸರೋವರವನ್ನು ಹೊಂದಿದೆ, ಇದು ಅಂಬರ್ ಅರಮನೆಗೆ ಮುಖ್ಯ ನೀರಿನ ಮೂಲವಾಗಿದೆ.

ತಾಜ್ ಮಹಲ್ - ಆಗ್ರಾ

ತಾಜ್ ಮಹಲ್ - ಆಗ್ರಾ

ತಾಜ್ ಮಹಲ್ ಬಿಳಿ - ಗುಮ್ಮಟದ ಅಮೃತಶಿಲೆಯ ರಚನೆಯಾಗಿದ್ದು. ಇದನ್ನು ಮೊಘಲ್ ಅರಸನಾದ ಷಹಜಹಾನ್ ಅವರ ಪತ್ನಿ ಮುಮ್ತಾಜ್ ಮಹಲ್ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು. ಇದು ಪೂರ್ಣಗೊಳ್ಳಲು 17 ವರ್ಷಗಳನ್ನು ತೆಗೆದುಕೊಂಡಿತು.

 ಇಂಡಿಯಾ ಗೇಟ್, ದೆಹಲಿ

ಇಂಡಿಯಾ ಗೇಟ್, ದೆಹಲಿ

ದೆಹಲಿ ಪಟ್ಟಣದ ಪ್ರಮುಖ ಸ್ಮಾರಕವಾದ ಇಂಡಿಯಾ ಗೇಟ್, 1 ನೇ ಮಹಾಯುದ್ಧದಲ್ಲಿ ಮಡಿದ 80,000 ಭಾರತೀಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದ ಶಿಲ್ಪವಾಗಿದೆ. ಇದನ್ನು ನಂತರ ಭಾರತದ ಯುದ್ಧ ಸ್ಮಾರಕ ಎಂದು ಕರೆಯಲಾಯಿತು.

ಗೇಟ್ವೇ ಆಫ್ ಇಂಡಿಯಾ - ಮುಂಬೈ

ಗೇಟ್ವೇ ಆಫ್ ಇಂಡಿಯಾ - ಮುಂಬೈ

ಗೇಟ್ ವೇ ಆಫ್ ಇಂಡಿಯಾ ಭಾರತದ ಬಾಂಬೆಯಲ್ಲಿ 20 ನೇ ಶತಮಾನದಲ್ಲಿ ನಿರ್ಮಿಸಲಾದ ಒಂದು ಕಮಾನು ಸ್ಮಾರಕವಾಗಿದೆ. ಇದನ್ನು 1924ರ ಡಿಸೆಂಬರ್ 4ರಂದು ಉದ್ಘಾಟಿಸಲಾಯಿತು. ನಂತರ ಅದರ ರಚನೆ ಮತ್ತು ದ್ವಾರವನ್ನು ನಂತರ ಅದರ ರಚನೆ ಮತ್ತು ದ್ವಾರವನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತಕ್ಕೆ ಸಾಂಪ್ರದಾಯಿಕ ಸಾಂಕೇತಿಕ ಪ್ರವೇಶ ದ್ವಾರವಾಗಿ ಬಳಸಲಾಯಿತು.

ಕುತುಬ್ ಮಿನಾರ್ - ದೆಹಲಿ

ಕುತುಬ್ ಮಿನಾರ್ - ದೆಹಲಿ

ಕುತುಬ್ ಮಿನಾರ್ 1193 ರಲ್ಲಿ ಕುತುಬ್ ಉದ್-ದಿನ್ ಐಬಕ್ ನಿರ್ಮಿಸಿದ 73 ಮೀಟರ್ ಎತ್ತರದ ಗಮನಾರ್ಹ ರಚನೆಯಾಗಿದೆ. ದೆಹಲಿಯ ಕೊನೆಯ ಹಿಂದೂ ಆಡಳಿತಗಾರನಿಂದ ಗೆದ್ದ ನಂತರ ದೆಹಲಿಯಲ್ಲಿ ಮುಸ್ಲಿಂ ಅಧಿಕಾರವನ್ನು ಘೋಷಿಸಲು ಕುತುಬ್ ಮಿನಾರ್ ಅನ್ನು ನಿರ್ಮಿಸಲಾಯಿತು. ಕುತುಬ್ ಮಿನಾರ್ ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಸ್ಮಾರಕಗಳಲ್ಲಿ ಒಂದಾಗಿದೆ. ಇದು ಐದು ಅಂತಸ್ತುಗಳನ್ನು ಹಾಗೂ ನೂರಾರು ಹಜಾರಗಳನ್ನು ಹೊಂದಿದೆ.

ಚಾರ್ ಮಿನಾರ್ - ಹೈದರಾಬಾದ್

ಚಾರ್ ಮಿನಾರ್ - ಹೈದರಾಬಾದ್

ಇದು ಹೈದರಾಬಾದಿನಲ್ಲಿ ಅತ್ಯಂತ ದೊಡ್ಡ ಕಟ್ಟಡವಾಗಿದೆ ಮತ್ತು ಭಾರತದ ಅತ್ಯಂತ ಪ್ರಾಚೀನ ಸ್ಮಾರಕಗಳಲ್ಲಿ ಒಂದಾಗಿದೆ. ಚಾರ್ಮಿನಾರ್ ಅನ್ನು ಕ್ರಿ.ಶ.1591 ರಲ್ಲಿ ನಿರ್ಮಿಸಲಾಯಿತು. 16 ನೇ ಶತಮಾನದಲ್ಲಿ ಈ ಪ್ರದೇಶದಲ್ಲಿ ವಿನಾಶವನ್ನು ಸೃಷ್ಟಿಸಿದ ಮಾರಣಾಂತಿಕ ಕಾಯಿಲೆಯ ಅಂತ್ಯವನ್ನು ವೀಕ್ಷಿಸಲು ಇದನ್ನು ನಿರ್ಮಿಸಲಾಗಿದೆ.

ಹವಾ ಮಹಲ್, ಜೈಪುರ

ಹವಾ ಮಹಲ್, ಜೈಪುರ

ಹವಾ ಮಹಲ್ ಅನ್ನು ಮಾರುತಗಳ ಅರಮನೆ ಮತ್ತು ಗಾಳಿಯ ಬಂಗಲೆ ಎಂದೂ ಸಹ ಕರೆಯಲಾಗುತ್ತದೆ. ಇದು 953 ಸಣ್ಣ ಕಿಟಕಿಗಳನ್ನು (ಝರೋಖಾಗಳು) ಹೊಂದಿದೆ, ಇದನ್ನು ಮುಖ್ಯವಾಗಿ ಮರಳು ಬಿರುಗಾಳಿಯು ಬಂಗಲೆಯನ್ನು ಪ್ರವೇಶಿಸದಂತೆ ತಡೆಯಲು ನಿರ್ಮಿಸಲಾಗಿದೆ. ಇದು ಹಳೆಯ ಕಾಲದಲ್ಲಿ ಹಲವಾರು ರಜಪೂತ ಕುಟುಂಬಗಳಿಗೆ ಬೇಸಿಗೆಯ ರೆಸಾರ್ಟ್ ಆಗಿ ಪ್ರಮುಖ ಪಾತ್ರ ವಹಿಸಿತು.

 ಫತೇಪುರ್ ಸಿಕ್ರಿ - ಉತ್ತರ ಪ್ರದೇಶ ಆಗ್ರಾ

ಫತೇಪುರ್ ಸಿಕ್ರಿ - ಉತ್ತರ ಪ್ರದೇಶ ಆಗ್ರಾ

ಇದನ್ನು 16 ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಅಕ್ಬರನ ಯುಗದಲ್ಲಿ ನಿರ್ಮಿಸಲಾಯಿತು. ಸೂಫಿ ಸಂತನ ಸಮಾಧಿಯ ಸುತ್ತಲೂ ಇಡೀ ರಚನೆಯ ಸುತ್ತ ಮತ್ತು ಅನೇಕ ವಾಸ್ತುಶಿಲ್ಪದ ಗ್ರಿಡ್ ಗಳನ್ನು ಒಟ್ಟುಗೂಡಿಸಲಾಗಿದೆ.

ಗೊಲ್ಡನ್ ಟೆಂಪಲ್ - ಅಮೃತ್ ಸರ್

ಗೊಲ್ಡನ್ ಟೆಂಪಲ್ - ಅಮೃತ್ ಸರ್

ಗೋಲ್ಡನ್ ಟೆಂಪಲ್ ಅನ್ನು ಶ್ರೀ ಹರ್ಮಂದಿರ್ ಸಾಹಿಬ್ ಅಥವಾ ಶ್ರೀ ದರ್ಬಾರ್ ಸಾಹಿಬ್ ಎಂದು ಕರೆಯಲ್ಪಡುವ ಅಮೃತ್ ಸರದಲ್ಲಿರುವ ಈ ಅಸಾಧಾರಣ ದೇವಾಲಯವು ವಾಸ್ತುಶಿಲ್ಪ ಮತ್ತು ಭವ್ಯವಾದ ಶಾಂತತೆಯ ತಾಣವಾಗಿದೆ. ಇದು ಸಿಖ್ ಧರ್ಮದ ಅತ್ಯಂತ ಪ್ರಭಾವಶಾಲಿ ದೇವಾಲಯವಾಗಿದೆ. ಮಾತ್ರವಲ್ಲದೆ ಇದರ ಅತ್ಯುತ್ತಮ ಹಾಗೂ ಪ್ರಕಾಶಮಾನವಾದ ಕಿರೀಟಕ್ಕಾಗಿ ಪ್ರಸಿದ್ಧವಾಗಿದೆ.

ಅಜಂತಾ ಗುಹೆಗಳು ಔರಂಗಾಬಾದ್

ಅಜಂತಾ ಗುಹೆಗಳು ಔರಂಗಾಬಾದ್

ಅಜಂತಾ ಗುಹೆಯು ಐತಿಹಾಸಿಕ ಅಭಯಾರಣ್ಯವನ್ನು ಹೊಂದಿದೆ ಮತ್ತು ಪೂಜಾ ಸಭಾಂಗಣಗಳನ್ನು ಒಳಗೊಂಡಿದೆ. 75 ಮೀಟರ್, 246 ಅಡಿ ಕಲ್ಲಿನ ಬದಿಯಲ್ಲಿ ಕೆತ್ತಲಾಗಿದೆ, ಗುಹೆಯಲ್ಲಿನ ಬಂಡೆಗಳು ಅನೇಕ ಬೌದ್ಧ ಧರ್ಮದ ಹಿಂಬಾಲಕರ ಚಿತ್ರಗಳನ್ನು ಪ್ರದರ್ಶಿಸುತ್ತವೆ. ಈ ಗುಹೆಗಳು ಭಾರತದ ಕೆಲವು ಅತ್ಯುತ್ತಮ ಪ್ರಾಚೀನ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X